ಶೇ.85ರಷ್ಟು ಎಥೆನಾಲ್‌ನಲ್ಲಿ ಚಲಿಸುವ ಹೋಂಡಾ ADV160 ಸ್ಕೂಟರ್ ಲಾಂಚ್, ಕೇವಲ 5000 ರೂ ಬುಕಿಂಗ್

Published : Aug 27, 2026, 04:42 PM IST
Honda ADV160 E85 Scooter Launched

ಸಾರಾಂಶ

ಹೋಂಡಾ ಫ್ಲೆಕ್ಸ್ ಫ್ಯೂಯೆಲ್ ಸ್ಕೂಟರ್ ಬಿಡುಗಡೆ ಮಾಡಿದೆ. ಹೋಂಡಾ ADV160 ಸ್ಕೂಟರ್ ಶೇಕಡಾ 85ರಷ್ಟು ಎಥೆನಾಲ್ ಇಂಧನದಲ್ಲಿ ಚಲಿಸಲಿದೆ. ಮಸ್ಕುಲರ್ ಸ್ಟೈಲ್‌ನಲ್ಲಿರುವ ಈ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಬೆಂಗಳೂರು (ಆ.27) ಭಾರತದಲ್ಲಿ ಈಗಾಗಲೇ ಶೇಕಡಾ 20ರಷ್ಟು ಎಥೆನಾಲ್ ಬ್ಲೆಂಡೆಡ್ ಪೆಟ್ರೋಲ್ ಮಾರಾಟವಾಗುತ್ತಿದೆ. ಭಾರತದ ನೀತಿಗೆ ಪೂರಕವಾಗಿ ಹಾಗೂ ಮುಂಬರುವ ಸಮಸ್ಯೆಗಳಿಗೆ ಉತ್ತರವಾಗಿ ಇದೀಗ ಹೋಂಡಾ ತನ್ನ ADV160 ಸ್ಕೂಟರ್ ಫ್ಲೆಕ್ಸ್ ಫ್ಯೂಯೆಲ್ ಎಂಜಿನ್‌ನಲ್ಲಿ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಹೋಂಡಾ ADV160 ಸ್ಕೂಟರ್ ಶೇಕಡಾ 85ರಷ್ಟು ಎಥೆನಾಲ್ ಇಂಧನದಲ್ಲಿ ಚಲಿಸಲಿದೆ. ಅಂದರೆ ಶೇಕಡಾ 85ರಷ್ಟು ಎಥೆನಾಲ್ ಹಾಗೂ ಶೇಕಡಾ 15ರಷ್ಟು ಪೆಟ್ರೋಲ್ ಮೂಲಕ ಈ ಸ್ಕೂಟರ್ ಚಲಿಸಲಿದೆ.

ಹೊಸ ಹೋಂಡಾ ADV160 ಸ್ಕೂಟರ್ ಬೆಲೆ

ಫ್ಲೆಕ್ಸ್ ಫ್ಯೂಯೆಲ್ ಹೋಂಡಾ ADV160 ಸ್ಕೂಟರ್ ಬೆಲೆ 1.70 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ವಿಶೇಷ ಅಂದರೆ ಇದು ಭಾರತದ ಮೊದಲ ಫ್ಲೆಕ್ಸ್ ಫ್ಯೂಯೆಲ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದೆ. ಅಡ್ವೆಂಚರ್-ಸ್ಟೈಲ್ ಮ್ಯಾಕ್ಸಿ ಸ್ಕೂಟರ್ ADV160 ಸ್ಕೂಟರ್‌ನ್ನು ಫ್ಲೆಕ್ಸ್ ಫ್ಯೂಯೆಲ್ ರೂಪದಲ್ಲಿ ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಕೇವಲ 5000 ರೂಪಾಯಿ ಪಾವತಿಸಿ ಸ್ಕೂಟರ್ ಬುಕಿಂಗ್ ಮಾಡಿಕೊಳ್ಳಬಹುದು.

ಹೋಂಡಾ ADV160 ಸ್ಕೂಟರ್ ಎಂಜಿನ್

ನೂತನ ಹೋಂಡಾ ADV160 ಸ್ಕೂಟರ್ ಇ85 ಸ್ಕೂಟರ್ 156.93 ಸಿಸಿ ಎಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಇದೇ ಸ್ಕೂಟರ್ ಪವರ್ 16.3BHP ಪವರ್ ಹಾಗೂ 14.9 NM ಟಾರ್ಕ್ ಸಾಮರ್ಥ್ಯ ಹೊಂದಿದೆ. ಆದರೆ ಭಾರತದಲ್ಲಿ ಇದೇ ಪವರ್ ಹಾಗೂ ಟಾರ್ಕ್ ನಿರೀಕ್ಷಿಸಲಾಗಿದೆ.

ಎಥೆನಾಲ್ ಸ್ಕೂಟರ್ ಮೈಲೇಜ್ ಎಷ್ಟು

ಶೇಕಡಾ 85ರಷ್ಟು ಎಥೆನಾಲ್ ಇಂಧನದಲ್ಲಿ ಚಲಿಸುವ ಈ ಸ್ಕೂಟರ್ ಮೈಲೇಜ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಫ್ಲೆಕ್ಸ್ ಫ್ಯೂಯೆಲ್ ಸ್ಕೂಟರ್ ಒಂದು ಲೀಟರ್ ಇಂಧನದಲ್ಲಿ 40 ರಿಂದ 45 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಈ ಮೂಲಕ ಪೆಟ್ರೋಲ್ ಎಂಜಿನ್ ಬೈಕ್‌ನಷ್ಟೇ ಮೈಲೇಜ್ ಸಾಮರ್ಥ್ಯ ನೀಡುವುದರಿಂದ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ಕಾರಣ ಎಥೆನಾಲ್ 1 ಲೀಟರ್ ಬೆಲೆ ಸರಿಸುಮಾರು 60 ರೂಪಾಯಿ.

ಐದು ಇಂಚಿನ TFT ಡಿಸ್‌ಪ್ಲೇ, ಹೋಂಡಾ ರೋಡ್‌ಸಿಂಕ್ ಕನೆಕ್ಟಿವಿಟಿ (ಟರ್ನ್-ಬೈ-ಟರ್ನ್ ನ್ಯಾವಿಗೇಶನ್, SMS/ಕಾಲ್ ಅಲರ್ಟ್‌ಗಳು, ಮ್ಯೂಸಿಕ್ ಕಂಟ್ರೋಲ್), ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC – ಟ್ರ್ಯಾಕ್ಷನ್ ಕಂಟ್ರೋಲ್), ಡ್ಯುಯಲ್ ಡಿಸ್ಕ್ ಬ್ರೇಕ್‌ಗಳು, ಸಿಂಗಲ್-ಚಾನೆಲ್ ABS, USB ಚಾರ್ಜಿಂಗ್, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಇನ್ನು ಸೀಟ್ ಸ್ಟೋರೇಜ್ 27 ಲೀಟರ್ ಹೊಂದಿದೆ. ಹೆಚ್ಚಿನ ಸ್ಟೋರೇಜ್ ಸ್ಪೇಸ್ ಕೂಡ ಲಭ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ

PREV
Read more Articles on
click me!

Recommended Stories

ಹೊಸ ಅವತಾರ, ಆರು ಕಲರ್, ಆಕರ್ಷಕ ಲುಕ್‌ , ಹೆಚ್ಚುವರಿ ಫೀಚರ್ ಜಾವಾ 42 FJ ಬೈಕ್ ಲಾಂಚ್
ಹೊಚ್ಚ ಹೊಸ ಅವತಾರದಲ್ಲಿ ಬಜಾಜ್ ಪಲ್ಸರ್ 150.. ಹೊಸ ಲುಕ್, ಹೈಟೆಕ್ ಫೀಚರ್ಸ್, ಬೆಲೆ ಎಷ್ಟು?