ಬೆಂಗಳೂರು(ಜೂ.30): ಬೆಂಕಿ ಹೊತ್ತಿಕೊಳ್ಳುವ ಆತಂಕವಿಲ್ಲ, ಸ್ಫೋಟದ ಭಯ ಬೇಕಿಲ್ಲ. ಅತೀ ಸುರಕ್ಷಿತ, 5 ಸ್ತರದ ಭದ್ರತೆ ಹೊಂದಿರುವ ಒಬೆನ್ ಎಲೆಕ್ಟ್ರಿಕ್ ಬೈಕ್ ಟೆಸ್ಟ್ ರೈಡ್ ಆರಂಭಗೊಂಡಿದೆ. ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಒಬೆನ್ ಕಂಪನಿಯ ಸಿಇಒ ಹಾಗೂ ಸಿಒಒ ಬೈಕ್ ಕುರಿತ ಮಾಹಿತಿ ನೀಡಿ ಟೆಸ್ಟ್ ರೈಡ್‌ಗೆ ಚಾಲನೆ ನೀಡಿದ್ದಾರೆ.
ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಪ್ರಕರಣ, ಸ್ಫೋಟ ಪ್ರಕರಣಗಳಿಂದ ಗ್ರಾಹಕರ ಆತಂಕ ಹೆಚ್ಚಾಗಿದೆ. ಆದರೆ ಒಬೆನ್ ಎಲೆಕ್ಟ್ರಿಕ್ ಬೈಕ್ ಈ ಎಲ್ಲಾ ಆತಂಕವನ್ನು ದೂರಗೊಳಿಸಲಿದೆ. ಕಾರಣ ಒಬೆನ್ ಬೈಕ್‌ನಲ್ಲಿ ಲ್‌ಎಫ್‌ಪಿ ಬ್ಯಾಟರಿ ಬಳಕೆ ಮಾಡಲಾಗಿದೆ. ಇದರಿಂದ ಬಾಳ್ವಿಕೆಯೂ ಹೆಚ್ಚು. ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿ.ಮೀ ಮೈಲೇಜ್ ನೀಡಲಿದೆ.
Electric Bike ಬೆಂಗಳೂರಿನ ಒಬೆನ್ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್‌ಅಪ್‌ಗೆ ಹರಿದು ಬಂತು 1 ಮಿಲಿಯನ್ ಡಾಲರ್ ಹಣ!
ಒಬೆನ್ ರೋರ್ ಎಲೆಕ್ಟ್ರಿಕ್ ಬೈಕ್ ಬೆಲೆ
ಕರ್ನಾಟಕ, 1,24,999 ರೂಪಾಯಿ(ಎಕ್ಸ್ ಶೋ ರೂಂ)
ಮಹಾರಾಷ್ಟ್ರ, 99,999 ರೂಪಾಯಿ(ಎಕ್ಸ್ ಶೋ ರೂಂ)
ದೆಹಲಿ, 1,02,999 ರೂಪಾಯಿ(ಎಕ್ಸ್ ಶೋ ರೂಂ)
ತಮಿಳುನಾಡು, 1,24,999 ರೂಪಾಯಿ(ಎಕ್ಸ್ ಶೋ ರೂಂ)
ತೆಲಂಗಾಣ, 1,24,999 ರೂಪಾಯಿ(ಎಕ್ಸ್ ಶೋ ರೂಂ)
ವಿಶೇಷ ಅಂದರೆ ಈ ಬೈಕನ್ನು ಮನೆಯಲ್ಲಿರುವ ಡಿಸಿ ಪ್ಲಗ್ ಪಾಯಿಂಟ್ ಮೂಲಕ ಚಾರ್ಜ್ ಮಾಡಿಕೊಳ್ಳಹುದು. ಇಷ್ಟೇ ಅಲ್ಲ ಕೇವಲ 2 ಗಂಟೆಯಲ್ಲಿ ಚಾರ್ಜ್ ಆಗಲಿದೆ. ದಕ್ಷ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಹೀಗಾಗಿ 0-40 ಕೀ.ಮೀ ಕೇವಲ 3 ಸೆಕೆಂಡ್‌ಗಳಲ್ಲಿ ತೆಗೆದುಕೊಳ್ಳಲಿದೆ. ಈ ಬೈಕ್‌ನ ಗರಿಷ್ಠ ವೇಗ 100 ಕಿ.ಮೀ ಪ್ರತಿಗಂಟೆಗೆ.
ಒಬೆನ್ ಎಲೆಕ್ಟ್ರಿಕ್ ಸಂಪೂರ್ಣವಾಗಿ ಬೆಂಗಳೂರಲ್ಲೇ ಉತ್ಪಾದನೆಯಾಗುತ್ತಿದೆ. ಅತೀ ಸುರಕ್ಷಿತ ಬ್ಯಾಟರಿಯಿಂದ ಹಿಡಿದು ಎಲ್ಲಾ ಬಿಡಿಭಾಗಗಳನ್ನು, ಮೋಟಾರು ಬೆಂಗಳೂರಿನಲ್ಲೇ ತಯಾರಾಗುತ್ತಿದೆ. 25 ವರ್ಷಕ್ಕಿಂತ ಹೆಚ್ಚಿನ ಅನುಭವವಿರುವ ತಜ್ಞರೇ ಸಂಪೂರ್ಣವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಉತ್ಪಾದಿಸಿದ್ದಾರೆ.
ಭಾರತೀಯ ಗ್ರಾಹಕರಿಗಾಗಿ ನಮ್ಮ ಉತ್ಪನ್ನ ಕೊಡುಗೆಯಲ್ಲಿ ಎಲ್‌ಎಫ್‌ಪಿ ಬ್ಯಾಟರಿಗಳ ಬಳಕೆಯಲ್ಲಿ ಪ್ರಥಮಾನ್ವೇಷಕರಾಗಿರುವುದಕ್ಕೆ ನಮ್ಮ ಬಹಳ ಸಂತೋಷವಾಗುತ್ತಿದೆ. ಅವರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದ್ದು, ಎಲ್‌ಎಫ್‌ಪಿದೊಂದಿಗೆ ಮಾಲೀಕರು ತಮ್ಮ ಚಿಂತೆಗಳನ್ನು ದೂರವಿರಿಸಬಹುದು. ಹಲವಾರು ವರ್ಷಗಳ ನಮ್ಮ ಸಂಶೋಧನೆ ಮತ್ತು ಪರೀಕ್ಷೆಗಳಿಂದ, ಇಂದಿನ ಭಾರತದ ವಿಪರೀತ ಹವಾಮಾನ ಪರಿಸ್ಥಿತಿಗಳಿಗೆ ಕೇವಲ ಎಲ್‌ಎಫ್‌ಪಿಗಳು ಮಾತ್ರ ಅತ್ಯಂತ ಸೂಕ್ತವಾಗಿ ಹೊಂದುತ್ತವೆ ಎಂಬುದನ್ನು ನಾವು ಕಂಡುಕೊಂಡೆವು. ಎಲ್‌ಎಫ್‌ಪಿಗಳು 30% ಅಧಿಕ ತಾಪಮಾನವನ್ನು ಭರಿಸುವ ಶಕ್ತಿ ಹೊಂದಿವೆ ಎಂದು ಸಹಸ್ಥಾಪಕಿ ಹಾಗೂ ಸಿಇಒ ಮಧುಮಿತಾ ಅಗ್ರವಾಲ್ ಹೇಳಿದರು.
ಜೂನ್ 30ರೊಳಗೆ ಕರ್ನಾಟಕದಲ್ಲಿ 1000 ರಿಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ
ವಿದ್ಯುತ್ ಕಾರ್ಯಪ್ರದರ್ಶನದ ಮೋಟಾರುಸೈಕಲ್‌ಗಳಲ್ಲಿ ಎಲ್‌ಎಫ್‌ಪಿ ಬ್ಯಾಟರಿಗಳ ಬಳಕೆಯಲ್ಲಿ ಪ್ರಥಮಾನ್ವೇಷಕ ಸಂಸ್ಥೆಯಾಗಿರುವ ಭಾರತದ ಪ್ರಪ್ರಥಮ ಸಂಸ್ಥೆ ಒಬೆನ್. ಎಲ್‌ಎಫ್‌ಪಿ ಹಾಗೂ ಎನ್‌ಎಮ್‌ಸಿಯಂತಹ ಪ್ರಸ್ತುತ ಅಸ್ತಿತ್ವದಲ್ಲಿರುವ ಬ್ಯಾಟರಿಗಿಂತ ಒಬೆನ್ ಬೈಕ್‌ನಲ್ಲಿ ಬಳಕೆ ಮಾಡಿರುವ ಲಿಥಿಯಮ್ ಫೆರೋ ಫಾಸ್ಫೇಟ್ ಎಲ್ಎಫ್‌ಪಿ ಬ್ಯಾಟರಿ ಹೆಚ್ಚು ಸುರಕ್ಷೆಯಿಂದ ಕೂಡಿದೆ.
ಎಲ್‌ಎಫ್‌ಪಿ ಅಥವಾ ಲಿಥಿಯಮ್ ಫೆರೋ ಫಾಸ್ಫೇಟ್, ಒಂದು ಪ್ರಬಲವಾದ ಮತ್ತು ಆಧುನಿಕ ಬ್ಯಾಟರಿ ರಾಸಾಯನಿಕವಾಗಿದ್ದು, ಮೊದಲನೇ ಪೀಳಿಗೆ ಇವಿ ಬ್ಯಾಟರಿಗಳ ಪೈಕಿ ಇರುವ ಪ್ರಸ್ತುತದ ಬ್ಯಾಟರಿ ವಿಧಗಳಿಗಿಂತ ಉತ್ತಮವಾದುದು. ವಿದ್ಯುತ್ ವಾಹನಗಳಲ್ಲಿ ಅವುಗಳ ಬಳಸಬಹುದಾದ ಜೀವಿತಾವಧಿಯ ಸಮಯದಲ್ಲಿ ಮಾತ್ರವಲ್ಲದೆ ಅವುಗಳ ಜೀವಿತಾವಧಿಯ ಅಂತ್ಯದ ಸಮಯದಲ್ಲೂ ಕೂಡ, ಉದಾಹರಣೆಗೆ, ಯುಪಿಎಸ್‌ನಂತಹ ಸಮಯದಲ್ಲೂ ಅವು ಹೆಚ್ಚು ಪ್ರಯೋಜನಕಾರಿ ಮತ್ತು ವಿಸ್ತರಣೆಗೊಳ್ಳುತ್ತವೆ.
EV charging ಬೆಂಗಳೂರಲ್ಲಿ ಆರಂಭಗೊಳ್ಳುತ್ತಿದೆ 50 ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಪಾಯಿಂಟ್!
ನಮ್ಮದೇ ಸ್ವಂತ ಸ್ವತ್ತಾದ ಒಊಘಿ ತಂತ್ರಜ್ಞಾನ ದೊಂದಿಗೆ ನಮ್ಮ ಎಲ್‌ಎಫ್‌ಪಿ ಬ್ಯಾಟರಿ ಪ್ಯಾಕ್‌ಅನ್ನು ವಿನ್ಯಾಸಗೊಳಿಸುವ ಮೂಲಕ ನಾವು ಸುರಕ್ಷತಾ ಅಂಶವನ್ನು ಇನ್ನೂ ಒಂದು ಹಂತ ಮೇಲಕ್ಕೆ ಕೊಂಡೊಯ್ದಿದ್ದೇವೆ. ಈ ತಂತ್ರಜ್ಞಾನವು ದೊಡ್ಡ ಮೇಲ್ಮೆöÊ ಪ್ರದೇಶದಲ್ಲಿ ಶಾಖವು ಒಂದೇ ಸಮನೆ ವಿತರಣೆಗೊಂಡು ಪರಿಸರದೊಂದಿಗೆ ಗರಿಷ್ಟ ಶಾಖ ವಿನಿಮಯವನ್ನು ಖಾತರಿಪಡಿಸುತ್ತದೆ. ಆ ಮೂಲಕ ಅದು ಖಔಖಖಅನ್ನು ಓಡಿಸುತ್ತಿರುವಾಗಲೂ ಬ್ಯಾಟರಿಯನ್ನು ತಂಪಾಗಿಡುತ್ತದೆ. ಹೆಚ್ಚುವರಿಯಾಗಿ, ಬ್ಯಾಟರಿ ಪ್ಯಾಕ್‌ನ ಹೊರ ಕೇಸಿಂಗ್ ಅಲ್ಯುಮಿನಿಯಮ್ ಡೈಕ್ಯಾಸ್ಟ್ನಿಂದ ತಯಾರಿಸಲ್ಪಟ್ಟಿದ್ದು ಇದು ಯಾವುದೇ ಅನಿರೀಕ್ಷಿತ ಘಟನೆಗಳು ಏರ್ಪಟ್ಟ ಸಂದರ್ಭದಲ್ಲಿ ಬ್ಯಾಟರಿ ಪ್ಯಾಕ್ ಸ್ಫೋಟಗೊಳ್ಳುವುದನ್ನು ತಪ್ಪಿಸುತ್ತದೆ. ಎಂದು ಸಹ-ಸ್ಥಾಪಕ ಮತ್ತು ಸಿಒಒ ದಿನ್ಕರ್ ಅಗ್ರವಾಲ್ ಹೇಳಿದ್ದಾರೆ.
ಒಬೆನ್ ಎಲೆಕ್ಟ್ರಿಕ್ ಬೈಕ್‌ನಲ್ಲಿ 4.4 KWh ಎಲ್‌ಎಫ್‌ಪಿ ಬ್ಯಾಟರಿ ಅಳವಡಿಕೆಯಾಗಿದೆ.ಎಲ್‌ಎಫ್‌ಪಿ ಉತ್ತಮ ಶ್ರೇಣಿ ಮತ್ತು ದೀರ್ಘ ಜೀವಿತಾವಧಿ ಒದಗಿಸುತ್ತದೆ. ಭಾರತದಲ್ಲಿ ಜುಲೈ 2 ರಿಂದ ಟೆಸ್ಟ್ ರೈಡ್ ಆರಂಭಗೊಳ್ಳುತ್ತಿದೆ. ಇನ್ನು ಬೆಂಗಳೂರಿನಿಂದಲೇ ಟೆಸ್ಟ್ ರೈಡ್ ಆರಂಭಗೊಳ್ಳುತ್ತಿದೆ.
ಓಬೆನ್ ಎಲೆಕ್ಟ್ರಿಕ್
ಓಬೆನ್ ಎಲೆಕ್ಟ್ರಿಕ್ ಭಾರತದ ಬೆಂಗಳೂರ ಹೊರವಲಯದಲ್ಲಿರುವ ವಿದ್ಯುತ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿದೆ. ವಿಶ್ವದ ಗ್ರಾಹಕರಿಗಾಗಿ ದೇಶೀಯವಾಗಿ ವಿನ್ಯಾಸಗೊಂಡ, ಅಭಿವೃದ್ಧಿಪಡಿಸಲಾದ ಮತ್ತು ಉತ್ಪಾದಿಸಲಾದ ವಿದ್ಯುತ್ ದ್ವಿಚಕ್ರ ವಾಹನಗಳನ್ನು ತಯಾರಿಸುವ ಬದ್ಧತೆ ಹೊಂದಿದೆ. ಸಾಂಪ್ರದಾಯಿಕ ಐಸಿಇ ದ್ವಿಚಕ್ರವಾಹನಗಳಿಗೆ ಸಮನಾದ ಅಥವಾ ಅದನ್ನು ಮೀರಿಸುವ ವಿಶ್ವಸನೀಯ, ಕಾರ್ಯಕ್ಷಮತೆ-ಕೇಂದ್ರಿತವಾದ, ಸುರಕ್ಷಿತವಾದ ಮತ್ತು ಗ್ರಾಹಕ-ಕೇಂದ್ರಿತ ವಿದ್ಯುತ್ ದ್ವಿಚಕ್ರ ವಾಹನಗಳನ್ನು ಒದಗಿಸುವುದರ ಮೇಲೆ ಅದು ಗಮನ ಕೇಂದ್ರೀಕರಿಸಿದೆ. ಪ್ರೀಮಿಯಮ್ ಕಾರ್ಯಕ್ಷಮತೆಯುಳ್ಳ ವಿದ್ಯುತ್ ಮೋಟಾರುಸೈಕಲ್ ಆದ ಅದರ ಪ್ರಪ್ರಥಮ ಪ್ರಧಾನ ಉತ್ಪನ್ನ ‘ಒಬೆನ್,ಭಾರತ ಸರ್ಕಾರದ “ಭಾರತದಲ್ಲಿ ತಯಾರಿಸಿ” ಮತ್ತು “ಆತ್ಮನಿರ್ಭರ”ದ ಕನಸನ್ನು ಹೆಮ್ಮೆಯಿಂದ ನನಸುಗೊಳಿಸಲಿದೆ.