Asianet Suvarna News Asianet Suvarna News

ಸ್ಟ್ರೀಟ್ ಫೈಟರ್ R3, MT-03 ಬಿಡುಗಡೆ, ಅತ್ಯಾಕರ್ಷಕ ಯಮಹಾ ಬೈಕ್‌ಗೆ ಭಾರಿ ಬೇಡಿಕೆ!

ಯಮಹಾ ಭಾರತದಲ್ಲಿ ಹೊಸ ಎರಡು ಬೈಕ್ ಬಿಡುಗಡೆ ಮಾಡಿದೆ. ಟ್ರ್ಯಾಕ್-ಕೇಂದ್ರಿತ R3 ಮತ್ತು ಸ್ಟ್ರೀಟ್ ಫೈಟರ್ MT-03 ಬೈಕ್ ಬಿಡುಗಡೆಯಾಗಿದೆ. ಅತ್ಯಾಕರ್ಷಕ ವಿನ್ಯಾಸ, ಉತ್ತಮ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಶೇಷ ಫೀಚರ್ಸ್ ಈ ಬೈಕ್‌ನಲ್ಲಿದೆ.

Yamaha India launches Track based R3 and street Fighter MT03 bike with High performance ckm
Author
First Published Dec 16, 2023, 1:34 PM IST

ಬೆಂಗಳೂರು(ಡಿ.16) ಭಾರತದಲ್ಲಿ ಯಮಹಾ ಬೈಕ್‌ ಅಭಿಮಾನಿಗಳ ಸಂಖ್ಯೆ ಹೆಚ್ಚು, ಆರ್‌ಎಕ್ಸ್ 100‌ನಿಂದ ಹಿಡಿದು ಈಗಿನ ಹೊಚ್ಚ ಹೊಸ ಬೈಕ್ ವರೆಗೂ ಯಮಹಾ ಇಷ್ಟು ಪಡುವವರೇ ಹೆಚ್ಚು. ಭಾರತದಲ್ಲಿ ಯಮಹಾ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇದೀಗ ಯಮಹಾ ಟ್ರ್ಯಾಕ್-ಕೇಂದ್ರಿತ R3 ಮತ್ತು ಸ್ಟ್ರೀಟ್ ಫೈಟರ್ MT-03 ಗಳನ್ನು ಬಿಡುಗಡೆ ಮಾಡಿದೆ.  ಐತಿಹಾಸಿಕ ಮೋಟಾರುಸೈಕಲ್‌ಗಳು, ಯಮಾಹಾದ ರೇಸಿಂಗ್ ಡಿಎನ್ಎಗೆ ಹೊಂದಿಕೊಂಡಿದೆ.ಪ್ರಯಾಣ, ಅತ್ಯುತ್ತಮ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.

ಭಾರತದಲ್ಲಿ ಯುವ R15 ಮತ್ತು MT-15 ಗ್ರಾಹಕರ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳು ಪೂರೈಸುವ ಗುರಿ ಹೊಂದಿವೆ. ಹೊಚ್ಚ ಹೊಸ R3 ಮತ್ತು MT03 ಶಕ್ತಿಶಾಲಿಯಾದ  321cc ಲಿಕ್ವಿಡ್ ಕೂಲ್ಡ್, 4-ಸ್ಟ್ರೋಕ್, ಇನ್-ಲೈನ್ ಎರಡು ಸಿಲಿಂಡರ್ DOHC ಮತ್ತು 4-ವಾಲ್ವ್ ಪರ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಹೊಂದಿದೆ. ಈ ಇಂಜಿನ್, 10,750rpmನಲ್ಲಿ 30.9 kW (42 PS) ಗರಿಷ್ಟ ಶಕ್ತಿ ಮತ್ತು  9,000rpmನಲ್ಲಿ 29.5 Nm (3 kg-m) ಗರಿಷ್ಟ ಟಾರ್ಕ್‌ ಒದಗಿಸುತ್ತದೆ.ಹೆಚ್ಚುವರಿಯಾಗಿ, ಎರಡೂ ಬೈಕ್‌ಗಳು, ಹಗುರ ತೂಕದ ಡೈಮಂಡ್ ಫ್ರೇಮ್, ಅಪ್‌ಸೈಡ್ ಡೌನ್ ಫ್ರಂಟ್ ಫೋರ್ಕ್ಸ್, ಉದ್ದನೆಯ ಸ್ವಿಂಗ್‌ಆರ್ಮ್ ಮತ್ತು ಮಾನೋ-ಕ್ರಾಸ್ ರೇರ್ ಸಸ್ಪೆನ್ಶನ್, ಮಲ್ಟಿ-ಫಂಕ್ಷನ್ LCD ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು LED ಹೆಡ್‌ಲೈಟ್, ಟೇಲ್‌ಲೈಟ್ ಮತ್ತು ಟರ್ನ್ ಸಿಗ್ನಲ್ ಲೈಟ್‌ನಿಂದ ಸಜ್ಜುಗೊಂಡಿವೆ.  

ಹಳೇ ಯಮಹಾ RD350 ಬೈಕ್ ಖರೀದಿಸಿ ರಿಸ್ಟೋರ್ ಮಾಡಿದ ಧೋನಿ,ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ!

“Ride the R Anytime” ಎಂಬ ಉತ್ಪನ್ನ ಕಲ್ಪನೆಗೆ ಅನುಗುಣವಾಗಿ R3 ಬೈಕ್ ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ಯಮಾಹಾ  R3ದ ಟ್ರ್ಯಾಕ್-ಕೇಂದ್ರಿತ ಗುಣವಿಶೇಷತೆಗಳು, ಅತ್ಯುತ್ಕೃಷ್ಟವಾದ ರೈಡಿಂಗ್ ವಿಶ್ವಾಸ, ಕ್ಷಿಪ್ರ ಚಾಲನಾ ಕಾರ್ಯಕ್ಷಮತೆ ಮತ್ತು ಅಧಿಕ- rpm ಸಾಮರ್ಥ್ಯವನ್ನು ಒದಗಿಸುತ್ತದೆ. ಇತ್ತೀಚಿನ ಯಮಾಹಾ  R3ದಲ್ಲಿ ನಿಖರಗೊಳಿಸಲಾಗಿರುವ, ಸೂಪರ್‌ಸ್ಪೋರ್ಟ್ ಬೈಕ್‌ಗಳಿಗೆ ಸೂಕ್ತವಾದ ಸೆಟ್-ಅಪ್ ಆದ ಹೆಚ್ಚುಕಡಿಮೆ  50/50 ತೂಕ ವಿತರಣೆ, ಕಾರ್ಯಕ್ಷಮತೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಇದರ ಹ್ಯಾಂಡಲ್‌ಬಾರ್ ಕ್ರೌನ್‌ಅನ್ನು ಕ್ಯಾಸ್ಟ್ ಅಲ್ಯುಮಿನಿಯಮ್‌ನಿಂದ ತಯಾರಿಸಲಾಗಿದ್ದು, ಸಹಜವಾದ ಸ್ಟೀರಿಂಗ್ ಅನುಭವ ಒದಗಿಸಿದರೆ, ಫ್ಯುಯೆಲ್ ಟ್ಯಾಂಕ್ ಕವರ್, ಚಾಲಕ ಮತ್ತು ಯಂತ್ರದ ನಡುವೆ ಸಂಯೋಗವನ್ನು ಖಾತರಿಪಡಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಇದರ ವಿನ್ಯಾಸ, ಫೇರಿಂಗ್ಸ್(ಕೌಲಿಂಗ್ಸ್), ವಿಂಡ್‍‍ಸ್ಕ್ರೀನ್, ಅಡ್ಡಪದರಿನ ವಿಂಗ್ ಮತ್ತು ಗಾಳಿಯ ಹರಿವನ್ನು ರೇಡಿಯೇಟರ್‌ಗೇ ನೇರವಾಗಿ ಬಿಡುವ ಏರ್ ಡಕ್ಟ್‌ ಕಾರ್ಯಗಳ ಸಂಯೋಜನೆಯಿಂದಾಗಿ, ಉತ್ತಮ ಏರೋಡೈನಮಿಕ್ಸ್ ಸಾಮರ್ಥ್ಯ ಒದಗಿಸುತ್ತದೆ.

ಐತಿಹಾಸಿಕ ಹೈಪರ್-ನೇಕೆಡ್ ಕುಟುಂಬದಿಂದ ಬರುವ  MT-03, ನಿಜವಾಗಿಯೂ ಟಾರ್ಕ್‌ನ ಯಜಮಾನನಾಗಿದೆ.  “MTs that stimulate your Pride - The Evolution to a True MT Sibling” ಪರಿಕಲ್ಪನೆಯಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. MT-ಸೀರೀಸ್‌ನ ಈ ಆವೃತ್ತಿಯು, ಅವಳಿ-ಕಣ್ಣುಗಳಂತೆ ಸ್ಥಾಪಿಸಲಾಗಿರುವ ಲೈಟ್‌ಗಳಿದ್ದರೂ, ಮತ್ತೊಂದು ವಿಶಿಷ್ಟವಾದ MT ನೋಟ ಒದಗಿಸುವ ದಿಟ್ಟ ಮುಂಬದಿಯ ಭಾಗ ಹೊಂದಿದೆ. ಫ್ಯುಯೆಲ್ ಟ್ಯಾಂಕ್ ಪ್ರದೇಶದ ಬಾಡಿವರ್ಕ್‌ಅನ್ನು ಆಲೋಚನಾಪೂರ್ಣವಾಗಿ ವಿನ್ಯಾಸಗೊಳಿಸಲಾಗಿದ್ದು, ಬೈಕ್‌ನ ದೃಢತೆಯನ್ನು ವರ್ಧಿಸುವ ದೊಡ್ಡ-ಬೈಕ್ ನೋಟದ ಗಾತ್ರ ಮತ್ತು ಪ್ರಮಾಣದ ಭಾವ ಒದಗಿಸುತ್ತದೆ. ಹೆಚ್ಚುವರಿಯಾಗಿ, ಚಾಲಕನಿಗೆ ಇದು ಅಂಟಿಕೊಂಡಂತಹ ಮತ್ತು ಆರಾಮದಾಯಕವಾದ ಕುಳಿತಿರುವ ಭಂಗಿ ಒದಗಿಸುತ್ತದೆ. ಫ್ರಂಟ್ ಅಸೆಂಬ್ಲಿಗೆ ಮಾಡಲಾಗಿರುವ ದಟ್ಟವಾಗಿ ಪ್ಯಾಕ್ ಮಾಡಿದಂತಿರುವ ನೋಟವು, “mass-forward” ಬಾಡಿ ವಿನ್ಯಾಸ ಚಿತ್ರವನ್ನು ಒತ್ತಿಹೇಳುವಂತೆ MT ಕುಟುಂಬದ ಅತ್ಯುತ್ತಮ ಅಂಶ ಎತ್ತಿ ತೋರಿಸುತ್ತದೆ.

ಆಕರ್ಷಕ ಬೆಲೆಗೆ ಮಾನ್‌ಸ್ಟರ್ ಎನರ್ಜಿ ಬೈಕ್-ಸ್ಕೂಟರ್ ಪರಿಚಯಿಸಿದ ಯಮಹಾ ಇಂಡಿಯಾ!

ಯಮಾಹಾ ಗ್ರಾಹಕರ ಸೂಪರ್‌ಸ್ಪೋರ್ಟ್ಸ್ ಅನುಭವವನ್ನು ವರ್ಧಿಸಲಿರುವ ಎರಡೂ ಮೋಟಾರುಸೈಕಲ್‌ಗಳು, ಕಾಂಪಾಕ್ಟ್ ಮತ್ತು ಹಗುರತೂಕದ ಡೈಮಡ್ ಫ್ರೇಮ್ ಚಾಸಿಸ್ ಹೊಂದಿದೆ. ಬಲ ಮತ್ತು ಕಠಿಣತೆ, ನ್ಯೂಟ್ರಲ್ ಹ್ಯಾಂಡ್ಲಿಂಗ್ ಮತ್ತು ಸಂಚಾರದಲ್ಲಿ ಸುಲಭವಾದ ಚಾಲನೆಯ ಗರಿಷ್ಟ ಸಮತೋಲನ ಒದಗಿಸುತ್ತದೆ. ಆಫ್‌ಸೆಟ್ ವಿನ್ಯಾಸ ಹಾಗು ಅತ್ಯಂತ ಶಾಖನಿರೋಧಕ ಪಿಸ್ಟನ್, ಅಲ್ಯುಮಿನಿಯಮ್ DiASil ಸಿಲಿಂಡರ್ ಹೊಂದಿರುವ ಇವು, ಅತ್ಯುತ್ತಮವಾದ ಶಾಖ ವಿತರಣೆ ಮತ್ತು ಕಡಿಮೆ ಹಾರ್ಸ್‌ಪವರ್ ನಷ್ಟದೊಂದಿಗೆ ಸ್ಥಿರವಾದ ಇಂಜಿನ್ ಕಾರ್ಯಕ್ಷಮತೆ ಖಾತರಿಪಡಿಸುತ್ತವೆ. ಹೆಚ್ಚುವರಿಯಾಗಿ, ಮಾನೋ-ಕ್ರಾಸ್ ಸಸ್ಪೆನ್ಶನ್ ಮತ್ತು ತಲೆಕೆಳಗಾಗಿರುವ ಫ್ರಂಟ್ ಫೋರ್ಕ್ಸ್ ಜೊತೆಗೂಡಿದ 573mm ಉದ್ದದ ಸ್ವಿಂಗ್‌ಆರ್ಮ್ ಚಾಲನೆಯ ವಿಶ್ವಾಸ ಖಾತರಿಪಡಿಸುತ್ತದೆ. ಅಷ್ಟೇ ಅಲ್ಲ, ಡ್ಯುಯಲ್-ಚಾನಲ್ ABSಯಾವುದೇ ರೀತಿಯ ರಸ್ತೆಯ ಮೇಲೆ ನೀವು ವಿಶ್ವಾಸದಿಂದ ಬೈಕ್ ಓಡಿಸಲು ಅನುವು ಮಾಡಿಕೊಟ್ಟರೆ, ಶಕ್ತಿಶಾಲಿಯಾದ ಡಿಸ್ಕ್ ಬ್ರೇಕ್‌ಗಳು, ಅಂದರೆ, ಮುಂಬದಿಯಲ್ಲಿ 298mm ಡಸ್ಕ್‌ಬ್ರೇಕ್ ಮತ್ತು ಹಿಂಬದಿಯಲ್ಲಿ 220mm ಡಿಸ್ಕ್‌ಬ್ರೇಕ್, ಲಿವರ್‌ನ ಹೆಚ್ಚಿನ ಅನುಭವದೊಂದಿಗೆ ಅತ್ಯುತ್ತಮವಾದ ನಿಲುಗಡೆ ಶಕ್ತಿ ಒದಗಿಸುತ್ತದೆ. 

Follow Us:
Download App:
  • android
  • ios