S1 Scooter ಹಾರ್ಡ್ವೇರ್ ಅಪ್ಗ್ರೇಡ್ ಮಾಡಲಿರುವ Ola Electric: ಡೆಲಿವರಿ ಇನ್ನಷ್ಟು ವಿಳಂಬ ಸಾಧ್ಯತೆ!

By Suvarna News  |  First Published Jan 17, 2022, 1:18 PM IST

*ಎಸ್‌ 1 ಸ್ಕೂಟರ್‌ನ ಹಾರ್ಡ್‌ವೇರ್‌ ಅಪ್‌ಗ್ರೇಡ್‌ ಮಾಡಲಿರುವ ಕಂಪನಿ
*ಎಸ್‌ 1 ಪ್ರೋ ಸ್ಕೂಟರ್‌ನ ಹಾರ್ಡ್‌ವೇರ್‌ಗೆ ಪರಿಷ್ಕರಣೆ
*ಕಂಪನಿ ಸಿಇಒ ಟ್ವೀಟ್‌ನಲ್ಲಿ ಮಾಹಿತಿ


Auto Desk: ನೀವು ಓಲಾ ಎಲೆಕ್ಟ್ರಿಕ್ನ ಎಸ್1 (Ola electric S1) ಸ್ಕೂಟರ್ ಬುಕ್ ಮಾಡಿದ್ದೀರಾ. ಹಾಗಿದ್ದರೆ ನೀವು ಅದರ ಡೆಲಿವರಿಗಾಗಿ ಇನ್ನೂ ಸಾಕಷ್ಟು ಸಮಯ ಕಾಯಬೇಕಾಗಬಹುದು. ಏಕೆಂದರೆ, ಇದರ ಹಾರ್ಡ್ವೇರ್ ಅನ್ನು ಅಪ್ಗ್ರೇಟ್ ಮಾಡಲು ಕಂಪನಿ ಮುಂದಾಗಿದೆ. ಈ ಪ್ರಕ್ರಿಯೆ ವಿಳಂಬವಾಗುವ ನಿರೀಕ್ಷೆಯಿರುವುದರಿಂದ, ಜನರು ತಮ್ಮ ಇಷ್ಟದ ಸ್ಕೂಟರ್ ಪಡೆಯಲು ಹೊಸ ವರ್ಷದಲ್ಲಿ ಕಾಯುವಿಕೆಯನ್ನು ಮುಂದುವರಿಸುವುದು ಅನಿವಾರ್ಯವಾಗಲಿದೆ.ಇವಿ (EV) ಸ್ಟಾರ್ಟ್ಅಪ್ ಓಲಾ ಎಲೆಕ್ಟ್ರಿಕ್, ಇತ್ತೀಚೆಗೆ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚಿನ ಸುತ್ತಿನಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ವಿಭಿನ್ನ ಯೋಜನೆ ಹೊಂದಿದೆ. ಕಂಪನಿ ತನ್ನ ಎಸ್1 ಸ್ಕೂಟರ್ ಅನ್ನು ಎಸ್ 1 ಪ್ರೊ (S1 Pro) ಹಾರ್ಡ್ವೇರ್ಗೆ ಅಪ್ಗ್ರೇಡ್ ಮಾಡಲಿದೆ. ಇದು ಎಲ್ಲಾ ಎಸ್1 ವೈಶಿಷ್ಟ್ಯಗಳ ಜೊತೆಗೆ, ಎಸ್1 ಪ್ರೋನ ಕಾರ್ಯಕ್ಷಮತೆ ಕೂಡ ಒದಗಿಸಲಿದೆ. ಹೈಪರ್ ಮೋಡ್ ಮತ್ತು ಇತರ ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ ಎಂದು ಸಿಇಒ ಭವಿಶ್ ಅಗರ್ವಾಲ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

2022ರ ಜನವರಿ ಮತ್ತು ಫೆಬ್ರವರಿಯಲ್ಲಿ ಸ್ಕೂಟರ್ಗಳು ರವಾನೆಯಾಗಲಿವೆ. “ಮಿಷನ್ ಎಲೆಕ್ಟ್ರಿಕ್ “ (Mission electric) ಎಲೆಕ್ಟ್ರಿಕ್ ಮೊಬಿಲಿಟಿಗೆ ಆರಂಭಿಕ ಹಂತದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಗ್ರಾಹಕರಿಗೆ ಧನ್ಯವಾದಗಳು ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.ಇದರಿಂದ ಈಗಾಗಲೇ ಸ್ಕೂಟರ್ ಡೆಲಿವರಿ ವಿಳಂಬದಿಂದ ಕಿರಿಕಿರಿ ಅನುಭವಿಸುತ್ತಿರುವ ಗ್ರಾಹಕರು ಮತ್ತಷ್ಟು ದಿನ ಕಾಯಬೇಕಿದೆ. ಹಲವು ಸ್ಕೂಟರ್ಗಳು ಜನರ ಕೈಸೇರಿವೆಯಾದರೂ, ಅದರಲ್ಲಿ ನೀಡಿದ ಭರವಸೆಯಂತೆ ಕ್ರೂಸರ್ ಕಂಟ್ರೋಲ್ ಹಾಗೂ ಹಿಲ್ ಹೋಲ್ಡ್ ತಂತ್ರಜ್ಞಾನಗಳನ್ನು ಅಳವಡಿಸಲಾಗಿಲ್ಲ. ಇದಕ್ಕೆ ಸ್ಪಷ್ಟನೆ ನೀಡಿರುವ ಕಂಪನಿ, ಹಂತಹಂತವಾಗಿ ಈ ತಂತ್ರಜ್ಞಾನಗಳನ್ನು ಅಳವಡಿಸುವುದಾಗಿ ತಿಳಿಸಿದೆ. ಇದು ಕೂಡ ಈ ವರ್ಷಾಂತ್ಯದವರೆಗೆ ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ. 

Tap to resize

Latest Videos

undefined

ಇದನ್ನೂ ಓದಿ: EV Charging at Home: ಇನ್ನುಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಿ!

ಸ್ಕೂಟರ್ಗಳಿಗಾಗಿ ಈಗಾಗಲೇ 20,000 ಪಾವತಿಸಿದ ಗ್ರಾಹಕರಿಗೆ, ಅಂತಿಮ ಪಾವತಿ ವಿಂಡೋ ಜನವರಿ 21ರ ಸಂಜೆ 6ರಿಂದ ತೆರೆಯಲಿದೆ. ಇದು ಓಲಾ ಆ್ಯಪ್ ಮೂಲಕ ಅಂತಿಮ ಪಾವತಿ ಮಾಡಬಹುದು ಎಂದು ಅಗರ್ವಾಲ್ ತಿಳಿಸಿದ್ದರು.ಜೊತೆಗೆ, ಓಲಾ ಕಂಪನಿಯ 'ಫ್ಯೂಚರ್ಫ್ಯಾಕ್ಟರಿ' ಆಗಿರುವ ರೈಡ್-ಹೇಲಿಂಗ್ ಅಗ್ರಿಗೇಟರ್ನಲ್ಲಿ ನೂರಾರು ಓಲಾ ಎಸ್1 ಸ್ಕೂಟರ್ಗಳು ಸಾಲಾಗಿ ನಿಂತಿರುವ ವೀಡಿಯೊವನ್ನು ಅವರು ಟ್ವೀಟ್ನೊಂದಿಗೆ ಹಂಚಿಕೊಂಡಿದ್ದರು.

ಓಲಾ ಕಳೆದ ವರ್ಷ ತನ್ನ ಎಸ್1  ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಮುನ್ನ ಜುಲೈ ತಿಂಗಳಿನಿಂದಲೇ ಪೂರ್ವ ಬುಕಿಂಗ್ಗೆ ಅವಕಾಶ ಕಲ್ಪಿಸಿತ್ತು. ಆದರೆ, ಸ್ಕೂಟರ್ಗಳ ವಿತರಣೆಯು ವಿಳಂಬವಾಗುತ್ತಿದೆ. ಇದರಿಂದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಂಪನಿಯು ಅಂತಿಮವಾಗಿ ಡಿಸೆಂಬರ್ ಮಧ್ಯದಲ್ಲಿ ಸ್ಕೂಟರ್ಗಳ ಡೆಲಿವರಿ ಪ್ರಾರಂಭಿಸಿತು, ಮೊದಲ 100 ಸ್ಕೂಟರ್ಗಳನ್ನು ಚೆನ್ನೈ ಮತ್ತು ಬೆಂಗಳೂರಿನಲ್ಲಿ ಗ್ರಾಹಕರಿಗೆ ತಲುಪಿಸಲಾಗಿದೆ.

ಇದನ್ನೂ ಓದಿ: Ola S1 Scooter ಪಾವತಿ ಅಂತಿಮ ದಿನಾಂಕ ಘೋಷಿಸಿದ ಓಲಾ ಎಲೆಕ್ಟ್ರಿಕ್!

ಈಗಾಗಲೇ ಸ್ಕೂಟರ್ ಪಡೆದಿರುವ ಗ್ರಾಹಕರಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓಲಾ ಸ್ಕೂಟರ್ಗಳ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದ್ದರೂ, ಸ್ಕೂಟರ್ಗಳ ನೈಜ ಶ್ರೇಣಿ ಕಂಪನಿಯು ಘೋಷಿಸಿದ ಶ್ರೇಣಿಗಿಂತ ಕಡಿಮೆಯಿದೆ ಎಂಬ ಆರೋಪ ಕೇಳಿಬಂದಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಕಂಪನಿಯ 500 ಎಕರೆ ಸ್ಥಾವರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ತಯಾರಿಸಲಾಗುತ್ತಿದೆ.ಕಾರ್ಖಾನೆಯು ತನ್ನ ಆರಂಭಿಕ ಹಂತದಲ್ಲಿ 2 ಮಿಲಿಯನ್ ಇ-ಸ್ಕೂಟರ್ಗಳನ್ನು ಮತ್ತು ಭವಿಷ್ಯದಲ್ಲಿ 10 ಮಿಲಿಯನ್ ಯುನಿಟ್ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಭರವಸೆ ನೀಡಿದ್ದಕ್ಕಿಂತ ಕಡಿಮೆ ಶ್ರೇಣಿ ನೀಡಿದಕ್ಕಾಗಿ ಓಲಾ ಎಲೆಕ್ಟ್ರಿಕ್, ಇತರ ಎಲೆಕ್ಟ್ರಿಕ್ ವಾಹನ ಕಂಪನಿಗಳಿಂದ ಕೂಡ ತೀವ್ರ ಟೀಕೆಗಳನ್ನು ಎದುರಿಸುವಂತಾಗಿದೆ.

click me!