Budget 2022: ಶೀಘ್ರದಲ್ಲೇ ಭಾರತದಲ್ಲಿ 5G ಸೇವೆ: ಈ ವರ್ಷವೇ ತರಂಗಾಂತರ ಹಂಚಿಕೆ ಮಾಡಲಿರುವ ಕೇಂದ್ರ!

By Suvarna News  |  First Published Feb 1, 2022, 1:46 PM IST

*ಭಾರತದಲ್ಲೀ ಶೀಘ್ರದಲ್ಲಿ 4Gಗಿಂತ ಹೈ ಸ್ಪೀಡ್‌  5G ಸೇವೆ!
*ಈ ವರ್ಷವೇ ತರಂಗಾಂತರ ಹಂಚಿಕೆ ಮಾಡಲಿರುವ ಕೇಂದ್ರ ಸರ್ಕಾರ 
*ದೇಶದ ಪ್ರತಿ ಮೂಲೆಗೂ ಇಂಟರ್‌ನೆಟ್ ತಲುಪಿಸಲು ಯೋಜನೆ ಸಿದ್ಧ
 


ನವದೆಹಲಿ (ಫೆ. 01): 5G ಸೇವೆ  ಪ್ರಸ್ತುತ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. 2022-23 ರ ವೇಳೆಗೆ ಭಾರತದಲ್ಲಿ 5G ಸೇವೆ ಆರಂಭಿಸಲಾಗವುದು ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ತಿಳಿಸಿದ್ದಾರೆ. ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು  2022ರಲ್ಲೇ ನಡೆಸಲಾಗುವುದು ಎಂದು ಸೀತಾರಾಮನ್‌ ತಿಳಿಸಿದ್ದಾರೆ. ಈ ಮೂಲಕ ಭಾರತದಲ್ಲಿ 4Gಗಿಂತ ನೂರು ಪಟ್ಟು ವೇಗದ ಇಂಟರ್‌ನೆಟ್‌  ಶೀಘ್ರದಲ್ಲೇ ಲಭ್ಯವಾಗಲಿದೆ.

ಸಿಲಿಕಾನ್‌ ಸಿಟಿ ಬೆಂಗಳೂರು (Bengaluru), ಮುಂಬೈ, ದೆಹಲಿ, ಅಹಮದಾಬಾದ್‌ ಸೇರಿದಂತೆ ಮಹಾ ನಗರಗಳಲ್ಲಿ ಮುಂದಿನ ವರ್ಷದಿಂದಲೇ ಅತೀ ವೇಗದ ಇಂಟರ್ನೆಟ್‌ ಸೇವೆ 5ಜಿ ಸೇವೆ (5G Internet Services) ಲಭ್ಯವಾಗಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿತ್ತು. ಈ ಬೆನ್ನಲ್ಲೇ 5ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೇ . 5G ಸಂಬಂಧಿತ ವಸ್ತುಗಳ ಉತ್ಪಾದನೆಗೆ ಹಾಗೂ ಮೂಲಸೌಕರ್ಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. 

Tap to resize

Latest Videos

undefined

Budget 2022 LIVE ಇಲ್ಲಿ ವಿಕ್ಷೀಸಿ!

ದೇಶದ ಪ್ರತಿ ಮೂಲೆಗೂ ಇಂಟರ್‌ನೆಟ್‌ ಸೇವೆ ಒದಗಿಸಲು ನಿಟ್ಟಿನಲ್ಲಿ ಆಪ್ಟಿಕಲ್‌ ಫೈಬರ್‌ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್, ಇಂಟರ್‌ ನೆಟ್‌ ಸೇವೆ ನೀಡಲಾಗುವುದು. 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್ ನೀಡುವ ಗುರಿಯೊಂದಿಗೆ ಯೋಜನೆ ಸಿದ್ಧಪಡಿಸಲಾಗುವುದು ಎಂದು ಸೀತಾರಾಮನ್‌ ತಿಳಿಸಿದ್ದಾರೆ. 5G ಬಿಡುಗಡೆ ಮೂಲಕ ಭಾರತದಲ್ಲಿ ಡಿಜಿಟಲ್‌ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಯಾಗಲಿದೆ. ಅತ್ಯಂತ ವೇಗದ ಇಂಟೆರ್ನೆಟ್‌ ಸೇವೆ ಒದಗಿಸಲು ಅನುವು ಮಾಡಿಕೊಡುವ 5ಜಿ ಬಳಕೆದಾರರಿಗೆ ಹೊಸ ಅನುಭವಗಳನ್ನು ನೀಡುವ ಅಪರಿಮಿತ ಅವಕಾಶವನ್ನು ಹೊಂದಿದೆ. ಹೊಸ ಉದ್ಯೋಗ ಸೃಷ್ಟಿಯ ಜೊತೆಗೆ ಹಲವು ಸೇವೆಗಳನ್ನು ಅತ್ಯಂತ ವೇಗವಾಗಿ ಪಡೆಯಲು ಈ ಸೇವೆ ಅವಕಾಶ ಕಲ್ಪಿಸಲಿದೆ.

ಟೆಲಿಕಾಂ ಆಪರೇಟರ್ ಜಿಯೋ ಇತ್ತೀಚೆಗೆ ದೇಶದಾದ್ಯಂತ 1,000 ಮಹಾನಗರಗಳಿಗೆ 5G ಕವರೇಜ್ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ಘೋಷಿಸಿತ್ತು. 5G ಪ್ರಯೋಗಗಳಿಗಾಗಿ ಕಂಪನಿಯು ತನ್ನದೇ ಆದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5G ಉಪಕರಣಗಳು ಮತ್ತು ತಂತ್ರಜ್ಞಾನದ ಘಟಕಗಳನ್ನು ಬಳಸುತ್ತಿದೆ ಎಂದು ತಿಳಿಸಿತ್ತು. 

ಇದನ್ನೂ ಓದಿ: Budget 2022: ಬ್ಲಾಕ್‌ಚೈನ್ ಬಳಸಿ RBI ಡಿಜಿಟಲ್ ಕರೆನ್ಸಿ: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ತೆರಿಗೆ!

5ಜಿ ಸ್ಪೆಕ್ಟ್ರಂನ ಮೂಲ ದರ, ಬ್ಯಾಂಡ್‌ ಪ್ಲ್ಯಾನ್‌, ಬ್ಲಾಕ್‌ ಗಾತ್ರ, ಎಷ್ಟುಪ್ರಮಾಣದ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕು ಎಂಬ ವಿಷಯದ ಬಗ್ಗೆ ಶಿಫಾರಸು ಮಾಡುವಂತೆ ದೂರ ಸಂಪರ್ಕ ಇಲಾಖೆಯು, ಟ್ರಾಯ್‌ಗೆ  (TRAI) ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟೆಲಿಕಾಂ ಉದ್ಯಮ ವಲಯದ (Telecom) ಪಾಲುದಾರರ ಜೊತೆ ಸಮಾಲೋಚನೆ ನಡೆಸಿದ್ದ ಟ್ರಾಯ್‌ ಕೆಲವೊಂದಿಷ್ಟು ಶಿಫಾರಸುಗಳನ್ನು ಮಾಡಿತ್ತು.

ಮೊದಲಿಗೆ ಎಲ್ಲೆಲ್ಲಿ ಆರಂಭ?: ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್‌, ಲಖನೌ, ಚೆನ್ನೈ, ಹೈದ್ರಾಬಾದ್‌, ಪುಣೆ, ಗಾಂಧೀ ನಗರ

5ಜಿ ಲಾಭ ಏನು?: 4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್‌, ಅತ್ಯಂತ ವೇಗದ ಸೇವೆ, ನಿರ್ವಹಣಾ ವೆಚ್ಚ ಕಡಿಮೆ, ಎಚ್‌ಡಿ (HD) ಚಲನಚಿತ್ರ ಸೆಕೆಂಡ್‌ಗಳಲ್ಲೇ ಡೌನ್‌ಲೋಡ್‌, ಗೇಮಿಂಗ್‌, ವೀಡಿಯೋ ಉದ್ಯಮಕ್ಕೆ ಹೊಸ ಅವಕಾಶ

click me!