20 ರೂ.ಗೆ 92 ಕಿ.ಮೀ ಓಡುವ ಈ ಸ್ಕೂಟರ್‌ ಗೆ ಬಹು ಬೇಡಿಕೆ ! ಜನರ ಫೆವರೆಟ್‌ ಸ್ಕೂಟರ್‌ ಬೆಲೆ ಎಷ್ಟು ಗೊತ್ತಾ?

Published : Oct 31, 2026, 09:41 AM IST
TVS Orbiter

ಸಾರಾಂಶ

ಹಬ್ಬದ ಸಂದರ್ಭದಲ್ಲಿ ಸ್ಕೂಟರ್‌ ಖರೀದಿ ಪ್ಲಾನ್ ಮಾಡ್ತಿದ್ರೆ ಇತ್ತೀಚಿಗೆ ಜನರ ಫೆವರೆಟ್‌ ಸ್ಕೂಟರ್‌ ಯಾವ್ದು? ಅದ್ರ ಫೀಚರ್‌ ಏನು, ಅದರ ಬೆಲೆ ಎಷ್ಟು ಎಂಬುದನ್ನು ಚೆಕ್‌ ಮಾಡಿ.

ದಿನ ದಿನಕ್ಕೂ ಎಲೆಕ್ಟ್ರಿಕ್‌ ಸ್ಕೂಟರ್‌ ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ ನಂತ್ರ ಜನರು ನಿತ್ಯದ ಬಳಕೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಮೊರೆ ಹೋಗ್ತಿದ್ದಾರೆ. ಎಲೆಕ್ಟ್ರಿಕ್‌ ಸ್ಕೂಟರ್‌ ಮಾರಾಟದಲ್ಲಿ ಈಗ ಟಿವಿಎಸ್‌ ಉತ್ತಮ ಪ್ರದರ್ಶನ ನೀಡ್ತಿದೆ. ಕಂಪನಿಯ ಟಾಪ್ ಸೆಲ್ಲಿಂಗ್ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ ಆಗಿದೆ. ಇದರ ಜೊತೆಗೆ ಮತ್ತೊಂದು ಸ್ಕೂಟರ್ ಕೂಡ ಗ್ರಾಹಕರ ಗಮನ ಸೆಳೆಯುತ್ತಿದೆ. ಅದುವೇ ಟಿವಿಎಸ್ ಆರ್ಬಿಟರ್.

ಆರ್ಬಿಟರ್ಗೆ ಹೆಚ್ಚಿದ ಬೇಡಿಕೆ

ಟಿವಿಎಸ್ ಆರ್ಬಿಟರ್ ಮಾರಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದ ಟಾಪ್ 5 ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ಗಳ ಪಟ್ಟಿಯಲ್ಲೂ ಇದು ಸ್ಥಾನ ಪಡೆದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಟಿವಿಎಸ್ ಆರ್ಬಿಟರ್ ಮಾರಾಟ ಅಚ್ಚರಿ ಮೂಡಿಸಿದೆ. ಅಥರ್ ರಿಜ್ಟಾಗೆ ಪೈಪೋಟಿ ನೀಡಿರುವ ಈ ಸ್ಕೂಟರ್ನ ಬರೋಬ್ಬರಿ 17,027 ಯುನಿಟ್ಗಳು ಮಾರಾಟವಾಗಿವೆ.

ಕಂಪನಿಯ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್

ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ಗಳ ಪೈಕಿ ಆರ್ಬಿಟರ್ ಅತ್ಯಂತ ಕಡಿಮೆ ಬೆಲೆಯ ಮಾಡೆಲ್. ಇದು ವಿಭಿನ್ನ ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ.

ಬೆಲೆ ಎಷ್ಟು ಗೊತ್ತಾ?

ಟಿವಿಎಸ್ ಆರ್ಬಿಟರ್ನ ಆರಂಭಿಕ ಎಕ್ಸ್ ಶೋರೂಂ ಬೆಲೆ 85,500 ರೂಪಾಯಿ. ಆದರೆ BaaS (Battery as a Service) ಯೋಜನೆಯಡಿ ಇದನ್ನು 49,999 ರೂಪಾಯಿಗಳ ಆರಂಭಿಕ ಬೆಲೆಗೆ ಖರೀದಿಸಬಹುದು. ಈ ಯೋಜನೆಯಲ್ಲಿ ಬ್ಯಾಟರಿ ಬಳಕೆಗೆ ಪ್ರತ್ಯೇಕ ಶುಲ್ಕ ಅನ್ವಯಿಸುತ್ತದೆ.

ಬ್ಯಾಟರಿ ಮತ್ತು ರೇಂಜ್ ಎಷ್ಟು?

ಆರ್ಬಿಟರ್ V1 ಮಾದರಿಯಲ್ಲಿ 1.8kWh ಬ್ಯಾಟರಿ ನೀಡಲಾಗಿದೆ. ಇದು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 92 ಕಿ.ಮೀ. ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮಾದರಿ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಮತ್ತೊಂದು ಮಾಡೆಲ್ 158 ಕಿ.ಮೀ ರೇಂಜ್

ಆರ್ಬಿಟರ್ V2 ಮಾದರಿಯಲ್ಲಿ 3.1kWh ಬ್ಯಾಟರಿ ನೀಡಲಾಗಿದೆ. ಇದು ಫುಲ್ ಚಾರ್ಜ್ನಲ್ಲಿ 158 ಕಿ.ಮೀ. ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್ ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಫುಲ್ ಚಾರ್ಜ್ಗೆ ಖರ್ಚು ಕೇವಲ 20 ರೂಪಾಯಿ

ಒಂದು ಯುನಿಟ್ ವಿದ್ಯುತ್ಗೆ 10 ರೂಪಾಯಿ ಎಂದು ಲೆಕ್ಕ ಹಾಕಿದರೆ, 1.8kWh ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಲು ಸುಮಾರು 18 ರೂಪಾಯಿ ಖರ್ಚಾಗುತ್ತದೆ. ಅಂದರೆ ಸರಿಸುಮಾರು 20 ರೂಪಾಯಿಯಲ್ಲಿ 92 ಕಿ.ಮೀ. ಪ್ರಯಾಣಿಸಬಹುದು ಎಂಬುದು ಈ ಸ್ಕೂಟರ್ನ ವಿಶೇಷತೆ.

PREV
Read more Articles on
click me!

Recommended Stories

ಎಲೆಕ್ಟ್ರಿಕ್ Vs ಪೆಟ್ರೋಲ್ ಸ್ಕೂಟರ್: 1 ವರ್ಷದಲ್ಲಿ ಯಾವುದರಲ್ಲಿ ಉಳಿತಾಯ ಹೆಚ್ಚು? ಇಲ್ಲಿದೆ ಲೆಕ್ಕಾಚಾರ
200 ಕಿಮೀ ಮೈಲೇಜ್, ಚಾರ್ಜಿಂಗ್ ಚಿಂತೆಯೇ ಬೇಡ! ಇದು ವಿಶ್ವದ ಮೊದಲ AI ಚಾಲಿತ ಬೈಕ್