Budget 2022: ಭಾರತದಲ್ಲಿ ಖಾಸಗಿ, ವಿದೇಶಿ ಹೂಡಿಕೆ ಹೆಚ್ಚಳಕ್ಕೆ ಪೂರಕ ವಾತಾವರಣ ಸೃಷ್ಟಿಸಿದ ಬಜೆಟ್!

By Suvarna News  |  First Published Feb 3, 2022, 5:17 PM IST

*ಕೇಂದ್ರ ಬಜೆಟ್ ನಲ್ಲಿ ಖಾಸಗಿ ಹಾಗೂ ವಿದೇಶಿ ಹೂಡಿಕೆಗೆ ಹೆಚ್ಚಿನ ಒತ್ತು 
* 2021ರ ಏಪ್ರಿಲ್ ನಿಂದ ನವೆಂಬರ್ ತನಕ ಭಾರತಕ್ಕೆ ಹರಿದು ಬಂದ ಎಫ್ ಡಿಐ  54.1ಬಿಲಿಯನ್ ಡಾಲರ್ 
*ಮೂಲಸೌಕರ್ಯ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಹಾಗೂ ಖಾಸಗಿ ಹೂಡಿಕೆ ಸೆಳೆಯೋ ಸಾಧ್ಯತೆ 


Business Desk: ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ವೇದಿಕೆಯ (World Economic Forum)ದಾವೋಸ್ ಅಜೆಂಡಾ 2022 (Davos Agenda 2022) ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi), ಭಾರತದಲ್ಲಿ ಹೂಡಿಕೆ (Invest) ಮಾಡಲು ಇದು ಉತ್ತಮ ಸಮಯ ಎಂದು ಹೇಳಿದ್ದರು. ಈ ಹೇಳಿಕೆಗೆ ಪೂರಕವೆಂಬಂತೆ 2022ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ (Union Budget) ಕೂಡ ಹೂಡಿಕೆಗೆ ಪೂರಕವಾದ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಈ ಬಾರಿಯ ಬಜೆಟ್ ಖಾಸಗಿ ಹಾಗೂ ವಿದೇಶಿ ಹೂಡಿಕೆದಾರರಿಗೆ (Foreign Investors) ಭಾರತದಲ್ಲಿ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಸಲಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆ ವ್ಯಾಪಾರ ಹಾಗೂ ಅಭಿವೃದ್ಧಿ ಸಮ್ಮೇಳನದ 'ಜಾಗತಿಕ ಹೂಡಿಕೆ ಟ್ರೆಂಡ್ಸ್ 'ವರದಿ ಪ್ರಕಾರ ಜಾಗತಿಕ ವಿದೇಶಿ ನೇರ ಹೂಡಿಕೆ (FDI) ಹರಿವಿನಲ್ಲಿ 2021ರಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ. 2021ರಲ್ಲಿ ಎಫ್ ಡಿಐನಲ್ಲಿ(FDI)  ಶೇ.77ರಷ್ಟು ಪ್ರಗತಿ ಕಂಡುಬಂದಿದೆ. 2020ರಲ್ಲಿ ಜಗತ್ತಿನಲ್ಲಿ 929 ಬಿಲಯ್ ಡಾಲರ್ ವಿದೇಶಿ ನೇರ ಹೂಡಿಕೆ (FDI) ಆಗಿದ್ರೆ, 2021ರಲ್ಲಿ 1.65 ಟ್ರಿಲಿಯನ್ ಡಾಲರ್ ಹೂಡಿಕೆಯಾಗಿದೆ. 2022ರಲ್ಲಿ ಕೂಡ ಜಾಗತಿಕವಾಗಿ ಎಫ್ ಡಿಐಗೆ (FDI) ಸಕಾರಾತ್ಮಕ ಪರಿಸರವಿದೆ.
ಭಾರತ ಕೂಡ ವಿದೇಶಿ ನೇರ ಬಂಡವಾಳ (FDI) ಆರ್ಕಷರ್ಣೆಗೆ ಪೂರಕವಾಗಿ ನೀತಿಗಳಲ್ಲಿ ಸುಧಾರಣೆ, ಹೂಡಿಕೆಗೆ ಉತ್ತೇಜನ ನೀಡುವಂತಹ ಕ್ರಮಗಳ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದೆ. 2021ರ ಏಪ್ರಿಲ್ ನಿಂದ ನವೆಂಬರ್ ತನಕ ಭಾರತಕ್ಕೆ 54.1ಬಿಲಿಯನ್ ಅಮೆರಿಕನ್ ಡಾಲರ್ ಎಫ್ ಡಿಐ (FDI) ಹರಿದು ಬಂದಿದೆ ಎಂಬ ಮಾಹಿತಿಯನ್ನು ಸರ್ಕಾರ ಸಂಸತ್ತಿಗೆ ನೀಡಿದೆ ಕೂಡ. ಕಂಪ್ಯೂಟರ್ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್, ಅಟೋಮೊಬೈಲ್ ಸೇವೆಗಳು, ಶಿಕ್ಷಣ, ವಾಣಿಜ್ಯ, ನಿರ್ಮಾಣ ಚಟುವಟಿಕೆಗಳು ಹಾಗೂ ರಕ್ಷಣಾ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಎಫ್ ಡಿಐ ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ ಎಂದು ಸರ್ಕಾರ ತಿಳಿಸಿದೆ.

Tap to resize

Latest Videos

undefined

Union Budget 2022: ಡಿಜಿಟಲ್‌ ರುಪಿಯನ್ನು ನಗದಿಗೆ ಬದಲಾಯಿಸಿಕೊಳ್ಳಬಹುದು

ಎಫ್ ಡಿಐ ಆರ್ಷಿಸಲು ಪೂರಕವಾದ ಅಂಶಗಳು
*ಭಾರತದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ಯಶಸ್ಸಿಯಾಗಿದ್ದು,ಅತಿಹೆಚ್ಚು ಜನರನ್ನು ಕವರ್ ಮಾಡಿದೆ. ಹೀಗಾಗಿ 2021-22ರಲ್ಲಿ ಭಾರತದ ಜಿಡಿಪಿ ಪ್ರಗತಿ ದರ 9.2%  ಇದ್ದು, ಜಗತ್ತಿನ ಬೃಹತ್ ಆರ್ಥಿಕತೆಗಳಲ್ಲೇ ಇದು ಅತ್ಯಧಿಕ ದರ ಎಂದು ಹೇಳಲಾಗುತ್ತಿದೆ. ಅಲ್ಲದೆ, ಭಾರತದ ಉದ್ಯಮಗಳು ಕೂಡ ಚೇತರಿಕೆ ಕಾಣುತ್ತಿವೆ. ಇದು ಖಾಸಗಿ ಹಾಗೂ ವಿದೇಶಿ ಹೂಡಿಕೆದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸೋ ನಿರೀಕ್ಷೆಯಿದೆ.
*ಕೇಂದ್ರ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹೀಗಾಗಿ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಬಜೆಟ್ ನಲ್ಲಿ ಕೂಡ ಮೂಲಸೌಕರ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಪಿಎಂ ಗತಿಶಕ್ತಿ, ಬಹುಮಾದರಿ ಸಂಪರ್ಕಕ್ಕೆ ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ , ಮೂಲಸೌಕರ್ಯ ಸಂಪರ್ಕ ಯೋಜನೆಗಳ ಅನುಷ್ಠಾನಕ್ಕೆ ರೈಲ್ವೆ ಹಾಗೂ ಸಾರಿಗೆ ಸೇರಿದಂತೆ 16 ಸಚಿವಾಲಯಗಳನ್ನು ಡಿಜಿಟಲ್ ವೇದಿಕೆಯಲ್ಲಿ ಒಂದುಗೂಡಿಸಿ ಸಹಭಾಗಿತ್ವದ ಕಾರ್ಯ ನಿರ್ವಹಣೆ ಸೇರಿದಂತೆ ಕೆಲವು ಯೋಜನೆಗಳು ಖಾಸಗಿ ಹಾಗೂ ವಿದೇಶಿ ಹೂಡಿಕೆದಾರರನ್ನು ಆರ್ಕಷಿಸೋದು ಖಚಿತ. 

Digital Currency ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ, CBDT ಸ್ಪಷ್ಟನೆ!

* ರಫ್ತಿಗೆ ಪ್ರೋತ್ಸಾಹ ನೀಡೋ ಉದ್ದೇಶದಿಂದ ವಿಶೇಷ ಆರ್ಥಿಕ ವಲಯ ಕಾಯ್ದೆ ಜಾಗಕ್ಕೆ ಹೊಸ ಕಾನೂನೊಂದನ್ನು ಪರಿಚಯಿಸೋ ಸೂಚನೆಯನ್ನು ಬಜೆಟ್ ಭಾಷಣದಲ್ಲಿ ವಿತ್ತ ಸಚಿವರು ನೀಡಿದ್ದಾರೆ. ಈ ಹೊಸ ಯೋಜನೆಯಲ್ಲಿ ಉದ್ಯಮಗಳು ಹಾಗೂ ಸೇವಾ ವಲಯಗಳ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಗಳನ್ನು ಕೂಡ ಪಾಲುದಾರರನ್ನಾಗಿ ಮಾಡಲಾಗುತ್ತದೆ. ಇದ್ರಿಂದ ಮೂಲಸೌಕರ್ಯದ ಗರಿಷ್ಠ ಬಳಕೆ ಜೊತೆಗೆ ರಫ್ತಿಗೂ ಪ್ರೋತ್ಸಾಹ ಸಿಗಲಿದೆ.
*ರಕ್ಷಣಾ ಕ್ಷೇತ್ರದ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಖಾಸಗಿ ಸಂಸ್ಥೆಗಳು ಹಾಗೂ ಸ್ಟಾರ್ಟ್ ಅಪ್‌ಗಳ ಸಹಭಾಗಿತ್ವಕ್ಕೆ ಬಜೆಟ್ ನಲ್ಲಿ ಪ್ರೋತ್ಸಾಹ ನೀಡಲಾಗಿದೆ. ಹೀಗಾಗಿ ರಕ್ಷಣಾ ಸಾಮಗ್ರಿಗಳಿಗೆ ಸಂಬಂಧಿಸಿದ ಕ್ಷೇತ್ರ ಕೂಡ ಖಾಸಗಿ ಹೂಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸೋ ಸಾಧ್ಯತೆಯಿದೆ. 

click me!