Hero Bike Booking 10 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಹೀರೋ Xಪಲ್ಸ್ 200 4 Valve ಬೈಕ್!

By Suvarna News  |  First Published Jan 21, 2022, 3:45 PM IST
  • pulse 200 4Valve ಮೊದಲ ಬ್ಯಾಚ್ ಸಂಪೂರ್ಣ ಸೋಲ್ಡ್ ಔಟ್
  • 2ನೇ ಬ್ಯಾಚ್ ಬೈಕ್ ಬುಕಿಂಗ್ ಆರಂಭಿಸಿದ ಹೀರೋ ಮೋಟೋಕಾರ್ಪ್
  • ಆನ್‍ಲೈನ್ ಮೂಲಕ ನೂತನ ಬೈಕ್ ಬುಕಿಂಗ್ ಮಾಡುವ ಅವಕಾಶ

ಬೆಂಗಳೂರು(ಜ.21):  ಮಾರುಕಟ್ಟೆಯಲ್ಲಿರುವ ಆಫ್ ರೋಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗ ಹೀರೋ ಮೋಟೋಕಾರ್ಪ್(Hero MotoCorp) ಕಂಪನಿಯ ಹೀರೋ Xpulse ಅಷ್ಟೇ ಜನಪ್ರಿಯತೆ ಪಡೆದಿದೆ. ಹಲವು ಬದಲಾವಣೆ ಕಂಡ ಹೀರೋ Xpulse ಇದೀಗ 200 4Valve ಬೈಕ್ ಎರಡನೇ ಬ್ಯಾಚ್ ಬುಕಿಂಗ್ ಆರಂಭಿಸಿದೆ. ಮೊದಲ ಬ್ಯಾಚ್ ಸಂಪೂರ್ಣ ಸೋಲ್ಡ್ ಔಟ್ ಆಗಿದೆ. ಇದೀಗ ನೂತನ pulse 200 4Valve ಬೈಕ್ ಆನ್‌ಲೈನ್ ಬುಕಿಂಗ್(Online Booking) ಆರಂಭಗೊಂಡಿದೆ. 10,000 ರೂಪಾಯಿ ಮುಂಗಡ ಪಾವತಿಸಿ ನೂತನ ಬೈಕ್ ಬುಕ್ ಮಾಡಿಕೊಳ್ಳಬಹುದು.

ನೂತನ ಹೀರೋ pulse 200 4Valve ಬೈಕ್ ಬೆಲೆ 1,30,150 ರೂಪಾಯಿ (ಎಕ್ಸ್ ಶೋರೂಂ - ದೆಹಲಿ)  ತಡೆರಹಿತ ಖರೀದಿ ಅನುಭವಕ್ಕಾಗಿ ಕಂಪನಿಯ ಆನ್‍ಲೈನ್ ಮಾರಾಟ(Online Sales0 ವೇದಿಕೆಯಾದ eSHOP ನಲ್ಲಿ 10,000 ರೂಪಾಯಿ ಮುಂಗಡ ಪಾವತಿ ಮಾಡುವ ಮೂಲಕ ಬುಕ್ ಮಾಡಬಹುದು. ಬಳಕೆದಾರ ಸ್ನೇಹಿ ವ್ಯವಸ್ಥೆಯು, ನಿರ್ಧಾರ ತೆಗೆದುಕೊಳ್ಳುವ, ವಾಹನವನ್ನು ಖರೀದಿಸುವ ಮತ್ತು ವಿತರಣೆಯನ್ನು ತೆಗೆದುಕೊಳ್ಳುವ ಎಲ್ಲಾ ಸಂಬಂಧಿತ ಹಂತಗಳಲ್ಲಿ ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತದೆ.

Tap to resize

Latest Videos

ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್; ಇಲ್ಲಿದೆ ಮೂರು ಕಡಿಮೆ ಬೆಲೆಯ ಬೈಕ್!

ಅದರ ಆನ್-ರೋಡ್ ಆಫ್-ರೋಡ್(Off Road and On Road) ಸನ್ನದ್ಧತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಭಿನ್ನ ಶೈಲಿಯೊಂದಿಗೆ, XPulse - ಭಾರತದ ಮೊದಲ 200 cc  ಅಡ್ವೆಂಚರ್ ಮೋಟಾರ್‍ಸೈಕಲ್ - ಏಪ್ರಿಲ್ 2019 ರಲ್ಲಿ ಪ್ರಾರಂಭವಾದಾಗಿನಿಂದ ಪ್ರಪಂಚದಾದ್ಯಂತ ಯುವಜನರನ್ನು ಆಕರ್ಷಿಸಿದೆ.XPulse 200  ಅನ್ನು ಇಂಡಿಯನ್ ಮೋಟಾರ್‍ಸೈಕಲ್ ಆಫ್ ದಿ ಇಯರ್ (IMOTY) 2020 ) 2020 ಎಂದು ಹೆಸರಿಸಲಾಗಿದ್ದು, ಇದು ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.

ಹೊಸ XPulse 200 4Valve  ಅನ್ನು ಅದರ ಹೈಟೆಕ್ ಸಾಹಸ ಅನುಭವದ DNA ಮೇಲೆ ನಿರ್ಮಿಸಲಾಗಿದ್ದು, ಮೋಟಾರ್‍ಸೈಕಲ್ 200 cc BS-VI 4Valve  ಆಯಿಲ್ ಕೂಲ್ಡ್ ಎಂಜಿನ್‍ನೊಂದಿಗೆ ಬರುತ್ತದೆ, ಇದು 6% ಹೆಚ್ಚಿನ ಶಕ್ತಿ ಮತ್ತು 5% ಹೆಚ್ಚುವರಿ ಟಾರ್ಕ್ ಅನ್ನು ನೀಡುತ್ತದೆ, ಇದರಿಂದಾಗಿ ಹೆಚ್ಚಿನ ವೇಗದಲ್ಲಿ ವಿಶ್ರಾಂತಿ ಮತ್ತು ಒತ್ತಡ-ಮುಕ್ತ ಸವಾರಿಯನ್ನು ಖಾತ್ರಿಪಡಿಸುತ್ತದೆ.

ಆಕರ್ಷಕ ಲುಕ್-ಹೀರೋ XPlus200T ಅಡ್ವೆಂಚರ್ ಬೈಕ್ ಅನಾವರಣ !

ಉತ್ಪನ್ನದ ವೈಶಿಷ್ಟ್ಯಗಳು - XPulse 200 4VALVE ಇಂಜಿನ್
XPulse 200,  BS-VI 200 cc 4Valve ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು, ಇದು 19.1 PS @ 8500 rpm  ಮತ್ತು 17.35 Nm @ 6500 rpm ನ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 4Valve ಆಯಿಲ್ ಕೂಲ್ಡ್ ಇಂಜಿನ್ ಮಧ್ಯಮ ಮತ್ತು ಉನ್ನತ-ಮಟ್ಟದ ವೇಗಗಳ ಶ್ರೇಣಿಗಳಲ್ಲಿ ಉತ್ತಮ ಶಕ್ತಿಯನ್ನು ಒದಗಿಸುವುದಲ್ಲದೆ, ಕಂಪನಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಹೆಚ್ಚಿನ ವೇಗದಲ್ಲಿಯೂ ಸಹ ಒತ್ತಡ ರಹಿತ ಎಂಜಿನ್ ಕಾರ್ಯಕ್ಷಮತೆಯನ್ನು ನೀಡುತ್ತದೆ. 

ಭಾರೀ ವಾಹನದಟ್ಟಣೆಯಲ್ಲಿನ ಉತ್ತಮ ಶಾಖ ನಿರ್ವಹಣೆಗಾಗಿ, ಕೂಲಿಂಗ್ ವ್ಯವಸ್ಥೆಯನ್ನು ಈಗ 7 ಫಿನ್ ಆಯಿಲ್ ಕೂಲರ್‍ನೊಂದಿಗೆ ನವೀಕರಿಸಲಾಗಿದೆ. XPulse 200 4V  ನಲ್ಲಿ ಗಣನೀಯವಾಗಿ ಸುಧಾರಿತ ಟ್ರಾನ್ಸ್‍ಮಿಷನ್ ಸೆಟಪ್ ಉತ್ತಮ ಶಕ್ತಿ ಮತ್ತು ಬಾಳಿಕೆ ನೀಡುತ್ತದೆ, ಹಾಗೂ ಗೇರ್ ಅನುಪಾತವನ್ನು ಉತ್ತಮವಾದ ಟ್ರಾಕ್ಷನ್ ಸಾಧನೆ ಮತ್ತು ವೇಗವರ್ಧನೆಗಾಗಿ ನವೀಕರಿಸಲಾಗಿದೆ.

ಹೈಟೆಕ್ ಅಡ್ವೆಂಚರ್
ನವೀನ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ XPulse 200 4V ಹೆಚ್ಚಿನ ದೂರದ ಆರಾಮದಾಯಕ ಸವಾರಿಯನ್ನು ಖಾತರಿಪಡಿಸುತ್ತದೆ. ವರ್ಧಿತ LED ಹೆಡ್‍ಲೈಟ್ ರಾತ್ರಿಯಲ್ಲಿ ಉತ್ತಮ ದೃಷ್ಟಿಗೋಚರತೆಯನ್ನು ನೀಡುತ್ತದೆ ಮತ್ತು ರಸ್ತೆಯಲ್ಲಿ ಏಕರೂಪವಾಗಿ ಬೆಳಕು ಚೆಲ್ಲುತ್ತದೆ.

ಇದು ಸ್ಮಾರ್ಟ್‍ಫೋನ್ ಸಂಪರ್ಕ ಮತ್ತು ಕರೆ ಎಚ್ಚರಿಕೆಗಳೊಂದಿಗೆ ಪೂರ್ಣ ಡಿಜಿಟಲ್ ಎಲ್‍ಸಿಡಿ ಉಪಕರಣ ಕ್ಲಸ್ಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್, ಇಕೋ ಮೋಡ್ ಮತ್ತು ಎರಡು ಟ್ರಿಪ್ ಮೀಟರ್‍ಗಳು ಮತ್ತು ಸಿಂಗಲ್ ಚಾನೆಲ್ ಎಬಿಎಸ್‍ನಂತಹ ಸ್ಟ್ಯಾಂಡರ್ಡ್ ಕೊಡುಗೆಗಳಂತಹ ವಿಭಾಗ-ಪ್ರಥಮ ವೈಶಿಷ್ಟ್ಯಗಳ ಹೆಗ್ಗಳಿಕೆಗಳ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತದೆ.

ಅಡ್ವೆಂಚರ್ ಟ್ಯೂನ್ ಮಾಡಲಾಗಿದೆ
ಎಲ್ಲಾ ಭೂಪ್ರದೇಶಗಳನ್ನು ಜಯಿಸುವುದರೊಂದಿಗೆ, ಮೋಟಾರ್‍ಸೈಕಲ್ - 190 mm  ಮುಂಭಾಗ ಮತ್ತು 170 mm ಹಿಂಭಾಗದ ದೀರ್ಘವಾದ ಸಸ್ಪೆನ್ಷನ್ ಟ್ರಾವೆಲ್ ಅನ್ನು ಹೊಂದಿದ್ದು, ಜೊತೆಗೆ 21" ಮುಂಭಾಗ ಮತ್ತು 18" ಹಿಂಭಾಗದ ಸ್ಪೋಕ್ ಚಕ್ರಗಳಿವೆ. ಕಲ್ಲಿನ ಮತ್ತು ಗಟ್ಟಿಯಿರದ ಭೂಪ್ರದೇಶಗಳ ಮೂಲಕ ತೊಂದರೆ ಮುಕ್ತ ಸವಾರಿಯನ್ನು ಖಚಿತಪಡಿಸಿಕೊಳ್ಳಲು, ಮೋಟಾರ್‍ಸೈಕಲ್ ಎಂಜಿನ್ ಅನ್ನು ರಕ್ಷಿಸುವ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ಗರಿಷ್ಠ ಹಿಡಿತ ಮತ್ತು ನಿಯಂತ್ರಣಕ್ಕಾಗಿ ಹೊಸ ಹಲ್ಲಿನ ಬ್ರೇಕ್ ಪೆಡಲ್ ಮತ್ತು ಆಳವಾದ ನೀರನ್ನು ದಾಟಲು ಅನುವು ಮಾಡಿಕೊಡುವ ಅಪ್‍ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಆನ್/ಆಫ್-ರೋಡ್ ಸನ್ನದ್ಧತೆ
ಉಭಯ-ಉದ್ದೇಶದ ಟೈರ್‍ಗಳು, 10-ಸ್ಟೆಪ್‍ಗಳ ಹೊಂದಿಸಬಹುದಾದ ಮೊನೊ-ಶಾಕ್ ಸಸ್ಪೆನ್ಷನ್, ಸುಲಭ-ಸಾಧ್ಯವಾದ 825 ಮಿಮೀ ಸೀಟ್ ಎತ್ತರ ಮತ್ತು 220 ಮಿಮೀ ಹೈ ಗ್ರೌಂಡ್ ಕ್ಲಿಯರೆನ್ಸ್ ಸಾಹಸಮಯ ಸವಾರರಿಗೆ ಸುಸಜ್ಜಿತ ಪ್ಯಾಕೇಜ್ ಅನ್ನು ಒದಗಿಸುತ್ತದೆ.

ಉತ್ತಮವಾಗಿ ವಿನ್ಯಾಸಗೊಳಿಸಿದ ಚಾಸಿಸ್ ಸೆಟಪ್‍ಗೆ ಧನ್ಯವಾದಗಳು, XPulse 200 4V ದೈನಂದಿನ ಪ್ರಯಾಣಕ್ಕಾಗಿ ಅಥವಾ ಹಳ್ಳಿಗಾಡಿನ ರಸ್ತೆಗಳು ಅಥವಾ ಆಫ್-ರೋಡ್ ಭೂಪ್ರದೇಶಗಳಲ್ಲಿ ಸಂತೋಷದ ಸವಾರಿಗಾಗಿ ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ.

ಇಡೀ ಹಗಲು-ರಾತ್ರಿಯ ಸವಾರಿ 
ಹೆಚ್ಚಿನ ಪ್ರಯಾಣದ ಸಾಮಥ್ರ್ಯಕ್ಕಾಗಿ, ಪಿಲಿಯನ್ ಪ್ಯಾಸೆಂಜರ್‍ನ ಜೊತೆಗೆ ಲಗೇಜ್ ಅನ್ನು ಸಾಗಿಸಲು ಮೋಟಾರ್‍ಸೈಕಲ್ ಬಂಗೀ ಕೊಕ್ಕೆಗಳನ್ನು ಹೊಂದಿರುವ ಲಗೇಜ್ ಪ್ಲೇಟ್ ಅನ್ನು ಸಹ ಹೊಂದಿದೆ. ಸುಧಾರಿತ ಆಸನ ಸೌಕರ್ಯವು ಪ್ರತಿ ಕಿಲೋಮೀಟರ್ ಪ್ರಯಾಣವನ್ನೂ ಹೆಚ್ಚು ಆರಾಮ ಮತ್ತು ಶ್ರಮರಹಿತವಾಗಿಸುತ್ತದೆ. ರಕ್ಷಣಾತ್ಮಕ ವಿಂಡ್ ಷೀಲ್ಡ್ ಗಮನಾರ್ಹವಾದ ಉತ್ತಮ ಗಾಳಿ ಮತ್ತು ಹವಾಮಾನ ರಕ್ಷಣೆ ಹಾಗೂ ಒಟ್ಟಾರೆ ಸವಾರಿ ಸೌಕರ್ಯವನ್ನು ನೀಡುತ್ತದೆ. USB ಚಾರ್ಜರ್, ರೈಡರ್‍ಗೆ ಪ್ರಯಾಣದ ಸಮಯದಲ್ಲಿ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ ಮತ್ತು ಮುಂಭಾಗ ಮತ್ತು ಹಿಂಭಾಗದ ಪೆಟಲ್ ಡಿಸ್ಕ್ ಬ್ರೇಕ್‍ಗಳು ಸಮರ್ಥವಾದ ಬ್ರೇಕ್ ಉಪಯೋಗಕ್ಕೆ ಸಹಾಯ ಮಾಡುತ್ತದೆ.
ಅತ್ಯಾಕರ್ಷಕ ಬಣ್ಣದ ಆಯ್ಕೆಗಳು

ಸಾಹಸ ಮತ್ತು ಆಫ್-ರೋಡ್‍ನ ಉತ್ಸಾಹದಿಂದ ಸ್ಫೂರ್ತಿ ಪಡೆದಿರುವ ಹೊಸ XPulse 200 4V  ರಸ್ತೆಯಲ್ಲಿನ ಸಂಪೂರ್ಣ ಗಮನವನ್ನು ಸೆಳೆಯಲು - ಟ್ರಯಲ್ ಬ್ಲೂ, ಬ್ಲಿಟ್ಜ್ ಬ್ಲೂ ಮತ್ತು ರೆಡ್ ರೈಡ್  ಎಂಬ ಮೂರು ಹೊಸ ಅತ್ಯಾಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

ರ‍್ಯಾಲಿ ಕಿಟ್
ಈಗಾಗಲೇ ಸಾಬೀತಾಗಿರುವ ಮತ್ತು ಮೋಟಾರ್‍ಸ್ಪೋಟ್ರ್ಸ್ ಉತ್ಸಾಹಿಗಳ ಅಚ್ಚುಮೆಚ್ಚಿನ XPulse 200 4V  ಅನ್ನು ಪೂರ್ಣ ಪ್ರಮಾಣದ ರ್ಯಾಲಿ ಯಂತ್ರವಾಗಿ ಪರಿವರ್ತಿಸುವುದನ್ನು ರ್ಯಾಲಿ ಕಿಟ್ ಮುಂದುವರಿಸುತ್ತದೆ. ರ್ಯಾಲಿ ಕಿಟ್ ಸಂಪೂರ್ಣವಾಗಿ ರಸ್ತೆ ಕಾನೂನು ಮತ್ತು FMSCI ಅನುಮೋದಿತ ಮೋಟಾರು ಕ್ರೀಡಾಕೂಟಗಳಿಗೆ ಅನುಮೋದಿತವಾಗಿದೆ. ಕಾರ್ಯಕ್ಷಮತೆಯ ಭಾಗಗಳ ಈ ವಿಶಿಷ್ಟ ಪ್ಯಾಕೇಜ್ ನಮ್ಮ ಗ್ರಾಹಕರಿಗೆ ಸ್ಪರ್ಧಾತ್ಮಕ ರೇಸಿಂಗ್‍ಗಾಗಿ ತಮ್ಮ ಆಫ್-ರೋಡ್ ಕೌಶಲ್ಯಗಳನ್ನು ಕಲಿಯಲು ಮತ್ತು ಸುಧಾರಿಸಲು ಅನುವು ಮಾಡಿಕೊಟ್ಟಿದೆ.

Hero XPulse 200, ತನ್ನ ಅಸಾಧಾರಣ ತಂತ್ರಜ್ಞಾನ, ಆಧುನಿಕ ವಿನ್ಯಾಸ ಮತ್ತು ವಿಶಿಷ್ಟ ಆಕರ್ಷಣೆಗಳಿಂದ  ಸದಾ ಅಸಾಧಾರಣ ಅನುಭವವನ್ನು ನೀಡಲು ಹೆಸರುವಾಸಿಯಾಗಿದೆ. ನಮ್ಮ ಗ್ರಾಹಕರು XPulse 200 4Valve  ಗೆ ನೀಡಿರುವ ಅಗಾಧವಾದ ಧನಾತ್ಮಕ ಪ್ರತಿಕ್ರಿಯೆ ಮತ್ತು ವ್ಯಾಪಕವಾದ ಸ್ವೀಕಾರದಿಂದ ನಾವು ಭಾವಪರವಶರಾಗಿದ್ದೇವೆ. ಮೊದಲ ಬ್ಯಾಚ್ ಬಹಳ ತ್ವರಿತವಾಗಿ ಸಂಪೂರ್ಣವಾಗಿ ಮಾರಾಟವಾಗುತ್ತಿರುವುದು ಪ್ರೀಮಿಯಂ-ಮೋಟರ್‍ಸೈಕಲ್ ಬೇಡಿಕೆಯ ಬೆಳವಣಿಗೆಯನ್ನು ಮತ್ತು ಹೀರೋ ಬ್ರ್ಯಾಂಡ್ ಮೇಲಿನ  ಗ್ರಾಹಕರ ವಿಶ್ವಾಸವನ್ನು ತೋರಿಸುತ್ತದೆ. ಆನ್‍ಲೈನ್ ಬುಕಿಂಗ್‍ಗಳ ಮತ್ತೊಂದು ಬ್ಯಾಚ್‍ನ ಪ್ರಾರಂಭದೊಂದಿಗೆ, ದೇಶದಲ್ಲಿ è XPulse 200 4Valve  ಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಎದುರು ನೋಡುತ್ತಿದ್ದೇವೆ ಎಂದು  ಹೀರೋ ಮೋಟೋಕಾರ್ಪ್‍ನ ಮಾರಾಟ  ಮುಖ್ಯಸ್ಥ ನವೀನ್ ಚೌಹಾಣ್ ಹೇಳಿದ್ದಾರೆ.

click me!