ಭಾರತದಲ್ಲಿ ಜನವರಿ 2025 ರಲ್ಲಿ ಯಾವ ಅತಿಹೆಚ್ಚು ಮಾರಾಟವಾದ ಟಾಪ್-10 ಬೈಕ್ ಕಂಪನಿಗಳು ಯಾವುವು ಗೊತ್ತಾ?. ಹೀರೋ ಸ್ಪ್ಲೆಂಡರ್ ಮೋಟಾರ್‌ಸೈಕಲ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಉಳಿದ ಸ್ಥಾನ ಪಡೆದ ಕಂಪನಿಗಳ ಪಟ್ಟಿ ಇಲ್ಲಿದೆ ನೋಡಿ..
ಹೀರೋ ಮೋಟೋಕಾರ್ಪ್ ಮೋಟಾರ್‌ಸೈಕಲ್‌ಗಳು ಭಾರತೀಯ ಗ್ರಾಹಕರಲ್ಲಿ ಬಹಳ ಜನಪ್ರಿಯವಾಗಿವೆ. ಇದೀಗ ಈ ವಿಷಯ ಮತ್ತೊಮ್ಮೆ ಸಾಬೀತಾಗಿದೆ. ಕಳೆದ ತಿಂಗಳು, ಅಂದರೆ 2025ರ ಜನವರಿಯಲ್ಲಿ, ಮೋಟಾರ್‌ಸೈಕಲ್ ಮಾರಾಟದಲ್ಲಿ ಹೀರೋ ಸ್ಪ್ಲೆಂಡರ್ ಅಗ್ರಸ್ಥಾನ ಪಡೆದುಕೊಂಡಿದೆ.
ಕಳೆದ ತಿಂಗಳು, ಅಂದರೆ 2025ರ ಜನವರಿಯಲ್ಲಿ, ಮೋಟಾರ್‌ಸೈಕಲ್ ಮಾರಾಟದಲ್ಲಿ ಹೀರೋ ಸ್ಪ್ಲೆಂಡರ್ ಅಗ್ರಸ್ಥಾನ ಪಡೆದುಕೊಂಡಿದೆ. ಈ ಅವಧಿಯಲ್ಲಿ ಒಟ್ಟು 2,59,431 ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್‌ಗಳು ಮಾರಾಟವಾಗಿವೆ. ವಾರ್ಷಿಕ ಬೆಳವಣಿಗೆ ಶೇ.1.69 ಆಗಿದೆ. ಅದೇ ಸಮಯದಲ್ಲಿ, ಒಂದು ವರ್ಷದ ಹಿಂದೆ, ಅಂದರೆ 2024ರ ಜನವರಿಯಲ್ಲಿ, ಈ ಅಂಕಿ ಅಂಶ 2,55,122 ಯುನಿಟ್‌ಗಳಷ್ಟಿತ್ತು. ಕಳೆದ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ 10 ಮೋಟಾರ್ ಸೈಕಲ್‌ಗಳ ಮಾರಾಟದ ಅಂಕಿಅಂಶಗಳನ್ನು ನೋಡೋಣ.
ಈ ಮಾರಾಟ ಪಟ್ಟಿಯಲ್ಲಿ ಹೋಂಡಾ ಶೈನ್ 2ನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಹೋಂಡಾ ಶೈನ್ ಒಟ್ಟು 1,68,290 ಯುನಿಟ್ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡಿದೆ. ಈ ಮಾರಾಟ ಪಟ್ಟಿಯಲ್ಲಿ ಬಜಾಜ್ ಪಲ್ಸರ್ ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಬಜಾಜ್ ಪಲ್ಸರ್ ಒಟ್ಟು 1,04,081 ಯುನಿಟ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಈ ಮಾರಾಟ ಪಟ್ಟಿಯಲ್ಲಿ ಹೀರೋ HF ಡಿಲಕ್ಸ್ 4ನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಒಟ್ಟು 62,223 HF ಡಿಲಕ್ಸ್ ಮೋಟಾರ್‌ಸೈಕಲ್‌ಗಳು ಮಾರಾಟವಾಗಿವೆ.
ಇದನ್ನೂ ಓದಿ: ಬಡವರ ಕೈಗೆ ಸಿಗದ ಬಸ್, ಮೆಟ್ರೋ: ಕಡಿಮೆ ಪೆಟ್ರೋಲ್‌ನಲ್ಲಿ ಭರ್ಜರಿ ಮೈಲೇಜ್ ನೀಡೋ ಬೈಕ್‌ಗಳಿವು!
ಈ ಮಾರಾಟ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಟಿವಿಎಸ್ ಅಪಾಚೆ ಇದೆ. ಈ ಅವಧಿಯಲ್ಲಿ ಟಿವಿಎಸ್ ಅಪಾಚೆ ಒಟ್ಟು 34,511 ಯುನಿಟ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಆರನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಇದೆ. ಈ ಅವಧಿಯಲ್ಲಿ ಕ್ಲಾಸಿಕ್ 350 ಬೈಕ್‌ಗಳು 30,582 ಯುನಿಟ್ ಮಾರಾಟವಾಗಿವೆ. ಟಿವಿಎಸ್ ರೈಡರ್ 7ನೇ ಸ್ಥಾನದಲ್ಲಿದೆ. ಟಿವಿಎಸ್ ರೈಡರ್‌ಗೆ ಈ ಅವಧಿಯಲ್ಲಿ ಒಟ್ಟು 27,382 ಹೊಸ ಗ್ರಾಹಕರು ಸಿಕ್ಕಿದ್ದಾರೆ.
ಈ ಮಾರಾಟ ಪಟ್ಟಿಯಲ್ಲಿ ಬಜಾಜ್ ಪ್ಲಾಟಿನಾ ಎಂಟನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಬಜಾಜ್ ಪ್ಲಾಟಿನಾಗೆ ಒಟ್ಟು 27,382 ಹೊಸ ಗ್ರಾಹಕರು ಸಿಕ್ಕಿದ್ದಾರೆ. ಒಂಬತ್ತನೇ ಸ್ಥಾನದಲ್ಲಿ ಹೋಂಡಾ CB ಯುನಿಕಾರ್ನ್ 150 ಇದೆ. ಯುನಿಕಾರ್ನ್ 150ಗೆ ಒಟ್ಟು 26,509 ಗ್ರಾಹಕರು ಸಿಕ್ಕಿದ್ದಾರೆ. ಹೀರೋ ಎಕ್ಸ್‌ಟ್ರೀಮ್ 125R ಈ ಮಾರಾಟ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಎಕ್ಸ್‌ಟ್ರೀಮ್ 125Rಗೆ ಒಟ್ಟು 21,870 ಹೊಸ ಗ್ರಾಹಕರು ಸಿಕ್ಕಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ.
ಇದನ್ನೂ ಓದಿ: ಅತಿಯಾದ ಜಾಹೀರಾತು, ಸಮಯ ವ್ಯರ್ಥಗೊಳಿಸಿದ PVR-INOX ವಿರುದ್ಧ ಕೇಸ್ ಹಾಕಿ ಗೆದ್ದ ಬೆಂಗಳೂರಿನ ವ್ಯಕ್ತಿಗೆ ಸಿಕ್ಕ ಹಣವೆಷ್ಟು?