ಬೆಂಗಳೂರು(ಜೂ.29) ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿದ ಬಳಿಕ ಅದರಲ್ಲಿ ಏನಾದರೂ ಒಂದು ಬದಲಾವಣೆ ಮಾಡಿ ಅಂದವನ್ನು ಹೆಚ್ಚಿಸಲಾಗುತ್ತದೆ. ಮೋಟಾರು ವಾಹನ ನಿಯಮದಡಿಯಲ್ಲಿ ಮಾಡಿಫಿಕೇಶನ್ ಮಾಡಿಸುವುದು ಕಷ್ಟ. ಹೀಗಾಗಿ ಇದೀಗ ರಾಯಲ್ ಎನ್‌ಫೀಲ್ಡ್ ಕಸ್ಟಮೈಸ್ಡ್ ಬೈಕ್ ಅನಾವರಣ ಮಾಡಿದೆ. ಎಂಎಸ್ ಕಸ್ಟಮ್ಸ್ ಮಾಡಿಫಿಕೇಶನ್ ಮಾಡಿರುವ ಅತ್ಯಾಕರ್ಷಕ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಬೈಕ್ ಇದಾಗಿದ್ದು, ಬೆಂಗಳೂರಿನಲ್ಲಿ ಅನಾವರಣ ಮಾಡಲಾಗಿದೆ.
MS ಕಸ್ಟಮ್ಸ್‌ನ ಮೋಟಾರ್‌ಸೈಕಲ್‌ನ ಅರ್ಬನ್ ರೋಡ್‌ಸ್ಟರ್ ಥೀಮ್ ಪ್ರತಿಬಿಂಬಿಸುತ್ತಿರುವ ಈ ಬೈಕ್ ಒಂದೇ ನೋಟಕ್ಕೆ ಮನಸೂರೆಗೊಳ್ಳುವಂತಿದೆ. ಕ್ಲಾಸಿಕ್ 350 ಬೈಕ್‌ನ ಪ್ರತಿಯೊಂದು ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ. 60ರ ದಶಕದಲ್ಲಿದ್ದ ಹೆಡ್‌ಲೈಟ್ ವಿನ್ಯಾಸವನ್ನು ಮರುಸ್ಥಾಪಿಸಲಾಗಿದೆ. ಪ್ರಮುಖವಾಗಿ ಟ್ಯಾಂಕ್‌ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಬೈಕ್ ಅಂದವನ್ನು ಹೆಚ್ಚಿಸಿದೆ. ಸ್ವಿಂಗ್ ಆರ್ಮ್, ಟೈಯರ್ ಹಾಗೂ ಡ್ಯುಯೆಲ್ ಸೀಟ್ ಹೊಂದಿದೆ.
ಬಾಬರ್ ಹಾಗೂ ಕ್ರ್ಯೂಸರ್ ಎರಡೂ ಶೈಲಿಯ ಮಿಶ್ರಣ ಇದಾಗಿದೆ. ಇದರ ಸೈಲೆನ್ಸರ್ ಶಬ್ದ ತುಸು ಹೆಚ್ಚಿದ್ದಂತೆ ಕಾಣುತ್ತಿದೆ. ಹೀಗಾಗಿ ಬೆಂಗಳೂರು ರಸ್ತೆಯಲ್ಲಿ ಇದು ಮಾನ್ಯವೇ ಅನ್ನೋದು ಸ್ಪಷ್ಟವಾಗಬೇಕಿದೆ. ಇನ್ನುಳಿದಂತೆ ಕಸ್ಟಮ್ಸ್ ಬೈಕ್ ಅತ್ಯಾಕರ್ಷ ಹಾಗೂ ಕ್ಲಾಸಿಕ್ 350 ಬೈಕ್ ರೈಡ್ ಮಾಡಿದಷ್ಟೇ ಸುಲಭವಾಗಿದೆ. ಲಾಂಗ್ ರೈಡ್ ಹಾಗೂ ಸಿಟಿ ರೈಡ್‌ಗೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಇದರ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಪವರ್ ಕೊಂಚ ಏರಿಸಲಾಗಿದೆ.
ಈ ಕಸ್ಟಮೈಸ್ಡ್ ಬೈಕನ್ನು ಎಂಎಸ್ ಕಸ್ಟಮ್ಸ್ ನಿರ್ಮಿಸಿದೆ. ರಾಯಲ್ ಎನ್‌ಫೀಲ್ಡ್ ಮೂಲ ವಿನ್ಯಾಸ ಹಾಗೂ ದಕ್ಷತೆಗೆ ಧಕ್ಕೆ ಬರದಂತೆ ನಿರ್ಮಾಣಮಾಡಲಾಗಿದೆ. ಬೆಂಗಳೂರಿನ ಗ್ರಾಹಕರಿಗೆ ಈ ಬೈಕ್ ಬೇಕಾದಲ್ಲಿ ಎಂಎಸ್ ಕಸ್ಟಮ್ಸ್ ಅವರನ್ನು ಸಂಪರ್ಕಿಸಿದರೆ ಸಾಕು. ಆದರೆ ಕೆಲ ತಿಂಗಳು ಕಾಯಬೇಕು ಅಷ್ಟೆ.
2008ರಲ್ಲಿ ಲಾಲ್ಮಲ್ಸಾವ್ಮಾ MS ಕಸ್ಟಮ್ಸ್ ಸ್ಥಾಪಿಸಿದರು. ಟೋಮೊಬೈಲ್ ಇಂಜಿನಿಯರ್ ಮತ್ತು ಎಲ್ಲಾ ಪ್ರಕಾರಗಳಲ್ಲಿ ಮೋಟಾರ್‌ಸೈಕಲ್ ನಿರ್ಮಿಸುವಲ್ಲಿ ಪರಿಣಿತರಾಗಿದ್ದಾರೆ. ಮಿಜೋರಾಂನ ಐಜ್ವಾಲ್‌ನಲ್ಲಿರುವ ಎಂಎಸ್ ಕಸ್ಟಮ್ಸ್ ಎಂಜಿನೀಯರಿಂಗ್, ಡಿಸೈನ್ ಎಲ್ಲವನ್ನೂ ಮಾಡುತ್ತಾರೆ. ಇದೀಗ ರಿಇಮ್ಯಾಜಿನ್ ಎಂಎಸ್ ಕಸ್ಟಮ್ ಬೈಕ್ ಕೂಡ ಇವರೇ ಅಭಿವೃದ್ಧಿ ಪಡಿಸಿ ಅನಾವರಣ ಮಾಡಿದ್ದಾರೆ.
ಹಳೇ ರೂಪ, ಹೊಸ ಶಕ್ತಿಯ ದೈತ್ಯ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650!
ಕೊರೋನಾ ಕಾರಣ ಎಂಎಸ್ ಕಸ್ಟಮ್ಸ್ ಬೈಕ್ ಅನಾವರಣ ಕೊಂಚ ತಡವಾಗಿದೆ. ಆದರೆ ಅದ್ಧೂರಿಯಾಗಿ ಅನಾವರಣಗೊಂಡಿದೆ. ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ನಲ್ಲಿ ನಾಲ್ಕು ವಿಶಿಷ್ಟ ಕಸ್ಟಮ್ ಬಿಲ್ಡ್‌ಗಳನ್ನು ಪ್ರದರ್ಶಿಸುತ್ತದೆ. ರಾಯಲ್ ಎನ್‌ಫೀಲ್ಡ್ ಕಸ್ಟಮ್ ವರ್ಲ್ಡ್ ಉಪಕ್ರಮದ ಅಡಿಯಲ್ಲಿ ಇದು ಹೊಸ ಅಧ್ಯಾಯವನ್ನು ಗುರುತಿಸುತ್ತದೆ. ಈ ಯೋಜನೆಗಾಗಿ ಬ್ರ್ಯಾಂಡ್ ಭಾರತದ ಕೆಲವು ಪ್ರಮುಖ ಕಸ್ಟಮ್-ಬಿಲ್ಡರ್‌ಗಳೊಂದಿಗೆ ಸಹಕರಿಸುತ್ತದೆ
ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಕ್ಲಾಸಿಕ್ 350 ನಲ್ಲಿ ನಾಲ್ಕು ವಿಭಿನ್ನವಾಗಿ ವಿಶಿಷ್ಟವಾದ ಕಸ್ಟಮ್ ಬಿಲ್ಡ್‌ಗಳನ್ನು ಏಕಕಾಲದಲ್ಲಿ ನಾಲ್ಕು ಸ್ಥಳಗಳಲ್ಲಿ - ದೆಹಲಿ, ಮುಂಬೈ, ಪುಣೆ ಮತ್ತು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಭಾರತದಲ್ಲಿನ ಕೆಲವು ಪ್ರಸಿದ್ಧ ಮತ್ತು ಪ್ರಮುಖ ಕಸ್ಟಮ್-ಬಿಲ್ಡರ್‌ಗಳಿಂದ ನಿರ್ಮಿಸಲಾಗಿದೆ - ರಜಪೂತಾನ ಕಸ್ಟಮ್ ಮೋಟಾರ್‌ಸೈಕಲ್ಸ್, ಓಲ್ಡ್ ಡೆಲ್ಲಿ ಮೋಟಾರ್‌ಸೈಕಲ್ಸ್ ಕಂ., ನೀವ್ ಮೋಟಾರ್‌ಸೈಕಲ್ಸ್ ಮತ್ತು ಎಂಎಸ್ ಕಸ್ಟಮ್ಸ್ ನಾಲ್ಕು ಕಸ್ಟಮ್ಸ್ ಬೈಕ್ ನಿರ್ಮಾಣ ಮಾಡಿ ಅನಾವರಣ ಮಾಡಿದೆ.
ಪ್ರತಿಯೊಂದು ಕಸ್ಟಮ್ ಭಾಗವು ಕೈಯಿಂದ ನಿರ್ಮಿಸಲ್ಪಟ್ಟಿದೆ ಮತ್ತು ವಿವಿಧ ಯುಗಗಳ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿಂದ ಸ್ಫೂರ್ತಿ ಪಡೆಯುತ್ತದೆ. ಹಳೆಯ ಶಾಲಾ ಗಿರ್ಡರ್ ಸಸ್ಪೆನ್ಶನ್‌ನಿಂದ ಮುಂಭಾಗ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ಗಳು, ಲೆದರ್ ಸೀಟ್‌ನಿಂದ ವೇಗದ ಸ್ಟಾಕ್ ಮತ್ತು ಫುಟ್‌ರೆಸ್ಟ್‌ಗಳವರೆಗೆ ಎಲ್ಲಾ ಹೊಸ ಇಂಧನ ಟ್ಯಾಂಕ್, ಹಿಂಭಾಗದ ಸಸ್ಪೆನ್ಷನ್, ಟೂಲ್ ಬಾಕ್ಸ್‌ಗಳು ಮತ್ತು ಚಾಸಿಸ್, ಮೋಟಾರ್‌ಸೈಕಲ್ ಅನ್ನು ವಿವರವಾಗಿ ವಿವರಿಸಲಾಗಿದೆ ಮತ್ತು ಸಂಯೋಜಿಸಲಾಗಿದೆ.