Electric Bike ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ದಾಖಲೆ, 350 ಕಿ.ಮೀ ಮೈಲೇಜ್!

By Suvarna News  |  First Published Jan 13, 2022, 5:08 PM IST
  • ಮೆಜಾಟ್ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ 350 ಕಿ.ಮೀ ಮೈಲೇಜ್ ರೇಂಜ್
  • ಗರಿಷ್ಠ ಮೈಲೇಜ್ ನೀಡಬಲ್ಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್
  • ಭಾರತದಲ್ಲಿ ಲಭ್ಯವಿರುವ ಎಲ್ಲಾ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಹಿಂದಿಕ್ಕಿದ ಮೆಜಾಟ್

ನವದೆಹಲಿ(ಜ.13): ಭಾರತದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ವಾಹನ(Electric Vehicle) ಬಿಡುಗಡೆಯಾಗುತ್ತಿದೆ. ಹೊಸ ಆವಿಷ್ಕಾರ, ತಂತ್ರಜ್ಞಾನದ ಬಳಕೆ ದೇಶವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ. ಇದೀಗ ದೆಹಲಿಯ ಮೆಜಾಟ್ ಎಲೆಕ್ಟ್ರಿಕ್ (Mazout Electric) ಸ್ಟಾರ್ಟ್ಆಪ್ ಕಂಪನಿಯ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಹೊಸ ದಾಖಲೆ ಬರೆದಿದೆ. ಕಾರಣ ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 350 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದು ಅತ್ಯಂತ ಗರಿಷ್ಠ ಮೈಲೇಜ್ ರೇಂಜ್ ಆಗಿದೆ.

ದೇಶದಲ್ಲಿ ಓಲಾ, ಬೌನ್ಸ್, ಸಿಂಪಲ್ ಒನ್ ಸ್ಕೂಟರ್ ಈಗಾಗಲೇ 200 ಆಸುಪಾಸಿನ ಮೈಲೇಜ್(Mileage) ರೇಂಜ್ ದೃಢೀಕರಿಸಿದೆ. ಆದರೆ ಮೆಜಾಟ್ ಎಲೆಕ್ಟ್ರಿಕ್ ಮತ್ತೊಂದು ಹೆಜ್ಜೆ ಮುಂದು ಹೋಗಿದೆ. ಬರೋಬ್ಬರಿ 350 ಕಿ.ಲೋಮೀಟರ್ ಮೈಲೇಜ್. ಭಾರತದಲ್ಲಿ ಸದ್ಯ ಲಭ್ಯವಿರುವ ಯಾವು ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಈ ಗರಿಷ್ಠ ಮೈಲೇಜ್ ನೀಡಿಲ್ಲ. ಆದರೆ ಈ ಸಾಧನೆಯನ್ನು ಮೆಜಾಟ್ ಕ್ರ್ಯೂಸರ್ ಬೈಕ್(Mazout Cruiser Bike) ಮಾಡಿದೆ.

Tap to resize

Latest Videos

undefined

Electric Bike 273KM ವೇಗ, 235 ಕಿ.ಮೀ ಮೈಲೇಜ್, ಮಾರುಕಟ್ಟೆಗೆ ಅತ್ಯಂತ ಆಕರ್ಷಕ ಬೈಕ್ ಅನಾವರಣ!

ಮೆಜಾಟ್ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿ ಪಡಿಸಿ ಕಾರ್ಯರೂಪಕ್ಕೆ ತಂದಿರುವುದು ವಿದ್ಯಾರ್ಥಿಗಳು(Students). ದೆಹಲಿಯ ಟೆಕ್ನಿಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ಈ ಸಾಧನೆ ಮಾಡಿದೆ. ಮೆಜಾಟ್ ಎಲೆಕ್ಟ್ರಿಕ್ ಕಂಪನಿ ಸಂಸ್ಥಾಪಕ ಅಖಿಲ್. ಎಂಜಿನೀರಿಂಗ್ ವಿದ್ಯಾರ್ಥಿಗಳ ಆವಿಷ್ಕಾರ ಇದೀಗ ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಿದೆ. 

ಅತೀ ಆಕರ್ಷಕ ಡಿಸೈನ್, ಆರಾಮದಾಯಕ ರೈಡಿಂಗ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ. ಈ ಬೈಕ್‌ನಲ್ಲಿ 25kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಪವರ್ ಬ್ಯಾಟರಿ ಮಾತ್ರವಲ್ಲ ಇದರಲ್ಲಿ ಬಳಸಿರುವ ತಂತ್ರಜ್ಞಾನ ಈ ಮೈಲೇಜ್‌ಗೆ ಕಾರಣವಾಗಿದೆ. ಅತೀ ಕಡಿಮೆ ಪವರ್ ಬಳಸಿ ಎಲೆಕ್ಟ್ರಿಕ್ ಮೋಟಾರ್ ರನ್ ಆಗುವಂತೆ ಮಾಡಲಾಗಿದೆ. ಇದರಿಂದ ಹೆಚ್ಚಿನ ಮೈಲೇಜ್ ಸಿಗುತ್ತಿದೆ.

Electric Bike 100ಕಿ.ಮೀ ಮೈಲೇಜ್, ಮೇಡ್ ಇನ್ ಇಂಡಿಯಾ ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಜನವರಿ ಅಂತ್ಯಕ್ಕೆ ಲಾಂಚ್!

ಮೆಜಾಟ್ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಸಂಪೂರ್ಣ ಜಾರ್ಜ್ ಮಾಡಲು 6 ಗಂಟೆ ಸಮಯ ತೆಗೆದುಕೊಳ್ಳಲಿದೆ. 3 ಗಂಟೆಯಲ್ಲಿ ಶೇಕಡಾ 50 ರಷ್ಟು ಚಾರ್ಜ್ ಆಗಲಿದೆ. ಒಂದೂವರೆ ಗಂಟೆ ಚಾರ್ಜ್ ಮಾಡಿದರೆ 70 ರಿಂದ 75 ಕಿಲೋಮೀಟರ್ ಮೈಲೇಜ್ ನೀಡಲಿದೆ. ವೇಗದಲ್ಲೂ ಇತರ ಎಲೆಕ್ಟ್ರಿಕ್ ಬೈಕ್‌ಗಳಿಗಿಂತ ಮುಂಚೂಣಿಯಲ್ಲಿದೆ. ಕಾರಣ ಈ ಬೈಕ್ ಗರಿಷ್ಠ ಸ್ಪೀಡ್ 120 ಕಿ.ಮೀ ಪ್ರತಿ ಗಂಟೆಗೆ. 

ಮೆಜಾಟ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:
ಮೆಜಾಟ್ ಎಲೆಕ್ಟ್ರಿಕ್ ಸ್ಕೂಟರ್ ಹಲವು ತಂತ್ರಜ್ಞಾನಗಳಿಂದ ಕೂಡಿದ ಅತ್ಯುತ್ತಮ ಕ್ರ್ಯೂಸರ್ ಬೈಕ್. ಇದರ ಮೈಲೇಜ್, ವಿನ್ಯಾಸಗಳಿಂದಲೇ ಈ ಬೈಕ್ ಜನಪ್ರಿಯವಾಗಿದೆ. ಶೀಘ್ರದಲ್ಲೇ ನೂತನ ಕ್ರ್ಯೂಸರ್ ಬೈಕ್ ಬಿಡುಗಡೆಯಾಗಲಿದೆ. ಈ ಬೈಕ್ ಬೆಲೆ 3 ರಿಂದ 3.5 ಲಕ್ಷ ಎಂದು ಅಂದಾಜಿಸಲಾಗಿದೆ. 

2012ರ ಜನವರಿಯಲ್ಲಿ ಮೆಜಾಟ್ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಕಾರ್ಯಗಳು ಆರಂಭಗೊಂಡಿತು. ಆದರೆ ಲಾಕ್‌ಡೌನ್, ಕೊರೋನಾ ಕಾರಣ ಬೈಕ್ ಟೆಸ್ಟ್ ರೈಡ್ ಸೇರಿದಂತೆ ಹಲವು ಕಾರ್ಯಗಳು ವಿಳಂಬಗೊಂಡಿತು.  ಇದೀಗ ಮತ್ತೆ ಚುರುಕಿನ ಕೆಲಸ ಆರಂಭಗೊಂಡಿದೆ. 

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ:
ಭಾರತದಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸ್ಕೂಟರ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಒಲಾ, ಬೌನ್ಸ್, ಸಿಂಪಲ್ ಒನ್, ಬಜಾತ್ ಚೇತಕ್, ಟಿವಿಎಸ್ ಐಕ್ಯೂಬ್ ಒಕಿನಾವ, ಎದರ್, ಆ್ಯಂಪರ್ ಸೇರಿದಂತೆ 20ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಇನ್ನು ರಿವೋಲ್ಟ್, ಅಲ್ಟ್ರಾವೈಲೆಟ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಬೈಕ್‌ಗಳು ಲಭ್ಯವಿದೆ.

ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ನೆಕ್ಸಾನ್, ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು, ಹ್ಯುಂಡೈ ಕೋನಾ, ಎಂಜಿ ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಲಭ್ಯವಿದೆ.

click me!