ಯಮಹಾ ಮಾನ್‌ಸ್ಟರ್ ಮೊಟೋ ಜಿಪಿ ಎಡಿಷನ್ ಬೈಕ್ ಬಿಡುಗಡೆ!

By Suvarna NewsFirst Published Aug 6, 2022, 4:54 PM IST
Highlights

ಯಮಹಾ ರೇಸಿಂಗ್ ಸ್ಪೋರ್ಟ್ಸ್ ಬೈಕ್ ಎಡಿಷನ್ ಬಿಡುಗಡೆಯಾಗಿದೆ. ಹೊಚ್ಚ ಹೊಸ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಕೈಗೆಟುವ ಬೆಲೆಯಲ್ಲಿ ಬೈಕ್ ಪರಿಚಯಿಸಲಾಗಿದೆ. ಈ ಕುರಿತು ವಿವರ ಇಲ್ಲಿವೆ.

ಬೆಂಗಳೂರು(ಆ.06): `ದಿ ಕಾಲ್ ಆಫ್ ದಿ ಬ್ಲೂ ಬ್ರಾಂಡ್ ಅಭಿಯಾನದ ಭಾಗವಾಗಿ ಯಮಾಹಾ ಮೋಟಾರ್  2022 ಮಾನ್‌ಸ್ಟರ್ ಎನರ್ಜಿ ಯಮಾಹಾ ಮೊಟೊ ಜಿಪಿ ಎಡಿಷನ್ ಮಾದರಿಗಳ ಆಕರ್ಷಕ ಸರಣಿಯನ್ನು ಪರಿಚಯಿಸಿದೆ. ಈ ಮಾದರಿಗಳಲ್ಲಿ ಸೂಪರ್‍ಸ್ಪೋರ್ಟ್ ವೈಝಡ್‍ಎಫ್-ಆರ್15ಎಂ, ದಿ ಡಾರ್ಕ್ ವಾರಿಯರ್ ಎಂಟಿ-15 ವಿ2.0, ಮ್ಯಾಕ್ಸಿ-ಸ್ಪೋಟ್ರ್ಸ್ ಸ್ಕೂಟರ್ ಏರೊಕ್ಸ್ 155 ಮತ್ತು ರೇಝಡ್‍ಆರ್ 125 ಎಫ್‍ಐ ಹೈಬ್ರಿಡ್ ಸ್ಕೂಟರ್ ಒಳಗೊಂಡಿವೆ. ಮಾನ್‌ಸ್ಟರ್ ಎನರ್ಜಿ ಯಮಾಹಾ ಮೊಟೊಜಿಪಿ ಎಡಿಷನ್ ಮಾದರಿ ಶ್ರೇಣಿಯು ಭಾರತದಲ್ಲಿ ಎಲ್ಲ ಪ್ರೀಮಿಯಂ ಬ್ಲೂ ಸ್ಕ್ವಯರ್ ಮಳಿಗೆಗಳಲ್ಲಿ ಲಭ್ಯವಿದೆ. ಮಾನ್ಸ್‍ಟರ್ ಎನರ್ಜಿ ಯಮಾಹಾ ಮೊಟೊ ಜಿಪಿ ಎಡಿಷನ್ ಮೋಟಾರ್‍ಸೈಕಲ್ ಶ್ರೇಣಿ-ವೈಝಡ್‍ಎಫ್-ಆರ್15ಎಂ ಮತ್ತು ಎಂಟಿ-15 ವಿ2.0 ಟ್ಯಾಂಕ್ ಶ್ರೌಡ್ಸ್, ಫ್ಯೂಯೆಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‍ಗಳಲ್ಲಿ ತನ್ನ ರೇಸಿಂಗ್ ಹಿನ್ನೆಲೆ ಎತ್ತಿ ತೋರುವ ಮೂಲಕ ಯಮಾಹಾ ಮೊಟೊ ಜಿಪಿ ಬ್ರಾಂಡಿಂಗ್ ಪ್ರದರ್ಶಿಸುತ್ತದೆ. ಏರೊಕ್ಸ್ 155 ಮತ್ತು ರೇಝಡ್‍ಆರ್ ಮಾನ್ಸ್‍ಟರ್ ಎನರ್ಜಿ ಯಮಾಹಾ ಮೊಟೊ ಜಿಪಿ ಎಡಿಷನ್ ಒಟ್ಟಾರೆ ಬಾಡಿ ಮೇಲೆ ಬ್ರಾಂಡಿಂಗ್ ಪಡೆಯುತ್ತದೆ. 

ಭಾರತದಲ್ಲಿ ಯಮಹಾ ಭರ್ಜರಿ ಕೊಡುಗೆ, ಅತ್ಯಾಧುನಿಕ ತಂತ್ರಜ್ಞಾನದ ಬೈಕ್ ಬಿಡುಗಡೆಗೆ ತಯಾರಿ!

2022 ಮೊಟೊ ಜಿಪಿ ಎಡಿಷನ್ಸ್   ಎಕ್ಸ್-ಶೋರೂಂ(ದೆಹಲಿ)
ಆರ್15ಎಂ ಬೆಲೆ: 1,90,900 ರೂಪಾಯಿ
ಎಂಟಿ-15 ವಿ2.0ಬೆಲೆ:  1,65,400 ರೂಪಾಯಿ
ರೇಝಡ್‍ಆರ್ 125ಬೆಲೆ:  87,330 ರೂಪಾಯಿ
ಎಫ್‍ಐ ಹೈಬ್ರಿಡ್ ಹಾಗೂ ಏರಾಕ್ಸ್ 155 ಬೆಲೆ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ     

ಭಾರತದಲ್ಲಿ ಯಮಾಹಾದ ಸದೃಢ ಹಿನ್ನೆಲೆಯು ಆರ್-ಸೀರೀಸ್, ಎಫ್‍ಝಡ್ ಸೀರೀಸ್ ಮತ್ತು ಎಂಟಿ ಸೀರೀಸ್‍ನಿಂದ ಪ್ರಾರಂಭವಾಗುತ್ತಿದ್ದು ಇದು ಯಮಾಹಾ ರೇಸಿಂಗ್‍ನ ಜಾಗತಿಕ ಸ್ಫೂರ್ತಿಯ ಯಮಾಹಾದ ಬದ್ಧತೆಯನ್ನು ಸಾಕ್ಷೀಕರಿಸುತ್ತವೆ. ತನ್ನ ಪ್ರಗತಿಯನ್ನು ಮತ್ತಷ್ಟು ಉತ್ತೇಜಿಸಲು ಯಮಾಹಾ ಉತ್ಸಾಹ, ಸ್ಟೈಲ್ ಮತ್ತು ಕ್ರೀಡಾತನವನ್ನು ಸದೃಢಗೊಳಿಸುವ ಗುರಿ ಹೊಂದಿದ್ದು 

Upcoming Yamaha Bike ಶೀಘ್ರದಲ್ಲಿ ಯಮಹಾ FZ, FZS ಡಿಲಕ್ಸ್ ಬೈಕ್ ಬಿಡುಗಡೆ, ಬೆಲೆ, ಫೀಚರ್ಸ್ ಬಹಿರಂಗ!

ಭವಿಷ್ಯದಲ್ಲೂ ಮೊಟೊಜಿಪಿ ಸ್ಫೂರ್ತಿ ಆವೃತ್ತಿ 
ಯಮಾಹಾ ಅಂತಾರಾಷ್ಟ್ರೀಯ ಮೋಟಾರ್ ಸ್ಪೋಟ್ರ್ಸ್‍ನ ಸದೃಢ ರೇಸಿಂಗ್ ಡಿಎನ್‍ಎಗೆ ಖ್ಯಾತಿ ಪಡೆದಿದೆ. ಮಾನ್ಸ್‍ಟರ್ ಎನರ್ಜಿ ಯಮಾಹಾ ಮೊಟೊ ಜಿಪಿ ಎಡಿಷನ್ ತನ್ನ ಹೆಮ್ಮೆಯ ಪೀಳಿಗೆಯನ್ನು ಪ್ರದರ್ಶಿಸಲು ನಮ್ಮ ಬದ್ಧತೆಯ ಪರಿಪೂರ್ಣ ಪ್ರಾತಿನಿಧ್ಯವಾಗಿದೆ. ಈ ವರ್ಷ ಮೊಟೊಜಿಪಿಯಲ್ಲಿ ನಮ್ಮ ಕಾರ್ಯಕ್ಷಮತೆ ಅಸಾಧಾರಣವಾಗಿದ್ದು ಫೇಬಿಯೊ ಕ್ವಾರ್ಟರರೊ ರೈಡರ್ ಸ್ಟಾಂಡಿಂಗ್ಸ್‍ನಲ್ಲಿ ತನ್ನ ನೇತೃತ್ವ ಕಾಪಾಡಿಕೊಂಡಿದೆ. ಇದು ಯಮಾಹಾದ ಸರಿಸಾಟಿ ಇರದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಕ್ತಿಯನ್ನು ಬಿತ್ತರಿಸುತ್ತದೆ. ಯಮಾಹಾದಲ್ಲಿ ಜಾಗತಿಕ ರೇಸಿಂಗ್‍ನಲ್ಲಿ ಅದೇ ಮಟ್ಟದ ಉತ್ಸಾಹದ ಮಟ್ಟ ಕಾಪಾಡಿಕೊಳ್ಳುವಂತೆ ಮಾಡಲು ನೆರವಾಗುವುದು. ಇಂದು, 4 ಮಾನ್ಸ್‍ಟರ್ ಎನರ್ಜಿ ಯಮಾಹಾ ಮೊಟೊ ಜಿಪಿ ಎಡಿಷನ್ ಮಾದರಿಗಳನ್ನು ರೇಸಿಂಗ್ ಸ್ಫೂರ್ತಿಯ ಮೊಟೊ ಜಿಪಿ ಅಭಿಮಾನಿಗಳಿಗೆ ಪರಿಚಯಿಸಲು ಬಹಳ ಸಂತೋಷ ಹೊಂದಿದ್ದೇವೆ. ಕಂಪನಿಯು ಭಾರತಕ್ಕೆ ತನ್ನ ಬ್ರಾಂಡ್ ಬದ್ಧತೆಯ ಭಾಗವಾಗಿ ಅಂತಹ ಆಕರ್ಷಕ ಉತ್ಪನ್ನಗಳನ್ನು ಪರಿಚಯಿಸುವುದನ್ನು ಮುಂದುವರಿಸುತ್ತದೆ ಎಂದು ಯಮಾಹಾ ಮೋಟಾರ್ ಇಂಡಿಯಾ ಕಂಪನಿಗಳ ಸಮೂಹದ ಅಧ್ಯಕ್ಷ ಐಷಿನ್ ಚಿಹಾನಾ ಹೇಳಿದ್ದಾರೆ.
 

click me!