
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (Electric vehicle)ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟಿ, ಬೈಕ್, ಕಾರನ್ನು ರಸ್ತೆಗೆ ಇಳಿಸಿವೆ. ಇದ್ರಲ್ಲಿ ಅಲ್ಟ್ರಾವೈಲೆಟ್ ಆಟೋಮೋಟಿವ್ ಕಂಪನಿ (Ultraviolet Automotive Company) ಹಿಂದೆ ಬಿದ್ದಿಲ್ಲ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅಲ್ಟ್ರಾವೈಲೆಟ್ ಆಟೋಮೋಟಿವ್ ಕಂಪನಿ ಸುನಾಮಿ ಎಬ್ಬಿಸಿದೆ. ಅದ್ರ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಸೆರಾಕ್ಟ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಶಾಕ್‌ವೇವ್ (Electric Motorcycle Shockwave) ಬೇಡಿಕೆ ಶರವೇಗದಲ್ಲಿ ಹೆಚ್ಚಾಗಿದೆ. ಈ ಎರಡೂ ವಾಹನವನ್ನು ಕಂಪನಿ ಕೈಗೆಟುಕುವ ಬೆಲೆಯಲ್ಲಿ ನೀಡ್ತಿರುವ ಕಾರಣ, ಬುಕ್ಕಿಂಗ್ ವೇಗ ಪಡೆದಿದೆ. ವಿಶೇಷ ಅಂದ್ರೆ ಕೇವಲ 24 ಗಂಟೆಯಲ್ಲಿ ಅಲ್ಟ್ರಾವೈಲೆಟ್ ಕಂಪನಿಯ 1000 ಅಲ್ಟ್ರಾವೈಲೆಟ್ ಶಾಕ್‌ವೇವ್ ಬೈಕ್ಗಳ ಮುಂಗಡ ಬುಕ್ಕಿಂಗ್ ನಡೆದಿದೆ.
ಅಲ್ಟ್ರಾವೈಲೆಟ್ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಶಾಕ್‌ವೇವ್ ಬೆಲೆಯನ್ನು 1.49 ಲಕ್ಷ ರೂಪಾಯಿಗೆ ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಆರಂಭದಲ್ಲಿ 1000 ಗ್ರಾಹಕರು ಇದ್ರ ಆರಂಭಿಕ ಬೆಲೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಕಂಪನಿ ಹೇಳಿತ್ತು. ಆದ್ರೆ 24 ಗಂಟೆಯಲ್ಲೇ 1000 ಯುನಿಟ್ ಬುಕ್ ಆಗಿರುವ ಕಾರಣ ಕಂಪನಿ, ಬೈಕ್ ಪ್ರೇಮಿಗಳಿಗೆ ಇನ್ನೊಂದು ಅವಕಾಶ ನೀಡಿದೆ. ಅಲ್ಟ್ರಾವೈಲೆಟ್ ಕಂಪನಿ ತನ್ನ ಆಫರನ್ನು ವಿಸ್ತರಿಸಿದೆ. ತನ್ನ ಮಿತಿಯನ್ನು 1000 ಯೂನಿಟ್ ಹೆಚ್ಚಿಸಿದೆ. ಇದ್ರಿಂದ ಅಲ್ಟ್ರಾವೈಲೆಟ್ ಶಾಕ್‌ವೇವ್ ಪ್ರೇಮಿಗಳಿಗೆ ಬೈಕ್ ಖರೀದಿ ಮಾಡಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ.
ಭಾರತದ ಟಾಪ್-5 ಶೇಖರಣಾ ಸಾಮರ್ಥ್ಯದ ಎಲೆಕ್ಟ್ರಿಕ್ ಸ್ಕೂಟರ್‌ಗಳು! ಎಷ್ಟು ಲಗೇಜ್ ಬೇಕಾದ್ರೂ ಸಾಗಿಸಬಹುದು!
ಅಲ್ಟ್ರಾವೈಲೆಟ್ ಶಾಕ್‌ವೇವ್ ಮೋಟರ್ ಬೈಕ್ ವಿಶೇಷತೆ ಏನು? : ಕೆಲವೇ ಗಂಟೆಯಲ್ಲಿ 1000 ಯುನಿಟ್ ಬುಕ್ ಆಗಿರುವಂತಹ ಅಲ್ಟ್ರಾವೈಲೆಟ್ ಶಾಕ್‌ವೇವ್ ಮೋಟರ್ಬೈಕ್ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಇದು 1.49 ಲಕ್ಷ ರೂಪಾಯಿ ಆರಂಭಿಕ ಬೆಲೆಗೆ ಈ ಬೈಕ್ ಮಾರಾಟ ಮಾಡ್ತಿದೆ. ವಿಶಿಷ್ಠ ವಿನ್ಯಾಸ ಹಾಗೂ ತಂತ್ರಜ್ಞಾನವನ್ನು ಇದ್ರಲ್ಲಿ ನೋಡ್ಬಹುದು. ಈ ದ್ವಿಚಕ್ರ ವಾಹನ ಸಾಕಷ್ಟು ಸ್ಲಿಮ್ ಆಗಿದ್ದು, ಯುವಕರನ್ನು ಸೆಳೆಯುತ್ತದೆ. ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 3.5 kWh ಬ್ಯಾಟರಿ ಹೊಂದಿದೆ. ಇದು 14.5 bhp ಶಕ್ತಿ ಉತ್ಪಾದಿಸುತ್ತದೆ. ನೀವು ಈ ಬೈಕನ್ನು ಒಂದು ಬಾರಿ ಚಾರ್ಜ್ ಮಾಡಿದ್ರೆ ಅದನ್ನು 165 ಕಿಲೋಮೀಟರ್ ಆರಾಮವಾಗಿ ಓಡಿಸಬಹುದು. ಬೈಕ್ 120 ಕೆಜಿ ತೂಕವನ್ನು ಹೊಂದಿದೆ. ಅಲ್ಟ್ರಾವೈಲೆಟ್ ಶಾಕ್‌ವೇವ್, ಗಂಟೆಗೆ 120 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸುತ್ತದೆ.
ಡ್ಯುಯಲ್ ಪ್ರೊಜೆಕ್ಟರ್ ಎಲ್ಇಡಿ ಬಲ್ಬ್, ಹೈಟ್ ಇರುವ ಹ್ಯಾಂಡಲ್‌ಬಾರ್, ಸ್ಲಿಮ್ ಟೈಲ್ ಸೆಕ್ಷನ್ ಮತ್ತು ಎಲ್ಇಡಿ ಟೈಲ್‌ಲೈಟ್‌ಗಳನ್ನು ಇದು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಹಳದಿ, ಕಪ್ಪು ಹಾಗೂ ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿದೆ. ಅಲ್ಟ್ರಾವೈಲೆಟ್ ಶಾಕ್‌ವೇವ್ ಬೈಕ್, ಹಳೆ ಕಾಲದ 2 ಸ್ಟ್ರೋಕ್ ಮೋಟಾರ್‌ಸೈಕಲ್‌ನಂತೆ ಕಾಣುತ್ತೆ. ಎಲೆಕ್ಟ್ರಿಕ್ ಬೈಕ್ ಹಗುರವಾಗಿದ್ದು, ಅದನ್ನು ಓಡಿಸೋದು ಬಹಳ ಸುಲಭ. ಶಾಕ್ ವೇವ್ ಮುಂಗಡ ಬುಕ್ಕಿಂಗ್ ಸದ್ಯ ನಡೆಯುತ್ತಿದೆ. ಅದು 2026ರಲ್ಲಿ ರಸ್ತೆಗೆ ಇಳಿಯಲಿದೆ. ಕಂಪನಿ ಮುಂದಿನ ವರ್ಷ ಅದ್ರ ಮಾರಾಟ ಶುರು ಮಾಡಲಿದೆ. ಭಾರತದಾದ್ಯಂತ 13 ಕ್ಕೂ ಹೆಚ್ಚು ನಗರಗಳಲ್ಲಿ ಕಂಪನಿ ತನ್ನ ಶಾಖೆ ಸ್ಥಾಪಿಸಿದೆ.
ಮಹಿಳಾ ದಿನಾಚರಣೆ ಆಫರ್, ಕೊಮಾಕಿ ಇವಿ ಸ್ಕೂಟರ್ ಒಂದು ಕೊಂಡರೆ ಮತ್ತೊಂದು ಉಚಿತ
2026 ರ ಆರ್ಥಿಕ ವರ್ಷದ ವೇಳೆ ಭಾರತದ 50 ನಗರಗಳನ್ನು ತಲುಪುವ ಗುರಿಯನ್ನು ಅಲ್ಟ್ರಾ ವೈಲೆಟ್ ಹೊಂದಿದೆ. ಇದಲ್ಲದೆ, ಕಂಪನಿಯು ಯುಕೆ, ಜರ್ಮನಿ, ಸ್ಪೇನ್, ಪೋರ್ಚುಗಲ್ ಮತ್ತು ಫ್ರಾನ್ಸ್ ದೇಶದ ಮೇಲೂ ಗಮನ ಹರಿಸಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಕಡಿಮೆ ಬೆಲೆಗೆ ಸಾಮಾನ್ಯರಿಗೆ ತಲುಪಿಸುವುದು ಕಂಪನಿ ಗುರಿಯಾಗಿದೆ.