ಟಿವಿಎಸ್ ಮೋಟಾರ್ ಕಂಪನಿಯು ಇರಾಕ್‌ನ ಬಾಗ್ದಾದ್‌ನಲ್ಲಿ ಬೃಹತ್ ಶೋರೂಮ್ ಆರಂಭಿಸಿದೆ. 2016ರಿಂದಲೂ ಇರಾಕ್‌ನಲ್ಲಿ ಅಸ್ತಿತ್ವದಲ್ಲಿರುವ ಕಂಪನಿ ಕಮ್ಯೂಟರ್ ಮೋಟಾರ್ ಸೈಕಲ್, ಸ್ಕೂಟರ್ ಮತ್ತು ತ್ರಿಚಕ್ರವಾಹನಗಳನ್ನು ಸ್ಥಳೀಯ ಕಂಪನಿಯೊಂದಿಗೆ ಸೇರಿ ಮಾರಾಟ ಮಾಡುತ್ತಿದೆ.
ಮೋಟಾರ್‌ಸೈಕಲ್ ಉತ್ಪಾದಕ ಪ್ರಮುಖ ಭಾರತದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಕಂಪನಿ ತನ್ನ ಸ್ಕೂಟರ್, ಮೊಪೆಡ್ ಮತ್ತು ಬೈಕ್‌ಗಳ ಮೂಲಕ ವಿದೇಶದ ಗ್ರಾಹಕರಲ್ಲೂ ಜನಪ್ರಿಯವಾಗಿದೆ. ಆ ಕಾರಣದಿಂದಾಗಿಯೇ ಅದು ವಿದೇಶಗಳಲ್ಲಿ ತನ್ನ ಶೋರೂಮ್ ಆರಂಭಿಸುತ್ತಿದೆ. ಕಂಪನಿಯು ಈಗ ಇರಾಕ್‌ನಲ್ಲಿ ಹೊಸ ಶೋರೂಮ್ ಆರಂಭಿಸಿದೆ.
ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ಇತ್ತೀಚೆಗಷ್ಟೇ ಟಿವಿಎಸ್ ಮೋಟಾರ್ ಕಂಪನಿಯು ಹೊಸ ಶೋರೂಮ್ ಉದ್ಘಾಟಿಸಿದೆ. ಕಂಪನಿಯು ಇರಾಕ್‌ನಲ್ಲಿ ರಿತಾಜ್ ಇಂಟರ್‌ನ್ಯಾಷನಲ್ ಜನರಲ್ ಟ್ರೇಟ್ ಕಂಪನಿ ಎಂಬ ಹಂಚಿಕೆದಾರ ಪಾರ್ಟನರ್ ಕಂಪನಿಯನ್ನು ಒಳಗೊಂಡಿದೆ.
undefined
ಬಾಗ್ದಾದ್‌ನ ಪ್ಯಾಲಿಸ್ತೇನ್ ಸ್ಟ್ರೀಟ್‌ನಲ್ಲಿ ಈ ಟಿವಿಎಸ್ ಕಂಪನಿಯ ಹೊಸ ಶೋರೂಂ ಇದ್ದು, ಅದು 500 ಚದರ ಮೀಟರ್‌ನಷ್ಟು ವಿಸ್ತಾರವಾಗಿದೆ. ಬಿಲ್ಟ್ ಅಪ್ ಏರಿಯಾ 840 ಚ.ಮೀಟರ್‌ನಷ್ಟಿದೆ. ಕಂಪನಿಯು ಈ ಶೋರೂಮ್ ಮೂಲಕ ಇರಾಕಿ ಗ್ರಾಹಕರಿಗೆ ಸೇಲ್ಸ್, ಸ್ಪೇರ್ಸ್ ಮತ್ತು ಸರ್ವೀಸ್ ಸೇವೆಗಳನ್ನು ಒದಗಿಸಲು ಸಜ್ಜಾಗಿದೆ.
ಮಹಾರಾಷ್ಟ್ರ ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ರಾಜ್ಯವಾಗುತ್ತಾ?
ಟಿವಿಎಸ್ ಮೋಟಾರ್ ಕಂಪನಿಯು ಇರಾಕ್‌ನ ಮಾರುಕಟ್ಟೆಯಲ್ಲಿ ತನ್ನ ಅನೇಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಆ ಪೈಕಿ, ಕಂಪನಿಯ ಜನಪ್ರಿಯ ಮೊಪೆಡ್ ಆಗಿರುವ ಎಕ್ಸ್ಎಲ್ 100, ಕಮ್ಯುಟರ್ ಮೋಟಾರ್‌ಸೈಕಲ್‌ಗಳು ಎನಿಸಿಕೊಂಡಿರುವ ಎಚ್‌ಎಲ್ಎಕ್ಸ್ 150 ಮತ್ತು ಮ್ಯಾಕ್ಸ್ 125, ಸ್ಕೂಟರ್‌ಗಳಾದ ಜುಪಿಟರ್, ವೀಗೋ, ಸ್ಕೂಟಿ ಪೆಪ್‌ಪ್ಲಸ್ ಮತ್ತು ಎನ್‌ಟಾರ್ಕ್ 125 ಹಾಗೂ ತ್ರಿಚಕ್ರವಾಹನವಾಗಿರುವ ಕಿಂಗ್ ಡಿಲೆಕ್ಸ್‌ಗಳು ಪ್ರಮಖವಾಗಿವೆ. ಈ ದ್ವಿಚಕ್ರವಾಹನಗಳಿಗೆ ಇರಾಕ್‌ನಲ್ಲಿ ಬೇಡಿಕೆಯೂ ಇದೆ.
ಇರಾಕ್‌ನ ಮಾರುಕಟ್ಟೆಗೆ ಇನ್ನಷ್ಟು ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸುವ ಗುರಿಯನ್ನು ಟಿವಿಎಸ್ ಮೋಟಾರ್ ಕಂಪನಿ ಹಾಕಿಕೊಂಡಿದೆ. ಸದ್ಯಕ್ಕೆ ಎರಡು ಪ್ರಾಡಕ್ಟ್‌ಗಳು ಇರಾಕ್ ಮಾರುಕಟ್ಟೆಗೆ ಪರಿಚಯವಾಗಲಿವೆ. ಈ ಪೈಕಿ ಕಮ್ಯೂಟರ್ ಮೋಟಾರ್‌ಸೈಕಲ್ ಆಗಿರುವ ಟಿವಿಎಸ್ ಸ್ಟಾರ್ ಎಚ್‌ಎಲ್ಎಕ್ಸ್ 150(5 ಗೇರ್) ಮತ್ತು ತ್ರಿಚಕ್ರ ವಾಹನವಾಗಿರುವ ಟಿವಿಎಸ್ ಕಿಂಗ್ ಡಿಲಕ್ಸ್ ಪ್ಲಸ್ ಪ್ರಮುಖವಾಗಿವೆ.
ಸ್ಟಾರ್ ಎಚ್‌ಎಲ್ಎಕ್ಸ್ 150 5 ಗೇರ್ ಕಮ್ಯುಟರ್ ಮೋಟಾರ್‌ಸೈಕಲ್ 150 ಸಿಸಿ ಎಕೋಥ್ರಸ್ಟ್ ಎಂಜಿನ್ ಒಳಗೊಂಡಿದೆ. ಕಿಂಗ್ ಡಿಲಕ್ಸ್ ಪ್ಲಸ್‌ನಲ್ಲಿ 199 ಸಿಸಿ, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಮತ್ತು ಏರ್‌ಕೋಲ್ಡ್ ಎಂಜಿನ್ ಅಳವಡಿಸಲಾಗಿದೆ. ಟಿವಿಎಸ್ ಮೋಟಾರ್ ಕಂಪನಿ ಇರಾಕ್ ಮಾರುಕಟ್ಟೆಯಲ್ಲಿ 2016ರಿಂದಲೂ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಈ ವರೆಗೂ ಇರಾಕ್‌ನಲ್ಲಿ 41 ಟಚ್ಪಾಯಿಂಟ್‌ಗಳನ್ನು ಹೊಂದಿದೆ.
5 ಡೋರ್ ಮಹಿಂದ್ರಾ ಥಾರ್ ಪಕ್ಕಾ, ಆದರೆ ಯಾವಾಗ ಬಿಡುಗಡೆ?
ಬಾಗ್ದಾದ್‌ನಲ್ಲಿನ ಈ ಮಾರ್ಕ್ಯೂ 3 ಎಸ್ ಶೋ ರೂಂ ಉದ್ಘಾಟನೆಯೊಂದಿಗೆ ಇರಾಕ್‌ನಲ್ಲಿ ನಮ್ಮ ಅಸ್ತಿತ್ವವನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ಶೋ ರೂಂ ಮಾರುಕಟ್ಟೆಯ ಬಗೆಗಿನ ನಮ್ಮ ಬದ್ಧತೆಯನ್ನು ಇದು ತೋರಿಸುತ್ತದೆ ಮತ್ತು ಗ್ರಾಹಕರ ಅಗತ್ಯತೆ ಮತ್ತು ಆಕಾಂಕ್ಷೆಯನ್ನು ಪೂರೈಸುವ ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸುತ್ತಿದ್ದೇವೆ. ಈ ಶೋರೂಮ್ ಗ್ರಾಹಕರಿಗೆ ಸಮಗ್ರ ಸೇವೆ ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಟಿವಿಎಸ್ ಮೋಟಾರ್ ಕಂಪನಿ ಇಂಟರ್ನ್ಯಾಷನಲ್ ಬಿಸಿನೆಸ್ ಎಕ್ಸಿಕ್ಯೂಟಿವ್ ಉಪಾಧ್ಯಕ್ಷ ಆರ್ ದಿಲೀಪ್ ಹೇಳಿದರು.
ಗ್ರಾಹಕರ ಬೇಡಿಕೆ ಪೂರೈಸುವ ಸಂಬಂಧ ರಿತಾಜ್ ಇಂಟರ್‌ನ್ಯಾಷನಲ್ ಜನರಲ್ ಟ್ರೇಡ್ ಎಲ್ಎಲ್‌ಸಿ ಇರಾಕ್‌ನಲ್ಲಿ ಟಿವಿಎಸ್ ಮೋಟಾರ್ ಕಂಪನಿಯನ್ನು ನಾಲ್ಕು ವರ್ಷಗಳಿಂದ ಪ್ರತಿನಿಧಿಸುತ್ತಿದೆ. ಟಿವಿಎಸ್ ಮೋಟಾರ್ ಕಂಪನಿಯ ತಂತ್ರಜ್ಞಾನ ಮತ್ತು ಗುಣಾತ್ಮಕ ಶಕ್ತಿಯು ಹಾಗೂ ನಮ್ಮ ನೆಟ್ವರ್ಕ್‌ನಿಂದಾಗಿ ಈ ಪ್ರದೇಶದಲ್ಲಿ ಪರಿಣಾಮವನ್ನು ನೀಡಿದೆ ಮತ್ತು ಈ ದೇಶದಲ್ಲಿ ಮತ್ತಷ್ಟು ಯಶಸ್ಸನ್ನು ಈಗ ಚಾಲನೆಗೊಂಡಿರುವ ಹೊಸ ಶೋರೂಮ್ ತಂದುಕೊಡಲಿದೆ ಎಂದು ರಿತಾಜ್ ಇಂಟರ್‌ನ್ಯಾಷನಲ್ ಜನರಲ್‌ಡ್ರೇಟ್ ಎಲ್ಎಲ್‌ಸಿ ಮ್ಯಾನೇಜಿಂಗ್ ಡೈರೆಕ್ಟರ್ ಎಮಾದ್ ಅಬ್ದುಲ್ ಜಬ್ಬಾರ್ ಕರೀಮ್ ಅಲ್ ರಾಬಾಯ ತಿಳಿಸಿದ್ದಾರೆ.
ಭಾರತದಲ್ಲಿ 2021 ಮರ್ಸಿಡಿಸ್ ಜಿಎಲ್ಎ ಎಸ್‌ಯುವಿ ಲಾಂಚ್, ಆರಂಭಿಕ ಬೆಲೆ?
ಟಿವಿಎಸ್ ಮೋಟಾರ್ ಕಂಪನಿ ವಿದೇಶ ಮಾರುಕಟ್ಟೆಗಳಲ್ಲೂ ಪ್ರಭಾವಿಯಾಗಿದ್ದು, ಇಂಡೋನೇಷ್ಯಾ, ಅರ್ಜೆಂಟೈನಾ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.