ಕೇವಲ 4999 ರೂ.ಗೆ ಬುಕ್ ಮಾಡಿ ಹೊಸ ಟ್ರಿಯಂಫ್ ಬೊನ್ನೆವಿಲ್ T40 ಬೈಕ್, ಎನ್‌ಫೀಲ್ಡ್‌ಗೆ ನಡುಕ

Published : Oct 08, 2026, 02:56 PM IST
New Triumph Bonneville T40

ಸಾರಾಂಶ

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ನಡುಕು ಶುರುವಾಗಿದೆ. ಟ್ರಯಂಫ್ ಇಗೀಗ ಬೊನ್ನೆವಿಲ್ ಟಿ40 ಬೈಕ್ ಬಿಡುಗಡೆ ಮಾಡಿದೆ. ಕೇವಲ 4,999 ರೂಪಾಯಿಗೆ ಹೊಸ ಬೈಕ್ ಬುಕಿಂಗ್ ಮಾಡಬಹುದು. ಹೊಸ ಬೈಕ್ ವಿಶೇಷತೆ ಏನು?

ಬೆಂಗಳೂರು (ಅ.08) ಟ್ರಯಂಫ್ ಬೊನ್ನೆವಿಲ್ ಟಿ40 ಬೈಕ್ ಬಿಡುಗಡೆಯಾಗಿದೆ. ಅತ್ಯಂತ ಆಕರ್ಷಕ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್ ಇದಾಗಿದೆ. ರೆಟ್ರೋ ಶೈಲಿಯಲ್ಲಿರುವ ಈ ಬೈಕ್ ಬುಕಿಂಗ್ ಆರಂಭಗೊಂಡಿದೆ. ಕೇವಲ 4,999 ರೂಪಾಯಿಗೆ ಹೊಸ ಟ್ರಯಂಫ್ ಬೊನ್ನೆವಿಲ್ ಟಿ40 ಬೈಕ್ ಬುಕಿಂಗ್ ಮಾಡಬಹುದು. ಅಧಿಕೃತ ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಬಹುದು.

ಹೊಸ ಬೊನ್ನೆವಿಲ್ ಟಿ40 ಬೈಕ್ ಬೆಲೆ

ಟ್ರಯಂಫ್ ಬೊನ್ನೆವಿಲ್ ಟಿ40 ಬೈಕ್ ಬೆಲೆ 2.80 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಆಕರ್ಷಕ ಬೆಲೆಯಲ್ಲಿ ಟ್ರಫಂಯ್ ಬೊನ್ನೆವಿಲ್ ಟಿ40 ಬೈಕ್ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್, ಜಾವಾ ಮೋಟಾರ್‌ಸೈಕಲ್, ಹೋಂಡಾ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಟ್ರಯಂಫ್ ಇದೀಗ ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುತ್ತಿದೆ.

ಬೊನ್ನೆವಿಲ್ ಟಿ20 ಬೈಕ್ 349ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಬಳಸಲಾಗಿದೆ. ಟ್ರಯಂಫ್ ಸ್ಪೆಷಲ್ ಟಿಆರ್ ಸೀರಿಸ್ ಎಂಜಿನ್ ಇದಾಗಿದೆ. 29 ಹೆಚ್‌ಪಿ ಪವರ್ ಹಾಗೂ 31.2 ಎನ್ಎಂ ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ವೈರ್ ಟೆಕ್ನಾಲಜಿ ಹಾಗೂ ಸ್ಲಿಪ್ ಹಾಗೂ ಅಸಿಸ್ಟ್ ಕ್ಲಚ್ ಹೊಂದಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್, ಡಿಸ್ಕ್ ಬ್ರೇಕ್ ಎಬಿಎಸ್, 18 ಇಂಚಿನ ಫ್ರಂಟ್ ಹಾಗೂ 17 ಇಂಚಿನ್ ರೇರ್ ಟೈಯರ್ ಹೊಂದಿದೆ.

ಟಿಎಫ್‌ಟಿ ಇನ್ಸುಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ನ್ಯಾವಿಗೇಶನ್, ಫೋನ್ ಕಂಟ್ರೋಲ್, ಮ್ಯೂಸಿಕ್ ಫಂಕ್ಷನ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. 5 ರೈಡಿಂಗ್ ಮೊಡ್, ಕ್ರೂಸ್ ಕಂಟ್ರೋಲ್, ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್ ಫೀಚರ್ಸ್ ಹೊಂದಿದೆ. 790ಎಂಎಂ ಸೀಟ್ ಹೈಟ್, ಡ್ಯುಯೆಲ್ ಕಲರ್ ಆಯ್ಕೆಗಳು ಲಭ್ಯವಿದೆ.

ಯಾವ ಬೈಕ್‌ಗೆ ಪ್ರತಿಸ್ಪರ್ಧಿ

ಟ್ರಯಂಫ್ ಬೊನ್ನೆವಿಲ್ ಟಿ40 ಬೈಕ್ ಜನಪ್ರಿಯ ಬೈಕ್‌ಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಹೊಂಡ ಸಿಬಿ350ಸಿ, ಜಾವಾ 350 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

PREV
Read more Articles on
click me!

Recommended Stories

ಪಲ್ಸರ್ 125 ಸೇರಿ ಬಜಾಜ್ ಬೈಕ್‌ಗಳಿಗೆ ಹಬ್ಬದ ಆಫರ್, 12000 ರೂ ಡಿಸ್ಕೌಂಟ್, 5 ಫ್ರೀ ಸರ್ವೀಸ್
₹83,000 ಬೆಲೆಯ ಸ್ಕೂಟರ್‌ಗೆ ಕಳೆದುಹೋದ ಸಿಟಿ ಮಂದಿ, ಎದ್ನೋ ಬಿದ್ನೋ ಎಂದು ಖರೀದಿಸ್ತಿರೋದು ಯಾಕೆ?