Honda Bike launch ಹೋಂಡಾ 2022 CBR650R ಬೈಕ್ ಬಿಡುಗಡೆ, ಬುಕಿಂಗ್ ಆರಂಭ!

By Suvarna News  |  First Published Jan 26, 2022, 3:24 PM IST
  • ಸ್ಪೋರ್ಟ್ಸ್ ಬೈಕ್ ಬಿಡುಗಡೆ ಮಾಡಿದ ಹೋಂಡಾ ಮೋಟಾರ್
  • ಸೂಕ್ಷ್ಮ ಬದಲಾವಣೆ, ಹೆಚ್ಚುವರಿ ಫೀಚರ್ಸ್, ಆಕರ್ಷಕ ವಿನ್ಯಾಸ
  • ನೂತನ ಬೈಕ್ ಬೆಲೆ 9,35,427 ರೂಪಾಯಿ(ಎಕ್ಸ್ ಶೋ ರೂಂ)

ನವದೆಹಲಿ(ಜ.26):  ಸ್ಪೋರ್ಟ್ಸ್ ಬೈಕ್ ವಿಭಾಗದಲ್ಲಿ ಭಾರತದ ಸವಾರಿ ಸಮುದಾಯದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಹೋಂಡಾ ಮೋಟರ್‌ಸೈಕಲ್(Honda Motorcylce) ಆ್ಯಂಡ್ ಸ್ಕೂಟರ್ ಇಂಡಿಯಾ  ದೇಶಿ ಮಾರುಕಟ್ಟೆಗೆ ಹೊಸ 2022 CBR650R ಬೈಕ್(Bike) ಬಿಡುಗಡೆ ಮಾಡಿದೆ. ಆಮದು ಮಾಡಿಕೊಂಡ ಬಿಡಿಭಾಗಗಳನ್ನು ಬಳಸಿಕೊಂಡು ಸ್ಥಳೀಯವಾಗಿಯೇ ಸಂಪೂರ್ಣವಾಗಿ ಜೋಡಿಸುವ ಸಿಕೆಡಿ* (Completely Knocked Down) ವಿಧಾನದ ಮೂಲಕ ಈ ಹೊಸ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಹೊಸ ಬೈಕ್ ಅನ್ನು ಹೋಂಡಾದ ವಿಶೇಷ ಬಿಗ್‌ವಿಂಗ್ ಟಾಪ್‌ಲೈನ್ ಷೋರೂಂಗಳ ಮೂಲಕ ಬುಕ್(Bookings Open) ಮಾಡಬಹುದು. ನೂತನ ಬೈಕ್ ಬೆಲೆ 9,35,427 ರೂಪಾಯಿ(ಎಕ್ಸ್ ಶೋ ರೂಂ).

ಸರಿಸಾಟಿಯಿಲ್ಲದ ಕಾರ್ಯಕ್ಷಮತೆ ಮತ್ತು ಶೈಲಿಯ 2022 CBR650R, ತನ್ನ ಆಕರ್ಷಕ ವೇಗದ ‘ಪಿಕ್-ಅಪ್' ಮತ್ತು ಹಾರ್ಡ್-ಹಿಟ್ಟಿಂಗ್ ಮತ್ತು ಹೈ-ರಿವೈವಿಂಗ್ ಟಾಪ್ ಎಂಡ್ ಶ್ರೇಣಿಯೊಂದಿಗೆ ಯುವ ಸವಾರರಿಗೆ ಆಹ್ಲಾದಕರ ಸವಾರಿ(Best Ride) ಅನುಭವದ ಭರವಸೆ ನೀಡುತ್ತದೆ.

Latest Videos

undefined

Honda Shine ಭಾರತದಲ್ಲಿ ಹೊಸ ದಾಖಲೆ ಬರೆದ ಹೋಂಡಾ ಶೈನ್, 1 ಕೋಟಿ ಗ್ರಾಹಕರ ಮೈಲಿಗಲ್ಲು!

CBR650Rಇದರ ಶಕ್ತಿಯುತ ಎಂಜಿನ್ ಆಡ್ರಿನಾಲಿನ್ ರಷ್ ಮತ್ತು  ಆರ್‌ಆರ್ ಮಷಿನಿನ ಸ್ಪೋರ್ಟಿ(Sporty) ಕಾರ್ಯಕ್ಷಮತೆ  ಪುನರಾವರ್ತಿಸುತ್ತದೆ. 2022 CBR650R ಮೂಲಕ ಗ್ರಾಹಕರು, ಮಧ್ಯಮತೂಕದ ಮೋಟರ್‌ಸೈಕಲ್‌ನಲ್ಲಿ ನಿಜವಾದ ಸವಾರಿಯ ರೋಮಾಂಚಕಾರಿ ಅನುಭವ ಪಡೆದುಕೊಳ್ಳಬಹುದು ಎಂದು   ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ವ್ಯವಸ್ಥಾಪಕ ನಿರ್ದೇಶಕರು ಅತ್ಸುಶಿ ಒಗಾಟಾ ಹೇಳಿದ್ದಾರೆ.

ಯುವ ಮತ್ತು ಅನುಭವಿ ರೈಡರ್‌ಗಳಲ್ಲಿ ಸವಾರಿ ಅನುಭವದ ಉತ್ಸಾಹ ತುಂಬುವುದನ್ನು 2022 CBR650R ಈಗಾಗಲೇ ಸಾಬೀತುಪಡಿಸಿದೆ.  ಬಣ್ಣಗಳಲ್ಲಿ ಸೂಕ್ಷ್ಮ ಬದಲಾವಣೆ ಮಾಡಿರುವುದು ಇದರ ಏರೊಡೈನಮಿಕ್ ವೃದ್ಧಿಸಿದೆ ಎಂದು  ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

Bike launch: ಹೋಂಡಾ H’ness ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ, CB300R ಅನಾವರಣ!

ವಿನ್ಯಾಸ ಮತ್ತು ವಿನ್ಯಾಸ
ಆರಾಮ ಮತ್ತು ಬೆರಗುಗೊಳಿಸುವ ನೋಟಗಳ ಪರಿಪೂರ್ಣತೆ ಹೊಂದಿರುವ ೨೦೨೨ ಅಃಖ೬೫೦ಖ ಹೊಸ ಕಿತ್ತಳೆ  ಆಕರ್ಷಣೆಯೊಂದಿಗೆ  ಮತ್ತು ಹೊಸ ಸ್ಪೋರ್ಟಿ ಗ್ರಾಫಿಕ್ಸ್  ಬರುತ್ತದೆ. ಸ್ಪೋರ್ಟ್ಸ್ ಬೈಕ್‌ನ ಕಾರ್ಯಕ್ಷಮತೆ ಹೆಚ್ಚಿಸುವ ನ್ಯೂ ಅಪ್ಪರ್ ಆ್ಯಂಡ್ ಲೋವರ್ ಫೇರಿಂಗ್ಸ್ , ಸ್ಲಿಮ್ ಲೈನ್ಸ್ ಮೂಲಕ ಮಸ್ಕು÷್ಯಲಾರಿಟಿ ಜೊತೆ ಸೇರ್ಪಡೆಗೊಳ್ಳುತ್ತದೆ. ಸೀಟ್ ಯೂನಿಟ್, ಹಿಂಭಾಗದಲ್ಲಿ ಕಾಂಪ್ಯಾಕ್ಟ್ ಮತ್ತು ಮೊಟಕುಗೊಳಿಸಿದ ನೋಟವನ್ನು ನೀಡುತ್ತದೆ.

ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ
649ಸಿಸಿ, DOAHC 16-ವಾಲ್ವ್ ಎಂಜಿನ್, ಶುದ್ಧ ಆನಂದದಾಯಕವಾದ ಇನ್-ಲೈನ್ ನಾಲ್ಕು-ಸಿಲಿಂಡರ್ ಕಾರ್ಯಕ್ಷಮತೆ ಒದಗಿಸುವ ಬಗೆಯಲ್ಲಿ ರೂಪಿಸಲಾಗಿದೆ. 64 kw @12,000 RPMನೊಂದಿಗೆ 57.5  NM ಗರಿಷ್ಠ ನೆಟ್ ಟಾರ್ಕ್ ಅನ್ನು 8,500  RPMನಲ್ಲಿ ನೀಡುತ್ತದೆ.

ಬಣ್ಣ, ಬೆಲೆ ಮತ್ತು ಲಭ್ಯತೆ
ಡೀಲರ್‌ಶಿಪ್‌ಗಳಲ್ಲಿ 2022 CBR650Rಗೆ ಬುಕಿಂಗ್  ಆರಂಭಿಸಿದೆ. - ಗುರುಗ್ರಾಂ (ಹರಿಯಾಣ), ಮುಂಬೈ (ಮಹಾರಾಷ್ಟ್ರ), ಬೆಂಗಳೂರು (ಕರ್ನಾಟಕ), ಇಂದೋರ್ (ಮಧ್ಯಪ್ರದೇಶ), ಕೊಚ್ಚಿ (ಕೇರಳ), ಹೈದರಾಬಾದ್‌ನ (ತೆಲಂಗಾಣ) ಮತ್ತು ಚೆನ್ನೈ (ತಮಿಳುನಾಡು) ಬಿಗ್‌ವಿಂಗ್ ಟಾಪ್‌ಲೈನ್‌ನಲ್ಲಿ ಖರೀದಿಗೆ ಲಭ್ಯ ಇರಲಿದೆ.ಬೈಕ್ ಬೆಲೆ 9,35,427 ರೂಪಾಯಿ(ಎಕ್ಸ್ ಶೋ ರೂಂ).

ಹೋಂಡಾ ಸ್ಪೋರ್ಟ್ಸ್ ಬೈಕ್ 2022 CBR650R ಬೈಕ್ ಬುಕಿಂಗ್ ಮಾಡಲು ಆನ್‌ಲೈನ್ ಮೂಲಕವೂ ಅವಕಾಶವಿದೆ. ಹೋಂಡಾ ಅಧಿಕೃತ ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಹೋಂಡಾ ಭಾರತದಲ್ಲಿ ಬೈಕ್ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಹೊಸ ಹೊಸ ಬೈಕ್ ಬಿಡುಗಡೆ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. 2021ರಲ್ಲಿ ಭಾರತದಲ್ಲಿ ಹೋಂಡಾ ಮೋಟಾರ್‌ಸೈಕಲ್ ಮಾರಾಟದಲ್ಲಿ ಏರಿಕೆ ಕಂಡಿದೆ.  ಹೀಗಾಗಿ 2022ರಲ್ಲಿ ಹೋಂಡಾ ಮಾರಾಟ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಇದಕ್ಕೆ ಸದ್ಯ ಬಿಡುಗಡೆ ಮಾಡಿರುವ ಬಹುನಿರೀಕ್ಷಿತ 2022 CBR650R ಬೈಕ್ ಕೂಡ ಸೇರಿಕೊಂಡಿದೆ.

click me!