ಬೈಕಲ್ಲೇ ಬೃಹದಾಕಾರದ ಕಲ್ಲಿನ ಬೆಟ್ಟವೇರಿ ಬೈಕರ್ ಸಾಹಸ : ವಿಡಿಯೋ ವೈರಲ್

By Anusha Kb  |  First Published Dec 29, 2022, 6:10 PM IST

ನೀವು ಸಾವನದುರ್ಗ ಬೆಟ್ಟದಂತಹ ಬೆಟ್ಟವನ್ನು ನೋಡಿದರೆ ಈ ಬೈಕರ್‌ನ ಸಾಹಸವೆಂತದ್ದು ಎಂದು ತಿಳಿಯುವುದು ಸುಲಭ ಸಾಧ್ಯ. ಕಲ್ಲಿನ ಮೇಲೆ ಈತನ ಸಲೀಸಾದ ಬೈಕ್ ಪಯಣದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 


ನೆಲದ ಮೇಲೆ ಸಮರ್ಪಕವಾದ ಡಾಮರ್ ರಸ್ತೆಯಲ್ಲೇ ಬೈಕ್ ಚಲಾಯಿಸಲು ಅನೇಕರು ಕಷ್ಟ ಪಡುತ್ತಾರೆ. ಇಳಿಜಾರಿನಲ್ಲಿ ಅಥವಾ ಏರುಮಾರ್ಗದಲ್ಲಿ ಬೈಕ್ ವಾಹನ ಚಾಲನೆ ಸ್ವಲ್ಪ ತ್ರಾಸ ನೀಡುವ ಜೊತೆ ವಾಹನ ಚಾಲಕನಿಂದ ಜಾಗರೂಕತೆಯನ್ನು ಬಯಸುತ್ತದೆ. ಕೆಲವು ತಿರುವುಗಳಲಂತೂ ಸ್ವಲ್ಪ ಮೈಮರೆತರು ಸಾವು ಧುತ್ತನೇ ಎದುರಾಗುತ್ತದೆ. ಆದರೆ ಇಲ್ಲೊಬ್ಬ ಬೈಕರ್‌  ಬೃಹದಾಕಾರ ಕಲ್ಲಿನ ಪರ್ವತದ ತುತ್ತತುದಿಯನ್ನು ಬೈಕ್ ಮೂಲಕ ತಲುಪಿದ್ದಾನೆ. ನೀವು ಸಾವನದುರ್ಗ ಬೆಟ್ಟದಂತಹ ಬೆಟ್ಟವನ್ನು ನೋಡಿದರೆ ಈ ಬೈಕರ್‌ನ ಸಾಹಸವೆಂತದ್ದು ಎಂದು ತಿಳಿಯುವುದು ಸುಲಭ ಸಾಧ್ಯ. ಕಲ್ಲಿನ ಮೇಲೆ ಈತನ ಸಲೀಸಾದ ಬೈಕ್ ಪಯಣದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

@TheBest_Viral ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ (video) ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವೊಮ್ಮೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದು ಬರೆದುಕೊಂಡು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮೋಟಾರ್ ಸೈಕಲ್ (Motor cycle) ಸವಾರ ಬೃಹದಾಕಾರದ ಬೆಟ್ಟವನ್ನು ಒಂದೇ ವೇಗದಲ್ಲಿ ವೇಗವಾಗಿ ಏರಿ ಹೋಗಿದ್ದಾನೆ. ಬೆಟ್ಟದ ಒಂದು ಭಾಗವನ್ನು ಏರಿ ಮತ್ತೊಂದು ಭಾಗದಲ್ಲಿ ಆತ ಇಳಿಯ ಮುಂದಾಗುವವರೆಗೆ ವಿಡಿಯೋ ಸೆರೆ ಆಗಿದೆ. 25 ಸೆಕೆಂಡ್‌ಗಳ ವಿಡಿಯೋ ಇದಾಗಿದ್ದು, ನೋಡುಗರ ಮೈ ನವಿರೇಳುವಂತೆ ಮಾಡುತ್ತದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

ಬೈಕ್ ಮೇಲೆ ಸಾಹಸ: ಭಾರತೀಯ ಸೇನೆ 3 ವಿಶ್ವ ದಾಖಲೆ!

ವಿಡಿಯೋದಲ್ಲಿ ವ್ಯಕ್ತಿ ಡರ್ಟ್ ಬೈಕ್ (dert bike) ಅನ್ನು ರೈಡ್ ಮಾಡುತ್ತಿದ್ದು, ಬೃಹತಾಕಾರದ ಬೆಟ್ಟವನ್ನು (Rock Mountain) ಕೇವಲ ಅರ್ಧ ಸೆಕೆಂಡಿಗೂ ಕಡಿಮೆ ಅವಧಿಯಲ್ಲಿ ಕ್ರಮಿಸಿ ಬೆಟ್ಟದ ತುದಿ ತಲುಪುತ್ತಾನೆ. ಈ ಸಾಹಸ (Stunt) ಪ್ರದರ್ಶನ ನೋಡಲು ಬಹಳ ಕಷ್ಟಕರವಾಗಿದ್ದು, ನೋಡುಗರು ಈ ವಿಡಿಯೋ ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅನೇಕರು ಈ ಸಾಹಸಿ ಬೈಕರ್‌ನನ್ನು ಕೊಂಡಾಡಿದ್ದಾರೆ. ನಾವು ಈ ರೀತಿಯ ಸಾಹಸ ಮಾಡುತ್ತಾ ಬೆಳೆದು ದೊಡ್ಡವರಾಗಿದ್ದೇವೆ. ಪ್ರಯತ್ನದ ಮುಂದೆ ಯಾವುದು ದೊಡ್ಡದಲ್ಲ ಆದರೆ ಹೆಲ್ಮೆಟ್ (Helmet) ಖಂಡಿತ ಹಾಕಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತ ಏಕಕಾಲಕ್ಕೆ ರಬ್ಬರ್ (Rubber) ಹಾಗೂ ಕಲ್ಲು ಎರಡನ್ನು ಬರ್ನ್ ಮಾಡುತ್ತಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಗಮನ ಸೆಳೆದ CRPF ವುಮೆನ್ ಡೇರ್‌ಡೆವಿಲ್ಸ್ ಸಾಹಸ ಪ್ರದರ್ಶನ!

Sometimes the impossible is possible pic.twitter.com/aBcKXGV1eb

— Lo+Viral 🔥 (@TheBest_Viral)

 

click me!