Renewable resources ಪುನರ್‌ಬಳಕೆ ಇಂಧನ ಬಳಕೆ ಹೆಚ್ಚಿಸಿದ ಹೋಂಡಾ 2 ವ್ಹೀಲರ್ಸ್ ಇಂಡಿಯಾ

By Suvarna NewsFirst Published Dec 18, 2021, 11:33 PM IST
Highlights
  • ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸಿದ ಹೋಂಡಾ 2ವೀಲರ್ಸ್ ಇಂಡಿಯಾ
  • ಗುಜರಾತ್‌ನಲ್ಲಿ ಎರಡನೇ ಗಾಳಿ ವಿದ್ಯುತ್ ಯಂತ್ರ ಸ್ಥಾಪನೆ 
  • ಹೋಂಡಾ ಘಟಕದಲ್ಲಿ ಹೈಬ್ರಿಡ್ ಪುನರ್‌ಬಳಕೆ  ಸಂಪನ್ಮೂಲ ಇಂಧನ ಬಳಕೆ

ಅಹಮದಾಬಾದ್(ಡಿ.18): ಭಾರತದಲ್ಲಿ ಇದೀಗ ಪುನರ್ ಬಳಕೆ ವಸ್ತುಗಳು, ಇಂಧನಗಳಿಗೆ(Renewable resources) ಹೆಚ್ಚಿನ ಮಹತ್ವ ಸಿಗುತ್ತಿದೆ. ಈ ಮೂಲಕ ಪರಿಸರಕ್ಕೆ ಪೂರಕ ವಾತಾವಣ ನಿರ್ಮಾಣಕ್ಕೆ ಭಾರತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಹೊಂಡಾ 2 ವ್ಹೀಲರ್ಸ್ ಇಂಡಿಯಾ ಮತ್ತೊಂದು ಹೆಜ್ಜೆ ಇಟ್ಟಿದೆ. ಪುನರ್ ಬಳಕೆ ಇಂಧನ ಪ್ರಮಾಣ ಹೆಚ್ಚಿಸಲು 2ನೇ ವಿಂಡ್ ಟರ್ಬೈನ್(wind turbine) ಉದ್ಘಾಟಿಸಿದೆ. ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಉದ್ದೇಶಕ್ಕೆ  ಗಾಳಿ ಮತ್ತು ಸೌರ ವಿದ್ಯುತ್‌ನಂತಹ ಹೈಬ್ರಿಡ್ ಇಂಧನ ಸೌಲಭ್ಯ ಬಳಕೆ ಹೆಚ್ಚಿಸಲು  ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ(India) ಮುಂದಾಗಿದೆ. ಇದಕ್ಕಾಗಿ ಗುಜರಾತ್‌ನ ದ್ವಾರಕಾ ಜಿಲ್ಲೆಯಲ್ಲಿ ಇರುವ   ಕಂಪನಿಯ ವಿಠಲಪುರ ಸ್ಥಾವರದಿಂದ ಸುಮಾರು250 ಕಿ. ಮೀ ದೂರದಲ್ಲಿರುವ ಭಂವಡ್‌ನಲ್ಲಿ ತನ್ನ2 ನೇ ಗಾಳಿ ವಿದ್ಯುತ್ ಯಂತ್ರಗಳನ್ನು (ಟರ್ಬೈನ್) ಉದ್ಘಾಟಿಸಿದೆ.

ಇದರಿಂದ ಹೋಂಡಾ ಇಂಡಿಯಾ ಘಟಕಗಳಲ್ಲಿ ನವೀಕರಿಸಾಗದ ಇಂಧನ ಬಳಕೆ ಕಡಿಮೆಯಾಗಲಿದೆ. ಹೆಚ್ಚುತ್ತಿರುವ ತೈಲ ಬೆಲೆ ಏರಿಕೆ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಹೋಂಡಾ ಇಂಡಿಯಾ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ಇಂಧನ ಅವಲಂಬನೆಯಿಂದ ಮುಕ್ತವಾಗುತ್ತಿದೆ. ಈ ಮೂಲಕ ಸ್ವಾವಲಂಬಿಯಾಗುತ್ತಿದೆ. 

Honda 2Wheelers ವಿಶ್ವಮಾರುಕಟ್ಟೆಗೆ ದ್ವಿಚಕ್ರ ವಾಹನ ಪೂರೈಕೆಗೆ ಭಾರತದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ!

ರೂ 176 ದಶಲಕ್ಷ ಹೂಡಿಕೆಯೊಂದಿಗೆ ಇದನ್ನು ನಿರ್ಮಿಸಲಾಗಿದೆ. ಕಳೆದ ವರ್ಷ ಗುಜರಾತ್‌ನ ಪಟನ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ ತನ್ನ ಮೊದಲ ಗಾಳಿ ವಿದ್ಯುತ್ (2 ಮೆಗಾವಟ್ ಸಾಮರ್ಥ್ಯ) ಸೌಲಭ್ಯ ಸೇರಿದಂತೆ ಈಗ ಒಟ್ಟು 4.7 ಮೆಗಾವಾಟ್ ಪವನ ಶಕ್ತಿಯನ್ನು ಹೋಂಡಾ ಉತ್ಪಾದಿಸುತ್ತಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ,  HMSI ಈಗ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಿಂದ ಮನೇಸರ್ (ಹರಿಯಾಣ), ತಪುಕರ (ರಾಜಸ್ಥಾನ), ನರಸಾಪುರ (ಕರ್ನಾಟಕ) ಮತ್ತು ವಿಠಲಪುರ (ಗುಜರಾತ್) ನಲ್ಲಿರುವ ತನ್ನ ೪ ತಯಾರಿಕಾ ಘಟಕಗಳಲ್ಲಿ ಒಟ್ಟು ಇಂಧನ / ವಿದ್ಯುತ್ ಅವಶ್ಯಕತೆಗಳ ಶೇ 50 ಕ್ಕಿಂತ ಹೆಚ್ಚು ಪ್ರಮಾಣವನ್ನು ಉತ್ಪಾದಿಸುತ್ತಿದೆ

Honda Activa125 Premium: ಮತ್ತಷ್ಟು ಆಕರ್ಷಕ, ಹೋಂಡಾ ಆ್ಯಕ್ಟೀವಾ 125 ಪ್ರೀಮಿಯಂ ಸ್ಕೂಟರ್ ಬಿಡುಗಡೆ!

ಸಮಾಜದ ಬಗೆಗಿನ ತನ್ನ ಜವಾಬ್ದಾರಿಯನ್ನು ತಿಳಿದಿರುವ ಹೋಂಡಾ ಕಂಪನಿಗೆ ಈಗ ಮತ್ತು ಭವಿಷ್ಯದಲ್ಲಿ, ಇಂಧನ ಸುರಕ್ಷತೆಯು ಪ್ರಮುಖ ಕ್ಷೇತ್ರವಾಗಿದೆ. ಹೋಂಡಾದಲ್ಲಿ. ನಮ್ಮ ಶಾಖೋತ್ಪನ್ನ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ, ೨೦೫೦ರ ವೇಳೆಗೆ ಇಂಗಾಲ ಡೈಆಕ್ಸೈಡ‌್ನ ಶೂನ್ಯ ಹೊರಸೂಸುವಿಕೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ‘ಎಚ್‌ಎಂಎಸ್‌ಐ’ ಸಾಗುತ್ತಿದೆ. ಗುಜರಾತ್‌ನಲ್ಲಿ ನಮ್ಮ ಎರಡನೇ ಪವನ ವಿದ್ಯುತ್ ಘಟಕ ಉದ್ಘಾಟನೆಯು ನಮ್ಮ ಉತ್ಪನ್ನಗಳು ಮತ್ತು ವ್ಯಾಪಾರ ಚಟುವಟಿಕೆಗಳು ಪರಿಸರದ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಮತ್ತೊಂದು ಹೆಜ್ಜೆಯಾಗಿದೆ. ನೈಸರ್ಗಿಕ ಪರಿಸರವನ್ನು ರಕ್ಷಿಸುವ ನಮ್ಮ ಪ್ರಯತ್ನಗಳಿಗೆ ನಾವು ಮುಂದೆಯೂ ಬದ್ಧರಾಗಿರುತ್ತೇವೆ ಎಂದು  ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾದ ಅಧ್ಯಕ್ಷ  ಅತ್ಸುಶಿ ಒಗಾಟಾ ಹೇಳಿದ್ದಾರೆ.`

ಭವಿಷ್ಯದ ಪೀಳಿಗೆಯ ಸುಸ್ಥಿರತೆಗಾಗಿ ಸೌರ ಮತ್ತು ಪವನ ಶಕ್ತಿಯ ಬಳಕೆ
ನವೀಕರಿಸಬಹುದಾದ ಇಂಧನ ಬಳಸುವುದನ್ನು ಮತ್ತಷ್ಟು ವಿಸ್ತರಿಸುವ ಮೂಲಕ, ಹೋಂಡಾ ೨ವೀಲರ್ಸ್ ಇಂಡಿಯಾ, ವಿದ್ಯುತ್ ಉತ್ಪಾದನೆಗೆ ಸುಸ್ಥಿರ ಸಂಪನ್ಮೂಲಗಳಲ್ಲಿ ಸತತವಾಗಿ ಹೂಡಿಕೆ ಮಾಡುತ್ತಿದೆ. ಪ್ರತಿ ವರ್ಷ ಶೇ ೬೬ರಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಭಾರತದಾದ್ಯಂತ ಇರುವ ‘ಎಚ್‌ಎಂಎಸ್‌ಐ’ನ ಎಲ್ಲ ತಯಾರಿಕಾ ಘಟಕಗಳಲ್ಲಿ ಕಂಪನಿಯ ವೈವಿಧ್ಯಮಯ ಇಂಧನ ಅವಶ್ಯಕತೆಗಳನ್ನು ಪೂರೈಸಲು ನವೀಕರಿಸಬಹುದಾದ ಇಂಧನ ಮೂಲಗಳನ್ನು ಗಮನಾರ್ಹವಾಗಿ ಬಳಸಿಕೊಳ್ಳುತ್ತವೆ.

ಹಣಕಾಸು ವರ್ಷ 202-21 ರಲ್ಲಿ ‘ಎಚ್‌ಎಂಎಸ್‌ಐ’ ನವೀಕರಿಸಬಹುದಾದ ಸಂಪನ್ಮೂಲಗಳಿಂದ 22 ದಶಲಕ್ಷ ಕಿಲೊವಾಟ್ ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಿದೆ. ಈ ಮೂಲಕ  ಪರಿಸರಕ್ಕೆ55,000 ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ. 

click me!