ಭಾರತವನ್ನು ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದನೆಯ ಕೇಂದ್ರ ಸ್ಥಾನವನ್ನಾಗಿ ಮಾಡುವ ಉದ್ದೇಶ ಹೊಂದಿರುವ ಹೊಸ ಇ-ವೆಹಿಕಲ್ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ನವದೆಹಲಿ (ಮಾ.16): ಭಾರತವನ್ನು ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದನೆಯ ಕೇಂದ್ರ ಸ್ಥಾನವನ್ನಾಗಿ ಮಾಡುವ ಉದ್ದೇಶ ಹೊಂದಿರುವ ಹೊಸ ಇ-ವೆಹಿಕಲ್ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೊಸ ನೀತಿ ಅನ್ವಯ ಈ ವಲಯದಲ್ಲಲಿ ಕನಿಷ್ಠ 4150 ಕೋಟಿ ರು. (500 ಮಿಲಿಯನ್ ಡಾಲರ್) ಹೂಡಿಕೆ ಮಾಡುವ ಕಂಪನಿಗಳಿಗೆ ಸೀಮಾ ಸುಂಕದಲ್ಲಿ ವಿನಾಯ್ತಿ ನೀಡಲಾಗುವುದು. ಅಲ್ಲದೆ ವಿದೇಶಗಳಿಂದ ಕಡಿತ ಮಾಡಿದ ಸೀಮಾ ಸುಂಕ ದರದಲ್ಲಿ ಸೀಮಿತ ಪ್ರಮಾಣದಲ್ಲಿ ವಾಹನಗಳ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
ದೆಹಲಿ ಲಿಕ್ಕರ್ ಹಗರಣ: ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಅರೆಸ್ಟ್! ಮುಂದೇನು?
undefined
ಉತ್ಪಾದನಾ ಘಟಕ ನಿರ್ಮಾಣ ಆರಂಭದ ಮೂರು ವರ್ಷದೊಳಗೆ ವಾಹನಗಳನ್ನು ಮಾರುಕಟ್ಟೆಗೆ ಬಿಡಬೇಕಿದ್ದು, 5 ವರ್ಷಗಳವರೆಗೆ ಶೇ.50ರಷ್ಟು ವಾಹನಗಳನ್ನು ಸ್ಥಳೀಯವಾಗಿಯೇ ಮಾರಾಟ ಮಾಡಬೇಕಿರುತ್ತದೆ. ಜೊತೆಗೆ 30 ಲಕ್ಷ ರು.ಗಿಂತ ಅಧಿಕ ಬೆಲೆ ಇ- ವಾಹನಗಳನ್ನು ಶೇ.15ರಷ್ಟು ಸೀಮಾ ಸುಂಕದಡಿ ಆಮದು ಮಾಡಿಕೊಳ್ಳಬಹುದಾಗಿರುತ್ತದೆ. ಹಾಲಿ ಇಂಥ ಸುಂಕ ಶೇ.70-ಶೇ.100ರವರೆಗೂ ಇದೆ. 5 ವರ್ಷಗಳವರೆಗೆ ಈ ವಿನಾಯ್ತಿ ಸಿಗಲಿದೆ. ವಾರ್ಷಿಕ ಗರಿಷ್ಠ 8000 ವಾಹನ ಮಾತ್ರ ಹೀಗೆ ವಿದೇಶಗಳಿಂದ ಆಮದು ಮಾಡಿಕೊಳ್ಳಬಹುದು.
ಪೀಠಾಪುರಂನಿಂದ ಪವನ್ ಕಲ್ಯಾಣ್ ವಿರುದ್ಧ ಸ್ಪರ್ಧಿಸುವುದಾಗಿ ಉಲ್ಟಾ ಹೊಡೆದ ರಾಮಗೋಪಾಲ್ ವರ್ಮಾ!
ಈ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಉತ್ತೇಜಿಸಲು ಅವಕಾಶ ಕಲ್ಪಿಸಲಾಗುವುದು. ಇದರೊಂದಿಗೆ ಭಾರತದಲ್ಲಿ 2030ರ ವೇಳೆಗೆ ವಾರ್ಷಿಕವಾಗಿ ಒಂದು ಕೋಟಿ ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು, ಉದ್ಯಮದಲ್ಲಿ 5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂಬುದಾಗಿ ನೀತಿ ತಿಳಿಸಿದೆ.