ಕೇಂದ್ರ ಬಜೆಟ್ ಆರ್ಥಿಕತೆಗೆ ಬಲ ನಿರೀಕ್ಷೆ: ಸಿಗಲಿದೆಯಾ ಬೂಸ್ಟರ್?

By Kannadaprabha NewsFirst Published Feb 1, 2023, 9:31 AM IST
Highlights

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಅವರ 5ನೇ ಬಜೆಟ್‌.

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ, ಉದ್ಯೋಗ ಸೃಷ್ಟಿಯಂಥ ಬಹುದೊಡ್ಡ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಇಡುವ ನಿರೀಕ್ಷೆಯ ಕೇಂದ್ರ ಬಜೆಟ್‌ ಇಂದು ಮಂಡನೆಯಾಗಲಿದೆ.  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಅವರ 5ನೇ ಬಜೆಟ್‌.

ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷಾ (economic survey) ವರದಿಯು, ದೇಶದ ಆರ್ಥಿಕತೆ ಬೆಳವಣಿಗೆ ದರವು ಕೋವಿಡ್‌ ಪೂರ್ವ ಸ್ಥಿತಿಯನ್ನು ದಾಟಿದೆ ಎಂಬ ಸಿಹಿ ಸುದ್ದಿ ನೀಡಿರುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳ ಜೊತೆ ಜೊತೆಗೆ, ಕೃಷಿ (agriculture), ಆರೋಗ್ಯ( health), ಶಿಕ್ಷಣ ( education) ಮೂಲಸೌಕರ್ಯ ವಲಯಗಳಿಗೆ (infrastructure sectors) ಇನ್ನಷ್ಟು ಹಣಕಾಸು ನೆರವಿನ ಆಶಾಭಾವನೆ ವ್ಯಕ್ತವಾಗಿದೆ. ಬಂಡವಾಳ ಹರಿವು, ಉದ್ಯೋಗ ಸೃಷ್ಟಿಗೂ ಸರ್ಕಾರ ಒತ್ತು ನೀಡುವ ಸಾಧ್ಯತೆ ಇದೆ.

ಬಜೆಟ್‌ ನಿರೀಕ್ಷೆಗಳು:

ಸಚಿವೆ ನಿರ್ಮಲಾ ತಮ್ಮ ಹೊಸ ಬಜೆಟ್‌ನಲ್ಲಿ ಮಧ್ಯಮ ವರ್ಗದ ಬಹುದೊಡ್ಡ ಬೇಡಿಕೆಯಾದ ಆದಾಯ ಮಿತಿ ತೆರಿಗೆ ಮಿತಿಯನ್ನು ಇನ್ನಷ್ಟುಹೆಚ್ಚಿಸಬಹುದೆಂಬ ನಿರೀಕ್ಷೆ ಇದೆ. ಇದರ ಜೊತೆಗೆ ಸೆಕ್ಷನ್‌ 80ಸಿ ಮತ್ತು 80ಡಿ ನೀಡುವ ವಿನಾಯ್ತಿಗಳನ್ನು ವಿಸ್ತರಿಸುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ. ಜೊತೆಗೆ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಲಾಂಗ್‌ ಟಮ್‌ರ್‍ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಹಿಂಪಡೆವ ಸಾಧ್ಯತೆ ಇದೆ. ಇನ್ನು ಕಾರ್ಪೊರೆಟ್‌ ವಲಯ ಮತ್ತು ಜನಸಾಮಾನ್ಯರು ಕೋವಿಡ್‌ ನಿರ್ವಹಣೆಗೆ ಮಾಡಿದ ವೆಚ್ಚವನ್ನು ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸಬಹುದೆಂಬ ದೊಡ್ಡ ಆಶಾಭಾವನೆ ಇದೆ.

Economic Survey 2023:ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ ಆರ್ಥಿಕ ಸಮೀಕ್ಷೆ; ಇಲ್ಲಿದೆ ನೋಡಿ ಹೈಲೈಟ್ಸ್

ಜೊತೆಗೆ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಕ್ರಿಪ್ಟೋಕರೆನ್ಸಿ ವಲಯಕ್ಕೆ ತೆರಿಗೆ, ಎಲೆಕ್ಟ್ರಿಕ್‌ ವಾಹನ ಉದ್ಯಮಕ್ಕೆ ನೆರವು ನೀಡಲು ಹಲವು ರಿಯಾಯಿತಿ ಘೋಷಣೆ, ಸೆಮಿಕಂಡಕ್ಟರ್‌ ವಲಯಕ್ಕೆ ಇನ್ನಷ್ಟುಪ್ರೋತ್ಸಾಹ, ಇನ್ನಷ್ಟುವಸ್ತುಗಳ ಮೇಲಿನ ಸೀಮಾ ಸುಂಕ ರದ್ದು, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕೃಷಿ , ಗ್ರಾಮಿಣಾಭಿವೃದ್ಧಿ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಲು ಪ್ರೋತ್ಸಾಹದ ವಿವಿಧ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

Union Budget 2023 ದೇಶದ 12 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಮುಂದಾದ ಕೇಂದ್ರ!

click me!