ಕೈಗೆಟುಕುವ ದರದ ಹೀರೋ ಮೋಟೋಕಾರ್ಪ್ ಪ್ಯಾಶನ್ XTEC ಬೈಕ್ ಬಿಡುಗಡೆ!

By Suvarna News  |  First Published Jun 25, 2022, 4:24 PM IST
  • ಗರಿಷ್ಠ ಮೈಲೇಜ್ ನೀಡಬಲ್ಲ ಹೀರೋ ಪ್ಯಾಶನ್
  • ನೂತ ಬೈಕ್ ಬೆಲೆ 74 ಸಾವಿರ ರೂ(ಎಕ್ಸ್ ಶೋ ರೂಂ)
  • ಕನೆಕ್ಟಿವಿಟಿ ಫೀಚರ್ಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ

ಬೆಂಗಳೂರು(ಜೂ.25): ಹೀರೋ ಪ್ಯಾಶನ್ ಬೈಕ್ ಭಾರತದಲ್ಲಿ ಅತ್ಯಂತ ಜನಪ್ರಿಯ. ಆತ್ಯಾಕರ್ಷಕ ಲುಕ್, ಮೈಲೇಜ್ ಜೊತೆಗೆ ಕೈಗೆಟುಕವ ಬೆಲೆ  ಈ ಬೈಕ್‌ನ ಸ್ಪೆಷಾಲಿಟಿ. ಇದೀಗ ಹೀರೋ ಮೋಟೋಕಾರ್ಪ್ ಹೊಚ್ಚ ಹೊಸ ಪ್ಯಾಶನ್  XTEC ಬೈಕ್ ಬಿಡುಗಡೆ ಮಾಡಿದೆ. ನೂತನ ಹೀರೋ ಪ್ಯಾಶನ್ XTEC ಬೈಕ್ ಬೆಲೆ 74590 ರೂಪಾಯಿ (ಡ್ರಮ್ ಬ್ರೇಕ್) ಹಾಗೂ  78990 ರೂಪಾಯಿ (ಡಿಸ್ಕ್ ಬ್ರೇಕ್) ಹೊಂದಿದೆ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂಗಳಾಗಿವೆ. ಇದರ ಜೊತೆಗೆ 5 ವರ್ಷ ವಾರಂಟಿಯೂ ಲಭ್ಯವಿದೆ. 

ಹೊಸ ಹೀರೋ Passion 'XTec'  ಶೈಲಿ, ಸುರಕ್ಷತೆ, ಸಂಪರ್ಕ ಮತ್ತು ಸೌಕರ್ಯಗಳ ಪರಿಪೂರ್ಣ ಸಂಯೋಜನೆಯಾಗಿದೆ. ಮೋಟಾರ್‍ಸೈಕಲ್ ವಿಭಾಗ-ಪ್ರಥಮ ಪ್ರೊಜೆಕ್ಟರ್ LEDಹೆಡ್‍ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಪೂರ್ಣ-ಡಿಜಿಟಲ್ ಇನ್‍ಸ್ಟ್ರುಮೆಂಟ್ ಕ್ಲಸ್ಟರ್, ಎಸ್‍ಎಂಎಸ್ ಮತ್ತು ಕರೆ ಎಚ್ಚರಿಕೆಗಳು, ರಿಯಲ್-ಟೈಮ್ ಮೈಲೇಜ್ ಸೂಚಕ, ಕಡಿಮೆ-ಇಂಧನ ಸೂಚಕ, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಮತ್ತು ಸೇವಾ ಜ್ಞಾಪನೆಯಂತಹ ವೈಶಿಷ್ಟ್ಯಗಳೊಂದಿಗೆ ತುಂಬಿದೆ. ಹೊಸ ವಿಭಾಗ-ಪ್ರಥಮ ವೈಶಿಷ್ಟ್ಯಗಳ ಸಂಗ್ರಹ ಮತ್ತು Passion  ಬ್ರ್ಯಾಂಡ್‍ನ ನಂಬಿಕೆ ಮತ್ತು ವಿಶ್ವಾಸಾರ್ಹತೆ, Passion 'XTec'  ಅನ್ನು ವಿಭಾಗದಲ್ಲಿ ಇತರರಿಗಿಂತ ಎದ್ದು ಕಾಣುವಂತೆ ಮಾಡುತ್ತದೆ.

Latest Videos

undefined

Hero Bike ಹೊಸ ಅವತಾರದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ಬಿಡುಗಡೆ!

ಅದರ ಹೊಸ ವೈಶಿಷ್ಟ್ಯಗಳು ಮತ್ತು ಸ್ಮಾರ್ಟ್ ವಿನ್ಯಾಸದೊಂದಿಗೆ  Passion XTec  ದೇಶದ ಯುವಕರನ್ನು ಪ್ರಚೋದಿಸುವ ಒಂದು ಬಲವಾದ ಉತ್ಪನ್ನವಾಗಿದೆ. ನಮ್ಮ ಶ್ರೇಣಿಯ 'XTec' ಉತ್ಪನ್ನಗಳಾದ Splendor+ XTec, Glamour 125 XTec, Pleasure+ 110 XTec  ಮತ್ತು Destini 125 XTec ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದಿವೆ ಮತ್ತು Passion XTec  ಈ ಪ್ರವೃತ್ತಿಯನ್ನು ಮುಂದುವರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೀರೋ ಮೋಟೋಕಾರ್ಪ್‍ನ ಕಾರ್ಯತಂತ್ರ ಮತ್ತು ಜಾಗತಿಕ ಉತ್ಪನ್ನ ಯೋಜನೆಯ ಮುಖ್ಯಸ್ಥ ಮಾಲೋ ಲೆ ಮ್ಯಾಸನ್ ಹೇಳಿದ್ದಾರೆ. 

Hero Passion  ಒಂದು ಐಕಾನಿಕ್ ಬ್ರ್ಯಾಂಡ್ ಆಗಿದೆ ಮತ್ತು ಒಂದು ದಶಕದಿಂದ ಗ್ರಾಹಕರ ಬೃಹತ್ತಾದ ವಿಶ್ವಾಸವನ್ನು ಪಡೆದಿದೆ. ಅದರ ಹೊಸ ಶೈಲಿ ಮತ್ತು ಹೊಸ ಮನೋಭಾವದೊಂದಿಗೆ, Passion XTec  ಹೊಸ ಯುಗದ ಸವಾರರನ್ನು ಆಕರ್ಷಿಸುತ್ತದೆ ಮತ್ತು ಇತ್ತೀಚಿನ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ, ಇದು ವಿಭಾಗಕ್ಕೆ ಮಾನದಂಡವನ್ನು ರಚಿಸುತ್ತದೆ. . Passion XTec  ದೇಶದ ಮೋಟಾರ್‍ಸೈಕಲ್ ವಿಭಾಗದಲ್ಲಿ ನಮ್ಮ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಹೀರೊ ಮೋಟೊಕಾರ್ಪ್‍ನ ಮುಖ್ಯ ಅಭಿವೃದ್ಧಿಯ ಅಧಿಕಾರಿ ರಂಜಿವ್‍ಜಿತ್ ಸಿಂಗ್ ಹೇಳಿದರು,

Hero Destini 125 XTEC ಹೊಚ್ಚ ಹೊಸ ಹೀರೋ ಡೆಸ್ಟಿನಿ 125 XTEC ಸ್ಕೂಟರ್ ಬಿಡುಗಡೆ!

ಹೀರೋ Passion XTec  
ಇಂದಿನ ಪೀಳಿಗೆಗಾಗಿ ವಿನ್ಯಾಸಗೊಳಿಸಲಾಗಿರುವ, ಕಾರ್ಯಕ್ಷಮತೆ-ಆಧಾರಿತ ಮತ್ತು ಸದೃಢವಾದ ಹೊಸ 110 cc Passion XTec  ಅನುಕೂಲಕರ, ಸುರಕ್ಷ ಮತ್ತು ಉಪಯುಕ್ತತೆಯ ವೈಶಿಷ್ಟ್ಯಗಳೊಂದಿಗೆ ತುಂಬಿದೆ, ಇದು ಸಮಸ್ಯೆ-ರಹಿತ ಮತ್ತು ಆನಂದದಾಯಕ ಸವಾರಿಯ ಅನುಭವವನ್ನು ನೀಡಲು ನಿರಂತರವಾಗಿ ಸಂಯೋಜಿತಗೊಂಡಿದೆ.

ಕನೆಕ್ಟಿವಿಟಿ
Passion XTec  ನೊಂದಿಗೆ, ಸವಾರರು ವಾಹನ ಮತ್ತು ಕನೆಕ್ಟಿವಿಟಿ ಕಾರ್ಯಗಳನ್ನು ತ್ವರಿತವಾಗಿ ಮತ್ತು ಅನುಕೂಲಕರವಾಗಿ ಪ್ರವೇಶಿಸಬಹುದು. ಬ್ಲೂ ಬ್ಯಾಕ್‍ಲೈಟ್‍ನೊಂದಿಗೆ ವಿಭಾಗ-ಪ್ರಥಮ ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಸಂಯೋಜಿತ USB ಚಾರ್ಜಿಂಗ್ ಪೋರ್ಟ್ ಜೊತೆಗೆ ಕನ್ಸೋಲ್ ಬ್ಲೂಟೂತ್ ಕನೆಕ್ಟಿವಿಟಿ, ಕರೆ ಮಾಡುವವರ ಹೆಸರು, ಮಿಸ್ಡ್ ಕಾಲ್ ಮತ್ತು ಎಸ್‍ಎಂಎಸ್ ಅಧಿಸೂಚನೆಗಳೊಂದಿಗೆ ಫೋನ್ ಕರೆ ಎಚ್ಚರಿಕೆಗಳನ್ನು ಸಹ ನೀಡುತ್ತದೆ. ಇದು ಫೋನ್ ಬ್ಯಾಟರಿ ಶೇಕಡಾವಾರು, ನೈಜ-ಸಮಯದ ಮೈಲೇಜ್ ಸೂಚಕ ಮತ್ತು ಸೇವಾ ವೇಳಾಪಟ್ಟಿ ಜ್ಞಾಪನೆ ಮತ್ತು ಕಡಿಮೆ ಇಂಧನ ಸೂಚಕವನ್ನು ಸಹ ಪ್ರದರ್ಶಿಸುತ್ತದೆ. 

ಸುರಕ್ಷತೆ
ಸವಾರ ಮತ್ತು ಪಿಲಿಯನ್ ಇಬ್ಬರಿಗೂ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ, Passion Pro XTec  ನಲ್ಲಿ ಸೈಡ್-ಸ್ಟ್ಯಾಂಡ್ ದೃಶ್ಯ ಸೂಚನೆ ಮತ್ತು 'ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್' ಗಳಿವೆ. ಅಷ್ಟೇ ಅಲ್ಲದೆ, ಉತ್ತಮ ನಿರ್ವಹಣೆಗಾಗಿ, ಮೋಟಾರ್‍ಸೈಕಲ್, ಡಿಸ್ಕ್ ಬ್ರೇಕ್ ಮತ್ತು ಕಾಂಬಿ ಬ್ರೇಕಿಂಗ್ ಸಿಸ್ಟಮ್ (CBS)  ಆಯ್ಕೆಯೊಂದಿಗೆ ಬರುತ್ತದೆ.

ವಿನ್ಯಾಸ
ಹೊಸ Passion XTec   ವಿಭಾಗ-ಪ್ರಥಮ ಪ್ರೊಜೆಕ್ಟರ್ LED ಹೆಡ್‍ಲ್ಯಾಂಪ್‍ಗಳನ್ನು ಹೊಂದಿದ್ದು, ಸಾಂಪ್ರದಾಯಿಕ ಹ್ಯಾಲೊಜೆನ್ ಲ್ಯಾಂಪ್‍ಗಿಂತ 12% ಉದ್ದದ ಕಿರಣಗಳೊಂದಿಗೆ ಉತ್ತಮ ಬೆಳಕನ್ನು ನೀಡುತ್ತದೆ. ಹೊಸ ಹೆಡ್‍ಲ್ಯಾಂಪ್ ವಿನ್ಯಾಸವು ಮೋಟಾರ್‍ಸೈಕಲ್‍ನ ಸ್ಪೋರ್ಟಿನೆಸ್ ಮತ್ತು ಏರೋಡೈನಾಮಿಕ್ಸ್ ಅನ್ನು ಹೆಚ್ಚಿಸುತ್ತದೆ. ಮೋಟಾರ್‍ಸೈಕಲ್ ಕ್ರೋಮ್ 3D ಬ್ರ್ಯಾಂಡಿಂಗ್ ಮತ್ತು ರಿಮ್ ಟೇಪ್ ಅನ್ನು ಹೊಂದಿದ್ದು, ಅದು ಇದರ ಐಷಾರಾಮಿ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಇಂಜಿನ್
ಹೊಸ Passion Pro XTec, 9 BHP @ 7500 RPM  ನ ಗಮನಾರ್ಹ ಪವರ್ ಔಟ್‍ಪುಟ್ ಅನ್ನು ಉತ್ಪಾದಿಸುವ 110 cc BS-VI  ಅನುಸರಣೀಯ ಎಂಜಿನ್‍ನೊಂದಿಗೆ ಬರುತ್ತದೆ ಹಾಗೂ ಹೆಚ್ಚಿನ ಕಾರ್ಯಕ್ಷಮತೆಯ ರೈಡ್‍ಗಾಗಿ 9.79 NM @ 5000  ಅವಶ್ಯಕ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರಾಂಡ್ ಭರವಸೆಯನ್ನು ನೀಡುವುದರೊಂದಿಗೆ, ಹೊಸ Passion Pro XTec  ಉತ್ತಮ ಇಂಧನ ದಕ್ಷತೆಗಾಗಿ i3S  ಪೇಟೆಂಟ್ ತಂತ್ರಜ್ಞಾನದೊಂದಿಗೆ ಬರುತ್ತದೆ
 

click me!