ಬೆಂಗಳೂರಿನ ಯಮಹಾ ಟ್ರ್ಯಾಕ್ ಡೇ ಯಶಸ್ವಿ, ರೇಸ್‌ನಲ್ಲಿ 300 ಆಸಕ್ತರಿಂದ ರೈಡ್!

By Suvarna NewsFirst Published Feb 25, 2024, 10:10 PM IST
Highlights

ಬೆಂಗಳೂರಿನಲ್ಲಿ ಆಯೋಜಿಸಿದ ಯಮಹಾ ಟ್ರ್ಯಾಕ್ ಡೇ ಅತ್ಯಂತ ಯಶಸ್ವಿಯಾಗಿ ನಡೆದಿದೆ. 100ಕ್ಕೂ ಯಮಹಾ ಮಾಲೀಕರು ಟ್ರಾಕ್‌ನಲ್ಲಿ ರೈಡ್ ಮಾಡುವ ಆನಂದ ಅನುಭವಿಸಿದ್ದಾರೆ. 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. 

ಬೆಂಗಳೂರು(ಫೆ.25): ಇಂಡಿಯಾ ಯಮಹಾ ಮೋಟಾರ್ ತನ್ನ ಗ್ರಾಹಕರಿಗಾಗಿ  ಬೆಂಗಳೂರಿನ ವಿಶೇಷ ಟ್ರ್ಯಾಕ್ ಡೇ ಕಾರ್ಯಕ್ರಮವನ್ನು ಆಯೋಜಿಸಿತ್ತು. "ದಿ ಕಾಲ್ ಆಫ್ ದಿ ಬ್ಲೂ" ಬ್ರ್ಯಾಂಡ್ ಅಭಿಯಾನದ ಭಾಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಸುಮಾರು 100ಕ್ಕೂ ಹೆಚ್ಚು ಯಮಹಾ ಮಾಲೀಕರು ಮತ್ತು ಬೆಂಗಳೂರು ಮತ್ತು ಹತ್ತಿರದ ಪ್ರದೇಶಗಳ  300ಕ್ಕೂ ಹೆಚ್ಚು ಅಪ್ರತಿಮ ಯಮಹಾ ಅಭಿಮಾನಿಗಳ ಉತ್ಸಾಹಭರಿತ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಬೆಂಗಳೂರಿನ ಅರುನಿ ಗ್ರಿಡ್‌ನಲ್ಲಿ ನಡೆದ ಟ್ರ್ಯಾಕ್ ಡೇ ಕಾರ್ಯಕ್ರಮವು ಯಮಹಾ ಬೈಕ್ ಮಾಲೀಕರಿಗೆ ತಮ್ಮ ಯಮಹಾ ಮೋಟಾರ್‌ಸೈಕಲ್‌ಗಳನ್ನು ಟ್ರ್ಯಾಕ್‌ನಲ್ಲಿ ಓಡಿಸುವ ರೋಮಾಂಚಕ್ಕೆ ಅನುಭವಕ್ಕೆ ಪಾತ್ರರಾಗುವ ಅವಕಾಶವನ್ನು ಒದಗಿಸಿತು. ಭಾಗವಹಿಸಿದವರು ತಮ್ಮ ಬೈಕ್ ಗಳನ್ನು ಟ್ರಾಕ್ ನಲ್ಲಿ ಓಡಿಸುತ್ತಾ ಬೈಕ್ ನಲ್ಲಿ ಲಭ್ಯವಿರುವ ತ್ವರಿತ ಶಿಫ್ಟರ್‌ಗಳು ಮತ್ತು ಟ್ರಾಕ್ಷನ್ ಕಂಟ್ರೋಲ್ ಫೀಚರ್ ಗಳನ್ನು ಬಳಸಿ ರೇಸ್ ಅನುಭವವನ್ನು ಪಡೆದರು. ಟ್ರಾಕ್ ನಲ್ಲಿ ಬೈಕ್ ಓಡಿಸುವ ಆನಂದಕ್ಕೆ ಪಾತ್ರವಾಗಿದ್ದಲ್ಲದೆ, ಬೈಕಿನ ನಿಜವಾದ ಶಕ್ತಿ ಸಾಮರ್ಥ್ಯ ತಿಳಿದುಕೊಂಡರು.

ಭಾರತದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ ಐಕಾನಿಕ್ ಯಮಹಾ RX100, ಕೈಗೆಟುಕುವ ಬೆಲೆಯಲ್ಲಿ ಬೈಕ್!

ಯಮಹಾದ ಬೈಕ್‌ಗಳ ಪ್ರದರ್ಶನದ ಜೊತೆಗೆ, ಆಕರ್ಷಕ ವೈಝಡ್ಎಫ್-ಆರ್3 ಮತ್ತು ಎಂಟಿ-03 ಪ್ರದರ್ಶನವನ್ನೂ ಮಾಡಲಾಯಿತು. ಯಮಹಾ ಇಂಡಿಯಾದ ಶ್ರೇಣಿಯ ಈ ಎರಡು ಹೊಸ ಉತ್ಪನ್ನಗಳು ಆಯಾ ವಿಭಾಗಗಳಲ್ಲಿ ಅಪೂರ್ವ ಕಾರ್ಯಕ್ಷಮತೆ ಮತ್ತು ವಿಶೇಷ ಗುಣಮಟ್ಟವನ್ನು ಒದಗಿಸುತ್ತದೆ. ಯಮಹಾ ಅಪ್ಯಾರಲ್ಸ್ & ಆಕ್ಸೆಸರೀಸ್ ಪ್ರದರ್ಶನ, ಫೋಟೋ-ಆಪ್ ಝೋನ್, ಮತ್ತು ಗೇಮಿಂಗ್ ಝೋನ್ ಸೇರಿದಂತೆ ಹಲವಾರು ಇತರ ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿತ್ತು.

ಶ್ರೀಮಂತ ರೇಸಿಂಗ್ ಪರಂಪರೆ ಮತ್ತು ತನ್ನ ಜಾಗತಿಕ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಯಮಹಾ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು ಮತ್ತು ಕಾರ್ಯಕ್ರಮವು ಅದರ ಗ್ರಾಹಕರಲ್ಲಿ ಹೆಮ್ಮೆಯ ಭಾವನೆ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸಿತು.

ಸ್ಟ್ರೀಟ್ ಫೈಟರ್ R3, MT-03 ಬಿಡುಗಡೆ, ಅತ್ಯಾಕರ್ಷಕ ಯಮಹಾ ಬೈಕ್‌ಗೆ ಭಾರಿ ಬೇಡಿಕೆ!

ಕಾರ್ಯಕ್ರಮದಲ್ಲಿ ಹಲವು ಯಮಹಾ ಬೈಕ್‌ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವೈಝಡ್ಎಫ್ ಆರ್3 (321 ಸಿಸಿ), ಎಂಟಿ-03 (321 ಸಿಸಿ), ವೈಝಡ್ಎಫ್-ಆರ್15 ವಿ4 (155 ಸಿಸಿ), ವೈಝಡ್ಎಫ್ ಆರ್15ಎಂ (155 ಸಿಸಿ), ವೈಝಡ್ಎಫ್-ಆರ್15ಎಸ್ (155 ಸಿಸಿ), ಎಂಟಿ -15 ವಿ2 (155 ಸಿಸಿ), ಎಫ್ ಝಡ್ ಎಸ್-ಎಫ್ಐ ವರ್ಷನ್ 4.0 (149 ಸಿಸಿ), ಎಫ್ ಝಡ್ ಎಸ್-ಎಫ್ಐ ವರ್ಷನ್ 3.0 (149 ಸಿಸಿ), ಎಫ್ ಝಡ್-ಎಫ್ಐ ಆವೃತ್ತಿ 3.0 (149 ಸಿಸಿ), ಎಫ್ ಝಡ್-ಎಕ್ಸ್ (149cc) ಮತ್ತು ಸ್ಕೂಟರ್ ಗಳಾದ ಏರಾಕ್ಸ್ (155 ಸಿಸಿ), ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ 125 ಎಫ್ಐಸಿಸಿಡಿ (125 ಎಫ್ಐಸಿಸಿಡಿ), ರೇ ಝಡ್ಆರ್ ಸ್ಟ್ರೀಟ್ ರಾಲಿ 125 FI ಹೈಬ್ರಿಡ್ (125 ಸಿಸಿ) ಬೈಕ್‌ಗಳು ಪ್ರದರ್ಶನಕ್ಕಿಡಲಾಗಿತ್ತು. 
 

click me!