ಅತ್ಯಾಕರ್ಷಕ, ಅತ್ಯುತ್ತಮ ಪರ್ಫಾಮೆನ್ಸ್, ಹೋಂಡಾ NX500 ಬೈಕ್ ಬಿಡುಗಡೆ!

By Suvarna NewsFirst Published Jan 20, 2024, 9:05 PM IST
Highlights

ಹೊಚ್ಚ ಹೊಸ ಹೋಂಡಾ NX500 ಬೈಕ್ ಬಿಡುಗಡೆಯಾಗಿದೆ. ಇಂದಿನಿಂದಲೇ ಬೈಕಿಂಗ್ ಬುಕಿಂಗ್ ಕೂಡ ಆರಂಭಗೊಂಡಿದೆ. ಅತ್ಯಾಕರ್ಷಕ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರುವ ಈ ಬೈಕ್ ಹಲವು ವಿಶೇಷತೆ ಹೊಂದಿದೆ. ಇದರ ಬೆಲೆ ಹಾಗೂ ಇತರ ವಿವರ ಇಲ್ಲಿದೆ.

ನವದೆಹಲಿ(ಜ.20)  ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸುತ್ತಿದೆ. ಹಲವು ದಿಗ್ಗಜ ಕಂಪನಿಗಳಿಗೆ ಪ್ರತಿಸ್ಪರ್ಧೆ ನೀಡುತ್ತಿರುವ ಹೋಂಡಾ ಇದೀಗ ಹೊಚ್ಚ ಹೊಚ NX500 ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ಆಫರ್ ರೋಡ್‌ಗೂ ಸೈ, ನಗರ ಅಥವಾ ಲಾಂಗ್ ರೈಡ್‌ಗೂ ಸೈ ಎನಿಸಿಕೊಳ್ಳುವ ಬೈಕ್ ಆಗಿದೆ. ತಿರುವಿನ ರಸ್ತೆಗಳಿಂದ ಹಿಡಿದು ಜಲ್ಲಿಕಲ್ಲು ತುಂಬಿರುವ ರಸ್ತೆಗಳವರೆಗೆ, ಲಾಂಗ್ ರೈಡ್ ಅಡ್ವೆಂಚರ್ ಸೇರಿದಂತೆ ಎಲ್ಲಾ ರೀತಿಯ ಭೂಪ್ರದೇಶಗಳಲ್ಲೂ ಸಂತೋಷಕರ ರೈಡ್ ಅನುಭವವನ್ನು ನೀಡಲಿದೆ.

ಹೊಚ್ಚ ಹೊಸ ಬೈಕ್ ಬೆಲೆ  5,90,000 ರೂಪಾಯಿ(ಎಕ್ಸ್ ಶೋ ರೂಂ ).  ಗ್ರ್ಯಾಂಡ್ ಪ್ರಿಕ್ಸ್ ರೆಡ್, ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಪರ್ಲ್ ಹಾರಿಜಾನ್ ವೈಟ್ ಅನ್ನೋ ಮೂರು ಬಣ್ಣದಲ್ಲಿ ಬೈಕ್ ಲಭ್ಯವಿದೆ. ಭಾರತದಾದ್ಯಂತ ಎಚ್ಎಂಎಸ್ಐನ ಪ್ರೀಮಿಯಂ ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್‌ಗಳು ಈಗ ಶರುವಾಗಿವೆ. ಡೆಲಿವರಿಗಳು ಫೆಬ್ರವರಿ 2024ರಿಂದ ಆರಂಭಗೊಳ್ಳುತ್ತಿದೆ.

ಭಾರತದಲ್ಲಿ ಹೊಸ ಸಂಚಲನ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಎಂಜಿನ್ ಹೋಂಡಾ CB300R ಬೈಕ್ ಬಿಡುಗಡೆ!

ಮೋಟಾರ್‌ಸೈಕಲ್‌ನ ಹೊಸ ಎಲ್‌ಇಡಿ ಹೆಡ್‌ಲೈಟ್ ಮತ್ತು ಟೈಲ್ ಲ್ಯಾಂಪ್ ಅನ್ನು ಮತ್ತಷ್ಟು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಹೊಂಡಾದ ಇತ್ತೀಚಿನ ಅಡ್ವೆಂಚರ್ ಟೂರಿಂಗ್ ಬೈಕ್ ಹೊಸ 5-ಇಂಚಿನ ಬಣ್ಣದ ಟಿ ಎಫ್ ಟಿ ಸ್ಕ್ರೀನ್ ರೂಪದಲ್ಲಿ ಪ್ರೀಮಿಯಂ ತಂತ್ರಜ್ಞಾನವನ್ನು ಹೊಂದಿದೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಗೋಚರತೆಯನ್ನು ಸುಧಾರಿಸಲು ಆಪ್ಟಿಕಲ್ ಬಾಂಡಿಂಗ್ ಅನ್ನು ಹೊಂದಿದೆ. ಇದು ಕಸ್ಟಮೈಸ್ ಮಾಡಬಹುದಾಗಿದ್ದಾಗಿದೆ, ಮತ್ತು ಸವಾರರು ಬಾರ್, ಸರ್ಕಲ್ ಮತ್ತು ಸಿಂಪಲ್ ಆಯ್ಕೆಗಳ ನಡುವೆ ಡಿಸ್ಪ್ಲೇ ಶೈಲಿಯನ್ನು ಆರಿಸಬಹುದು. ಜೊತೆಗೆ ಬಿಳಿ, ಕಪ್ಪು ಮತ್ತು ಆಟೋದಿಂದ ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು.

ಎನ್‌ಎಕ್ಸ್‌500 ಹೋಂಡಾ ರೋಡ್‌ಸಿಂಕ್‌, ಐಓಎಸ್/ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸಂಪರ್ಕವನ್ನು ನೀಡುತ್ತದೆ. ಜೊತೆಗೆ ಎಡ ಹ್ಯಾಂಡಲ್‌ಬಾರ್‌ನಲ್ಲಿ ಬ್ಯಾಕ್‌ಲಿಟ್ 4-ವೇ ಟಾಗಲ್-ಸ್ವಿಚ್ ಜೊತೆಗೆ ಆನ್-ಸ್ಕ್ರೀನ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ರೈಡರ್‌ಗೆ ಕರೆ ಮಾಡಲು ಅಥವಾ ಸಂಗೀತ(ಬ್ಲೂಟೂತ್ ಹೆಡ್‌ಸೆಟ್ ಮೂಲಕ) ಕೇಳುವ ಆಯ್ಕೆಯನ್ನು ನೀಡುತ್ತದೆ. ಇದು ತುರ್ತು ನಿಲುಗಡೆ ಸಿಗ್ನಲ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಇದು ಹೆಚ್ಚಿನ ವೇಗದಲ್ಲಿ ಟರ್ನ್ ಸಿಗ್ನಲ್‌ಗಳನ್ನು ಮಿನುಗುವ ಮೂಲಕ ಹಿಂದಿನ ವಾಹನಗಳಿಗೆ ಹಠಾತ್ ಬ್ರೇಕಿಂಗ್ ಅನ್ನು ಸೂಚಿಸುತ್ತದೆ.

ಎಂಜಿನ್ ಮತ್ತು ಕಾರ್ಯಕ್ಷಮತೆ
ಹೊಸ ಹೋಂಡಾ ಎನ್‌ಎಕ್ಸ್‌500, 471ಸಿಸಿ, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್ ಡಿಓಎಚ್ಸಿ ಎಂಜಿನ್ ಜೊತೆಗೆ ಪ್ಯಾರಲಲ್ ಟ್ವಿನ್-ಸಿಲಿಂಡರ್ ವಿನ್ಯಾಸವನ್ನು ಹೊಂದಿದ್ದು, ಶಕ್ತಿಯುತವಾಗಿದೆ. ಈ ಮೋಟಾರ್ 8,600 ಆರ್ ಪಿಎಂನಲ್ಲಿ 35ಕೆಡಬ್ಲ್ಯೂ ಪವರ್ ಮತ್ತು 6,500ಆರ್ ಪಿಎಂನಲ್ಲಿ 43ಎನ್ ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿದೆ.

ಎನ್‌ಎಕ್ಸ್‌500ನ ಶಕ್ತಿಯುತ ಗುಣಲಕ್ಷಣವು ಕಡಿಮೆ ಮತ್ತು ಮಧ್ಯಮ ಆರ್ಪಿಎಂ ಶ್ರೇಣಿಗಳಲ್ಲಿ ಹೆಚ್ಚಿನ ಕುಶಲತೆಯನ್ನು ಮತ್ತು ನಗರದ ರಸ್ತೆಗಳಲ್ಲಿ ವೇಗವರ್ಧನೆಯ ಬಲವಾದ ಭಾವನೆಯನ್ನು ನೀಡುತ್ತದೆ. ಅಸಿಸ್ಟ್/ಸ್ಲಿಪ್ಪರ್ ಕ್ಲಚ್ ಸಹ ಇದರಲ್ಲಿದೆ. ಇದು ಅಪ್‌ಶಿಫ್ಟ್‌ ಗಳನ್ನು ಸುಲಭಗೊಳಿಸುತ್ತದೆ ಮತ್ತು ಹಾರ್ಡ್ ಬ್ರೇಕಿಂಗ್ ಮತ್ತು ಡೌನ್‌ಶಿಫ್ಟಿಂಗ್ ಸನ್ನಿವೇಶಗಳಲ್ಲಿ ಹಿಂಬದಿ ಚಕ್ರವನ್ನು ನಿಯಂತ್ರಿಸುತ್ತದೆ. ಇದು ಸ್ವಿಚ್ ಮಾಡಬಹುದಾದ ಎಚ್ಎಸ್ಟಿಸಿ (ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್) ವ್ಯವಸ್ಥೆಯನ್ನು ಪಡೆದಿದೆ ಮತ್ತು ಜಾರು ಭೂಪ್ರದೇಶಗಳಲ್ಲಿ ಸವಾರಿ ಮಾಡುವಾಗ ಹೆಚ್ಚಿನ ನಿಯಂತ್ರಣಕ್ಕಾಗಿ ಹಿಂಬದಿ ಚಕ್ರದ ಎಳೆತವನ್ನು ನಿರ್ವಹಿಸುತ್ತದೆ.

ಹೋಂಡಾ ಗೋಲ್ಡ್ ವಿಂಗ್ ಬೆಲೆ 39 ಲಕ್ಷ ರೂಪಾಯಿ, ಈ ಬೈಕ್‌ನಲ್ಲಿ ಅಂತಾದ್ದೇನಿದೆ ?

ಸಸ್ಪೆನ್ಷನ್, ಬ್ರೇಕ್ ಗಳು ಮತ್ತು ಟೈರ್ ಗಳು
ಎನ್‌ಎಕ್ಸ್‌500 ಸ್ಟೀಲ್ ಡೈಮಂಡ್-ಟ್ಯೂಬ್ ಮೇನ್‌ಫ್ರೇಮ್ ಹೊಂದಿದೆ. ಈ ಅಡ್ವೆಂಚರ್ ಟೂರಿಂಗ್ ಮೋಟಾರ್‌ಸೈಕಲ್ 19-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಟ್ರಯಲ್-ಪ್ಯಾಟರ್ನ್ ರೇಡಿಯಲ್ ಟೈರ್‌ಗಳನ್ನು ಹೊಂದಿದೆ. ಇವುಗಳು 110/80- R19 ಮತ್ತು 160/60-ಆರ್17 ಗಾತ್ರದ್ದಾಗಿವೆ. ಆದಾಗ್ಯೂ, ಇದರ ಅಲಾಯ್ ವೀಲ್ಸ್ ಸಂಪೂರ್ಣವಾಗಿ ಎರಕಹೊಯ್ದ ಅಲ್ಯೂಮಿನಿಯಂನ ವೈ-ಆಕಾರದ 5-ಸ್ಪೋಕ್ ಯುನಿಟ್ ಗಳಾಗಿವೆ.
ಆನ್-ರೋಡ್ ಮತ್ತು ಆಫ್-ರೋಡ್ ಪ್ರಯಾಣಗಳಲ್ಲಿ ಉತ್ತಮ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು, ಈ ಎಡಿವಿ, ಶೋವಾ 41ಎಂಎಂ ಎಸ್ಎಫ್ಎಫ್-ಬಿಪಿ ಅಪ್ ಸೈಡ್ ಡೌನ್ (ಯುಎಸ್ಡಿ) ಮುಂಭಾಗದ ಫೋರ್ಕ್‌ಗಳನ್ನು ಮತ್ತು  ಜೊತೆಗೆ ಹಿಂಭಾಗದಲ್ಲಿ ಪ್ರೊ-ಲಿಂಕ್ ಮೊನೊ-ಸಸ್ಪೆನ್ಷನ್ ಅನ್ನು ಹೊಂದಿದೆ. ಜೊತೆಗೆ 5-ಹಂತದ ಪ್ರೀ ಲೋಡ್ ಅಡ್ಜಸ್ಟರ್ ಹೊಂದಿದೆ. ಬ್ರೇಕಿಂಗ್ ಕರ್ತವ್ಯಗಳನ್ನು ನಿಭಾಯಿಸಲು ಮುಂಭಾಗದಲ್ಲಿ ಎರಡು-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 296 ಎಂಎಂ ಫ್ರಂಟ್ ಡಿಸ್ಕ್‌ ಗಳು ಮತ್ತು ಹಿಂಭಾಗದಲ್ಲಿ 1-ಪಿಸ್ಟನ್ ಕ್ಯಾಲಿಪರ್ ಜೊತೆಗೆ 240 ಎಂಎಂ ಡಿಸ್ಕ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಇದೆ.
 

click me!