15 ಕೆಜಿ ತೂಕದ ಸೈಕಲ್ ಒಯ್ಯಲು 7.5 ಟನ್ ಟ್ರಕ್ ಬಳಸಿ ಟ್ರೋಲ್ ಆದ ಪೊಲೀಸ್!

By Suvarna NewsFirst Published Jun 7, 2021, 3:56 PM IST
Highlights
  • ನಿಯಮ ಉಲ್ಲಂಘಿಸಿದ ಎಲೆಕ್ಟ್ರಿಕ್ ಸೈಕಲ್ ಸೀಝ್ ಮಾಡಿದ ಪೊಲೀಸ್
  • ಟೋ ಮಾಡಲು ಪೊಲೀಸರು ಬಳಸಿದ್ದು 7.5 ಟನ್ ಟ್ರಕ್
  • ಪೊಲೀಸರ ನಡೆಗೆ ಭಾರಿ ಆಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ಇಂಗ್ಲೆಂಡ್(ಜೂ.07):  ವಾಹನ ಸೀಝ್ ಮಾಡಿ ಪೊಲೀಸ್ ಟೋ ಮಾಡುವ ವಿಧಾನಕ್ಕೆ ಭಾರತದಲ್ಲಿ ಭಾರಿ ಆಕ್ರೋಶವಿದೆ. ಕಾರಣ ಟೋವಿಂಗ್ ವೇಳೆ ವಾಹನ ಹಾಳಾಗುತ್ತಿದೆ, ಜಾಗ್ರತೆ ವಹಿಸುವುದಿಲ್ಲ ಸೇರಿದಂತೆ ಹಲವು ಆರೋಪಗಳಿವೆ. ಆದರೆ ವಿದೇಶದಲ್ಲಿ ಈ ರೀತಿ ಸಮಸ್ಯೆ ಇಲ್ಲ. ಅಲ್ಲಿನ ಸಮಸ್ಯೆ ತೆರಿಗೆದಾತರ ಹಣವನ್ನೂ ಸಂಪೂರ್ಣ ವಾಗಿ ಬಳಕೆ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಇದಕ್ಕೆ ಕಾರಣ 15 ಕೆಜಿ ತೂಕದ ಸಣ್ಣ ಎಲೆಕ್ಟ್ರಿಕ್ ಸೈಕಲ್ ಸ್ಕೂಟರ್ ಕೊಂಡೊಯ್ಯಲು ಪೊಲೀಸರು ಬಳಸಿದ ಘನ ಘಾತ್ರದ ಟ್ರಕ್.

ಕೋವಿಡ್ ನಿಯಮ ಉಲ್ಲಂಘನೆ; ಕಳೆದ 5 ದಿನದಲ್ಲಿ 3.18 ಕೋಟಿ ರೂ ದಂಡ ಹಾಕಿದ ಪೊಲೀಸ್!..

ಈ ಘಟನೆ ನಡೆದಿರುವುದು ಇಂಗ್ಲೆಂಡ್‌ನ ಹೆರ್ಫೋರ್ಡ್‌ನಲ್ಲಿ. ಮೆರಿಕಾ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಎಲೆಕ್ಟ್ರಿಕ್ ಸೈಕಲ್ ಸ್ಕೂಟರ್ ಸೀಝ್ ಮಾಡಿದ್ದಾರೆ. ಇದು ತಪ್ಪಲ್ಲ, ಸರ್ವೆ ಸಾಮಾನ್ಯ. ಆದರೆ ಬಳಿಕ ಪೊಲೀಸರು ತೆಗೆದುಕೊಂಡ ನಿರ್ಧಾರ ಇದೀಗ ನಗೆಪಾಟಲೀಗೀಡಾಗಿದೆ. 

ಸೀಝ್ ಮಾಡಿದ 15ಕ ಕೆಜಿ ತೂಕದ ಸೈಕಲ್ ಟೋವಿಂಗ್ ಮಾಡಲು ಮೆರಿಕಾ ಪೊಲೀಸರು 7.5 ಟನ್ ಭಾರ ಕೊಂಡೊಯ್ಯಬಲ್ಲ ಘನ ಟ್ರಕ್ ಬಳಸಿದ್ದಾರೆ. ಇದರ ಜೊತೆಗೆ ಈ ಪೋಟೋವನ್ನು ಹೆರ್ಫೋಡ್ ಪೊಲೀಸರು ಸಾಮಾಜಿಕ ಜಾಲಾತಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

ಈ ಪೋಸ್ಟ್‌ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ, ದಂಡ ಸೇರಿದಂತೆ ಸಂಪೂರ್ಣ ವಿವರ ನೀಡಲಾಗಿದೆ. ಜೊತೆಗೆ ಪೊಲೀಸ್ ವಿಭಾಗದಲ್ಲಿ ಈ ಚಿತ್ರವನ್ನು ಅಪಹಾಸ್ಯ ಮಾಡಲಾಗುತ್ತಿದೆ ಎಂದು ಬರೆಯಲಾಗಿದೆ. ಈ ಪೋಸ್ಟ್ ಹಾಕಿದ ಬೆನ್ನಲ್ಲೇ, ಹಲವರು ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.

ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!..

ಸೈಕಲ್ ಟೋ ಮಾಡಲು ಭಾರಿ ಘಾತ್ರದ ಟ್ರಕ್ ಬಳಸಿದ್ದೇಕೆ? ಕಾರಣ ಬಹಿರಂಗ ಪಡಿಸಿ ಎಂದು ಆಗ್ರಹಿಸಿದ್ದಾರೆ. ಇನ್ನೂ ಹಲವರು ತೆರಿಗೆದಾತರ ಹಣವನ್ನೂ ಒಂದು ಪೈಸೆ ಬಿಡದಂತೆ ಬಳಸಿಕೊಳ್ಳುವುದು ಅಂದರೆ ಇದೆ ಎಂದಿದ್ದಾರೆ. ಖಾಸಗಿ ಕಂಪನಿಯಾಗಿದ್ದರೆ ಈ ರೀತಿ ಹಣ ಪೋಲು ಮಾಡಿದರೆ, ಸಂಪೂರ್ಣ ತಂಡವನ್ನೇ ನೌಕರಿಯಿಂದ ಕಿತ್ತೆಸೆಯುತ್ತಿದ್ದರು ಎಂದು ಕಮೆಂಟ್ ಮಾಡಿದ್ದಾರೆ.

click me!