ಕೇವಲ 79,999 ರೂಪಾಯಿಗೆ ಲೆಕ್ಟ್ರಿಕ್ಸ್ ಇವಿ ಸ್ಕೂಟರ್ ಲಾಂಚ್, 98 ಕಿ.ಮಿ ಮೈಲೇಜ್!

By Suvarna News  |  First Published Feb 14, 2024, 5:27 PM IST

ಲೆಕ್ಟ್ರಿಕ್ಸ್ ಇವಿಯಿಂದ ಭಾರತದ ಏಕೈಕ 2.3 ಕೆಡಬ್ಲ್ಯೂ ಬ್ಯಾಟರಿಯ 2ಡಬ್ಲ್ಯೂಇವಿ  ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಸ್ಕೂಟರ್ ಬೆಲೆ 79,999 ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 98 ಕಿ.ಮೀ ಮೈಲೇಜ್ ನೀಡಲಿದೆ.


ಬೆಂಗಳೂರು(ಫೆ.14): ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮಾರಾಟ, ಉತ್ಪಾದನೆಯಲ್ಲಿ ಶೇಕಡಾ 90 ರಷ್ಟು ಪ್ರಗತಿ ಸಾಧಿಸಿದೆ. ಹೊಸ ಹೊಸ ಆವಿಷ್ಕಾರದಿಂದ ಇವಿ ವಾಹನದ ಬೆಲೆ ಕೂಡ ಇಳಿಕೆಯಾಗುತ್ತಿದೆ. ಇದೀಗ ಇವಿ ವಲಯದಲ್ಲಿ ಟಾಪ್ 10 ಒಇಎಂಗಳಲ್ಲಿ ಒಂದಾದ ಲೆಕ್ಟ್ರಿಕ್ಸ್ ಇವಿ ಎಲ್.ಎಕ್ಸ್.ಎಸ್.2.0 ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 98 ಕಿ.ಮೀ. ಮೈಲೇಜ್ ರೇಂಜ್ ನೀಡಲಿದೆ. 2.3 ಕೆಡಬ್ಲ್ಯೂ ಬ್ಯಾಟರಿ ಪ್ಯಾಕ್ ಹೊಂದಿದ್ದು, ಗುಣಮಟ್ಟದ 1.25 ಎಲ್ ಸ್ಕೂಟರ್  79,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. 

ಎಲ್.ಎಕ್ಸ್. 2.0ಯು 2ಡಬ್ಲ್ಯೂ ವಿಭಾಗದಲ್ಲಿ ಏಕೈಕ ಇವಿಯಾಗಿದ್ದು ಅದು ಗ್ರಾಹಕರ 3 ಪ್ರಮುಖ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದು ಸರಿಯಾದ ರೇಂಜ್, ಸರಿಯಾದ ಗುಣಮಟ್ಟ ಮತ್ತು ಸರಿಯಾದ ಹಣಕ್ಕೆ ತಕ್ಕ ಮೌಲ್ಯ ಹೊಂದಿದೆ. ಎಲ್.ಎಕ್ಸ್.ಎಸ್.2.0 ಬುಕಿಂಗ್ ಗಳನ್ನು ತೆರೆದಿದ್ದು ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು 10,000 ಯೂನಿಟ್ ಗಳು ಈಗಾಗಲೇ ಮಾರಾಟವಾಗಿವೆ. ಪ್ರಿ-ಬುಕಿಂಗ್ ತೆರೆದಿದ್ದು ಮಾರ್ಚ್ 2024ರ ನಂತರ ಪೂರೈಸಲಾಗುತ್ತದೆ. 

Latest Videos

undefined

80ರ ದಶಕದಲ್ಲಿ ಭಾರತದ ರಸ್ತೆಗಳನ್ನು ಆಳಿದ್ದ ಲೂನಾ ಮೊಪೆಡ್‌ ಹೊಸ ರೂಪದಲ್ಲಿ ಮತ್ತೆ ಲಾಂಚ್

ಭಾರತದಲ್ಲಿ ಮೌಲ್ಯ-ಪ್ರಜ್ಞೆಯ ಗ್ರಾಹಕರ ಹೊರನೋಟವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅದಕ್ಕೆ ಕೊಡುಗೆ ನೀಡಲು ಮತ್ತು ಇವಿ2ಡಬ್ಲ್ಯೂ ಹೆಚ್ಚಿನ ಅನುಮೋದನೆ ಪಡೆಯಲು ನಾವು ಈ ಹೊಸ ಉತ್ಪನ್ನ ಬಿಡುಗಡೆ ಮಾಡಿದ್ದೇವೆ. ಇದು `ಮೌಲ್ಯ’ ಮತ್ತು `ಕೈಗೆಟುಕಬಲ್ಲತೆ’ಯ ಪರಿಪೂರ್ಣ ಸಮತೋಲನವಾಗಿದ್ದು ಆವಿಷ್ಕಾರ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗಿಲ್ಲ. ಇದು 2ಡಬ್ಲ್ಯೂಇವಿಯಲ್ಲಿ ಮಾತ್ರ ಲಭ್ಯವಿದ್ದು 98 ಕಿ.ಮಿ. ರೇಂಜ್@2.3 ಕೆ.ಡಬ್ಲ್ಯೂ ಬ್ಯಾಟರಿಯನ್ನು ರೂ.79,999/-ರಲ್ಲಿ ಲಭ್ಯವಿದೆ ಎಂದು  ಎಲೆಕ್ಟ್ರಿಕ್ ಮೊಬಿಲಿಟಿಯ  ವಿಜಯ್ ಕುಮಾರ್ ಹೇಳಿದ್ದಾರೆ.

ಲೆಕ್ಟ್ರಿಕ್ಸ್ ಇವಿಯು ಎಸ್.ಎ.ಆರ್. ಸಮೂಹದ ಇ-ಮೊಬಿಲಿಟಿ ಭಾಗಾಗಿದೆ. ಕಂಪನಿಯು ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಸುಧಾರಿತ ವಿದ್ಯುಚ್ಛಾಲಿತ ದ್ವಿಚಕ್ರ ವಾಹನಗಳನ್ನು ಪೂರೈಸುತ್ತಿದೆ. 300 ಕೋಟಿ ರೂ.ಗಳ ಪ್ರಾರಂಭಿಕ ಹೂಡಿಕೆ ಮತ್ತು ವಾರ್ಷಿಕ 1.5 ಲಕ್ಷ ಇ.ವಿ.ಗಳ ಉತ್ಪಾದನೆಯ ಸಾಮರ್ಥ್ಯದೊಂದಿಗೆ ಲೆಕ್ಟ್ರಿಕ್ಸ್ ಇವಿ ತನ್ನ ಪೋರ್ಟ್ ಫೋಲಿಯೊದಲ್ಲಿ ವಿಸ್ತಾರ ಶ್ರೇಣಿಯ ವಿದ್ಯುಚ್ಛಾಲಿತ ದ್ವಿಚಕ್ರ ವಾಹನಗಳ ಸೇರ್ಪಡೆ ಮಾಡುವ ಗುರಿ ಹೊಂದಿದೆ. ತಂತ್ರಜ್ಞಾನ ಹಾಗೂ ಆವಿಷ್ಕಾರಕ್ಕೆ ಆದ್ಯತೆ ನೀಡಿರುವ ಕಂಪನಿಯು ತಾಂತ್ರಿಕವಾಗಿ ಸುಧಾರಿಸಿದ ಉತ್ಪನ್ನಗಳನ್ನು ಕೈಗೆಟುಕುವ ದರಗಳಲ್ಲಿ ಒದಗಿಸುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ವಲಯದಲ್ಲಿ ಸಂಚಲನ ಸೃಷ್ಟಿಸುವ ಗುರಿ ಹೊಂದಿದೆ.

ಕಾರು,ಬೈಕ್ ವಿಮೆ ನವೀಕರಿಸುವಾಗ ಹಣ ಉಳಿಸೋದು ಹೇಗೆ? ಈ 5 ಟಿಪ್ಸ್ ಅನುಸರಿಸಿ

click me!