ಬರೋಬ್ಬರಿ 1,780 ಕಿಲೋಮೀಟರ್ ದೂರ, ಕೇವಲ 24 ಗಂಟೆ. ಎಲೆಕ್ಟ್ರಿಕ್ ಸ್ಕೂಟರ್ ಹೀರೋ ವಿಡಾ ಹೊಸ ದಾಖಲೆ ಬರೆದಿದೆ. ಈ ಕುರಿತ ವಿವರ ಇಲ್ಲಿದೆ.
ನವದೆಹಲಿ(ಮೇ.011): ಹೀರೋ ಮೋಟೋಕಾರ್ಪ್‌ನ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಗಿನ್ನಿಸ್ ದಾಖಲೆ ಬರೆದಿದೆ. ರಿಲೇಯಲ್ಲಿ 24 ಗಂಟೆಗಳವರೆಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 1780 ಕಿ.ಮೀ ಅತಿ ದೂರವನ್ನು ಚಲಿಸಲಾಗಿದೆ. 2023 ಏಪ್ರಿಲ್ 20 ರಿಂದ 21 ರ ವರೆಗೆ ಭಾರತದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಆಂಡ್ ಟೆಕ್ನಾಲಜಿ (ಸಿಐಟಿ) ಜೈಪುರದಲ್ಲಿ ಹೀರೋ ಮೋಟೋಕಾರ್ಪ್‌ನ ವಿಡಾ ವಿ1 ಸಾಧಿಸಿದೆ.
ಈ ಹೊಸ ದಾಖಲೆಯನ್ನು ಮಾಡಿದ್ದಕ್ಕೆ ನಮಗೆ ಸಂತೋಷವಾಗಿದೆ. ವಿಡಾ ವಿ1 ತಯಾರಿಕೆಯಲ್ಲಿ ಮಾಡಿದ ಅಪಾರ ಪರೀಕ್ಷೆಯನ್ನು ಇದು ಒತ್ತಿ ಹೇಳುತ್ತದೆ. ಜಾಗತಿಕ ಮಟ್ಟದಲ್ಲಿ ಇವಿ ವಿಭಾಗವನ್ನು ಪ್ರೋತ್ಸಾಹಿಸುವುದು ನಮ್ಮ ಧ್ಯೇಯವಾಗಿದೆ ಎಂದು ಮೊಬಿಲಿಟಿ ಬ್ಯುಸಿನೆಸ್ ಮುಖ್ಯಸ್ಥ ಡಾ. ಸ್ವದೇಶ್ ಶ್ರೀವಾಸ್ತವ ಹೇಳಿದ್ದಾರೆ. ವಿಡಾ ವಿ1 ಕಾರ್ಯಕ್ಷಮತೆ ಮತ್ತು ಸಹಿಷ್ಣುತೆ ಆಧರಿತ ವಿಶ್ವದಾಖಲೆಯನ್ನು ಮಾಡಿದ್ದು, ಇಡೀ ಇವಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ಈ ವಿಭಾಗವು ಪಕ್ವವಾಗಿದೆ ಮತ್ತು ಅಧಿಕ ಕಾರ್ಯಕ್ಷಮತೆಯ ಉತ್ಪನ್ನಗಳನ್ನು ಹೊಂದಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಹೀರೋ ಮೋಟೋಕಾರ್ಪ್ ಮತ್ತು ಅದರ ಉತ್ಪನ್ನಗಳು ನಮ್ಮ ಗ್ರಾಹಕರಲ್ಲಿ "ವಿಶ್ವಾಸ" ಅನ್ನು ಪ್ರೋತ್ಸಾಹಿಸುತ್ತವೆ ಮತ್ತು ಅದೇ ವಿಶ್ವಾಸವನ್ನು ನಮ್ಮ ಇವಿಗಳು ಕೂಡಾ ಹೊಂದಿವೆ ಎಂಬುನ್ನು ನಾವು ಸಾಬೀತುಪಡಿಸಿದ್ದೇವೆ. ವಿಶ್ವದರ್ಜೆಯ ವಿಡಾ ವಿ1 ಅಭಿವೃದ್ಧಿಪಡಿಸುವಲ್ಲಿ ಮತ್ತು ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಕ್ಕೆ ನಮ್ಮ ಜೈಪುರ ಮತ್ತು ಜರ್ಮನಿಯಲ್ಲಿನ ಆರ್&ಡಿ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.
undefined
ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ ಹೀರೋ ವಿಡಾ ಚಾರ್ಚಿಂಗ್ ಸೌಲಭ್ಯ ಆರಂಭ!
ವಿಡಾ ವಿ1 ಎರಡು ತೆಗೆದುಹಾಕಬಹುದಾದ ಬ್ಯಾಟರಿಗಳನ್ನು ಹೊಂದಿದೆ ಮತ್ತು ಕಾರ್ಯಕ್ಷಮತೆ, ಶ್ರೇಣಿ ಮತ್ತು ಅತಿ ವೇಗದ ಶ್ರೇಣಿಯಲ್ಲೇ ಉತ್ತಮ ಸಂಯೋಜನೆಯನ್ನು ಹೊಂದಿದೆ. ವಿಡಾ ವಿ1 ವಿಶ್ವದರ್ಜೆಯ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನವನ್ನು ಈ ದಾಖಲೆಯು ಒತ್ತಿ ಹೇಳುತ್ತದೆ ಮತ್ತು ಯಾವುದೇ ವಾತಾವರಣದಲ್ಲೂ ಕೆಲಸ ಮಾಡಬಹುದಾದ ಸುಸ್ಥಿರ ಉತ್ಪನ್ನವಾಗಿ ಇದು ಅನಾವರಣಗೊಂಡಿದೆ.
ಹೀರೋ ಮೋಟೋಕಾರ್ಪ್‌ನ ಅತ್ಯಾಧುನಿಕ ಆರ್&ಡಿ ಸೌಲಭ್ಯ, ಸಿಐಟಿಯಲ್ಲಿನ ಟೆಸ್ಟ್ ಟ್ರ್ಯಾಕ್‌ಗಳಲ್ಲಿ ದಾಖಲೆಯನ್ನು ಮಾಡಲಾಗಿದೆ ಮತ್ತು ಆರು ಸವಾರರ ತಂಡ ಇದನ್ನು ಸಾಧಿಸಿದೆ. ಕಂಪನಿಯ ಜಾಗತಿಕ ಅನ್ವೇಷಣೆ ಮತ್ತು ತಂತ್ರಜ್ಞಾನದ ಕೇಂದ್ರವು ಸಿಐಟಿ ಆಗಿದೆ ಮತ್ತು ಟೆಕ್ ಸೆಂಟರ್ ಜರ್ಮನಿಯ ಜೊತೆಗೆ ಸಹಭಾಗಿತ್ವದಲ್ಲಿ ಕಳೆದ ಏಳು ವರ್ಷಗಳಲ್ಲಿ ಜಾಗತಿಕವಾಗಿ ಜನಪ್ರಿಯವಾದ ಹಲವು ಉತ್ಪನ್ನಗಳನ್ನು ಡೆಲಿವರಿ ಮಾಡಿದೆ.
2023 ಕ್ಯಾಲೆಂಡರ್ ವರ್ಷದಲ್ಲಿ 100 ನಗರಗಳಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ವಿಡಾ ಯೋಜಿಸಿದೆ. ಇದು ಹೀರೋ ಮೋಟೋಕಾರ್ಪ್‌ನ ವಿಸ್ತೃತವಾದ ಡೀಲರ್ ನೆಟ್‌ವರ್ಕ್ ಅನ್ನು ಬಳಸಿಕೊಂಡು, ದೇಶಾದ್ಯಂತ ತನ್ನ ಕಾರ್ಯಾಚರಣೆಗಳನ್ನು ತ್ವರಿತವಾಗಿ ವರ್ಧಿಸುತ್ತದೆ. ಇವಿ ವಿಭಾಗವನ್ನು ಪ್ರೋತ್ಸಾಹಿಸುವ "ಚಿಂತೆ ರಹಿತ ಇವಿ ಪರಿಸರ ವ್ಯವಸ್ಥೆ" ರಚಿಸುವುದು ವಿಡಾದ ಧ್ಯೇಯವಾಗಿದೆ.
Hero VIDA scooter ಹೀರೋದಿಂದ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ!
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತ ಅಡ್ಜಡಿಕೇಟರ್ ಸ್ವಪ್ನಿಲ್ ದಂಗರಿಕರ್ ಹೇಳುವಂತೆ "ಎಲ್ಲ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಅನುಸರಿಸುವ ಮೂಲಕ 1780 ಕಿ.ಮೀ ಅನ್ನು 24 ಗಂಟೆಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕ್ರಮಿಸುವ ಮೂಲಕ ಹೀರೋ ಮೋಟೋಕಾರ್ಪ್‌ನ ವಿಡಾ ವಿ1 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ನಿರ್ಮಿಸಿದೆ ಎಂದು ಘೋಷಿಸಲು ನನಗೆ ಖುಷಿಯಾಗುತ್ತಿದೆ. ಈ ಹಿಂದಿನ ದಾಖಲೆಯನ್ನು ಸುಮಾರು 350 ಕಿ.ಮೀ. ಇಂದ ಮೀರಿದ್ದು, ಅದೂ ಕೂಡ ಬೇಸಿಗೆಯ ವಿಪರೀತ ತಾಪಮಾನದ ಮಧ್ಯೆಯೂ ಸಾಧಿಸಿರುವುದು ಮಹತ್ವದ ಸಾಧನೆಯಾಗಿದೆ. ಹೀರೋ ಮೋಟೋಕಾರ್ಪ್‌ನ ವಿಡಾ ವಿ1 ಈಗ ಅಧಿಕೃತವಾಗಿ ಅದ್ಭುತವಾಗಿದೆ!"
ಆರು ಸವಾರರ ತಂಡವು 2023 ಏಪ್ರಿಲ್ 20 ರಂದು ಬೆಳಗ್ಗೆ 6.45ಕ್ಕೆ ಇದನ್ನು ಸಾಧಿಸಲು ಆರಂಭಿಸಿ, ರಿಲೇ ಮಾದರಿಯಲ್ಲಿ ವಿಡಾ ವಿ1 ಈ ಸಾಧನೆ ಮಾಡಿದೆ. 2023 ಏಪ್ರಿಲ್ 21 ರಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ತಂಡ ಈ ಸಾಧನೆಯನ್ನು ಮಾಡಿದೆ. ಅಂದು ಬೆಳಗ್ಗೆ 6.45 ಕ್ಕೆ 1780 ಕಿ.ಮೀ ದೂರದಲ್ಲಿ ಅಂತಿಮವಾಗಿ ಈ ಸಾಧನೆಯನ್ನು ಮಾಡಲಾಯಿತು. ಸುಮಾರು 40 ಡಿ.ಸೆಂ. ತಾಪಮಾನ ಮತ್ತು ಟ್ರಾಕ್ ತಾಪಮಾನ ಸುಮಾರು 50 ಡಿ.ಸೆಂ. ಇದ್ದು, ವಿಡಾ ವಿ1 24 ಗಂಟೆಗಳವರೆಗೂ ಉತ್ಕೃಷ್ಟ ಕಾರ್ಯಕ್ಷಮತೆಯನ್ನು ನೀಡಿದೆ. ಈ ಸಾಧನೆಯ ಸಮಯದಲ್ಲಿ ಸಿಐಟಿ ಇಂಜಿನಿಯರುಗಳ ತಂಡವು ಸವಾರರಿಗೆ ಬ್ಯಾಟರಿ ಬದಲಾವಣೆಯಲ್ಲಿ ಸಹಾಯ ಮಾಡಿದೆ. ಬಹುತೇಕ ಇವೆಲ್ಲವನ್ನೂ 20 ಸೆಕೆಂಡುಗಳಲ್ಲಿ ಮುಗಿಸಲಾಗಿದೆ.