ಟಿವಿಎಸ್ ಎಕ್ಸ್ಎಲ್ 100 ದ್ವಿಚಕ್ರ ವಾಹನ ಖರೀದಿಗೆ ಕಂಪನಿ ಹೊಸ ಸ್ಕೀಮ್ ತಂದಿದ್ದು, ಅದರನ್ವಯ ಗ್ರಾಹಕರಿಗೆ ನಿತ್ಯ 49 ರೂ. ವೆಚ್ಚವಾಗಲಿದೆ. ಅಂದರೆ, ತಿಂಗಳಿಗೆ ಇಎಂಐ 1470 ರೂ. ಆಗಲಿದೆ. ಇಷ್ಟು ಕಡಿಮೆ ಇಎಂಐನಲ್ಲಿ ಗ್ರಾಹಕರು ಈ ದ್ವಿಚಕ್ರವಾಹವನ್ನು ಖರೀದಿಸಬಹುದು.
ಭಾರತದ ಪ್ರಮುಖ ದ್ವಿಚಕ್ರವಾಹನಗಳ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಗ್ರಾಹಕರಿಗೆ ಅನುಕೂಲವಾಗುವ ಹೊಸ ಸ್ಕೀಮ್ ಜಾರಿಗೊಳಿಸುತ್ತಿದೆ. ಸ್ಕೀಮ್‌ನಡಿ ಕಂಪನಿಯ ಮಲ್ಟಿ ಯುಟಿಲಿಟಿ ವೆಹಿಕಲ್ ಎನಿಸಿಕೊಂಡಿರುವ ಟಿವಿಎಸ್ ಎಕ್ಸ್ಎಲ್ 100 ದ್ವಿಚಕ್ರವಾಹನ ಖರೀದಿಗೆ ವಿಶೇಷ ಆಫರ್ ನೀಡುತ್ತದೆ.
ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲೂ 17,800 ರೂ.ವರೆಗೆ ಕಡಿತ!
undefined
ಗ್ರಾಹಕರು ಈಗ ಈ ಟಿವಿಎಸ್ ಎಕ್ಸ್ಎಲ್ 100ಐ ಟಟ್ ಸ್ಟಾರ್ಟ್ ವೆರಿಯೆಂಟ್ ದ್ವಿಚಕ್ರವಾಹನವನ್ನು ದಿನಕ್ಕೆ 49 ರೂ. ತೆತ್ತು ಖರೀದಿಸಬಹುದು. ದಿನಕ್ಕೆ 49 ರೂ. ಅಂತಾದರೆ 30 ದಿನಕ್ಕೆ 1470 ರೂ. ಆಗುತ್ತದೆ. ಇದರ್ಥ ಗ್ರಾಹಕರು ಈ ದ್ವಿಚಕ್ರವಾಹನಕ್ಕೆ ತಿಂಗಳಲ್ಲಿ 1470 ರೂ. ಇಎಂಐ ಕಟ್ಟಿ ದ್ವಿಚಕ್ರವಾಹನವನ್ನು ಖರೀದಿಸಬಹುದು. ಹಾಗಂತ, ಗ್ರಾಹಕರು ದಿನದಲ್ಲಿ ಲೆಕ್ಕದಲ್ಲಿ ಹಣವನ್ನು ಕಟ್ಟುವಂತಿಲ್ಲ ಅಥವಾ ಮರುಪಾವತಿಸುವಂತಿಲ್ಲ. ಕೇವಲ ತಿಂಗಳ ಇಎಂಐನಲ್ಲಿ ಮಾತ್ರವೇ ಹಣ ಕಟ್ಟಬೇಕಾಗುತ್ತದೆ.
ಎಲ್ಲರಿಗೂ ವೈಯಕ್ತಿಕ ಸಾರಿಗೆಯ ಲಾಭ ದೊರೆಯಬೇಕು ಎಂಬುದು ಈ ಸ್ಕೀಮ್ ಹಿಂದಿರುವ ಉದ್ದೇಶವಾಗಿದೆ. ಗ್ರಾಹಕರಿಗೆ ತಮ್ಮ ನಿತ್ಯದ ಸಂಚಾರಕ್ಕೆ ಇದರಿಂದ ನೆರವು ದೊರೆಯಲಿದೆ. ಗ್ರಾಹಕರಿಗೆ ಈ ಲಾಭ ದೊರಕಿಸಿ ಕೊಡಲು ಕಂಪನಿಯು ಟಿವಿಎಸ್ ಕ್ರೆಡಿಟ್ ಸರ್ವೀಸಸ್, ಶ್ರೀರಾಮ್ ಫೈನಾನ್ಸ್, ಎಲ್ ಆಂಡ್ ಟಿ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗಳಂಥ ಹಣಕಾಸು ಸಂಸ್ಥೆಗಳ ಜತೆ ಒಂದುಗೂಡಿದೆ.
ಗ್ರಾಹಕರು ನಾಲ್ಕು ಬೇರೆ ಬೇರೆ ರೀತಿಯ ಅವಧಿಯ ಇಎಂಐ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲು ಮತ್ತು ಅವರಿಗೆ ನೆರವು ನೀಡುವುದಕ್ಕಾಗಿ ಕಂಪನಿಯ, ಟಿವಿಎಸ್ ಎಕ್ಸ್ಎಲ್ 100 ದ್ವಿಚಕ್ರವಾಹನಕ್ಕೆ ಸಂಬಂಧಿಸಿದಂತೆ ಬೈ ನೌ ಪೇ ಲೇಟರ್(ಈಗ ಖರೀದಿಸಿ ನಂತರ ಪಾವತಿಸಿ), ಕನಿಷ್ಠ ಡೌನ್ ಪೇಮೆಂಟ್ 7,999 ರೂ. ಮತ್ತು 7.99 ರೂ.ನಿಂದ ಆರಂಭವಾಗುವ ಕನಿಷ್ಠ ಬಡ್ಡಿದರದಂಥ ಆಫರ್‌ಗಳನ್ನು ಕಂಪನಿ ಒದಗಿಸುತ್ತಿದೆ.
ಗರಿಷ್ಠ 70 ಕಿ.ಮೀ. ವೇಗದ ಮಿತಿ ಮೀರಿದ್ರೆ ಬೀಳುತ್ತೆ ಫೈನ್!
ಕಾಸಿಗೆ ಮೋಸ ಹೋಗದಂಥ ದ್ವಿಚಕ್ರವಾಹನವಾಗಿರುವ ಟಿವಿಎಸ್ ಎಕ್ಸ್ಎಲ್ 100 ಶಕ್ತಿಯು ಬಿಲ್ಟ್ ಕ್ವಾಲಿಟಿ, ಬಹು ಉದ್ದೇಶ ಬಳಕೆಯ ಸಾಮರ್ಥ್ಯವನ್ನು ಹೊಂದಿದೆ. ಬಿಸಿನೆಸ್‌ದಾರರು, ವ್ಯಾಪಾರಿಗಳು, ರೈತರು ಹೆಚ್ಚು ಸೂಕ್ತವಾದ ದ್ವಿಚಕ್ರವಾಹನ ಇದಾಗಿದೆ. ಕಚೇರಿಗೆ ಹೋಗುವವರು, ಮಹಿಳೆಯರು, ಹಿರಿಯ ನಾಗರಿಕರಿಗೂ ಈ ಟಿವಿಎಸ್ ಎಕ್ಸ್ಎಲ್ 100 ಹೆಚ್ಚು ಆಪ್ತವಾಗಿದೆ. ಈ ದ್ವಿಕ್ರವಾಹನವು ಬಳಕೆದಾರರ ಸ್ನೇಹಿಯಾಗಿದ್ದು, ವಿಶೇಷ ಫೀಚರ್‌ಗಳನ್ನು ಹೊಂದಿದೆ. ಸುಲಭ ಆನ್ ಮತ್ತು ಆಫ್ ಸ್ವಿಚ್, ಆಪ್ಷನಲ್ ಯುಎಸ್‌ಬಿ ಚಾರ್ಜರ್ ಸೇರಿದಂತೆ ಅನೇಕ ಫೀಚರ್‌ಗಳಿವೆ.
ಟಿವಿಎಸ್ ಎಕ್ಸ್ಎಲ್ 100 ಇಕೋ ಥ್ರಸ್ಟ್ ಫ್ಯುಯೆಲ್ ಇಂಚೆಕ್ಷನ್(ಇಟಿ-ಎಫ್ಐ) ತಂತ್ರಜ್ಞಾನದೊಂದಿಗೆ ಬರುತ್ತದೆ. ಇದರಿಂದಾಗಿ ಶೇ.15ರಷ್ಟು ಮೈಲೇಜ್ ಹೆಚ್ಚು ದೊರೆಯುತ್ತದೆ. ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್(ಐಎಸ್‌ಜಿ) ಸಿಸ್ಟಮ್ ಸ್ಮೂತ್ ಮತ್ತು ಸೈಲೆಂಟ್ ಸ್ಟಾರ್ಟ್ ಒದಗಿಸುತ್ತದೆ. 99.7 ಸಿಸಿ ಫೋರ್ ಸ್ಟ್ರೋಕ್ ಎಂಜಿನ್ ಇದ್ದು ಗರಿಷ್ಠ 3.20 ಕೆಡಬ್ಲೂ ಮತ್ತು ಗರಿಷ್ಠ 6.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಟಿವಿಎಸ್ ಎಕ್ಸ್ಎಲ್ 100 ಐದು ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಟಿವಿಎಸ್ ಎಕ್ಸ್ಎಲ್ 100 ಹೆವಿಡ್ಯೂಟಿ ಕಿಕ್ ಸ್ಟಾರ್ಟ್, ಟಿವಿಎಸ್ 100 ಹೆವಿ ಡ್ಯೂಟಿ ಐ ಟಚ್‌ಸ್ಟಾರ್ಟ್, ಟಿವಿಎಸ್ ಎಕ್ಸ್ ಎಲ್ 100 ಹೆವಿಡ್ಯೂಟಿ ಐ-ಟಚ್ ಸ್ಟಾರ್ಟ್ ವಿನ್ ಎಡಿಷನ್, ಟಿವಿಎಸ್ ಎಕ್ಸ್ಎಲ್ 100 ಕಂಪರ್ಟ್ ಕಿಕ್ ಸ್ಟಾರ್ಟ್, ಟಿವಿಎಸ್ ಎಕ್ಸ್ ಎಲ್ 100 ಕಂಪರ್ಟ್ ಐ-ಟಚ್ ಸ್ಟಾರ್ಟ್ ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಕೇಂದ್ರ ನಿರ್ಧಾರದ ಎಫೆಕ್ಟ್: ಅಗ್ಗವಾಗಲಿವೆ ಇ-ಸ್ಕೂಟರ್, ಅಥರ್ ಎನರ್ಜಿ ಇಳಿಸಲಿದೆ ಬೆಲೆ!
ಟಿವಿಎಸ್ ಕಂಪನಿಯು ಗ್ರಾಹಕ ಸ್ನೇಹಿ ದ್ವಿಚಕ್ರವಾಹನಗಳ ಮೂಲಕ ಪ್ರಖ್ಯಾತಿ ಪಡೆದಂತೆ, ಪ್ರೀಮಿಯಂ ಬೈಕ್‌ಗಳ ಉತ್ಪಾದನೆಯಲ್ಲೂ ಮುಂದಿದೆ. ಈ ಕಂಪನಿಯ ದ್ವಿಚಕ್ರವಾಹನಗಳು, ಸ್ಕೂಟರ್‌ಗಳ ದಕ್ಷತೆ ಹಾಗೂ ಶಕ್ತಿಶಾಲಿ ಎಂಜಿನ್‌ಗಳಿಂದ ಹೆಚ್ಚು ಜನಪ್ರಿಯವಾಗಿವೆ.