
ನವದೆಹಲಿ: ಚಳಿಗಾಲ ಶುರುವಾಗಿದೆ. ಈ ಚಳಿಗಾಲ ಕೇವಲ ಮನುಷ್ಯರ ಆರೋಗ್ಯದ ಮೇಲೆ ಮಾತ್ರವಲ್ಲ, ವಾಹನದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ತಾಪಮಾನ ಕಡಿಮೆ ಆದಂತೆ ಟೈರ್‍ಗಳ ಗಾಳಿಯ ಒತ್ತಡವೂ ಪರಿಣಾಮ ಬೀರುತ್ತದೆ. ಅನೇಕ ವಾಹನ ಸವಾರರು ಟೈರ್ ಒತ್ತಡ ಯಾವಾಗಲೂ ಒಂದೇ ರೀತಿ ಇರುತ್ತದೆ ಎಂದುಕೊಳ್ತಾರೆ. ಆದರೆ ಅವರ ಊಹೆ ತಪ್ಪು. ಹಾಗಿದ್ದರೆ ಏನು? ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಯಾಕೆಂದರೆ ಕಡಿಮೆ ಗಾಳಿ ತುಂಬಿದ ಟೈರ್‌ಗಳಲ್ಲಿ ವ್ಯತ್ಯಾಸ ಆಗುತ್ತದೆ. ರಸ್ತೆಯೊಂದಿಗಿನ ಘರ್ಷಣೆ ಹೆಚ್ಚಿಸುತ್ತದೆ ಮತ್ತು ಇದು ಟೈರ್ ಸವೆತಕ್ಕೆ ಕಾರಣ ಆಗುತ್ತದೆ. ಮತ್ತೊಂದೆಡೆ.. ಅತಿಯಾಗಿ ಗಾಳಿ ತುಂಬಿದ ಟೈರ್‌ಗಳು ರಸ್ತೆಯೊಂದಿಗಿನ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ಇದು ಒರಟಾದ ಭೂಪ್ರದೇಶದಲ್ಲಿ ನಿಮ್ಮ ಬೈಕಿನ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಟೈರ್ ಒತ್ತಡವನ್ನು ನಿಯಮಿತವಾಗಿ ನೋಡಿಕೊಳ್ಳುತ್ತಿರಬೇಕು.
ಇನ್ನು ಬೈಕ್‌ನ ಟೈರ್‌ಗಳಲ್ಲಿ ಇಷ್ಟೇ ಗಾಳಿ ಇರಬೇಕು ಎಂಬ ಒಂದೇ ನಿಯಮವಿಲ್ಲ. ಅದು ಬೈಕ್ ಮಾದರಿ, ಟೈರ್ ಗಾತ್ರ ಮತ್ತು ಲೋಡ್ ಅವಲಂಬಿಸಿರುತ್ತದೆ. ಸಾಮಾನ್ಯ ಪ್ರಯಾಣಿಕ ಬೈಕ್‌ಗಳಿಗೆ, ಮುಂಭಾಗದ ಟೈರ್ ಸುಮಾರು 25 PSI ಗೆ ಮತ್ತು ಹಿಂಭಾಗದ ಟೈರ್ ಸುಮಾರು 28-32 PSIಗೆ ಗಾಳಿ ತುಂಬಿಸಲು ಹೇಳಲಾಗುತ್ತದೆ. ಹಿಂಬದಿ ಸವಾರ ಅಥವಾ ಹೆಚ್ಚುವರಿ ಲಗೇಜ್ ಇದ್ದರೆ ಹಿಂಭಾಗದ ಟೈರ್‍ನ ಒತ್ತಡ ಹೆಚ್ಚಾಗುತ್ತದೆ.
ಟೈರ್ ಒತ್ತಡ ಪರಿಶೀಲಿಸಲು ಉತ್ತಮ ಸಮಯ ಬೆಳಿಗ್ಗೆ. ಬೈಕ್ ದೀರ್ಘಕಾಲದವರೆಗೆ ನಿಲ್ಲಿಸಿದಾಗ ಮತ್ತು ಟೈರ್‌ಗಳು ತಣ್ಣಗಾಗಿರುತ್ತವೆ. ಇದನ್ನು ಕೋಲ್ಡ್ ಟೈರ್ ಪ್ರೆಶರ್ ಎಂದು ಕರೆಯುತ್ತಾರೆ. ಗಾಡಿ ಓಡಿಸಿದಾಗ ಟೈರ್‌ಗಳು ಬೆಚ್ಚಗಾಗುತ್ತವೆ. ಗಾಳಿಯ ಮಟ್ಟವೂ ಏರಿಕೆ ಆಗುತ್ತದೆ. ಬಿಸಿಯಾದ ಟೈರ್ ಡಿಫ್ಲೇಟ್ ಮಾಡುವ ಮೂಲಕ ಒತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸಬಾರದು.
ಚಳಿಗಾಲ ಬಂದಾಗ 15 ದಿನಕ್ಕೊಮ್ಮೆ ಬೈಕ್ ಟೈರ್ ಒತ್ತರ ನೋಡಿಕೊಳ್ಳಬೇಕು. ನೀವು ನಿತ್ಯ ದೂರದ ಪ್ರಯಾಣ ಮಾಡುತ್ತಿದ್ದರೆ ಮೊದಲೇ ಪರಿಶೀಲಿಸಿಕೊಳ್ಳಬೇಕು. ದೂರದ ಪ್ರಯಾಣದ ವೇಳೆ ಎರಡು ಟೈರ್‍ಗಳ ಒತ್ತಡವನ್ನು ನೋಡಿಕೊಳ್ಳಬೇಕು. ಮುಂದೆ ಆಗಬಹುದಾದ ಅನಾಹುತಗಳಿಂದ ಪಾರಾಗಬೇಕು ಅಂದ್ರೆ ನೀವು ವಾಹನಗಳ ಟೈರ್ ಗಳ ಮೇಲೆ ಅಷ್ಟೇ ಕಾಳಜಿ ಇರಬೇಕಾಗುತ್ತದೆ.