Electric Scooter Charging ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ ಹೀರೋ ಸ್ಕೂಟರ್ EV!

By Suvarna News  |  First Published Dec 15, 2021, 8:12 PM IST
  • ಭಾರತದಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ
  • ಹಲವು ಆವಿಷ್ಕಾರ ಕಂಡರೂ ಮೈಲೇಜ್ ಹಾಗೂ ಚಾರ್ಜಿಂಗ್ ಸವಾಲು
  • ಸಮಸ್ಯೆಗಳಿಗೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಉತ್ತರ
  • ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಬಲ್ಲ ಸ್ಕೂಟರ್

ನವದೆಹಲಿ(ಡಿ.15): ದೇಶ ಇದೀಗ ಎಲೆಕ್ಟ್ರಿಕ್ ವಾಹನದತ್ತ(Electric Vehicle) ದಾಪುಗಾಲಿಡುತ್ತಿದೆ. ಮಾಲಿನ್ಯ ತಗ್ಗಸಿ, ಇಂಧನ ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ, ಮೈಲೇಜ್ ಹಾಗೂ ಚಾರ್ಜಿಂಗ್ ಭಾರತದಲ್ಲಿ ಅತೀ ದೊಡ್ಡ ಸವಾಲು. ಇದೀಗ ಹೀರೋ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಅಡೆ ತಡೆ ನಿವಾರಿಸುತ್ತಿದೆ. ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿರುವ ಹೀರೋ ಇದೀಗ ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್(Charge) ಆಗಬಲ್ಲ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ.

ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಚಿಂಗ್(Battery Charging) ಸಮಯ ಹೆಚ್ಚಾಗಿದೆ. ಸಂಪೂರ್ಣ ಚಾರ್ಚ್‌ಗೆ ಕನಿಷ್ಠ 50 ನಿಮಿಷ 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇದು ಅತೀ ದೊಡ್ಡ ಸಮಸ್ಯೆಯಾಗಿದೆ. ಆದರೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್(Hero Electric Scooter) ಲಾಗ್9 ಜೊತೆ ಒಪ್ಪಂದ ಮಾಡಿಕೊಂಡಿದೆ. ಇದೀಗ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಲಾಗ್9  ರ್ಯಾಪಿಡ್X ಬ್ಯಾಟರಿ‌ಗಳನ್ನು ಬಳಕೆ ಮಾಡಲಿದೆ. ಈ ಬ್ಯಾಟರಿ ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. 

Latest Videos

undefined

2,999 ರೂ EMI ಸೇರಿದಂತೆ ಆಕರ್ಷಕ ಕೂಡುಗೆ; ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಇನ್ನೂ ಸುಲಭ!

ಇನ್‌ಸ್ಟಾ ಚಾರ್ಜ್ ರ್ಯಾಪಿಡ್ x ಬ್ಯಾಟರಿಯಿಂದ ಅತೀ ವೇಗದಲ್ಲಿ ಚಾರ್ಜ್ ಮಾಡಲು ಸಾಧ್ಯವಿದೆ. ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಈ ಬ್ಯಾಟರಿ ಬಳಸಲಿದೆ. ಇಷ್ಟೇ ಅಲ್ಲ ಲಾಗ್9  ರ್ಯಾಪಿಡ್X ಬ್ಯಾಟರಿಗಳು ತಿಂಗಳ ಬಾಡಿಗೆಗೂ ಲಭ್ಯವಿದೆ. ಸುಲಭ ಹಾಗೂ ಕಡಿಮೆ ಪಾವತಿ ಮಾಡಿ ಬ್ಯಾಟರಿಯನ್ನು ಬಳಕೆ ಮಾಡಬಹುದು. ಕೇವಲ ಒಂದು ಚಹಾ ಕುಡಿದು ಮುಗಿಸುವಷ್ಟರಲ್ಲಿ ಬ್ಯಾಟರಿ ಚಾರ್ಜ್ ಆಗಲಿದೆ. ಇದರಿಂದ ಚಾರ್ಜಿಂಗ್ ಸಮಯ ಉಳಿತಾಯವಾಗಲಿದೆ. 

ಕೊರೋನಾ ಸಂಕಷ್ಟ , ಲಾಕ್‌ಡೌನ್ ಸೇರಿದಂತೆ ಹಲವು ಅಡೆತಡೆಗಳ ನಡುವೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದೆ. ದೇಶ ವಿದೇಶ ಸೇರಿದಂತೆ ಇದುವರೆಗೂ 4 ಲಕ್ಷ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವಾಗಿದೆ. ಈ ಮೂಲಕ ಶೇಕಡಾ 36 ರಷ್ಟು ಮಾರುಕಟ್ಟೆಯನ್ನು ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಆಕ್ರಮಿಸಿಕೊಂಡಿದೆ. 

Simple Electric Scooter ಓಲಾ ಹಿಂದಿಕ್ಕಿಲು ಸಿಂಪಲ್ ಎನರ್ಜಿ ಪ್ಲಾನ್, ಆರಂಭವಾಗುತ್ತಿದೆ ವಿಶ್ವದ ಅತೀ ದೊಡ್ಡ ಉತ್ಪಾದನಾ ಘಟಕ!

2021ರಲ್ಲಿ ಇದುವರೆಗೆ ಭಾರತದಲ್ಲಿ 65,000 ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವಾಗಿದೆ. ಈಗಾಗಲೇ 2,000 ಚಾರ್ಚಿಂಗ್ ಸ್ಟೇಶನ್ ಅಳವಡಿಸಲಾಗಿದೆ. ಇದೀಗ 20,00 ಚಾರ್ಜಿಂಗ್ ಸ್ಟೇಶನ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ವಿಶೇಷ ಅಂದರೆ ಕಳೆದ ಹಬ್ಬದ ಸಂದರ್ಭದಲ್ಲಿ ಹೀರೋ 24,000 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿದೆ. 2020ರ ಸಾಲು ಸಾಲು ಹಬ್ಬದ ಸಂದರ್ಭದಲ್ಲಿ ಹೀರೋ 11,339 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿತ್ತು.

ದೇಶದಲ್ಲಿ ಈಗಾಗಲೇ 300 ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ತೆರಯಲಾಗಿದೆ. ಇನ್ನು 700 ಶೋರೂಂಗಳ ಕಾರ್ಯವೂ ಭರದಿಂದ ಸಾಗಿದೆ. ದೇಶದಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಕ್ರಾಂತಿಗೆ ಮುಂದಾಗಿದೆ. ಇದೀಗ ಕಡಿಮೆ ಸಮಯದಲ್ಲಿ ಚಾರ್ಜ್ ಆಗಬಲ್ಲ ಬ್ಯಾಟರಿ ಪರಿಚಯಿಸಲು ಮುಂದಾಗಿದೆ. ಇದರಿಂದ ಮತ್ತಷ್ಟು ಗ್ರಾಹಕರು ಇದೀಗ ಹೀರೋದತ್ತ ಆಕರ್ಷಿತರಾಗುವುದರಲ್ಲಿ ಅನುಮಾನವಿಲ್ಲ.

ಹೀರೋ ಎಲೆಕ್ಟ್ರಿಕ್ ಫೋಟೋನ್ HX, ಹೀರೋ ಎಲೆಕ್ಟ್ರಿಕ್ ಆಪ್ಟಿಮಾ  HX, ಹೀರೋ ಎಲೆಕ್ಟ್ರಿಕ್ NYX HX, ಹೀರೋ ಎಲೆಕ್ಟ್ರಿಕ್ ಆಪ್ಟಿಮಾ LX, ಹೀರೋ ಎಲೆಕ್ಟ್ರಿಕ್ ಫ್ಲಾಶ್  LX, ಹೀರೋ ಎಲೆಕ್ಟ್ರಿಕ್ ಎಟ್ರಿಯಾ LX ಸ್ಕೂಟರ್ ಲಭ್ಯವಿದೆ. ಈ ಸ್ಕೂಟರ್ ಪೈಕಿ ಸಿಂಗಲ್ ಬ್ಯಾಟರಿ ಹಾಗೂ ಡ್ಯುಯೆಲ್ ಬ್ಯಾಟರಿ ಆಯ್ಕೆಯೂ ಇದೆ. ದೇಶದಲ್ಲಿ ಹೀರೋ ಎಲೆಕ್ಟ್ರಿಕ್ ಮುಂಚೂಣಿ ಅತೀ ದೊಡ್ಡ ಹಾಗೂ ಅಗ್ರ ಕಂಪನಿಯಾಗಿ ಬೆಳೆದುನಿಂತಿದೆ.
 

click me!