Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!

By Suvarna News  |  First Published Dec 24, 2021, 3:49 PM IST
  • ಬೆಂಗಳೂರು, ಚೆನ್ನೈ ಹೊರತು ಪಡಿಸಿ ಹೊಸ ನಗರದಲ್ಲಿ ಸ್ಕೂಟರ್ ವಿತರಣೆ
  • ಭಾರತದಲ್ಲಿ ಮತ್ತಷ್ಟು ನಗರ, ಪಟ್ಟಣಕ್ಕೆ ಸ್ಕೂಟರ್ ವಿತರಣೆಗೆ ರೆಡಿ
  • ಡಿ.15ರಿಂದ ಒಲಾ S1 ಹಾಗೂ ಒಲಾ S1 ಪ್ರೋ ಸ್ಕೂಟರ್ ಡೆಲಿವರಿ ಆರಂಭ

ಬೆಂಗಳೂರು(ಡಿ.24): ದೇಶದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್(Ola Electric Scooter) ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಗರಿಷ್ಠ ಮೈಲೇಜ್ ಹಾಗೂ ಕೈಗೆಟುಕುವ ದರದಲ್ಲಿ ಸ್ಕೂಟರ್ ಲಭ್ಯವಿದೆ. ಆದರೆ ಬುಕಿಂಗ್ ಮಾಡಿದ ಗ್ರಾಹಕರಿಗೆ ಡೆಲಿವರಿ ವಿತರಣೆ ವಿಳಂಬವಾದ ಕಾರಣ ಹಲವು ಗ್ರಾಹಕರು ಬುಕಿಂಗ್ ಕ್ಯಾನ್ಸಲ್ ಮಾಡಿದ ಪ್ರಕರಣಗಳು ಹೆಚ್ಚಾಗುತ್ತಿತ್ತು. ಇದರ ಬೆನ್ನಲ್ಲೇ ಓಲಾ ಡಿಸೆಂಬರ್ 15 ರಿಂದ ತರಾತುರಿಯಲ್ಲಿ ಸ್ಕೂಟರ್ ಡೆಲಿವರಿ(Ola Scooter Delivery) ಆರಂಭಿಸಿತ್ತು. ಇದೀಗ ಒಲಾ ಮತ್ತೊಂದು ಹೆಜ್ಜೆ ಇಟ್ಟಿದೆ. ಇದೀಗ ಒಲಾ ಡೆಲಿವರಿ ಹೊಸ ನಗರಕ್ಕೆ ವಿಸ್ತರಿಸಿದೆ. 

ಬೆಂಗಳೂರು(Bengaluru) ಹಾಗೂ ಚೆನ್ನೈ(Chennai) ನಗರದಲ್ಲಿ ಈಗಾಗಲೇ ಒಲಾ ಸ್ಕೂಟರ್ ಡೆಲವರಿ ಆರಂಭಗೊಂಡಿದೆ. ಮುಂದಿನ ವಾರದಿಂದ ಮುಂಬೈ, ಪುಣೆ, ಅಹಮ್ಮದಾಬಾದ್, ವಿಶಾಖಪಟ್ಟಣಂ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಕೂಟರ್ ಡೆಲಿವರಿ ಆರಂಭಿಸುತ್ತಿದೆ. ಈ ಮೂಲಕ ಮತ್ತಷ್ಟು ನಗರಕ್ಕೆ ಒಲಾ ಡೆಲಿವರಿ ವಿಸ್ತರಣೆಗೆ ಒಲಾ ತಯಾರಿ ನಡೆಸುತ್ತಿದೆ. ಈ ಕುರಿತು ಒಲಾ ಸಿಇಒ ಭವಿಷ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ. 

Latest Videos

undefined

Electric vehicles: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ಡಿಲಿವರಿ ದಿನಾಂಕ ಪ್ರಕಟ

ಆಗಸ್ಟ್ 15 ರಂದು ಒಲಾ ಸ್ಕೂಟರ್ ಒಲಾ S1 ಹಾಗೂ ಒಲಾ S1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್ ತಿಂಗಳಿನಿಂದ ಡೆಲಿವರಿ ಎಂದು ಭರವಸೆ ನೀಡಿದ್ದ ಒಲಾ 4 ತಿಂಗಳು ಕಳೆದು ಡೆಲಿವರಿ ಆರಂಭಿಸಿತು. ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಎರಡು ದಿನ ಗ್ರಾಹಕರಿಗೆ ಬುಕಿಂಗ್‌ಗೆ ಅವಕಾಶ ನೀಡಿತ್ತು. ನವೆಂಬರ್ ತಿಂಗಳಲ್ಲಿ ಒಲಾ ಅತೀ ದೊಡ್ಡ ಟೆಸ್ಟ್ ರೈಡ್ ನಡೆಸಿತ್ತು. ಈ ಎಲ್ಲಾ ಪ್ರಕ್ರಿಯೆ ಬಳಿಕ ಒಲಾ ಇದೀಗ ಡಿಲಿವರಿ ಆರಂಭಿಸಿದೆ.

ಒಲಾ ಎರಡು ವೇರಿಯೆಂಟ್ ಸ್ಕೂಟರ್ ಲಭ್ಯವಿದೆ.  ಒಲಾ S1 ಹಾಗೂ ಒಲಾ S1 ಪ್ರೋ ಸ್ಕೂಟರ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಒಲಾ S1 ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). ಇನ್ನು  ಒಲಾ S1 ಪ್ರೋ ಸ್ಕೂಟರ್ ಬೆಲೆ 1.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಒಲಾ S1  ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 121 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದ್ದರೆ,  ಒಲಾ S1 ಪ್ರೋ ಸ್ಕೂಟರ್ 180 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ.

Simple Electric Scooter ಓಲಾ ಹಿಂದಿಕ್ಕಿಲು ಸಿಂಪಲ್ ಎನರ್ಜಿ ಪ್ಲಾನ್, ಆರಂಭವಾಗುತ್ತಿದೆ ವಿಶ್ವದ ಅತೀ ದೊಡ್ಡ ಉತ್ಪಾದನಾ ಘಟಕ!

ಒಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 3 ರೈಡ್ ಮೊಡ್‌ಗಳಿವೆ. ನಾರ್ಮಲ್, ಸ್ಪೋರ್ಟ್ ಹಾಗೂ ಹೈಪರ್ ಮೊಡ್‌ಗಳಿವೆ. ಅತೀ ದೊಡ್ಡ ಡಿಸ್‌ಪ್ಲೆ, ಆ್ಯಂಡ್ರಾಯ್ಡ್ OS, ಆ್ಯಪ್ ಕಂಟ್ರೋಲ್, ಸ್ಪೀಕರ್, USB ಚಾರ್ಜಿಂಗ್ ಪೋರ್ಟ್, ಅತೀ ದೊಡ್ಡ ಸ್ಟೋರೇಜ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. ಒಲಾ ಎಲೆಕ್ಟ್ರಿಕ್ ಸ್ಕೂಟರ್ ತಮಿಳುನಾಡಿನಲ್ಲಿ ಅತೀ ದೊಡ್ಡ ಉತ್ಪಾದನಾ ಘಟಕ ಹೊಂದಿದೆ. 500 ಎಕರೆ ಸ್ಥಳದಲ್ಲಿರುವ ಈ ಘಟಕದಲ್ಲಿ ವರ್ಷಕ್ಕೆ ಮೊದಲ ಹಂತದಲ್ಲಿ 20 ಲಕ್ಷ ಸ್ಕೂಟರ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. 

ಒಲಾ ಸ್ಕೂಟರ್ ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಪಟ್ಟಣ, ಹಳ್ಳಿ ಹಳ್ಳಿಗೂ ಡೆಲವರಿ ವಿಸ್ತರಿಸುತ್ತಿದೆ. ಇದಕ್ಕಾಗಿ ಪ್ರಮುಖ ಕೇಂದ್ರಗಳಲ್ಲಿ ಚಾರ್ಚಿಂಗ್ ಸ್ಟೇಶನ್ ಅಳವಡಿ ಸೇರಿದಂತೆ ಇತರ ಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸಿದೆ. ಈ ಮೂಲಕ ಸಂಪೂರ್ಣ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಸ್ತರಣೆಗೆ ಒಲಾ ಮುಂದಾಗಿದೆ. 

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಒಲಾ ಹೊರತುಪಡಿಸಿದರೆ ಸಿಂಪಲ್ ಎನರ್ಜಿ ಹೊರತಂದಿರುವ ಸಿಂಪಲ್ ಒನ್, ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್, ಎದರ್ ಎನರ್ಜಿ, ಬಜಾಜ್ ಚೇತಕ್, ಟಿವಿಎಸ್ ಐಕ್ಯೂಬ್, ಆ್ಯಂಪರ್, ಇವಿ, ಒಕಿನಾವಾ, ರಿವೋಲ್ಟ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಲಭ್ಯವಿದೆ.
 

click me!