ಕೆಲವೇ ತಿಂಗಳಲ್ಲಿ ಹೊಸ ದಾಖಲೆ ಬರೆದ ಬೆಂಗಳೂರಿನ ಒಬೆನ್ ಎಲೆಕ್ಟ್ರಿಕ್ ಬೈಕ್, ಖರೀದಿಗೆ ಮುಗಿಬಿದ್ದ ಜನ

Published : Sep 28, 2026, 06:29 PM IST
Oben Rorr Evo

ಸಾರಾಂಶ

ಕೆಲವೇ ತಿಂಗಳಲ್ಲಿ ಬೆಂಗಳೂರಿನ ಒಬೆನ್ ಎಲೆಕ್ಟ್ರಿಕ್ ಬೈಕ್ ಹೊಸ ದಾಖಲೆ ಬರೆದಿದೆ. ಇದೀಗ ಸ್ಟೈಲೀಶ್, ಮೈಲೇಜ್, ಪರ್ಫಾಮೆನ್ಸ್ ಹಾಗೂ ಕೈಗೆಟುಕುವ ದರದ ಒಬೆನ್ ಇವಿ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ.

ಬೆಂಗಳೂರು (ಸೆ.28) ಬೆಂಗಳೂರು ಮೂಲಕ ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ದೇಶದಲ್ಲೇ ಮುಂಚೂಣಿಯಲ್ಲಿ ಸ್ಥಾನ ಪಡೆದಿದೆ. ಪ್ರಮುಖವಾಗಿ ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಒಬೆನ್ ಎಲೆಕ್ಟ್ರಿಕ್ ಬೈಕ್ ಹೊಸ ಮೈಲಿಗಲ್ಲು ನಿರ್ಮಿಸಿದೆ. ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾದ ಒಬೆನ್ ರೋರ್ ಇವೋ ಬೈಕ್ ಇದೀಗ 25 ಸಾವಿರ ಬುಕಿಂಗ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇಷ್ಟೇ ಅಲ್ಲ ಒಬೆನ್ ಇವಿ ಬೈಕ್ ಪ್ರೊಡಕ್ಷನ್ 10 ಸಾವಿರ ಗಟಿ ದಾಟಿ ಹೊಸ ದಾಖಲೆ ಬರೆದಿದೆ.

ಬೆಂಗಳೂರಿನಲ್ಲೇ ಪ್ರೊಡಕ್ಷನ್

ಒಬೆನ್ ಬೆಂಗಳೂರು ಮೂಲಕ ಸ್ಟಾರ್ಟ್ಅಪ್ ಕಂಪನಿ. ಬೆಂಗಳೂರಿನಲ್ಲೇ ಕಚೇರಿ ಹಾಗೂ ನಿರ್ಮಾಣ ಘಟಕ ಹೊಂದಿದೆ. 3.5 ಏಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಉತ್ಪಾದನಾ ಘಟಕದಲ್ಲಿ ಒಬೆನ್ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಯಾಗುತ್ತಿದೆ. ಈ ಘಟಕದಲ್ಲಿ ವಾರ್ಷಿಕ 1 ಲಕ್ಷ ಬೈಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.

ರೋರ್ ಇವೋಗೆ ಭಾರಿ ಬೇಡಿಕೆ

ರೋರ್ ಇವೋ ಒಬೆನ್ ಎಲೆಕ್ಟ್ರಿಕ್ ಬೈಕ್ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ 25000 ಬುಕಿಂಗ್ ಮೂಲಕ ಸಾಗುತ್ತಿದೆ. ಬೈಕ್ 9kW ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇನ್ನು 3.4kWh LFP ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಬೈಕ್ ಬೆಲೆ 1.25 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಒಂದು ಫುಲ್ ಚಾರ್ಜ್‌ಗೆ 180 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಐಡಿಸಿ ರೇಂಜ್ ಹೇಳುತ್ತಿದೆ.

18 ರಾಜ್ಯಗಳಲ್ಲಿ 150 ಶೋ ರೂಂ

ಒಬೆನ್ ಎಲೆಕ್ಟ್ರಿಕ್ ಬೆಂಗಳೂರು ಮೂಲಕ ಇವಿ ಕಂಪನಿ. ಇದೀಗ 18 ರಾಜ್ಯಗಳಲ್ಲಿ ಶೋ ರೂಂ ಹೊಂದಿದೆ. ನಗರ,ಪಟ್ಟಣ ಸೇರಿದಂತೆ 90 ನಗರಗಳಲ್ಲಿ ಒಟ್ಟು 150 ಶೋ ರೂಂ ಹೊಂದಿದೆ. ಇದೀಗ ಮತ್ತಷ್ಟು ರಾಜ್ಯ ಹಾಗೂ ನಗರಗಳಿಗೆ ವಿಸ್ತರಣೆ ಮಾಡಲು ಒಬೆನ್ ಮುಂದಾಗಿದೆ. 2027ರ ಆರಂಭದಲ್ಲಿ 200 ಶೂರಂಗೆ ವಿಸ್ತರಿಸಲು ಮುಂದಾಗಿದೆ.

ಒಬೆನ್ ಕೈಗೆಟುಕುವ ದರದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಬೈಕ್. ಸಂಪೂರ್ಣ ಬೈಕ್ ಬೆಂಗಳೂರಿನಲ್ಲಿ ತಯಾರಾಗುತ್ತದೆ. ಬೈಕ್‌ನ ಹಲವು ಬಿಡಿಭಾಗಗಳು, LFP ಬ್ಯಾಟರಿ ಪ್ಯಾಕ್, ಚಾರ್ಜರ್, ಎಲೆಕ್ಟ್ರಿಕ್ ಮೋಟಾರ್, ಬೈಕ್‌ನ ಕಂಟ್ರೋಲ್ ಯೂನಿಟ್, ಸಾಫ್ಟ್‌ವೇರ್ ಸೇರಿದಂತೆ ಪ್ರಮುಖ ಬಿಡಿಭಾಗಗಳು ಬೆಂಗಳೂರಿನ ಘಟಕದಲ್ಲೇ ತಯರಾಗುತ್ತದೆ.

PREV
Read more Articles on
click me!

Recommended Stories

60 ದೇಶಗಳಿಂದ 1.5 ಲಕ್ಷಕ್ಕೂ ಹೆಚ್ಚು ಬೈಕರ್ಸ್‌; Royal Enfield One Ride 2026 ಹೊಸ ದಾಖಲೆ!
ಕೇವಲ 5,000 ರೂಪಾಯಿಗೆ ಮನೆಗೆ ತನ್ನಿ ನೂತನ ಇವಿ ಸ್ಕೂಟರ್: 4 ಗಂಟೆಗಳಲ್ಲಿ ಫುಲ್ ಚಾರ್ಜ್, 145 ಕಿ.ಮೀ ಮೈಲೇಜ್!