Bike launch: ಹೋಂಡಾ H’ness ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ, CB300R ಅನಾವರಣ!

By Suvarna News  |  First Published Dec 5, 2021, 5:18 PM IST
  • ಹೊಚ್ಚ ಹೊಸ ಹೊಸ CB300R BSVI  ಅನಾವರಣ
  • ಭಾರತ್ ಬೈಕ್ ಸಪ್ತಾಹದಲ್ಲಿ ಹೊಂಡಾ H’ness ಬೈಕ್ ಬಿಡುಗಡೆ
  • ಆಕರ್ಷಕ ಬಣ್ಣ, ವಿನ್ಯಾಸದಲ್ಲಿ ಬೈಕ್ ಲಭ್ಯ

ಮುಂಬೈ(ಡಿ.05) : ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ಬಹು ನಿರೀಕ್ಷಿತ ನಿಯೊ  ಸ್ಪೋರ್ಟ್ಸ್ ಕೆಫೆ CB300R BSVI ಬೈಕ್ ಬಿಡುಗಡೆ ಮಾಡಿದೆ.  ಕಂಪನಿಯು ತನ್ನ H’ness CB350 ಒಂದು ವರ್ಷ ಪೂರ್ಣಗೊಳಿಸಿದ  ಸಂಭ್ರಮಾಚರಣೆಗಾಗಿ H’ness ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ.  

H’ness ಆ್ಯನಿವರ್ಸರಿ ಎಡಿಶನ್
ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ನಲ್ಲಿ ಸುವರ್ಣ ಧ್ಯೇಯದ ಲಾಂಛನ ಒಳಗೊಂಡಿರುವ ಮೂಲಕ, ತನ್ನ ಮೊದಲ ವರ್ಷದ ಸಂತಸ ಮತ್ತು ಉಲ್ಲಾಸ ಸಂಭ್ರಮಾಚರಣೆಯ H’ness  ವಾರ್ಷಿಕ ಆವೃತಿಯ ಭವ್ಯ ನೋಟಕ್ಕೆ ಹೊಸ ಮೆರುಗು ನೀಡಿದೆ. 

Latest Videos

undefined

ವಾರ್ಷಿಕೆಯ ಆವೃತ್ತಿಯ ಲಾಂಛನವನ್ನು ಟ್ಯಾಂಕ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಸವಾರರ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸುವ ಬಗೆಯಲ್ಲಿ ಲಾಂಛನವನ್ನು ವಿಶಿಷ್ಟ ಬಗೆಯಲ್ಲಿ ಅಳವಡಿಸಲಾಗಿದೆ. ಕಂದು ಬಣ್ಣದ ಡ್ಯುಯೆಲ್ ಸೀಟ್ - ಸವಾರ ಮತ್ತು ಹಿಂಬದಿ ಸವಾರನಿಗೆ ಹೆಚ್ಚುವರಿ ಆರಾಮ ಒದಗಿಸಲಿದೆ.  ಅದರ ಕ್ರೋಮ್  ಸ್ಟಾಂಡ್  ಮೋಟರ್ ಸೈಕಲ್‌ನ ಪ್ರೀಮಿಯಂ  ಆಕರ್ಷಣೆ ಹೆಚ್ಚಿಸಿದೆ

Honda bikes:ಬೆಂಗಳೂರಲ್ಲಿ ಹೊಂಡಾ ಬಿಗ್‌ವಿಂಗ್ ಶೋ ರೂಂ ಉದ್ಘಾಟನೆ!.

ಹೊಂಡಾ H’ness ಬೈಕ್ ಬಣ್ಣದ ಮುಂಭಾಗದ ಮತ್ತು  ಹಿಂಭಾಗದ ಮಡ್‌ಗಾರ್ಡ್ಸ್, ವಿನ್ಯಾಸದ ಏಕರೂಪತೆ ಕಾಯ್ದುಕೊಳ್ಳಲು ನೆರವಾಗಲಿವೆ. ಮರು ಕಲ್ಪನೆಯ  ಕ್ರೌನ್ ಹ್ಯಾಂಡಲ್, ವಿಭಿನ್ನ ಬಣ್ಣಗಳ ಆಯ್ಕೆಗಳ ಜೊತೆ ಸಮೀಕರಣಗೊಳ್ಳುವ ಮೂಲಕ ಮೋಟರ್ ಸೈಕಲ್‌ನ ಸದೃಢ ನೋಟವನ್ನು ಕಾಯ್ದುಕೊಳ್ಳಲಿದೆ.  ಇದರ ಬೆಲೆ ರೂ 2.03 ಲಕ್ಷ (ಎಕ್ಸ್ ಶೋ ರೂಂ).

ಹೊಸ CB300R BSVI  ಅನಾವರಣ
CB300R BSVI  ನಲ್ಲಿ ಭಾರತ್ 6 ಮಾನದಂಡದ 286 CC DOAHC  4-ವಾಲ್ವ್ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆಗೆ  PGM-Fi ತಂತ್ರಜ್ಞಾನ ಅಳವಡಿಸಲಾಗಿದೆ. ಇದು ನಗರದಲ್ಲಿನ ಸವಾರಿ ಸಂದರ್ಭದಲ್ಲಿ ಬಲಿಷ್ಠ ವೇಗವರ್ಧನೆ ಮತ್ತು   ಹೆಚ್ಚು ಖಚಿತವಾದ ಪ್ರತಿಕ್ರಿಯೆ ಒದಗಿಸಲಿದೆ. ಈ ಹೊಸ ಮೋಟರ್‌ಸೈಕಲ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಹೊಂದಿದೆ. ಇದು ಸಾಮಾನ್ಯ ಕ್ಲಚ್ ಕಾರ್ಯವಿಧಾನಕ್ಕೆ ಹೋಲಿಸಿದರೆ ಕಡಿಮೆ ಲೋಡ್ ಅಗತ್ಯವಿರುವ ಕ್ಲಚ್ ಕಾರ್ಯಾಚರಣೆಗಳಿಗೆ ನೆರವು ಒದಗಿಸುತ್ತದೆ. ಆದರೆ ಡೌನ್‌ಶಿಫ್ಟ್ಗಳ ಸಮಯದಲ್ಲಿ ಹಠಾತ್ ಎಂಜಿನ್ ಬ್ರೇಕಿಂಗ್‌ನಿಂದ ಉಂಟಾಗುವ ಅಹಿತಕರ ಆಘಾತಗಳನ್ನು ಕಡಿಮೆ ಮಾಡಲು ಸ್ಲಿಪ್ಪರ್ ಫಂಕ್ಷನ್, ವಿವಿಧ ಬಗೆಯ ಸವಾರಿ ಸಂದರ್ಭದಲ್ಲಿ ಕಡಿಮೆ ಆಯಾಸ ಮತ್ತು ಹೆಚ್ಚಿನ ಸೌಕರ್ಯವನ್ನು ಖಚಿತಪಡಿಸುತ್ತದೆ. 

ತಿಂಗಳ ಮಾರಾಟ ವರದಿ ಪ್ರಕಟ; 2.8 ಲಕ್ಷ ವಾಹನ ಮಾರಾಟ ಮಾಡಿದ ಹೊಂಡಾ

ಸುಧಾರಿತ ಎಂಜಿನಿಯರಿಂಗ್ ಮತ್ತು ಪ್ರೀಮಿಯಂ ಸೌಂದರ್ಯ, ಹಗುರವಾದ ಇನ್ವರ್ಟ್ ಫ್ರಂಟ್ ಫೋರ್ಕ್ಸ್, ಗರಿಷ್ಠ ಮಟ್ಟದ ನಿಖರತೆ ಒದಗಿಸಲಿದೆ.…ನಗರದ ಸವಾರಿಗಾಗಿ    ಸ್ಪೋರ್ಟ್ಸ್ ಬೈಕ್‌ಗಳ ಸಾರ್ವತ್ರಿಕ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ.

ಮುಂದಿನ ಬ್ರೇಕ್‌ಗಳಿಗಾಗಿ 4-ಪಾಟ್ ರೇಡಿಯಲ್ ಮೌಂಟೆಡ್ ಕ್ಯಾಲಿಪರ್ಸ್ಗಳು 296 mm ಹಬ್‌ಲೆಸ್ ಫ್ಲೋಟಿಂಗ್ ಡಿಸ್ಕ್ ಮತ್ತು 220 mm ರಿಯರ್ ಡಿಸ್ಕ್ ಬ್ರೆಕ್,  ಡ್ಯುಯೆಲ್ ಚಾನೆಲ್ ABS ಅಳವಡಿಸಲಾಗಿದೆ. ಇದು ಮುಂದಿನ ಮತ್ತು ಹಿಂದಿನ ABS ಬ್ರೇಕಿಂಗ್‌ಗಾಗಿ ಒಂದೇ ಬಗೆಯ  ಮೆಸರ್‌ಮೆಂಟ್ ಯುನಿಟ್ (IMU) ಆಗಿ ಕಾರ್ಯನಿರ್ವಹಿಸುತ್ತದೆ.  ಹಠಾತ್ ಬ್ರೇಕ್ ಸಂದರ್ಭದಲ್ಲಿ ಭಾರವನ್ನು ಅತ್ಯುತ್ತಮ ರೀತಿಯಲ್ಲಿ ವಿತರಣೆ ಮಾಡಲಿದೆ.

ಹೊಸ ಹೆಚ್ಚುವರಿ ಸೌಲಭ್ಯಗಳಾದ ಗಿಯರ್ ಪೊಸಿಷನ್ ಮತ್ತು ಸೈಡ್ ಸ್ಟಾಂಡ್ ಇಂಡಿಕೇಟರ್ ವಿತ್ ಎಂಜಿನ್ ಇನ್‌ಹಿಬಿಟರ್ ಮೂಲಕ ಸುಧಾರಿತ ಮಾಹಿತಿ ಪ್ರದರ್ಶಿಸಲಿದೆ. ಪರಿಪೂರ್ಣವಾಗಿ ಇರುವ ಸಂಪೂರ್ಣ ಡಿಜಿಟಲಿಕರಣಗೊಂಡಿರುವ ಲಿಕ್ವಿಡ್ ಕ್ರಿಸ್ಟಲ್ ಮೀಟರ್, ಹಗಲು ಅಥವಾ ರಾತ್ರಿ ಹೊತ್ತಿನಲ್ಲಿ ಮಾಹಿತಿಯನ್ನು ತ್ವರಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.    

ಹೋಂಡಾದ ನಿಯೊ ಸ್ಪೋರ್ಟ್ಸ್ ಕೆಫೆ ಕುಟುಂಬವು ಮೋಟರ್ ಸೈಕ್ಲಿಂಗ್‌ನ ಸಾಂಪ್ರದಾಯಿಕ ಮೂಲ ಶೈಲಿಯನ್ನು ಪ್ರತಿನಿಧಿಸುತ್ತದೆ. ಇದು ಸಾಮಾನ್ಯ ಬಗೆಯ ಸವಾರಿಯನ್ನು ಉಲ್ಲಾಸದಾಯಕ  ಸವಾರಿಯಾಗಿ ಪರಿವರ್ತಿಸುತ್ತದೆ. ಹೊಸ-ಯುಗದ ಭಾರತ್6 (BSVI)  CB300R ಬೈಕ್  ವಿಶಿಷ್ಟ ಶೈಲಿ ಮತ್ತು ಸೌಂದರ್ಯದ ಮೂಲಕ ತನ್ನ ಮತ್ತಷ್ಟು ಆಕರ್ಷಕವಾಗಿದೆ.  ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಇದು ಗ್ರಾಹಕರ ಪ್ರೀತಿ ಮತ್ತು ವಿಶ್ವಾಸವನ್ನು ಪಡೆದುಕೊಂಡಿದ್ದು H’ness CB350  ವಾರ್ಷಿಕ ಆವೃತ್ತಿಯು ಅದರ ಸವಾರರ ಹೆಮ್ಮೆಯನ್ನು ಪ್ರದರ್ಶಿಸುತ್ತದೆ ಎಂದು  ಹೋಂಡಾ  ವ್ಯವಸ್ಥಾಪಕ ನಿರ್ದೇಶಕ ಅತ್ಸುಶಿ ಒಗಾಟಾ ಹೇಳಿದರು.

click me!