
ಭಾರತದ ಮಾರುಕಟ್ಟೆಗೆ Hero MotoCorp ತನ್ನ ಹೊಸ ಅಪ್ಡೇಟೆಡ್ 2026 Xtreme 160R 4V ಲಾಂಚ್ ಮಾಡಿದೆ. Hero MotoCorp ಕಂಪನಿಯು ಬೈಕ್ನ ನ್ಯೂ ಲುಕ್ ಮತ್ತು ಕೆಲವು ವಿಶೇಷ ಫೀಚರ್ಸ್ ಜೊತೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಬೈಕ್ನ ಟಾಪ್ ವೇರಿಯಂಟ್ನಲ್ಲಿ ಕ್ರೂಜ್ ಕಂಟ್ರೋಲ್ ಮಾದರಿಯ ವೈಶಿಷ್ಟ್ಯತೆಯೊಂದಿಗೆ ಸಿಗಲಿದೆ. ಈ ಒಂದು ವಿಶೇಷ ಫೀಚರ್ ಸಾಮಾನ್ಯವಾಗಿ ದುಬಾರಿ ಬೈಕ್ಗಳಲ್ಲಿ ಮಾತ್ರ ಕಾಣಸಿಗುತ್ತದೆ. ಹಾಗಾಗಿ ಇಂತಹ ನ್ಯೂ ಫೀಚರ್ ಹೊಂದಿರುವ ಬೈಕ್ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗಲಿದೆ.
Xtreme 160R 4V ಬೈಕ್ ನಿಮಗೆ Standard, Pro ಮತ್ತು Carbon ಎಂಬ ಮೂರು ವೇರಿಯಂಟ್ಗಳಲ್ಲಿ ಸಿಗಲಿದೆ. ಇದರಲ್ಲಿ Carbon ವೇರಿಯಂಟ್ ಅತ್ಯಧಿಕ ಬೆಲೆಯನ್ನು ಹೊಂದಿದೆ. Carbon ವೇರಿಯಂಟ್ ಎಕ್ಸ್ ಶೋರೂಮ್ ಬೆಲೆ 1.41 ಲಕ್ಷ ರೂಪಾಯಿ ಆಗಿದೆ. ಕಂಪನಿ ಅಥವಾ ಶೋರೂಮ್ ಮುಖಾಂತರ ಈ ಬೈಕ್ನ್ನು ಬುಕ್ ಮಾಡಬಹುದಾಗಿದೆ. Pro ಮತ್ತು Carbon ವೇರಿಯಂಟ್ಗಳ ಬುಕಿಂಗ್ ಇದೇ ನವೆಂಬರ್ನಿಂದ ಆರಂಭವಾದ್ರೆ, Standard ಬುಕ್ಕಿಂಗ್ ಮಾಡಲು ಗ್ರಾಹಕರು 2027-ಜನವರಿವರೆಗೆ ಕಾಯಬೇಕಾಗುತ್ತದೆ. ಇನ್ನುಳಿದ ವೇರಿಯಂಟ್ ಎಕ್ಸ್ ಶೋರೂಂ ಬೆಲೆ 1.27 ಲಕ್ಷ ರೂ. ಆಗಿದೆ.
2026ನ ಬೈಕ್ನ ಡಿಸೈನ್ನ್ನು ಮೊದಲಿಗಿಂತ ಹೆಚ್ಚು ಸ್ಪೋರ್ಟಿ ಮಾಡಲು ಪ್ರಯತ್ನಿಸಲಾಗಿದೆ. ಫ್ಯೂಲ್ ಟ್ಯಾಂಕ್, ಬ್ಯಾಕ್ ಸೀಟ್ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಗ್ರಾಹಕರಿಗೆ ಕಂಪನಿ ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಮತ್ತೊಂದು ವಿಶೇಷ ಅಂದ್ರೆ ಕಂಪನಿಯು ಗ್ರಾಹಕರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ರೂಪಾಂತರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ.
ಈ ಬಾರಿ ಕಂಪನಿಯೂ ವೇರಿಯಂಟ್ಗಳ ಹೆಸರನ್ನು ಸಹ ಬದಲಿಸಿದೆ. ಈ ಹಿಂದಿನ ಬೇಸ್ ಮಾಡೆಲ್ ನ್ನು Standard ಎಂದು ಕರೆಯಲಾಗುತ್ತಿದೆ. Combat Edition ಬದಲಾಗಿ Pro ಎಂದು ಹೆಸರಿಡಲಾಗಿದೆ. ಈ ಎರಡರ ಜೊತೆಯಲ್ಲಿ Carbon ವೇರಿಯಂಟ್ ಸೇರ್ಪಡೆ ಮಾಡಲಾಗಿದೆ.
Xtreme 160R 4Vನ ಮೂರು ವೇರಿಯಂಟ್ನಲ್ಲಿ 164.32cc ಆಯಿಲ್ ಕ್ಲೂಡ್, 7-ವಾಲ್ವ್ ಇಂಜಿನ್ ನೀಡಲಾಗಿದೆ. ಇದರ ಮ್ಯಾಕ್ಸಿಮಮ್ ಪವರ್ ಈಗ 17.1 hp ಆಗಿದ್ದು, 8,750 rpm ನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ. ಇದರ ಹಿಂದಿನ ಮಾಡೆಲ್ಗೆ ಹೋಲಿಸಿದರೆ ಸ್ವಲ್ಪ ಏರಿಕೆಯಾಗಿದೆ. ಟಾರ್ಕ್ 14.6 Nm ನಲ್ಲಿ ಬದಲಾಗದೆ ಉಳಿದಿದೆ, 6,500 rpm ನಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ.
ಕಂಪನಿಯು ತನ್ನ ಮೂರು ವೇರಿಯಂಟ್ಗಳಲ್ಲಿ ಅಂತರವನ್ನಿಟ್ಟಿದೆ. Standardನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಮೆಕ್ಯಾನಿಕಲ್ ಥ್ರೊಟಲ್, ಸಿಂಗಲ್-ಚಾನೆಲ್ ABS ಜೊತೆ ಎರಡು ಚಕ್ರಕ್ಕೆ ಡಿಸ್ಕ್ ಬ್ರೆಕ್ ಮತ್ತು LCD Instrument Console ನೀಡಲಾಗಿದೆ.
ಇನ್ನು Pro ವೇರಿಯಂಟ್ನಲ್ಲಿ 37mm KYB USD ಫ್ರಂಟ್ ಫೋರ್ಕ್ ಮತ್ತು ಅಡ್ಜಸ್ಟೇಬಲ್ ಪ್ರಿಲೋಡ್ ರಿಯರ್ ಮೊನೊಶಾಕ್ ನೀಡಲಾಗಿದೆ. ಇದರಲ್ಲಿ Dual-channel ABS, ರೈಡ್-ಬೈ-ವಯರ್ ಸಿಸ್ಟಮ್, ರೇನ್, ರೋಡ್ ಮತ್ತು ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್ ನೀಡಲಾಗಿದೆ. ಇದರ ಕ್ರೂಜ್ ಕಂಟ್ರೋಲ್ನ್ನು ಸಹ ವಿನ್ಯಾಸಗೊಳಿಸಲಾಗಿದೆ. ಬೈಕ್ನ ಸೀಟ್ ಎತ್ತರ ಈಗ 805mm ಆಗಿದ್ದು, ಹಿಂದಿನದಕ್ಕಿಂತ 2mm ಹೆಚ್ಚಾಗಿದೆ. ತೂಕ 1.5kg ರಷ್ಟು ಹೆಚ್ಚಾಗಿ 149kg ಕ್ಕೆ ತಲುಪಿದೆ.
Carbon ವೇರಿಯಂಟ್ನಲ್ಲಿ Proನಲ್ಲಿರುವ ಎಲ್ಲಾ ಪ್ರಮುಖ ಫೀಚರ್ಸ್ ನೀಡಲಾಗಿದೆ. ಇದರಲ್ಲಿ LCD ಬದಲಾಗಿ 4.2 ಇಂಚಿನ TFT ಸ್ಕ್ರೀನ್ ನೀಡಲಾಗಿದೆ. ಈ ಸ್ಕ್ರೀನ್ Xpulse 210ನಲ್ಲಿಯೂ ಸಿಗಲಿದೆ.ಆದ್ರೆ Xtreme 160R 4V ವಿನ್ಯಾಸ ಸ್ಪೋರ್ಟಿ ಶೈಲಿಗೆ ಸರಿಹೊಂದುವಂತೆ ವಿಭಿನ್ನವಾಗಿದೆ. ಭಾರತದ ಮಾರುಕಟ್ಟೆಯಲ್ಲಿ Bajaj Pulsar NS160 ಮತ್ತು TVS Apache RTR 160 ಬೈಕ್ಗಳಿಗೆ Xtreme 160R 4V ಸ್ಪರ್ಧೆ ನೀಡಲಿದೆ.
ಇದನ್ನೂ ಓದಿ: 125ನೇ ಸಂಭ್ರಮದಲ್ಲಿ ರಾಯಲ್ ಎನ್ಫೀಲ್ಡ್ ಭರ್ಜರಿ ಕೊಡುಗೆ, ಹೈಪರ್ಶಿಫ್ಟ್ ಬೈಕ್ ಬುಕಿಂಗ್ ಆರಂಭ