10 ರೂಗೆ 150 ಕಿ.ಮೀ ಮೈಲೇಜ್, 6 ಜನರ ಪ್ರಯಾಣಸಿಬಲ್ಲ ಎಲೆಕ್ಟ್ರಿಕ್ ಬೈಕ್‌ಗೆ ಮನಸೋತ ಮಹೀಂದ್ರ!

By Suvarna News  |  First Published Dec 1, 2022, 9:55 PM IST

150 ಕಿಲೋಮೀಟರ್ ಮೈಲೇಜ್ ಕೇವಲ 10 ರೂಪಾಯಿಗೆ, ಇಷ್ಟೇ ಅಲ್ಲ ಈ ಬೈಕ್‌ನಲ್ಲಿ 6 ಜನ ಕುಳಿತುಕೊಳ್ಳಬಹುದು.ಈ ವಾಹನದ ಬೆಲೆ 12,000 ರೂಪಾಯಿ ಮಾತ್ರ. ಕುತೂಹಲ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ.
 


ಮುಂಬೈ(ಡಿ.01):  ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಪ್ರತಿ ಬಾರಿ ಸಾಮಾಜಿಕ  ಜಾಲತಾಣದಲ್ಲಿ ವಿಡಿಯೋ , ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಈ ಬಾರಿ ಆನಂದ್ ಮಹೀಂದ್ರ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಲವರ ಆಸಕ್ತಿ ಡಬಲ್ ಮಾಡಿದೆ. ಭಾರತದ ಎಲೆಕ್ಟ್ರಿಕ್ ವಾಹನ ತಯಾರಿಕೆ, ತಂತ್ರಜ್ಞಾನಕ್ಕೆ ಹೊಸ ಬಾಷ್ಯ ಬರೆದಿದೆ. ಕಾರಣ  12,000 ರೂಪಾಯಿ ಬೆಲೆಯ ಎಲೆಕ್ಟ್ರಿಕ್ ಬೈಕ್ ಕುರಿತು ವಿಡಿಯೋ ಇದಾಗಿದೆ. 10 ರೂಪಾಯಿಯಲ್ಲಿ ಈ ಬೈಕ್ ಚಾರ್ಜ್ ಮಾಡಬಹುದು. ಒಂದು ಸಂಪೂರ್ಣ ಚಾರ್ಜ್‌ಗೆ 150 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇಷ್ಟೇ ಅಲ್ಲ ಈ ಬೈಕ್‌ನಲ್ಲಿ 6 ಸೀಟ್‌ಗಳಿಗೆ ರೈಡರ್ ಸೇರಿ ಆರು ಮಂದಿ ಆರಾಮವಾಗಿ ಪ್ರಯಾಣಿಸಲು ಸಾಧ್ಯವಿದೆ.

ಸರಳ ಹಾಗೂ ಸಣ್ಣ ವಿನ್ಯಾಸ. ಈ ವಾಹನ ಜಾಗತಿಕ ಮಟ್ಟದಲ್ಲಿ ಅಳವಡಿಸಲು ಸಾಧ್ಯವಿರುವ ತಂತ್ರಜ್ಞಾನವಾಗಿದೆ. ಕಿಕ್ಕಿರಿದ ಯುರೋಪಿಯನ್ ಪ್ರವಾಸಿ ಕೇಂದ್ರಗಲ್ಲಿ ಪ್ರವಾಸಿ ಬಸ್ ಆಗಿ ಸಾಧ್ಯವಿದೆ. ಗ್ರಾಮೀಣ ಪ್ರದೇಶದಲ್ಲಿನ ಹೊಸ ಆವಿಷ್ಕಾರಗಳಿಂದ ನಾನು ಯಾವತ್ತೂ ಪ್ರಭಾವಿತನಾಗುತ್ತೇೆ. ಕಾರಣ ಈ ಗ್ರಾಮೀಣ ಪ್ರದೇಶ ಆವಿಷ್ಕಾರ ತಾಯಿಯಾಗಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

Latest Videos

undefined

6ನೇ ತರಗತಿ ಡ್ರೌಪ್ ಔಟ್, ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಆರಂಭಿಸಿ 1 ವರ್ಷದಲ್ಲಿ 6 ಕೋಟಿ ಆದಾಯ!

ಈ ವಿಡಿಯೋದಲ್ಲಿರುವ ವ್ಯಕ್ತಿ ನೂತನ ಎಲೆಕ್ಟ್ರಿಕ್ ವಾಹನ ಕುರಿತು ಮಾಹಿತಿ ನೀಡಿದ್ದಾರೆ. ಈ ವಾಹನದ ಉತ್ಪಾದನಾ ವೆಚ್ಚ 12,000 ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇಷ್ಟೇ ಅಲ್ಲ 10 ರೂಪಾಯಿಗೆ ಈ ವಾಹನ ಸಂಪೂರ್ಣ ಚಾರ್ಜ್ ಮಾಡಲು ಸಾಧ್ಯವಿದೆ ಎಂದಿದ್ದಾರೆ.

 

With just small design inputs, (cylindrical sections for the chassis ?) this device could find global application. As a tour ‘bus’ in crowded European tourist centres? I’m always impressed by rural transport innovations, where necessity is the mother of invention. pic.twitter.com/yoibxXa8mx

— anand mahindra (@anandmahindra)

 

ಸೈಕಲ್ ರೀತಿಯಲ್ಲಿ ಸೀಟ್‌ಗಳನ್ನು ಮಾಡಲಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ಒಟ್ಟು 6 ಮಂದಿ ಕುಳಿತು ಪ್ರಯಾಣಿಸಬಹುದು. ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಮೆಚ್ಚುಗೆಗಳ ಸುರಿಮಳೆ ವ್ಯಕ್ತವಾಗಿದೆ. 

ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್ ಲಾಂಚ್, 307 ಕಿ.ಮೀ ಮೈಲೇಜ್!

ಧರ್ಮಸ್ಥಳ ಎತ್ತಿನ ಗಾಡಿ ಕಾರು ವೈರಲ್‌
ಹಳೆಯ ಅಂಬಾಸಿಡರ್‌ ಕಾರಿನ ಹಿಂಭಾಗವನ್ನು ಬಳಸಿ ವಿಶೇಷವಾಗಿ ವಿನ್ಯಾಸಗೊಳಿಸಿದ ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋವೊಂದು ಭಾರೀ ವೈರಲ್‌ ಆಗಿತ್ತು. ಸದಾ ಒಂದಿಲ್ಲೊಂದು ಕುತೂಹಲಕರ ಸಂಗತಿಗಳನ್ನು ಟ್ವೀಟ್‌ ಮಾಡುವ ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ಇದೀಗ ಧರ್ಮಸ್ಥಳದ ಎತ್ತಿನ ಬಂಡಿ ಕಾರಿನ ವಿಡಿಯೋವನ್ನು ಟ್ವೀಟ್‌ ಮಾಡಿ ಕುತೂಹಲ ಕೆರಳಿಸಿದ್ದರು. 

ಎತ್ತಿನ ಗಾಡಿ ಕಾರಿನ ವಿಡಿಯೋವೊಂದನ್ನು ಟ್ವೀಟ್‌ ಮಾಡಿರುವ ಆನಂದ್‌ ಮಹೀಂದ್ರಾ, ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್‌ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಹಾಗೂ ಎಲೋನ್‌ ಮಾಸ್ಕ್‌ಗೆ ಕೂಡ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಹುದಾದ ಇಂಧನದ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಸವಾಲು ಹಾಕಿದ್ದರು. ಈ ವಿಡಿಯೋಗೆ 31 ಸಾವಿರಕ್ಕೂ ಹೆಚ್ಚು ಲೈಕ್‌ ಬಂದಿದ್ದು, 4800ಕ್ಕೂ ಅಧಿಕ ರೀಟ್ವೀಟ್‌ ಮಾಡಲಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ಮೂಡಿದ ಬಂದ ಎತ್ತಿನ ಗಾಡಿ ಕಾರು ಇದಾಗಿದೆ. ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಳೆಯ ಅಂಬಾಸಿಡರ್‌ ಕಾರಿನ ಹಿಂಭಾಗವನ್ನು ಬಳಸಿಕೊಂಡು ಎರಡು ಎತ್ತುಗಳ ಮೂಲಕ ಎಳೆಯಬಹುದಾದ ಎತ್ತಿನ ಗಾಡಿ ಕಾರನ್ನು ತಯಾರಿಸಿದ್ದಾರೆ.

click me!