ನವದೆಹಲಿ(ಜ.24): ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್(Electric Curiser Bike) ಬಿಡುಗಡೆಯಾಗಿದೆ. ಹಲವು ದಿನಗಳಿಂದ ಭಾರಿ ಸದ್ದುಮಾಡುತ್ತಿದ್ದ ಕೊಮಾಕಿ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಕೊಮಾಕಿ(Komaki) ಕ್ರ್ಯೂಸರ್ ಬೈಕ್ ಬೆಲೆ 1.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಜನವರಿ 26ರಿಂದ ಕೊಮಾಕಿ ಡೀಲರ್‌ಶಿಪ್ ಬಳಿ ಕ್ರ್ಯೂಸರ್ ಬೈಕ್ ಖರೀದಿಗೆ ಲಭ್ಯವಿದೆ.
ಕೊಮಾಕಿ ಎಲೆಕ್ಟ್ರಿಕ್ ಕ್ರ್ಯೂಸರ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಗಾರ್ನೆಟ್ ರೆಡ್, ಡೀಪ್ ಬ್ಲೂ ಹಾಗೂ ಜೆಟ್ ಬ್ಲಾಕ್ ಬಣ್ಣದಲ್ಲಿ ಕೊಮಾಕಿ ಕ್ರ್ಯೂಸರ್ ಬೈಕ್ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 180 ರಿಂದ 220 ಕಿಲೋಮೀಟರ್ ಮೈಲೇಜ್(Mileage range) ನೀಡಲಿದೆ. ಕೊಮಾಕಿ ಬೈಕ್‌ನಲ್ಲಿ 4 kW ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 4,000 ವ್ಯಾಟ್ ಮೋಟಾರ್ ಉಪಯೋಗಿಸಲಾಗಿದೆ.
undefined
Electric Bike ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ದಾಖಲೆ, 350 ಕಿ.ಮೀ ಮೈಲೇಜ್!
ಕೊಮಾಕಿ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್(Komak Bike) ಹಲವು ವಿಶೇಷತೆಗಳನ್ನು ಹೊಂದಿದೆ. ಬ್ಲೂಟೂಥ್ ಸೌಂಡ್ ಸಿಸ್ಟಮ್, ಸೈಡ್ ಸ್ಟಾಂಡ್ ಸೆನ್ಸಾರ್, ಕ್ರ್ಯೂಸ್ ಕಂಟ್ರೋಲ್ ಫೀಚರ್ಸ್, ಆ್ಯಂಟಿ ಥೆಫ್ಟ್ ಲಾಕ್ ಸಿಸ್ಟಮ್, ಡ್ಯೆಯೆಲ್ ಸ್ಟೋರೇಜ್ ಬಾಕ್ಸ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ. LED ಹೆಡ್‌ಲ್ಯಾಂಪ್ಸ್ ಬಳಸಲಾಗಿದೆ. ಇನ್ನು ಹೆಡ್‌ಲ್ಯಾಂಪ್ಸ್ ರೆಟ್ರೋ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಮಾಡರ್ನ್ ಕಮ್ ರೆಟ್ರೋ ಶೈಲಿಯಲ್ಲಿರುವ ಕ್ರ್ಯೂಸರ್ ಬೈಕ್ ವಿನ್ಯಾಸ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಮಾಕಿ ಭಾರತದಲ್ಲಿ(India) ಬಿಡುಗಡೆಯಾದ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಆಗಿದೆ. ಇದೀಗ ಕೆಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆದರೆ ಕೊಮಾಕಿ ಮೈಲೇಜ್‌ನಲ್ಲಿ 180 ರಿಂದ 220 ರೇಂಜ್ ಹೊಂದಿರುವ ಕಾರಣ ಸದ್ಯ ಲಭ್ಯವಿರುವ ಎಲೆಕ್ಟ್ರಿಕ್ ಬೈಕ್ ಪೈಕಿ ಕೊಮಾಕಿ ಕ್ರ್ಯೂಸರ್ ಬೈಕ್ ಗರಿಷ್ಠ ಮೈಲೇಜ್ ರೇಂಜ್ ಹೊಂದಿದೆ. ಆದರೆ ಬೆಲೆ ಕೊಂಚ ದುಬಾರಿಯಾಗಿದೆ. 1.68 ಲಕ್ಷ ರೂಪಾಯಿ ಬೆಲೆಯಲ್ಲಿ ಇತರ ಎಕ್ಸೆಸರಿ ಕೂಡ ಲಭ್ಯವಿದೆ.
Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!
ಕೊಮಾಕಿ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಜೊತೆಗೆ ವಿನಿಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. 1 ಲಕ್ಷ ರೂಪಾಯಿ ಬೆಲೆಯ ವಿನೀಸ್ ಸ್ಕೂಟರ್ 3kw ಮೋಟಾರ್ ಹೊಂದಿದೆ. ಇನ್ನು 2.9kw ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 9 ಬಣ್ಣಗಳಲ್ಲಿ ಕೊಮಾಕಿ ವಿನೀಸ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಮೊಬೈಲ್ ಚಾರ್ಜಿಂಗ್, ರಿವರ್ಸ್ ಅಸಿಸ್ಟ್, ಹೆಚ್ಚುವರಿ ಸ್ಟೋರೇಜ್ ಬಾಕ್ಸ್, ಸಂಪೂರ್ಣ ಬಾಡಿ ಗಾರ್ಡ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಕೂಡ ಲಭ್ಯವಿದೆ.
ಕೊಮಾಕಿ ಭಾರತದಲ್ಲಿ 8 ಎಲೆಕ್ಟ್ರಿಕ್ ಸ್ಕೂಟರ್ ಈಗಾಗಲೇ ಬಿಡುಗಡೆ ಮಾಡಿದೆ. ಇನ್ನು ಎರಡು ಎಲೆಕ್ಟ್ರಿಕ್ ಬೈಕ್ ಒಂದು ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಕೂಡ ಮಾರುಕಟ್ಟೆ ಪ್ರವೇಶಿಸಿದೆ. ಟಿಎನ್ 95, ಎಂ 5, ಕೊಮಾಕಿ ಎಸ್ಇ ಎಲೆಕ್ಟ್ರಿಕ್ ವಾಹನಗಳು ಶೀಘ್ರದಲ್ಲೇ ಬಿಡುಗಡೆಯಾಲಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಹಬ್ ಆಗಿ ಮಾರ್ಪಟ್ಟಿದೆ. ದೇಶದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಈಗಾಗಲೇ ಅತ್ಯುತ್ತಮ ಹಾಗೂ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಓಲಾ, ಬೌನ್ಸ್, ಎದರ್ ಎನರ್ಜಿ, ಸಿಂಪಲ್ ಒನ್, ಒಕಿನಾವ, ಪ್ಯೂರ್ ಸೇರಿದಂತೆ 25ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಲಭ್ಯವಿದೆ. ಅದರಲ್ಲೂ ಬೆಂಗಳೂರು ಇತರ ರಾಜ್ಯ ಹಾಗೂ ನಗರಗಳಿಗೆ ಹೋಲಿಸಿದೆರೆ ಅತೀ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಸ್ಟಾರ್ಟ್ಅಪ್ ಕಾರ್ಯನಿರ್ವಹಿಸುತ್ತಿರುವ ನಗರವಾಗಿ ಮಾರ್ಪಟ್ಟಿದೆ.