ಸೇರೆಯುಟ್ಟು ಸ್ಯಾಂಡಲ್ಸ್ ಧರಿಸಿ ಡರ್ಟ್ ಬೈಕ್‌ನಲ್ಲಿ ಸಾಹಸ, ಮಹಿಳೆಯರ ವಿಡಿಯೋ ವೈರಲ್!

By Suvarna NewsFirst Published Mar 23, 2024, 4:58 PM IST
Highlights

ಮಹಿಳೆಯರು ಬುಲೆಟ್ ಸೇರಿದಂತೆ ಹೆಚ್ಚಿನ ಸಿಸಿ ಬೈಕ್ ರೈಡ್ ಮಾಡುವುದು, ಸಾಹಸ ಮಾಡುವುದು ಅಚ್ಚರಿಯ ವಿಚಾರವಲ್ಲ. ಇದೀಗ ಮಹಿಳೆಯರು ಸೀರೆಯಲ್ಲಿ, ಸ್ಯಾಂಡಲ್ಸ್ ಧರಿಸಿ ಡರ್ಟ್ ಬೈಕ್‌ನಲ್ಲಿ ಸಾಹಸ ಮಾಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಮಹಿಳೆಯರು ಡರ್ಟ್ ಬೈಕ್ ಮೂಲಕ ಸಾಗಿದ ವಿಡಿಯೋ ವೈರಲ್ ಆಗಿದೆ.
 

ಮಹಿಳೆಯರು ಬೈಕ್, ಕಾರು, ಲಾರಿ, ಬಸ್ ಸೇರಿದಂತೆ ಘನ ವಾಹನಗಳ ಡ್ರೈವ್ ಮಾಡುವುದು, ಸಾಹಸ ಮಾಡುವುದು ಹೊಸದೇನಲ್ಲ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಇದೀಗ ಸಾರ್ವಜನಿಕ ರಸ್ತೆಯಲ್ಲಿ ಸೀರೆಯುಟ್ಟ ಮಹಿಳೆಯರು ಡರ್ಟ್ ಬೈಕ್ ಉಪಯೋಗಿಸಿ ಸ್ಟಂಟ್ ಮಾಡಿದ್ದಾರೆ. ಸ್ಯಾಂಡಲ್ಸ್ ಧರಿಸಿ ಡರ್ಟ್ ಬೈಕ್ ಚಲಾಯಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಡರ್ಟ್ ಬೈಕ್ ಆಪ್ ರೋಡ್ ರಸ್ತೆಗಳಲ್ಲಿ ಬಳಸುವ ಬೈಕ್. ಅತ್ಯಂತ ಜನಪ್ರಿಯ ಡರ್ಟ್ ರೇಸ್‌ನಲ್ಲೂ ಇದೇ ಬೈಕ್ ಬಳಸುತ್ತಾರೆ. ಇದು ರೇಸ್ ಬೈಕ್, ಹೆಚ್ಚು ಪವರ್, ಹೆಚ್ಚಿನ ವೇಗ, ಗಾತ್ರದಲ್ಲೂ ಸಾಮಾನ್ಯ ಬೈಕ್‌ಗಿಂತ ಎತ್ತರವಾಗಿದೆ. ಈ ಬೈಕ್ ಸಾರ್ವಜನಿಕ ರಸ್ತೆಗಳಲ್ಲಿ ಬಳಸುವಂತಿಲ್ಲ. ಇದು ಕಾನೂನು ಬಾಹಿರವಾಗಿದೆ. ಈ ಬೈಕ್ ನಿಯಂತ್ರಣ, ರೈಡಿಂಗ್ ಸುಲಭದ ಮಾತಲ್ಲ. ಆದರೆ ಇದೇ ಬೈಕ್ ಮೂಲಕ ಸೀರೆ ಧರಿಸಿದ ಮಹಿಳೆಯರು ಸ್ಟಂಟ್ ಮಾಡಿದ್ದಾರೆ.

18 ವಿಶ್ವಪಾರಂಪರಿಕ ತಾಣಕ್ಕೆ ಭೇಟಿ, ಏಕಾಂಗಿಯಾಗಿ 33 ಸಾವಿರ ಕಿ.ಮೀ ಬೈಕ್ ಪ್ರಯಾಣ ಮಾಡಿದ ಗಾಯತ್ರಿ!

ಡರ್ಟ್ ಬೈಕ್ ಬಳಸುವ ಪ್ರತಿಯೊಬ್ಬರು ಲೈಫ್ ಜಾಕೆಟ್ ಬಳಸುತ್ತಾರೆ. ಕಾರಣ ಈ ಬೈಕ್ ರೈಡ್ ಅಪಾಯಕಾರಿಯೂ ಹೌದು, ಜೊತೆಗೆ ರೇಸ್‌ಗಳಲ್ಲಿ ಜಾಕೆಟ್ ಕಡ್ಡಾಯವಾಗಿದೆ. ಆದರೆ ಇಲ್ಲಿ ಮಹಿಳೆಯರು ಎಂದಿನಂತೆ ಸೀರೆ ಧರಿಸಿ, ಸ್ಯಾಂಡಲ್ಸ್ ಮೂಲಕ ಈ ಬೈಕ್ ರೈಡ್ ಮಾಡಿದ್ದಾರೆ. ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ನೇಪಾಳದ ಈ ವಿಡಿಯೋ ಭಾರತದಲ್ಲೂ ವೈರಲ್ ಆಗಿದೆ. ಕಾರಣ ಸೀರೆ ಧರಿಸಿದ ಮಹಿಳಾ ಮಣಿಗಳ ಕಾರಣ ಈ ವಿಡಿಯೋ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ನೇಪಾಳದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಬೈಕ್ ರೈಡ್ ವೇಳೆ ಸೂಕ್ತ ಜಾಕೆಟ್ ಧರಿಸುವುದು ಅತ್ಯವಶ್ಯಕ. ಅದರಲ್ಲೂ ರೇಸ್ ಬೈಕ್ ರೈಡಿಂಗ್ ವೇಳೆ ಕಡ್ಡಾಯವಾಗಿದೆ. ಆದರೆ ಇಲ್ಲ ಮಹಿಳೆಯರು  ಸೀರೆ ಧರಿಸಿದ್ದಾರೆ. ಮುಖ್ಯವಾಗಿ ಹೆಲ್ಮೆಟ್ ಧರಿಸಿರುವುದು ಸಮಾಧಾನಕರ.

 

 

ಈ ವಿಡಿಯೋವನ್ನು ಪ್ರಚಾರಕ್ಕಾಗಿ ಚಿತ್ರಿಸಲಾಗಿದೆ ಎಂದು ಹೇಳಲಾಗಿದೆ. ಸೀರೆಯಲ್ಲಿ ಬೈಕ್ ರೈಡಿಂಗ್ ಅಪಾಯಕಾರಿಯಾಗಿದೆ. ಅದರಲ್ಲೂ ಡರ್ಟ್ ಬೈಕ್ ರೈಡ್ ಮತ್ತಷ್ಟು ಅಪಾಯ ತಂದೊಡ್ಡಲಿದೆ. ಸೀರೆ ಚಕ್ರಕ್ಕೆ ಸಿಲುಕಿಕೊಳ್ಳುವ ಹಾಗೂ ಇತರ ಸಮಸ್ಯೆಗಳಿಗೂ ಕಾರಣವಾಗಲಿದೆ. 

 

Maral Yazarloo: ಬೈಕ್‌ನಲ್ಲಿ ವಿಶ್ವ ಸುತ್ತಿದ ಗರ್ಭಿಣಿ ತನ್ನ ಕಥೆ ಹೇಳಿದ್ದಾಳೆ, ಕೇಳಿ..
 

click me!