ಸ್ಪೋರ್ಟ್ಸ್‌ ಬೈಕ್‌ ಪ್ರೇಮಿಗಳಿಗೆ ಖುಷಿ ಸುದ್ದಿ , ಸುಜುಕಿ ಹಯಾಬುಸಾ ಸ್ಪೆಷಲ್ ಎಡಿಷನ್ ಲಾಂಚ್

Published : Sep 29, 2026, 02:11 PM IST
New Suzuki Hayabusa

ಸಾರಾಂಶ

New Suzuki Hayabusa : ಸ್ಪೋರ್ಟ್ಸ್ ಬೈಕ್ ಪ್ರಿಯರಿಗೆ ಖುಷಿ ಸುದ್ದಿ ಒಂದಿದೆ. ನಿಮ್ಮೆಲ್ಲ ಹಯಾಬುಸಾದ ಹೊಸ ಆಡಿಷನ್ ಬಿಡುಗಡೆಯಾಗಿದೆ. ಹಾಗೇ ಹಳೆ ಹಯಾಬುಸಾಗೆ ಅಪ್‌ಡೇಟ್‌ ಸಿಕ್ಕಿದೆ.

ಮಿಲೆನಿಯಲ್ಸ್ಗೆ ಇಷ್ಟವಾದ ಸ್ಪೋರ್ಟ್ಸ್ ಬೈಕ್ಗಳ ಬಗ್ಗೆ ಕೇಳಿದ್ರೆ, ಬಹುತೇಕರು ಸುಜುಕಿ ಹಯಾಬುಸಾ ಹೆಸರನ್ನು ಹೇಳ್ತಾರೆ. ಅನೇಕರಿಗೆ ಇದು ಕೇವಲ ಒಂದು ಬೈಕ್ ಅಲ್ಲ, ಸ್ಪೋರ್ಟ್ಸ್ ಬೈಕ್ಗಳಲ್ಲೇ ವಿಶೇಷ ಗುರುತನ್ನು ಹೊಂದಿರುವ ಬೈಕ್. ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಮಾರುಕಟ್ಟೆಯಲ್ಲಿ ಹಲವು ಬೈಕ್ಗಳು ಮತ್ತು ಸ್ಕೂಟರ್ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಹಯಾಬುಸಾಗೆ ವಿಶೇಷ ಸ್ಥಾನವಿದೆ. ಇದೀಗ ಕಂಪನಿ ಸುಜುಕಿ ಹಯಾಬುಸಾ ಸ್ಪೆಷಲ್ ಎಡಿಷನ್ ಅನ್ನು ಲಾಂಚ್ ಮಾಡಿದ್ದು, ಜೊತೆಗೆ ಸ್ಟ್ಯಾಂಡರ್ಡ್ ಹಯಾಬುಸಾವನ್ನೂ ಅಪ್ಡೇಟ್ ಮಾಡಿದೆ.

ಹಯಾಬುಸಾ ಸ್ಪೆಷಲ್ ಎಡಿಷನ್ ಬೆಲೆ ಎಷ್ಟು?

ಅಪ್ಡೇಟೆಡ್ ಸುಜುಕಿ ಹಯಾಬುಸಾ 2026 ಬೆಲೆ ಎಕ್ಸ್ ಶೋರೂಂನಲ್ಲಿ 18.99 ಲಕ್ಷ ರೂಪಾಯಿಯಾಗಿದೆ. ಇದರ ಸ್ಪೆಷಲ್ ಎಡಿಷನ್ ಬೆಲೆ 19.90 ಲಕ್ಷ ರೂಪಾಯಿ. ಈ ಬೆಲೆಗಳು ನವದೆಹಲಿಯ ಎಕ್ಸ್ ಶೋರೂಂ ಬೆಲೆಗಳಾಗಿವೆ. ಸ್ಟ್ಯಾಂಡರ್ಡ್ ವೆರಿಯಂಟ್ಗಿಂತ ಸ್ಪೆಷಲ್ ಎಡಿಷನ್ ಬೆಲೆ ಸುಮಾರು 91,000 ಯಷ್ಟು ಹೆಚ್ಚಿದೆ. ಎರಡೂ ವೆರಿಯಂಟ್ಗಳನ್ನು ಸುಜುಕಿ ಮೋಟಾರ್ಸೈಕಲ್ ಇಂಡಿಯಾ ಡೀಲರ್ಶಿಪ್ಗಳ ಮೂಲಕ ಖರೀದಿಸಬಹುದು.

ಸ್ಪೆಷಲ್ ಎಡಿಷನ್ನಲ್ಲಿ ಏನು ವಿಶೇಷ?

ಹಯಾಬುಸಾ ಸ್ಪೆಷಲ್ ಎಡಿಷನ್ ಎಕ್ಸ್ಕ್ಲೂಸಿವ್ ಪರ್ಲ್ ವಿಗರ್ ಬ್ಲೂ ಬಣ್ಣದಲ್ಲಿ ಲಭ್ಯವಾಗಲಿದೆ. ಇದರಲ್ಲಿ ವಿಶೇಷ ಡಿಕೇಲ್ಸ್ ಅಂದರೆ ಪ್ರೀಮಿಯಂ ಸ್ಟಿಕ್ಕರ್ಗಳು ಹಾಗೂ ವಿಭಿನ್ನ ಫಿನಿಶ್ ಹೊಂದಿರುವ ವೀಲ್ಸ್ ಸಿಗಲಿವೆ. ಇದರ ಮೂಲಕ ಸಾಮಾನ್ಯ ಹಯಾಬುಸಾಗಿಂತ ವಿಭಿನ್ನವಾದ ಹಾಗೂ ಹೆಚ್ಚು ಎಕ್ಸ್ಕ್ಲೂಸಿವ್ ಲುಕ್ ನೀಡಲು ಕಂಪನಿ ಪ್ರಯತ್ನಿಸಿದೆ.

ಅಪ್ಡೇಟ್ ಆದ ಸ್ಟ್ಯಾಂಡರ್ಡ್ ಹಯಾಬುಸಾ

ಸ್ಪೆಷಲ್ ಎಡಿಷನ್ ಜೊತೆಗೆ ಸ್ಟ್ಯಾಂಡರ್ಡ್ ವೆರಿಯಂಟ್ಗೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸ್ಟ್ಯಾಂಡರ್ಡ್ ಹಯಾಬುಸಾ ಇದೀಗ ಮೂರು ಹೊಸ ಕಲರ್ ಕಾಂಬಿನೇಷನ್ಗಳಲ್ಲಿ ಲಭ್ಯವಾಗಲಿದೆ. ಹೊಸ ಬಣ್ಣಗಳು ಮತ್ತು ಫಿನಿಶ್ಗಳಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಸಿಗಲಿವೆ ಎಂದು ಕಂಪನಿ ಹೇಳಿದೆ. ಈ ಬದಲಾವಣೆಗಳ ಮುಖ್ಯ ಉದ್ದೇಶ ಗ್ರಾಹಕರಿಗೆ ಹೆಚ್ಚು ಪ್ರೀಮಿಯಂ ಮತ್ತು ಎಕ್ಸ್ಕ್ಲೂಸಿವ್ ಓನರ್ಶಿಪ್ ಅನುಭವ ನೀಡುವುದಾಗಿದೆ.

ಬೈಕ್ನಲ್ಲಿ ಇನ್ನೇನು ಹೊಸದು?

ಅಪ್ಡೇಟ್ ಕೇವಲ ಬಣ್ಣ ಮತ್ತು ಡಿಸೈನ್ಗೆ ಸೀಮಿತವಾಗಿಲ್ಲ. ಬೈಕ್ನಲ್ಲಿ ಹೊಸ ಲಿಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿ ಹಗುರವಾಗಿದ್ದು, ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಹೆಚ್ಚು ಸ್ಥಿರವಾದ ವೋಲ್ಟೇಜ್ ನೀಡುತ್ತದೆ. ಇದರ ಜೊತೆಗೆ ಲಾಂಚ್ ಕಂಟ್ರೋಲ್ ಸಿಸ್ಟಮ್ ಮತ್ತು ಪವರ್ ಮೋಡ್ ಸೆಲೆಕ್ಟರ್ನಲ್ಲೂ ಅಪ್ಡೇಟ್ ಮಾಡಲಾಗಿದೆ.

ಹಯಾಬುಸಾದ ಸ್ಮಾರ್ಟ್ ಕ್ರೂಜ್ ಕಂಟ್ರೋಲ್ ಸಿಸ್ಟಮ್ಗೂ ಅಪ್ಡೇಟ್ ನೀಡಲಾಗಿದೆ. ಈಗ ಗೇರ್ ಶಿಫ್ಟ್ ಮಾಡುವ ಸಮಯದಲ್ಲೂ ಕ್ರೂಜ್ ಕಂಟ್ರೋಲ್ ಸಿಸ್ಟಮ್ ಆಕ್ಟಿವ್ ಆಗಿರಲಿದೆ. ಸುಜುಕಿ ಹಯಾಬುಸಾದಲ್ಲಿ 1340 ಸಿಸಿ, ಫ್ಯೂಯೆಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ಡ್, ಇನ್ಲೈನ್ 4-ಸಿಲಿಂಡರ್ DOHC ಎಂಜಿನ್ ನೀಡಲಾಗಿದೆ. ಇದಲ್ಲದೆ 6 ರೈಡಿಂಗ್ ಮೋಡ್ಸ್, ಕಾರ್ನರಿಂಗ್ ABS, ಲಾಂಚ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಕ್ರೂಜ್ ಕಂಟ್ರೋಲ್, ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಗಳು ಸಿಗಲಿವೆ.

PREV
Read more Articles on
click me!

Recommended Stories

Honda CB350 ಬೈಕ್‌ನ ಡಿಸೈನ್ ಯಾಕೆ ಹೀಗಿದೆ? ಈ ವಿನ್ಯಾಸ ಯಾರಿಗಾಗಿ ಮಾಡಿದ್ದು?
ಕೆಲವೇ ತಿಂಗಳಲ್ಲಿ ಹೊಸ ದಾಖಲೆ ಬರೆದ ಬೆಂಗಳೂರಿನ ಒಬೆನ್ ಎಲೆಕ್ಟ್ರಿಕ್ ಬೈಕ್, ಖರೀದಿಗೆ ಮುಗಿಬಿದ್ದ ಜನ