ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಸೋಮವಾರ ಚಾಲನೆ ಸಿಗಲಿದೆ. ಮೊದಲ ದಿನವಾದ ಜ.31ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ. ಇವತ್ತೇ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.
ನವದೆಹಲಿ (ಜ. 31): ಸಂಸತ್ತಿನ ಬಜೆಟ್ ಅಧಿವೇಶನಕ್ಕೆ (Budget Session) ಸೋಮವಾರ ಚಾಲನೆ ಸಿಗಲಿದೆ. ಮೊದಲ ದಿನವಾದ ಜ.31ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ಅವರು ಭಾಷಣ ಮಾಡಲಿದ್ದಾರೆ. ಇವತ್ತೇ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.
ಫೆ.1ರಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2022-23ನೇ ಸಾಲಿನ ಬಜೆಟ್ ಅಧಿವೇಶನ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈ ಎರಡೂ ದಿನಗಳ ಕಾಲ ಪ್ರಶ್ನೋತ್ತರ ಮತ್ತು ಶೂನ್ಯ ಅವಧಿ ಇರುವುದಿಲ್ಲ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿ ಅವರು ಫೆ.7ರಂದು ಉತ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
undefined
ವಿಪಕ್ಷಗಳಿಗೆ ಪೆಗಾಸಸ್ ಅಸ್ತ್ರ: ಬಜೆಟ್ ಅಧಿವೇಶನ ಆರಂಭವಾಗಲಿರುವ ಬೆನ್ನಲ್ಲೇ, ಪೆಗಾಸಸ್ ಸ್ಪೈವೇರ್ ಅನ್ನು ಇಸ್ರೇಲ್‌ನಿಂದ ಭಾರತದ ಖರೀದಿಸಿದೆ ಎಂಬ ವರದಿಯು ವಿಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ರೈತರ ಸಮಸ್ಯೆಗಳು, ಗಡಿಬಿಕ್ಕಟ್ಟು, ಬೆಲೆ ಏರಿಕೆ ಮತ್ತು ಹಣದುಬ್ಬರ ವಿಚಾರಗಳನ್ನು ಬಳಸಿಕೊಂಡು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳಿಗೆ ಪೆಗಾಸಸ್ ವಿಚಾರವು ಹೊಸ ಅಸ್ತ್ರವಾಗಿದೆ ಎನ್ನಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ: ಬಜೆಟ್ ಅಧಿವೇಶನದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಂಸತ್ತಿನ ಉಭಯ ಕಲಾಪವನ್ನು 2 ಹಂತಗಳಲ್ಲಿ ವಿಭಜಿಸಲಾಗಿದೆ. ಈ ಪೈಕಿ ಜ.31ರಿಂದ ಪೆ.11ರವರೆಗೆ 10 ಕಲಾಪಗಳು ಮತ್ತು ಉಳಿದ 19 ಕಲಾಪಗಳು ಮಾ.14ರಿಂದ ಏ.8ರವರೆಗೆ ನಡೆಯಲಿದೆ. ಸಾಮಾಜಿಕ ಅಂತರ ಪಾಲನೆಗಾಗಿ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಪ್ರತ್ಯೇಕವಾಗಿ ನಡೆಯಲಿವೆ.
Budget 2022: 700 ಜಿಲ್ಲೆಗಳನ್ನು ರಫ್ತು ಕೇಂದ್ರ ಮಾಡಲು ವಿಶಿಷ್ಟ ಯೋಜನೆ: ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ!
ನಾಳೆ ಕೇಂದ್ರ ಬಜೆಟ್: ಅಪಾರ ನಿರೀಕ್ಷೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆ.1ರ ಬೆಳಿಗ್ಗೆ 11 ಗಂಟೆಗೆ 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ನಲುಗಿದ್ದ ದೇಶದ ಆರ್ಥಿಕತೆ, ಕೃಷಿ ವಲಯ, ಉದ್ಯೋಗ ವಲಯ ಸೇರಿದಂತೆ ನಾನಾ ಜನವರ್ಗಗಳಿಗೆ ಬಜೆಟ್‌ನಿಂದ ಸಾಕಷ್ಟುನಿರೀಕ್ಷೆಯಿದೆ.
ಬಜೆಟ್ ನಿರೀಕ್ಷೆಗಳು
- ಆದಾಯ ತೆರಿಗೆಗೆ 80ಸಿ ವಿನಾಯಿತಿ ಇನ್ನಷ್ಟುಹೆಚ್ಚಳ
- ಕ್ರಿಪ್ಟೋಕರೆನ್ಸಿಗಳಿಗೆ ತೆರಿಗೆ, ಕ್ಯಾಪಿಟಲ್ ಗೇನ್ಸ್ ರದ್ದು
- ಎಲೆಕ್ಟ್ರಿಕ್ ವಾಹನ, ಸೆಮಿಕಂಡಕ್ಟರ್ ವಲಯಕ್ಕೆ ಒತ್ತು
- ಜಿಡಿಪಿಯ ಶೇ.3ರಷ್ಟುಹಣ ಆರೋಗ್ಯಕ್ಕೆ ಮೀಸಲು?
- ಉದ್ಯೋಗ ಸೃಷ್ಟಿಗೆ ನೆರವು, ಗೃಹಸಾಲಕ್ಕೆ ಉತ್ತೇಜನ
- ಗ್ರಾಮೀಣ ಹಾಗೂ ಕೃಷಿ ಆರ್ಥಿಕತೆಗೆ ಹೆಚ್ಚಿನ ನೆರವು
ಇಂದಿನಿಂದ ಸಂಸತ್ ಕಲಾಪ: ಪ್ರತಿಪಕ್ಷಗಳ ಗದ್ದಲ ಸಂಭವ
ಸಂಸತ್ತಿನ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಮೊದಲ ದಿನ ರಾಷ್ಟ್ರಪತಿಗಳು ಜಂಟಿ ಕಲಾಪವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇಸ್ರೇಲ್‌ನಿಂದ ಪೆಗಾಸಸ್ ಗೂಢಚರ್ಯೆ ಸಾಫ್ಟ್‌ವೇರನ್ನು ಭಾರತ ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಈ ವಿಚಾರವೂ ಸೇರಿದಂತೆ ರೈತರ ಸಮಸ್ಯೆಗಳು, ಗಡಿ ಬಿಕ್ಕಟ್ಟು, ಬೆಲೆ ಏರಿಕೆ ಮುಂತಾದ ವಿಚಾರದಲ್ಲಿ ಸರ್ಕಾರ-ಪ್ರತಿಪಕ್ಷಗಳ ನಡುವೆ ಭಾರಿ ಜಟಾಪಟಿ ನಡೆಯುವ ಸಾಧ್ಯತೆಯಿದೆ.
Budget 2022:ಬಜೆಟ್ ಅಧಿವೇಶನದ ಮೊದಲೆರಡು ದಿನ ಶೂನ್ಯ, ಪ್ರಶ್ನೋತ್ತರ ಅವಧಿ ಇಲ್ಲ
ಇಂದು ಆರ್ಥಿಕ ಸಮೀಕ್ಷೆ ವರದಿ ಮಂಡನೆ: ಜಿಡಿಪಿ 9.2% ವೃದ್ಧಿ?
ಮಂಗಳವಾರ ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಸೋಮವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶ 9.2% ಜಿಡಿಪಿ ಬೆಳವಣಿಗೆ ದರ ದಾಖಲಿಸಬಹುದು ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡುವ ನಿರೀಕ್ಷೆ ಇದೆ. ದೇಶದ ಆರ್ಥಿಕತೆಯ ಸ್ಥಿತಿಗತಿ, ಮುನ್ನೋಟ, ನೀತಿ ನಿರೂಪಣೆಯಲ್ಲಿನ ಸಂಭಾವ್ಯ ಬದಲಾವಣೆಗಳನ್ನು ಆರ್ಥಿಕ ಸಮೀಕ್ಷಾ ವರದಿ ಒಳಗೊಂಡಿರುತ್ತದೆ.