ಬರೋಬ್ಬರಿ 510 ಕಿ.ಮೀ ಮೈಲೇಜ್, 58kph ವೇಗ, ಆಪ್ಟಿಬೈಕ್ R22 ಎವರೆಸ್ಟ್ ಇ ಬೈಕ್ ಲಾಂಚ್!

By Suvarna NewsFirst Published Aug 2, 2022, 4:54 PM IST
Highlights

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಆವಿಷ್ಕಾರಗಳು ನಡೆಯುತ್ತಿದೆ. ಇದೀಗ ಇವಿ ಆಪ್ಟಿಬೈಕ್ ಹೊಸ ಇ ಬೈಸಿಕಲ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 510 ಕಿ.ಮೀ ಮೈಲೇಜ್ ನೀಡಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ನ್ಯೂಯಾರ್ಕ್(ಆ.02):  ಕಡಿಮೆ ಬೆಲೆ ಹೆಚ್ಚಿನ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಬೇಡಿಕೆ ಇದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಇದೀಗ ಆಪ್ಟಿಬೈಕ್ ಕಂಪನಿ ನೂತನ ಇ ಬೈಕ್ ಬಿಡುಗಡೆ ಮಾಡಿದೆ. ಹೊಸ ಇ ಬೈಸಿಕಲ್ ಒಂದು ಬಾರಿ ಚಾರ್ಜ್ ಮಾಡಿದರೆ 510 ಕಿ.ಮೀ ಮೈಲೇಜ್ ನೀಡಲಿದೆ. ಅಂದರೆ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರಕ್ಕೆ ದಾರಿ ಇದ್ದರೆ ಒಂದೇ ಚಾರ್ಚ್‌ನಲ್ಲಿ ಎವರೆಸ್ಟ್ ಕ್ರಮಿಸಲಿದೆ. ಇದಕ್ಕಾಗಿ ಆಪ್ಟಿಬೈಕ್ R22 ಎವರೆಸ್ಟ್ ಅನ್ನೋ ಹೆಸರಿಡಲಾಗಿದೆ. ಈ ಇ ಬೈಸಿಕಲ್‌ನಲ್ಲಿ ಹಲವು ವಿಶೇಷತೆಗಳಿವೆ. ಗರಿಷ್ಠ ವೇಗ 58 ಕಿ.ಮೀ ಪ್ರತಿ ಗಂಟಗೆ. ಇಷ್ಟೇ ಅಲ್ಲ 5 ಸ್ಪೀಡ್ ಮೊಡ್‌ಗಳಿದ್ದು, ಪ್ರಯಾಣಕ್ಕೆ ಮತ್ತಷ್ಟು ಸುಖಕರವಾಗಲಿದೆ. ಇದು ಅಡ್ವೆಂಚರ್ ಬೈಕ್ ಆಗಿದೆ. ನೂತನ ಬೈಕ್ ಅಮೆರಿಕದ ಆಪ್ಟಿಬೈಕ್ ಕಂಪನಿ ಬಿಡುಗಡೆ ಮಾಡಿದೆ.  ಇ ಬೈಸಿಕಲ್ 73 ಕೆಜಿ ತೂಕವಿದೆ. ಅಡ್ವೆಂಚರ್ ಇ ಬೈಕ್ ಅಗಿರುವ ಕಾರಣ ಎಲೆಕ್ಟ್ರಿಕ್ ಮೋಟಾರ್ ಪವರ್ ಕೂಡ ಉತ್ತಮವಾಗಿದೆ. 190Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಿಂದ ಶೇಕಡಾ 40 ರಷ್ಟು ಎತ್ತರ ಪ್ರದೇಶವನ್ನು ಸಲೀಸಾಗಿ ಸಾಗಲಿದೆ.  3260Wh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಬ್ಯಾಟರಿಯನ್ನು ಹೊರತೆಗಯಲು ಸಾಧ್ಯವಿದೆ. 

ಹ್ಯಾಂಡಲ್‌ಬಾರ್‌ನಲ್ಲಿ LCD ಡಿಸ್‌ಪ್ಲೇ ನೀಡಲಾಗಿದೆ. ಬ್ಯಾಟರಿ ಚಾರ್ಜ್, ಮೈಲೇಜ್ ರೇಂಜ್, ಮೂಡ್, ಸೇರಿದಂತೆ ಎಲ್ಲಾ ಮಾಹಿತಿ ಈ LCD ಡಿಸ್‌ಪ್ಲೇ ನೀಡಲಿದೆ. ಅತ್ಯುತ್ತಮ ಪವರ್ ಇರುವುದರಿಂದ ಕ್ಲಿಷ್ಟಕರ ದಾರಿಗಳಲ್ಲೂ ಇಬೈಕ್ ಸಲೀಸಾಗಿ ಸಾಗಲಿದೆ. ಇ ಬೈಸಿಕಲ್ ಆದರೂ ಸುರಕ್ಷತೆಗೂ ಆದ್ಯತೆ ನೀಡಲಾದಿದೆ. ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಇದರಿಂದ ವೇಗವಾಗಿ ಚಲಿಸುವ ಇ ಬೈಸಿಕಲ್ ಅಷ್ಟೇ ವೇಗವಾಗಿ ನಿಲ್ಲಿಸಲು ಸಾಧ್ಯವಿದೆ. 

PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್

ಸ್ಪ್ಲಿಟ್ ಬ್ಯಾಟರಿ ಇಲ್ಲಿ ಬಳಸಲಾಗಿದೆ. ಹೀಗಾಗಿ ಸುಲಭವಾಗಿ ತೆಗೆಯಲು ಸಾಧ್ಯವಿದೆ. ಇನ್ನು ರೈಡರ್ ಅತೀ ಹೆಚ್ಚು ದೂರ ಕ್ರಮಿಸುತ್ತಿದ್ದರೆ, ಮತ್ತೊಂದು ಬ್ಯಾಟರಿಯನ್ನು ಸೈಕಲ್‌ನಲ್ಲಿ ಇರಿಸಲು ಸಾಧ್ಯವಿದೆ. ಇದರಿಂದ ಪ್ರಯಾಣದಲ್ಲಿ ಯಾವುದೇ ಬ್ಯಾಟರಿ ಚಾರ್ಜ್ ಸಮಸ್ಯೆ ಎದುರಾಗುವುದಿಲ್ಲ. ಸ್ಪೋರ್ಟ್ಸ್ ಅಡ್ವೆಂಚರ್‌ ದೃಷ್ಟಿಯಲ್ಲಿಟ್ಟುಕೊಂಡು ಈ ಬೈಕ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಅಡ್ವೆಂಟರ್ ಸ್ಪೋರ್ಟ್ಸ್ ಇಷ್ಟಪಡುವವರ ಪ್ರಯಾಣ ಸಲೀಸಾಗಿದೆ. ಇಷ್ಟೇ ಅಲ್ಲ ಲಗೇಜ್‌ ಒಯ್ಯುವ ಸಾಮರ್ಥ್ಯವೂ ಹೊಂದಿದೆ. 

ಸದ್ಯ ಇ ಬೈಕಿಸಿಕಲ್ ಅಮೆರಿದಲ್ಲಿ ಲಭ್ಯವಿದೆ. ಇತರ ದೇಶಗಳಿಗೆ ರಫ್ತು ಮಾಡಲು ಆಪ್ಟಿಬೈಕ್ ಕಂಪನಿ ಮುಂದಾಗಿದೆ. ವಿಶೇಷವಾಗಿ ಚೀನಾ ಹಾಗೂ ಭಾರತ ಮಾರುಕಟ್ಟೆಯನ್ನು ಗುರಿಯಾಸಿಕೊಂಡು ಕಂಪನಿ ಬ್ರ್ಯಾಂಡ್ ವಿಸ್ತರಿಸಲು ಮುಂದಾಗಿದೆ. ಅಮೆರಿಕದಲ್ಲಿ ಇದರ ಬೆಲೆ $18,900(ಅಮೆರಿಕನ್ ಡಾಲರ್) ಅಂದರೆ ಭಾರತೀಯ ರೂಪಾಯಿಗಳಲ್ಲಿ 14,86,543.

ಲೈಸೆನ್ಸ್, ದಾಖಲೆ ಯಾವುದೂ ಬೇಡ; ಬಿಡುಗಡೆಯಾಗಿದೆ 35,000 ರೂಪಾಯಿ ಬೈಕ್!

click me!