ಹಾರ್ಲೆ ಡೇವಿಡನ್ಸ್ ಬೈಕ್ ಖರೀದಿಸಲು ಬಯಸಿದ ಭಾರತೀಯರಿಗೆ ಗುಡ್ ನ್ಯೂಸ್ ಇದೆ. ಆಮದು ಸುಂಕ ಕಡಿತ ಮಾಡಿರುವ ಕಾರಣ ಇನ್ನು ಕೈಗೆಟುಕುವ ದರದಲ್ಲಿ ಹಾರ್ಲೆ ಡೇವಿಡನ್ಸ್ ಬೈಕ್ ಸಿಗಲಿದೆ.
ನವದೆಹಲಿ(ಫೆ.02) ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ಭಾರತದಲ್ಲಿ ದುಬಾರಿ.ಅಮೆರಿಕನ್ ಬ್ರ್ಯಾಂಡ್ ಬೈಕ್ ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಸುಂಕದ ಕಾರಣದಿಂದ ಬೈಕ್ ಬೆಲೆ ದುಬಾರಿಯಾಗುತ್ತಿದೆ. ಆದರೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೆಲ ಆಮದು ಸುಂಕ ಕಡಿತಗೊಳಿಸಲಾಗಿದೆ. ಇದರ ಪರಿಣಾಮ ಇನ್ನು ಮುಂದೆ ಅಮೆರಿಕದ ಹಾರ್ಲೆ ಡೇವಿಡ್ಸನ್ ಬೈಕ್ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಪ್ರಮುಖವಾಗಿ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹೆಚ್ಚಿನ ಸಿಸಿ ಬೈಕ್ ಮೇಲಿನ ಆಮದು ಸುಂಕ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಬೆಲೆ ಎಷ್ಟು ಇಳಿಕೆಯಾಗಲಿದೆ?
ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡಿಸಿದ್ದಾರೆ. ಹಲವು ಪ್ರಮುಖ ಘೋಷಣೆಗಳನ್ನು ಈ ಬಜೆಟ್‌ನಲ್ಲಿ ಮಾಡಿದ್ದಾರೆ. ಈ ಪೈಕಿ ಹಲವು ವಸ್ತುಗಳ ಸುಂಕ ಕಡಿತಗೊಳಿಸಲಾಗಿದೆ. ಈ ಪೈಕಿ 1,600 ಸಿಸಿ ವರೆಗಿನ ಬೈಕ್ ಮೇಲಿನ ಅಮೆದು ಸುಂಕವನ್ನು ಕಡಿತಗೊಳಿಸಲಾಗಿದೆ. 1,600 ಸಿಸಿ ವರೆಗಿನ ಬೈಕ್ ಆಮದು ಸುಂಕವನ್ನು ಶೇಕಡಾ 50 ರಿಂದ ಇದೀಗ ಶೇಕಡಾ 40ಕ್ಕೆ ಇಳಿಕೆ ಮಾಡಲಾಗಿದೆ. ಇನ್ನು 1,600 ಸಿಸಿಗಿಂತ ಹೆಚ್ಚಿನ ಸಿಸಿಗಳ ಬೈಕ್ ಮೇಲಿನ ಆಮದು ಸುಂಕವನ್ನು ಶೇಕಡಾ 30ಕ್ಕೆ ಇಳಿಕೆ ಮಾಡಲಾಗಿದೆ. ಸದ್ಯ ಈ ಸುಂಕ ಪ್ರಮಾಣ ಶೇಕಡಾ 50.
ಜನಸಾಮಾನ್ಯರಿಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ 10 ಪ್ರಮುಖ ಯೋಜನೆ
ಮತ್ತೊಂದು ಪ್ರಮುಖ ಘೋಷಣೆ ಎಂದರೆ ಸೆಮಿ ನಾಕ್ಡ್ ಡೌನ್(SKD) ಕಿಟ್ಸ್ ಮೇಲಿನ ಆಮಂದು ಸುಂಕವನ್ನುಶೇಕಡಾ 25ರಿಂದ ಇದೀಗ ಶೇಕಾ 20ಕ್ಕೆ ಇಳಿಸಲಾಗಿದೆ. ಇನ್ನು ಕಂಪ್ಲೀಟ್ಲಿ ನಾಕ್ಡ್ ಡೌನ್(CKD) ಯೂನಿಟ್ಸ್ ಮೇಲಿನ ಆಮೆದು ಸುಂಕವನ್ನು ಶೇಕಡಾ 15ರಿಂದ ಇದೀಗ ಶೇಕಡಾ 10ಕ್ಕೆ ಇಳಿಕೆ ಮಾಡಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಮಾಡಿರುವ ಈ ಪ್ರಮುಖ ಘೋಷಣೆಯಿಂದ ಭಾರತದಲ್ಲಿ ಹಾರ್ಲೆ ಡೆವಿಡ್ಸನ್ ಬೈಕ್ ಬೆಲೆ ಇಳಿಕೆ ಮಾಡಲಾಗಿದೆ. ಪ್ರಮುಖವಾಗಿ ಹಾರ್ಲೆ ಡೆವಿಡ್ಸನ್ ಹೆಚ್ಚಿನ ಅಮದು ಸುಂಕ ಪಾವತಿಸುತ್ತಿತ್ತು. ಹೀಗಾಗಿ ಸಹಜವಾಗಿ ಬೈಕ್ ಬೆಲೆಯೂ ಹೆಚ್ಚಾಗಿತ್ತು.
ಬಜೆಟ್ 2025: ಆಟೋ ಉದ್ಯಮಕ್ಕೆ ಏನು ಬದಲಾವಣೆ?
ಆಮದು ಮಾಡಿಕೊಂಡ ಮೋಟಾರ್‌ಸೈಕಲ್‌ಗಳ (ಸಿಬಿಯು) ಮೂಲ ಕಸ್ಟಮ್ಸ್ ಸುಂಕ ಕಡಿಮೆಯಾಗಿದೆ.
ಐಷಾರಾಮಿ ಕಾರುಗಳು ಮತ್ತು ಇತರ ಆಮದು ವಾಹನಗಳ ಮೇಲಿನ ಸುಂಕದಲ್ಲೂ ಕಡಿತ.
ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸಲು ಸ್ಥಳೀಯ ಉತ್ಪಾದನೆಗೆ ಆದ್ಯತೆ.
ಭಾರತದಲ್ಲಿ ಹೆಚ್ಚಿನ ಕಸ್ಟಮ್ಸ್ ಸುಂಕದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತ-ಅಮೆರಿಕ ವ್ಯಾಪಾರ ಯುದ್ಧದತ್ತ ಬೆಟ್ಟು ಮಾಡಿ ಭಾರತವನ್ನು "ಸುಂಕ ರಾಜ" ಎಂದು ಕರೆದಿದ್ದರು. ಅಮೆರಿಕದಲ್ಲಿ ಭಾರತೀಯ ಬೈಕ್‌ಗಳ ಮೇಲೆ ಯಾವುದೇ ಆಮದು ತೆರಿಗೆ ಇಲ್ಲ ಆದರೆ ಭಾರತದಲ್ಲಿ ಹಾರ್ಲಿ ಡೇವಿಡ್‌ಸನ್ ಮೇಲೆ 100% ಆಮದು ಸುಂಕ ವಿಧಿಸಲಾಗುತ್ತಿತ್ತು ಎಂದು ಟ್ರಂಪ್ ಆರೋಪಿಸಿದ್ದರು. ಒಂದು ಸಂದರ್ಶನದಲ್ಲಿ ಟ್ರಂಪ್, "ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ 100% ತೆರಿಗೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಅವರು ತಕ್ಷಣ ಅದನ್ನು 50% ಕ್ಕೆ ಇಳಿಸಿದರು ಆದರೆ ನಾನು ಅದೂ ತುಂಬಾ ಹೆಚ್ಚು ಎಂದು ಹೇಳಿದೆ" ಎಂದಿದ್ದರು.
ಅಧ್ಯಕ್ಷ ಟ್ರಂಪ್ ಮರು ಆಯ್ಕೆಯಾದ ನಂತರ ಭಾರತದ ಮೇಲೆ ಪರಸ್ಪರ ಸುಂಕ ವಿಧಿಸುವ ಬೆದರಿಕೆ ಹಾಕಿದ್ದರು. ಈಗ, ಪ್ರಧಾನಿ ಮೋದಿ ಅವರ ಸಂಭಾವ್ಯ ಅಮೆರಿಕ ಭೇಟಿಗೂ ಮುನ್ನ ಹಾರ್ಲಿ ಡೇವಿಡ್ಸನ್ ಮೇಲಿನ ಇಳುವರಿ ಸುಂಕ ಕಡಿತವನ್ನು ರಾಜತಾಂತ್ರಿಕ ನಡೆಯೆಂದು ಪರಿಗಣಿಸಲಾಗುತ್ತಿದೆ. ಈಗ ಪ್ರಶ್ನೆ ಏನೆಂದರೆ ಇದು ಆಟೋ ಉದ್ಯಮಕ್ಕೆ ಎಷ್ಟು ಲಾಭ ತರುತ್ತದೆ ಮತ್ತು ಭಾರತ ಐಷಾರಾಮಿ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆಯೇ?
ಈ ಬಾರಿಯ ಕೇಂದ್ರ ಬಜೆಟ್‌ನಿಂದ ಆಗಲಿರುವ 3 ಮಹತ್ವದ ಬದಲಾವಣೆ ಏನು?