Harley-Davidson e-bike: ಶೀಘ್ರದಲ್ಲೇ ಕೈಗೆಟುಕುವ ಬೆಲೆಯ, ಕಡಿಮೆ ತೂಕದ S2 Del Mar ಮಾರುಕಟ್ಟೆಗೆ!

By Suvarna News  |  First Published Dec 17, 2021, 1:19 PM IST

ಹಾರ್ಲೆ ಡೇವಿಡ್ಸನ್ ಮುಂದಿನ ಕೆಲವು ವರ್ಷಗಳಲ್ಲಿ ಲೈವ್‌ವೈರ್ ಒನ್ ಸರಣಿಯ S2 ಡೆಲ್ ಮಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಹಾರ್ಲೆಯ ಹೊಸ ಮತ್ತು ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಮಾದರಿಗಳನ್ನು ಭಾರತದಲ್ಲಿಯೂ ಬಿಡುಗಡೆಯಾಗಲಿವೆ. ಹೆವಿ ಬೈಕ್ ತಯಾರಕರ ಈ ಮಾಡೆಲ್‌ ಮಾತ್ರ ಕಡಿಮೆ ತೂಕ ಹೊಂದಿದೆ.  ಮಧ್ಯಮ ವಿಭಾಗದಲ್ಲಿ ಇದರ ಬೆಲೆ ನಿಗದಿಯಾಲಿದೆ ಎಂದು ತಿಳಿದು ಬಂದಿದೆ.
 


Auto Desk: ಹಾರ್ಲೆ-ಡೇವಿಡ್ಸನ್ ಈಗ ಕೈಗೆಟುಕುವ ಬೆಲೆಯ ಬೈಕ್‌ಗಳನ್ನು ತಯಾರಿಸಲಿದೆ. ಕಂಪನಿಯು ತನ್ನ ಪ್ರೀಮಿಯಂ EV ಬ್ರ್ಯಾಂಡ್ ಲೈವ್‌ವೈರ್ (LiveWie) ಮೂಲಕ ಎಲೆಕ್ಟ್ರಿಕ್ ಬೈಕ್ (Electric Bike) ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಮುಂದಿನ ಕೆಲವು ವರ್ಷಗಳಲ್ಲಿ ಲೈವ್‌ವೈರ್ ಒನ್ ಸರಣಿಯ ಅಡಿಯಲ್ಲಿ 'S2 ಡೆಲ್ ಮಾರ್' ಅನ್ನು ಪರಿಚಯಿಸುತ್ತದೆ. ಹಾರ್ಲೆ-ಡೇವಿಡ್ಸನ್ ಅತ್ಯಂತ ಐಷಾರಾಮಿ ಮತ್ತು ದುಬಾರಿ ಬೈಕ್‌ಗಳನ್ನು ಉತ್ಪಾದನೆಯಲ್ಲಿ ಹೆಸರುವಾಸಿಯಾಗಿದೆ. ಭಾರತದಲ್ಲೂ ಈ ದುಬಾರಿ ಬೈಕ್‌ಗೆ ಸಾಕಷ್ಟು ಬೇಡಿಕೆ ಇದೆ.

'ARROW' ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ!

Tap to resize

Latest Videos

undefined

ಇದು ಕಂಪನಿಯ ಹೊಸ ವಿಂಗ್ ಸ್ಕೇಲೆಬಲ್ ಮಾಡ್ಯುಲರ್ 'ಆರೋ' ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಪ್ಲಾಟ್‌ಫಾರ್ಮ್ ಅನ್ನು ಮಿಡಲ್‌ವೇಟ್ ವಿಭಾಗಕ್ಕೆ (Middleweight Segment)ಚೆಡ್ಡಾರ್ ಸ್ನೇಹಿ ಆವೃತ್ತಿಯಾಗಿ ( cheddar-friendly) ಅಭಿವೃದ್ಧಿಪಡಿಸಲಾಗಿದೆ. ಮತ್ತು ಮುಂಬರುವ ಸಮಯದಲ್ಲಿ, ಈ ವೇದಿಕೆಯನ್ನು ಬಳಸಿಕೊಂಡು ಕೈಗೆಟುಕುವ ಬೈಕ್ ಮಾದರಿಗಳನ್ನು ತಯಾರಿಸಲಾಗುವುದು. ಇದು ಖಂಡಿತವಾಗಿಯೂ ಭಾರತದಲ್ಲಿ ಕಂಪನಿಯ ವ್ಯವಹಾರವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಮಧ್ಯಮ ಶ್ರೇಣಿಯ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ದೇಶದಲ್ಲಿ ಸದ್ದು ಮಾಡುತ್ತಿವೆ.

ಮಧ್ಯಮ ತೂಕದ ಲೈವ್‌ವೈರ್!

ಮಧ್ಯಮ ತೂಕದ ಲೈವ್‌ವೈರ್ S2 (ಸಿಸ್ಟಮ್ 2) ಮಾದರಿಯ ನಂತರ ಹಾರ್ಲೆ ಅದೇ ವೇದಿಕೆಯಲ್ಲಿ ಹೆಚ್ಚಿನ ಬೈಕ್‌ಗಳನ್ನು ತಯಾರಿಸುತ್ತಿದೆ. LiveWire S3 ಮಾದರಿ ಮತ್ತು ಹೆವಿವೇಯ್ಟ್ LiveWire S4 ಮಾದರಿಗಿಂತ ಹೆಚ್ಚು ಹಗುರವಾದ ಮಾಡೆಲ್‌ಗಳನ್ನು ಇದು ಬಿಡುಗಡೆ ಮಾಡಲಿದೆ . ಆದಾಗ್ಯೂ, H-D ಲೈವ್‌ವೈರ್‌ನ ಪ್ರೀಮಿಯಂ ಮಾದರಿಯು ಹೆಚ್ಚಿನ ಶ್ರೇಣಿ ಮತ್ತು ಬೆಲೆಯೊಂದಿಗೆ ಲಭ್ಯವಿರಲಿದೆ. ಕಂಪನಿಯ ಫ್ಲೀಟ್‌ನಲ್ಲಿ ಬೈಕ್‌ಗಳು ಈಗ ಮೊದಲಿಗಿಂತ ಹೆಚ್ಚಿನ ರೂಪಾಂತರಗಳಲ್ಲಿ ಸಿಗಲಿವೆ.

ಭಾರತದಲ್ಲಿ ಬಿಡುಗಡೆ ಯಾವಾಗ?

ಹೊಸ ಆರೋ ಪ್ಲಾಟ್‌ಫಾರ್ಮ್ ಈಘ ಅಸ್ತಿತ್ವದಲ್ಲಿರುವ ಲೈವ್‌ವೈರ್ ಒನ್‌ನ ಬ್ಯಾಟರಿ-ಇನ್-ಫ್ರೇಮ್ ಕಾರ್ಯವನ್ನು ಬದಲಾಯಿಸುತ್ತದೆ. ಇದು ಬ್ಯಾಟರಿಯನ್ನು Stressed Member ರೂಪದಲ್ಲಿ ಬಳಸುತ್ತದೆ. KTM SuperDuke R, BMW Motorrad ನ R1100RS ಅಥವಾ Ducati ಶ್ರೇಣಿಯಲ್ಲಿ ಈ ರೀತಿಯ ಬ್ಯಾಟರಿ ಕಾಣಬಹುದು. ಆರೋ ವೇದಿಕೆಯು ಮೋಟಾರ್, ಬ್ಯಾಟರಿ, ಇನ್ವರ್ಟರ್ ಮತ್ತು ಆನ್-ಬೋರ್ಡ್ ಚಾರ್ಜರ್ ಅನ್ನು ಹೊಂದಿರುತ್ತದೆ, ಇದನ್ನು ವಿವಿಧ ಸಂರಚನೆಗಳಲ್ಲಿ ಬಳಸಬಹುದು. 

S2 ಮಧ್ಯಮ ವರ್ಗದ ಖರೀದಿದಾರನ್ನು ಆಕರ್ಷಿಸುತ್ತದೆ ಮತ್ತು ಹೀಗಾಗಿ ಲೈವ್‌ವೈರ್ ಒನ್‌ನ ಬ್ಯಾಲಿಸ್ಟಿಕ್ ಮೋಟಾರ್ ಕಾರ್ಯಕ್ಷಮತೆಯನ್ನು (ballistic motor performance) ಒಳಗೊಂಡಿರುವುದಿಲ್ಲ.ಜಾಗತಿಕ ಮಾರುಕಟ್ಟೆಯ ನಂತರ ಹೊಸ ಬ್ಯಾಟರಿ ಚಾಲಿತ EV ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು.

ಕೊರೋನಾ ಗಲಾಟೆ ನಡುವೆಯೇ ಚಿಗುರಿಕೊಳ್ಳುತ್ತಿದೆ ಆಟೋಮೊಬೈಲ್ ಕ್ಷೇತ್ರ!

ಕೊರೋನಾ ಕಾಟ ಆರಂಭಕ್ಕೂ ಮುಂಚೆಯೇ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಸಂಕಟ ಅನುಭವಿಸುತ್ತಿತ್ತು. ಓಲಾ, ಊಬರ್‌ನಂಥ ವಾಹನ ಸೇವೆಯ ಕಾರಣ ಜನರು ಕಾರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವಿತ್ತ ಸಚಿವೆ ನಿರ್ಮಲಾ ಸೇತುರಾಮನ್ ಹೇಳಿಕೆ ಸಾಕಷ್ಚು ಚರ್ಚೆಗೆ ಕಾರಣವಾಗಿತ್ತು. ಆದರೆ, ಇದಕ್ಕೆ ಮಹಿಂದ್ರಾ ಕಂಪನಿಯ ಮಾಲೀಕ ಆನಂದ್ ಮಹಿಂದ್ರಾ ಧ್ವನಿಗೂಡಿಸಿದ್ದರಿಂದ ಚರ್ಚೆ ಸ್ವಲ್ಪ ತಣ್ಣಗಾಗಿತ್ತು. 

ಆದರೂ. ಆಟೋ ಕ್ಷೇತ್ರ ಸುಧಾರಿಸಿಕೊಂಡಿದ್ದು ಹೇಗೆ? ಆಟೊಮೊಬೈಲ್‌ ಕ್ಷೇತ್ರವನ್ನು ಕಾಡುತ್ತಿರುವ ಸೆಮಿಕಂಡಕ್ಟರ್‌ ಕೊರತೆ, ಕೋವಿಡ್‌-19 ಸಾಂಕ್ರಾಮಿಕ, ಕಚ್ಚಾ ತೈಲದ ದರದ ಏರಿಕೆಯ ನಡುವೆಯೂ 2021ರ ನವೆಂಬರ್‌ ತಿಂಗಳಲ್ಲಿ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ.

ಇದನ್ನೂ ಓದಿ:

1) ತಿಂಗಳಲ್ಲಿ ಮಾರಾಟವಾದ 10 ಪ್ರಮುಖ ಕಾರುಗಳ ಪಟ್ಟಿ 

2) Semiconductors Shortage: Car Book ಮಾಡಿ ವರ್ಷವಾದರೂ ಪೂರೈಕೆ ಇಲ್ಲ: ಡೆಲಿವರಿಗಾಗಿ ಕಾದಿರುವ 7 ಲಕ್ಷ ಜನ!

3) Affordable electric cars ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು!

click me!