
ನವದೆಹಲಿ (ಅ.08) ಹಬ್ಬದ ಪ್ರಯುಕ್ತ ಬಜಾಜ್ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಬಜಾಜ್ ಪಲ್ಸರ್ 125, ಪಲ್ಸರ್ 150 ಸೇರಿದಂತೆ ಆಯ್ದ ಬೈಕ್‌ಗಳಿಗೆ ಭರ್ಜರಿ ಆಫರ್ ನೀಡಲಾಗಿದೆ. ಕೇವಲ ಕ್ಯಾಶ್ ಡಿಸ್ಕೌಂಟ್ ಮಾತ್ರವಲ್ಲ ಪೊಸೆಸಿಂಗ್ ಫೀ ಉಚಿತ, ಹಾಗೂ 5 ಸರ್ವೀಸ್ ಕೂಡ ಉಚಿತ ಘೋಷಣೆ ಮಾಡಲಾಗಿದೆ. ಇದರಿಂದ ಗ್ರಾಹಕರು ಅತೀ ಕಡಿಮೆ ಬೆಲೆ ಹಾಗೂ ಹಲವು ಉಚಿತ ಸರ್ವೀಸ್ ಮೂಲಕ ಬೈಕ್ ಖರೀದಿ ಸಾಧ್ಯವಾಗಿದೆ. ಆಯ್ದ ಬೈಕ್‌ಗಳಿಗೆ ಗರಿಷ್ಠ 12 ಸಾವಿರ ರೂಪಾಯಿ ವರೆಗೆ ಆಫರ್ ನೀಡಲಾಗಿದೆ. ಹಬ್ಬದ ಆಫರ್ ಕಾರಣ ನಿಗಿದಿತ ಅವಧಿಗೆ ಮಾತ್ರ ಲಭ್ಯವಿದೆ. ಬಜಾಜ್ ಅಧೀಕೃತ ಡೀಲರ್ ಬಳಿ ಆಫರ್ ಲಭ್ಯವಿದೆ.
ಬಜಾಜ್ ಪಲ್ಸಾರ್ ಬೈಕ್‌ನಲ್ಲಿ ಪಲ್ಸರ್ 125, ಪಲ್ಸರ್ ಎನ್ಎಸ್ 125, ಪಲ್ಸರ್ 150, ಎನ್ 160 S/SS, ಎನ್ಎಸ್ 160, ಎನ್ಎಸ್ 200, ಎನ್250, ಪಿ220ಎಫ್, ಆರ್‌ಎಸ್ 200, ಎನ್ಎಸ್ 400ಝೆಡ್ ಬೈಕ್‌ಗಳಿಗೆ ಅನ್ವಯವಾಗಲಿದೆ. ಕೆಲ ಮಾಡೆಲ್‌ಗಳಿಗೆ ಡಿಸ್ಕೌಂಟ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ಗರಿಷ್ಠ 12 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್ ನೀಡಲಾಗಿದೆ.
ಬಜಾಜ್ ತನ್ನ ಆಯ್ದ ಬೈಕ್‌ಗಳಿಗೆ ಮೂರು ಬಗೆಯ ಆಫರ್ ನೀಡಿದೆ. ನಗದು ಡಿಸ್ಕೌಂಟ್, ನೋ ಪ್ರೊಸೆಸಿಂಗ್ ಫೀ ಹಾಗೂ ಐದು ಉಚಿತ ಸರ್ವೀಸ್ ಆಫರ್ ನೀಡಲಾಗಿದೆ. ಸಾಲದ ಮೂಲಕ ಬೈಕ್ ಖರೀದಿಸುವ ಗ್ರಾಹಕರಿಗೆ ನಿಲ್ ಪ್ರೊಸೆಸಿಂಗ್ ಫೀ ಸಹಕಾರಿಯಾಗಿದೆ. ಲೋನ್ ಪ್ರೊಸೆಶಿಂಗ್ ಶುಲ್ಕ ಸಂಪೂರ್ಣ ಉಚಿತವಾಗಿದೆ. ಹೀಗಾಗಿ ಗ್ರಾಹಕರು ಯಾವುದೇ ಅಡೆ ತಡೆ ಇಲ್ಲದೆ, ಅತೀ ಕಡಿಮೆ ಬೆಲೆ ಹಾಗೂ ಲೋನ್ ಶುಲ್ಕ ತಲೆನೋವಿನಿಂದ ಪಾರಾಗಬಹುದು. ಕ್ಯಾಶ್ ಡಿಸ್ಕೌಂಟ್ ಗರಿಷ್ಠ 12 ಸಾವಿರ ರೂಪಾಯಿ. ಈ ಪೈಕಿ ಪ್ರತಿ ಮಾಡೆಲ್ ಮೇಲೆ ವ್ಯತ್ಯಾಸವಾಗಲಿದೆ. ಇನ್ನು ಬೈಕ್ ಖರೀದಿಸಿದ ಬಳಿಕ 5 ಸರ್ವೀಸ್ ಉಚಿತವಾಗಿ ನೀಡಿದೆ. ಇದರಿಂದ ನಿರ್ವಹಣೆಯೂ ಸುಲಭವಾಗಿದೆ.
ಬಜಾಜ್ ಭಾರತದಲ್ಲಿ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ. ಪಲ್ಸರ್ ಸೇರಿದಂತೆ ಹಲವು ಮಾಡೆಲ್ ಬೈಕ್ ಲಭ್ಯವಿದೆ. ಸ್ಪೋರ್ಟ್ಸ್ ಬೈಕ್ ಸೇರಿದಂತೆ ಪ್ರತಿ ದಿನ ಬಳಕೆ ಬೈಕ್ ಮೂಲಕ ಬಜಾಜ್ ಗರಿಷ್ಠ ಮಾರುಕಟ್ಟೆ ಪಾಲು ಹೊಂದಿದೆ. ಇದೇ ವೇಳೆ ಬಜಾಜ್ ಚೇತಕ್ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತಿದೆ. ಇದೀಗ ಹಬ್ಬದ ಪ್ರಯುಕ್ತ ಆಫರ್ ನೀಡಲಾಗಿದೆ. ಸದ್ಯ ಆಫರ್ ಪಿರಿಯೆಡ್ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಹಬ್ಬದ ಆಫರ್ ಕಾರಣ ಲಿಮಿಟೆಡ್ ಪಿರಿಯೆಟ್ ಇರಲಿದೆ.
ಬಜಾಜ್ ಅಧಿಕೃತ ಡೀಲರ್ ಮೂಲಕ ಬೈಕ್ ಖರೀದಿಸುವ ವೇಳೆ ಡಿಸ್ಕೌಂಟ್ ಕುರಿತು ಮಾಹಿತಿ ಪಡೆದುಕೊಳ್ಳಿ. ಸಾಮಾನ್ಯವಾಗಿ ಆಫರ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ, ಸ್ಟಾಕ್ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಖರೀದಿಗೂ ಮೊದಲು ಹತ್ತಿರದ ಅಧಿಕೃತ ಡೀಲರ್ ಬಳಿ ವಿಚಾರಿ ಮಾಹಿತಿ ಖಚಿತಪಡಿಸಿಕೊಳ್ಳಿ.