ಕೈಗೆಟುಕುವ ಬೆಲೆಯಲ್ಲಿ ಹೊಸ ವಿನ್ಯಾಸದ ಹೀರೋ ಡೆಸ್ಟಿನಿ ಸ್ಕೂಟರ್, ಸಾಟಿಯಿಲ್ಲದ ಮೈಲೇಜ್

By Chethan Kumar  |  First Published Jan 15, 2025, 9:51 PM IST

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆಯಾಗಿದೆ. 59 ಕಿಲೋಮೀಟರ್ ಮೈಲೇಜ್, ಕೈಗೆಟುಕುವ ದರ, ಬ್ಲೂಟೂತ್ ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ಹಲವು ವಿಶೇಷತೆ ಇದರಲ್ಲಿದೆ.


ಬೆಂಗಳೂರು(ಜ.15) ಹೊಚ್ಚ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆಯಾಗಿದೆ. ಹೊಸ ವಿನ್ಯಾಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಮೈಲೇಜ್, ಕೈಗೆಟುಕುವ ಬೆಲೆ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. ಹೊಸ ಡೆಸ್ಟಿನಿ 125, ಕುಟುಂಬಗಳಿಗೆ ಸೂಕ್ತ ಆಯ್ಕೆಯಾಗಿದ್ದು, 59 ಕಿಮೀ/ಲೀಟರ್‌ನ ವಿಭಾಗದಲ್ಲಿ ಅತೀ ಹೆಚ್ಚಿನ ಮೈಲೇಜ್ ಒದಗಿಸಲಿದೆ. ಇನ್ನು ಐದು ಬಣ್ಣಗಳಲ್ಲಿ ಸ್ಕೂಟರ್ ಲಭ್ಯವಿದೆ. ನೂತನ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ. 

ಹೊಸ ಹೀರೋ ಡೆಸ್ಟಿನಿ 125 3 ವೇರಿಯೆಂಟ್‌ನಲ್ಲಿ ಲಭ್ಯ(ಎಕ್ಸ್ ಶೋ ರೂಂ ಬೆಲೆ)
* ಡೆಸ್ಟಿನಿ 125 VX - ರೂ.80,450
* ಡೆಸ್ಟಿನಿ 125 ZX - ರೂ. 89,300
* ಡೆಸ್ಟಿನಿ 125 ZX+ - ರೂ. 90,300
 
ರೈಡರ್ ಅನುಕೂಲತೆ ಮತ್ತು ಸುರಕ್ಷತೆಗಾಗಿ ಪ್ರಕಾಶಿತ ಸ್ಟಾರ್ಟ್ ಸ್ವಿಚ್ ಮತ್ತು ಆಟೋ-ಕ್ಯಾನ್ಸಲ್ ವಿಂಕರ್‌ಗಳಂತಹ ಉದ್ಯಮದಲ್ಲೇ ಮೊದಲ ವೈಶಿಷ್ಟ್ಯಗಳಿರುವ ಹೊಸ ಡೆಸ್ಟಿನಿ 125 ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಡೆಸ್ಟಿನಿ 125 ಉದ್ದವಾದ ಸೀಟನ್ನು ಹೊಂದಿದ್ದು ಸವಾರರಿಗೆ ಆರಾಮದಾಯಕ ಮತ್ತು ದಕ್ಷತಾಶಾಸ್ತ್ರದ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಸ್ಮಾರ್ಟ್, ಸುಗಮ ಮತ್ತು ಮಿತ ವ್ಯಯದಲ್ಲಿ ಓಡಾಡಲು ವಿನ್ಯಾಸಗೊಳಿಸಲಾದ ಈ ಸ್ಕೂಟರ್, ಹೊಸ ಡಿಜಿಟಲ್ ಸ್ಪೀಡೋಮೀಟರ್, 190ಮಿಮೀ ಫ್ರಂಟ್ ಡಿಸ್ಕ್ ಬ್ರೇಕ್, ನವೀಕರಿಸಿದ 12/12 ಪ್ಲಾಟ್‌ಫಾರ್ಮ್ ಮತ್ತು ಅಗಲವಾದ ಹಿಂಬದಿ ಚಕ್ರವನ್ನು ಹೊಂದಿದೆ. ದಕ್ಷತೆ ಹೆಚ್ಚಿಸಲು ಹೀರೋನ ನವೀನ i3S (ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್) ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಬಹಳ ಆಲೋಚಿಸಿ ವಿನ್ಯಾಸಗೊಳಿಸಲಾದ ಸೀಟ್ ಬ್ಯಾಕ್‌ರೆಸ್ಟ್, ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅತ್ಯುತ್ತಮ ಸವಾರಿ ಅನುಭವವನ್ನು ನೀಡುತ್ತದೆ.

Tap to resize

Latest Videos

200 ಕಿ.ಮಿ ಮೈಲೇಜ್ ರೇಂಜ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಾ ಟಾಟಾ?

ಹೀರೋ ಡೆಸ್ಟಿನಿ 125 ರಲ್ಲಿ ಸಂಸ್ಕರಿಸಿದ ಮತ್ತು ಪರಿಣಾಮಕಾರಿ 125cc ಇಂಜಿನ್‌ ಇದ್ದು, 7000 rpm ನಲ್ಲಿ 9bhp ಮತ್ತು 5500rpm ನಲ್ಲಿ 10.4 nm ನ ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ. i3S ತಂತ್ರಜ್ಞಾನ ಮತ್ತು ಒನ್-ವೇ ಕ್ಲಚ್‌ನೊಂದಿಗೆ, ವೇಗವರ್ಧನೆ ಬಹಳ ಚುರುಕಾಗಿ ಆಗುತ್ತದೆ ಜೊತೆಗೆ ನ ಅತ್ಯುತ್ತಮ ಮೈಲೇಜ್ 59 ಕಿಮೀ/ಲೀ.

ಕಾಲಿಡಲು ಆರಾಮವಾಗಿರುವಷ್ಟು ಸ್ಥಳವಿರುವುದರಿಂದ ದೂರ ಪ್ರಯಾಣದ ಸಮಯದಲ್ಲಿಯೂ ಸಹ ಆರಾಮವಾಗಿರುತ್ತದೆ. ಮುಂಭಾಗದ ಕೈಗವಸು ಪೆಟ್ಟಿಗೆಯಲ್ಲಿ ಅಗತ್ಯ ವಸ್ತುಗಳನ್ನು ಆರಾಮವಾಗಿ ಇಟ್ಟುಕೊಳ್ಳಬಹುದು. ಲಗೇಜ್ ಬಾಕ್ಸ್‌ ನಲ್ಲಿರುವ ಬೂಟ್ ಲ್ಯಾಂಪ್, ಗೋಚರತೆಯನ್ನು ಹೆಚ್ಚಿಸುವುದರಿಂದ ಮಂದ-ಬೆಳಕಿದ್ದಾಗ ವಸ್ತುಗಳನ್ನು ನಿರ್ವಹಿಸಲು ಅನುಕೂಲಕರವಾಗುತ್ತದೆ. ಆಧುನಿಕತೆಯ ಸ್ಪರ್ಶಕ್ಕಾಗಿ ಸ್ಕೂಟರ್ ತಾನಾಗೇ ಆಫ್ ಆಗುವ ವಿಂಕರ್‌ಗಳನ್ನು ಹೊಂದಿದ್ದು ಒಂದು ತಿರುವಿನ ನಂತರ ಇಂಡಿಕೇಟರುಗಳು ತಾವಾಗಿಯೇ ಆಫ್ ಆಗುತ್ತವೆ. 

ಬ್ಲೂಟೂತ್ ಸಂಪರ್ಕವಿರುವ ಸುಧಾರಿತ ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಸಿಒ ಸೂಚಕ, ನೈಜ-ಸಮಯದ ಮೈಲೇಜ್ ಪ್ರದರ್ಶನ (ಆರ್.ಟಿ.ಎಂ.ಐ), ಇಂಧನ ಇನ್ನೂ ಎಷ್ಟು ದೂರಕ್ಕೆ ಸಾಲುತ್ತದೆ ಮತ್ತು ಕಡಿಮೆ ಇಂಧನ ಸೂಚಕ ಸೇರಿದಂತೆ ಹಲವಾರು ಸ್ಮಾರ್ಟ್‌ಫೋನ್-ಹೊಂದಾಣಿಕೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಮಿಸ್ಡ್ ಕಾಲ್‌ಗಳು, ಸಂದೇಶಗಳು ಮತ್ತು ಒಳಬರುವ ಕರೆಗಳ ಎಚ್ಚರಿಕೆಗಳೊಂದಿಗೆ, ಈ ಹೊಸ ಡ್ಯಾಶ್‌ಬೋರ್ಡ್, ಸವಾರರಿಗೆ ಸದಾ ಸಂಪರ್ಕದಲ್ಲಿರಲು ಮತ್ತು ನೈಜ-ಸಮಯದ ನಿರ್ದೇಶನಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.  

ಹೋಂಡಾ ಆ್ಯಕ್ಟಿವಾ 7ಜಿ ಸ್ಕೂಟರ್ ಬಿಡುಗಡೆ ಸಜ್ಜು, ಇದ್ರ ಬೆಲೆ, ಮೇಲೇಜ್ ಗ್ರಾಹಕರಿಗೆ ಹಬ್ಬ
 

click me!