Bengaluru Bike sales: KTM 390 ಅಡ್ವೆಂಚರ್ ಬೈಕ್ ಮಾರಾಟದಲ್ಲಿ ದಾಖಲೆ, 1,000 ಗಡಿ ದಾಟಿದ ಮೊದಲ ನಗರ ಬೆಂಗಳೂರು!

By Suvarna News  |  First Published Dec 23, 2021, 8:45 PM IST
  • KTM 390 ಅಡ್ವೆಂಚರ್ ಬೈಕ್ ಹೊಸ ಮೈಲಿಗಲ್ಲು
  • 1,000 ಬೈಕ್ ಮಾರಾಟದ ಮೂಲಕ ಹೊಸ ದಾಖಲೆ
  • ಬೆಂಗಳೂರಿನಲ್ಲಿ ಅಡ್ವೆಂಚರ್ ಬೈಕ್‌ಗೆ ಎಲ್ಲಿಲ್ಲದ ಬೇಡಿಕೆ

ಬೆಂಗಳೂರು(ಡಿ.23): KTM 390 ಅಡ್ವೆಂಚರ್ ಕಳೆದ ವರ್ಷ ಭಾರತದ(India) ಅಡ್ವೆಂಚರ್ ಮೋಟರ್ ಸೈಕಲ್ ಮಾರುಕಟ್ಟೆಗೆ ಪ್ರವೇಶ ಮಾಡಿದ್ದು, ಯುವ ಜನರ ಅಚ್ಚುಮೆಚ್ಚಿನ ಸಾಹಸಮಯ ಬೈಕ್ ಆಗಿ ಹೊರಹೊಮ್ಮಿದೆ. ದಿನದಿಂದ ದಿನಕ್ಕೆ ಈ ಬೈಕಿನ ಜನಪ್ರಿಯತೆ ಹೆಚ್ಚುತ್ತಾ ಬರುತ್ತಿದೆ.  KTM 390 ಅಡ್ವೆಂಚರ್ ಅನ್ನು ಈ ಪ್ರವೃತ್ತಿಯನ್ನು ಪರಿಹರಿಸುವ ನಿಟ್ಟಿನಲ್ಲಿ ಪರಿಕಲ್ಪಿಸಲಾಗಿದೆ ಮತ್ತು ದೈನಂದಿನ ನಗರ ಬಳಕೆಗೆ ಉತ್ತಮ ಬೈಕ್ ಅನ್ನಾಗಿ ವಿನ್ಯಾಸಗೊಳಿಸಲಾಗಿದೆ. ಇದೀಗ  KTM 390 ಅಡ್ವೆಂಚರ್ ಬೈಕ್ ಹೊಸ ಮೈಲಿಗಲ್ಲು ನಿರ್ಮಿಸಿದೆ. ಕಳೆದ ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ(Bengaluru) 1,000 ಬೈಕ್ ಮಾರಾಟವಾಗುವ(Bike sales) ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಈ ಮೂಲಕ ಭಾರತದಲ್ಲಿ 1,000 ಗಡಿ ದಾಟಿದ ಮೊದಲ ನಗರ ಬೆಂಗಳೂರು ಅನ್ನೋ ಹಿರಿಮೆಗೆ ಪಾತ್ರವಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಈ ಬೈಕಿನ ಮೇಲೆ ಯುವ ಜನರಲ್ಲಿ ಹೆಚ್ಚು ಆಸಕ್ತಿ ಕಾಣುತ್ತಿದೆ. ಇದರ ಪರಿಣಾಮ ಬೆಂಗಳೂರು ನಗರ ಒಂದರಲ್ಲೇ 1,000  KTM 390 ಅಡ್ವೆಂಚರ್ ಮೋಟರ್ ಸೈಕಲ್ ಮಾರಾಟವಾಗಿವೆ. ಈ ಮೂಲಕ 1,000  ಮೋಟರ್ ಸೈಕಲ್ ಮಾರಾಟವಾದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. KTM 390 ಅಡ್ವೆಂಚರ್ ಯಾವಾಗಲೂ ನಿಜವಾದ ಬೈಕಿಂಗ್ ಉತ್ಸಾಹಿಗಳ ಆಯ್ಕೆಯಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

Latest Videos

undefined

2021 ಕೆಟಿಎಂ 125 ಡ್ಯೂಕ್ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

KTM 390 ಅಡ್ವೆಂಚರ್ ಮೋಟಾರ್ ಸೈಕ್ಲಿಸ್ಟ್‌ಗಳನ್ನು ಗುರಿಯಾಗಿಸಿಕೊಂಡಿದೆ. ಈ ಮೋಟಾರ್ ಸೈಕ್ಲಿಸ್ಟ್ ಹತ್ತಿರದ ಮತ್ತು ದೂರದ ಪ್ರವಾಸಗಳನ್ನು ಸಮಾನವಾಗಿ ನಿರ್ವಹಿಸಲು ಈ ಬೈಕನ್ನು ಬಯಸುತ್ತಾರೆ. ಟಾರ್ಮ್ಯಾಕ್ ರಸ್ತೆಗಳು, ಕಲ್ಲು ಮಿಶ್ರಿತ ರಸ್ತೆ, ಸ್ಲಶ್, ವಾಟರ್ ಕ್ರಾಸಿಂಗ್ ಅಥವಾ ಮರಳಿನಂತಹ ಎಲ್ಲಾ ರೀತಿಯ ಆಫ್-ರೋಡ್ ವಿಸ್ತರಣೆಗಳನ್ನು ಈ ಬೈಕ್ ಮೂಲಕ ಯಾವುದೇ ಅಡೆತಡೆ ಇಲ್ಲದೇ ಹಾದು ಹೋಗುತ್ತಾರೆ.

KTM 390೦ ಅಡ್ವೆಂಚರ್ ದೇಶದಲ್ಲಿ ಅಡ್ವೆಂಚರ್ ಮೋಟಾರ್‌ಸೈಕಲ್ ವಿಭಾಗವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮೊದಲ ದರ್ಜೆಯ ವೈಶಿಷ್ಟ್ಯತೆಯೊಂದಿಗೆ ನಿಜವಾದ ಬೈಕಿಂಗ್ ಉತ್ಸಾಹಿಗಳಿಗೆ ಈ ವಾಹನವು ಯಾವಾಗಲೂ ಆದ್ಯತೆಯ ಆಯ್ಕೆಯಾಗಿದೆ. ಈಗ ಚಕ್ರವರ್ತಿಯವರು ಬೆಂಗಳೂರು ನಗರದಲ್ಲಿ KTM 390 ಅಡ್ವೆಂಚರ್ ಬೈಕ್‌ನ 1,000  ನೇ ಮಾಲೀಕರಾಗಿದ್ದಾರೆ. ಈ ಮೂಲಕ ಬೆಂಗಳೂರು ಭಾರತದಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ ಮೊದಲ ನಗರವಾಗಿದೆ. ಇತರ ಮೆಟ್ರೋ ನಗರಗಳು ಈಗಾಗಲೇ ಈ ಗಡಿಯ ಸಮೀಪದಲ್ಲಿವೆ.  KTM 390 ಅಡ್ವೆಂಚರ್ ಮಾಲೀಕರಿಗೆ  KTM ಪ್ರೊ-XP ಕಾರ್ಯಕ್ರಮದಡಿಯಲ್ಲಿ ನಾವು ಬಹಳ ಅನುಭವವನ್ನು ನೀಡುತ್ತಿದ್ದೇವೆ.  KTM ಅಡ್ವೆಂಚರ್ ಮಾಲೀಕರು  KTM  ತಜ್ಞರಿಂದ ತರಬೇತಿ ಪಡೆಯಬಹುದು, ಭೂಪ್ರದೇಶಗಳನ್ನು ಅನ್ವೇಷಣೆ ಮಾಡಬಹುದು ಮತ್ತು ಕೆಟಿಎಂ ಪ್ರೊ-ಎಕ್ಸ್ಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕೆಟಿಎಂ ಮಾಲೀಕರಿಗೆ ಅತ್ಯುತ್ತಮವಾದ ಅವಕಾಶಗಳನ್ನು ನೀಡಲಾಗುತ್ತಿದೆ’’ ಎಂದು ಬಜಾಜ್ ಆಟೋ ಲಿಮಿಟೆಡ್‌ನ ಅಧ್ಯಕ್ಷ ಸುಮೀತ್ ನಾರಂಗ್ ಹೇಳಿದರು.

ಭಾರತದಲ್ಲಿ KTM250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ

ರೆಡಿ ಟು ರೇಸ್ ಅನುಗುಣವಾಗಿ, 1953 ರಿಂದ  KTM 300 ಕ್ಕೂ ಹೆಚ್ಚು ವಿಶ್ವಚಾಂಪಿಯನ್‌ಗಳಲ್ಲಿ ಪಾಲ್ಗೊಂಡಿದೆ. ಕಳೆದ 66 ವರ್ಷಗಳಲ್ಲಿ ಹಲವು ವಿಶ್ವಚಾಂಪಿಯನ್ ಗರಿಗಳನ್ನು ಪಡೆದುಕೊಂಡಿದೆ. ಈ ಮೂಲಕ ಸರಿಸಾಟಿಯಿಲ್ಲದ ಮೋಟಾರ್ ಸ್ಪೋರ್ಟ್ಸ್ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  KTM ಭಾರತದ 365 ನಗರಗಳಲ್ಲಿ, 460ಕ್ಕೂ ಹೆಚ್ಚು ಸ್ಟೋರ್‌ಗಳಲ್ಲಿ ಬೈಕ್ ಲಭ್ಯವಿದೆ. ಪ್ರೀಮಿಯಂ ಸ್ಪೋರ್ಟ್ ಮೋಟಾರ್ ಸೈಕಲ್ ವಿಭಾಗದಲ್ಲಿ ಈ ಕಡಿಮೆ ಅವಧಿಯಲ್ಲಿ 2.7 ಲಕ್ಷಕ್ಕೂ ಹೆಚ್ಚು ಬೈಕಿಂಗ್ ಉತ್ಸಾಹಿಗಳ ಪ್ರಬಲ ಗ್ರಾಹಕ ನೆಲೆಯನ್ನು ಕೆಟಿಎಂ ಹೊಂದಿದೆ.

click me!