ನವದೆಹಲಿ(ಫೆ.20): ಎಲೆಕ್ಟ್ರಿಕ್ ವಾಹನಗಳ(Electric Vehicle) ಬೇಡಿಕೆ ಹೆಚ್ಚಾಗುತ್ತಿದ್ದಂತೆ ದೇಶದಲ್ಲಿ ಹಲವು ಇವಿಗಳು ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಹಳೇ ಪೆಟ್ರೋಲ್, ಡೀಸೆಲ್(Petrol Diesel) ವಾಹನಗಳನ್ನು ಎಲೆಕ್ಟ್ರಿಕ್ ವಾಹವನ್ನಾಗಿ ಪರಿವರ್ತನೆ ಕೂಡ ಹೆಚ್ಚಾಗಿದೆ. ಇದೀಗ ದೇಶದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ದೇಸಿ ಸೈಕಲ್‌ನ್ನು ಎಲೆಕ್ಟ್ರಿಕ್ ಬೈಸಿಕಲ್(Electric Bicycle) ಆಗಿ ಪರಿವರ್ತಿಸಬಲ್ಲ ಕಿಟ್ ಅಭಿವೃದ್ಧಿಪಡಿಸಲಾಗಿದೆ. ಇದು ಪಕ್ಕಾ ದೇಸಿ ಕಿಟ್ ಆಗಿದ್ದು, ದೇಸಿ ಸೈಕಲ್‌ಗೆ ಸುಲಭವಾಗಿ ಅಳವಡಿಸಬಹುದಾಗಿದೆ. ಇಷ್ಟೇ ಅಲ್ಲ ಇದರಲ್ಲಿ ಹಲವು ವಿಶೇಷತೆಗಳು ಹಾಗೂ ಉಪಯೋಗಗಳು ಇವೆ.
ದೇಸಿ ಸೈಕಲ್‌ಗಾಗಿ ಅಭಿವೃದ್ಧಿಪಡಿಸಿರುವ ಈ ಕಿಟ್‌ನ್ನು ಧ್ರುವ್ ವಿದ್ಯುತ್ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್(DVECK) ಎಂದು ಹೆಸರಿಡಲಾಗಿದೆ. ಈ ಕಿಟ್‌ನ್ನು ಗುರುಸೌರಬ್ ಸಿಂಗ್ ಅಬಿವೃದ್ಧಿಪಡಿಸಿದ್ದಾರೆ. ಎಲೆಕ್ಟ್ರಿಕ್ ಪರಿವರ್ತಿಸಬಲ್ಲ ಈ ಬೈಸಿಕಲ್ 170 ಕೆಜಿ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 40 ಕಿ.ಮೀ ಮೈಲೇಜ್ ನೀಡಲಿದೆ.
ಈ ಎಲೆಕ್ಟ್ರಿಕ್ ಬೈಸಿಕಲ್ ಗರಿಷ್ಠ ವೇಗ 25 ಕಿ.ಮೀ ಪ್ರತಿ ಗಂಟೆಗೆ. ಮನೆಯಲ್ಲಿರುವ ಸಾಮಾನ್ಯ ಪ್ಲಗ್ ಪಾಯಿಂಟ್‌ನಲ್ಲಿ ಈ ಕಿಟ್ ಚಾರ್ಜ್ ಮಾಡಬಹುದು. ಮತ್ತೊಂದು ವಿಶೇಷ ಇದೆ, 20 ನಿಮಿಷ ಸೈಕಲ್ ಪೆಡಲ್ ಮಾಡಿದರೆ ಶೇಕಡಾ 50 ರಷ್ಟು ಕಿಟ್ ಚಾರ್ಜ್ ಆಗಲಿದೆ. ಸ್ಟ್ಯಾಂಡ್ ಹಾಕಿ ಸೈಕಲ್ ತುಳಿದರೂ ಚಾರ್ಜ್ ಆಗಲಿದೆ. ಇಲ್ಲದಿದ್ದರೆ ಚಾರ್ಜಿಂಗ್ ಮೂಡ್ ಆನ್ ಮಾಡಿ ಸೈಕಲ್ ತುಳಿದರೆ ಸಾಕು ಚಾರ್ಜ್ ಆಗಲಿದೆ.
ಈ ಕಿಟ್ ಹಲವು ಹಂತದ ಪ್ರಯೋಗಗಳನ್ನು ನಡೆಸಿ ಅಭಿವೃದ್ಧಿಪಡಿಸಲಾಗಿದೆ. ಕಾರಣ ಮಳೆ, ಬಿಸಿಲು, ಬೆಂಕಿ, ಕೆಸರು ಸೇರಿದಂತೆ ಯಾವುದೇ ಸವಾಲುಗಳಲ್ಲಿ ಎಲೆಕ್ಟ್ರಿಕ್ ಕಿಟ್‌ಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಲೆಕ್ಟ್ರಿಕ್ ಕಿಟ್ ಮೇಲೆ ನೀರು ಬಿದ್ದರೂ, ಬೆಂಕಿ ಬಿದ್ದರು, ಅಥವಾ ಕೆಸರು ತುಂಬಿಕೊಂಡರು ಯಾವುದೇ ಸಮಸ್ಯೆಯಾಗಲ್ಲ. ಸಣ್ಣ ಲ್ಯಾಪ್‌ಟಾಪ್ ಬ್ಯಾಕ್‌ನಲ್ಲಿ ತುಂಬಿಸಿಕೊಂಡು ಹೋಗಬಹುದಾದ ಕಿಟ್ ಇದಾಗಿದೆ. ಸಲಭವಾಗಿ ಜೋಡಣೆ ಹಾಗೂ ತೆಗೆಯಲು ಸಾಧ್ಯ.
Electric Bike ಊಹೆಗೂ ಮೀರಿದ ಆಕರ್ಷಕ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಆರಂಭ, ಬೆಲೆ 91 ಲಕ್ಷ ರೂ!
ಭಾರತದಲ್ಲಿ ಬೈಕ್, ಕಾರುಗಳನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಬಲ್ಲ ಕಿಟ್‌ಗಳು ಲಭ್ಯವಿದೆ. ಕೊಂಚ ದುಬಾರಿಯಾಗಿದೆ. ಆದರೆ ಈ ಕಿಟ್ ಅತೀ ಕಡಿಮೆ ಬೆಲೆಯಲ್ಲಿ ಅಭಿವೃದ್ಧಿ ಸಾಧ್ಯ ಎಂದು ಗುರುಸೌರಬ್ ಸಿಂಗ್ ಹೇಳಿದ್ದಾರೆ. ಸದ್ಯ ಈ ಕಿಟ್ ಬೆಲೆ ಬಹಿರಂಗ ಪಡಿಸಿಲ್ಲ. ಇನ್ನು ವಾಣಿಜ್ಯ ಉದ್ದೇಶದ ಬಳಕೆಗಾಗಿ ಈ ಕಿಟ್ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಲು ಗುರುಸೌರಬ್ ನಿರ್ಧರಿಸಿದ್ದಾರೆ. ಇದಕ್ಕಾಗಿ ಹೂಡಿಕೆದಾರರನ್ನು ಸಂಪರ್ಕಿಸಿದ್ದಾರೆ.
ಗುರುಸೌರಬ್ ಎಲೆಕ್ಟ್ರಿಕ್ ಕಿಟ್ ನೋಡಿದ ಉದ್ಯಮಿ ಆನಂದ್ ಮಹೀಂದ್ರ ಸೇರಿದಂತೆ ಹಲವು ಸ್ಟಾರ್ಟ್ಅಪ್ ಕಂಪನಿಗಳು ಪೇಟೆಂಟ್ ಖರೀದಿಗೆ ಮುಗಿಬಿದ್ದಿದೆ. ಗುರುಸೌರಬ್ ಸಿಂಗ್ ಹೊಸ ಆವಿಷ್ಕಾರದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದೆ. ಈ ಮೂಲಕ ಅತೀ ಸುಲಭವಾಗಿ ಸೈಕಲನ್ನು ಎಲೆಕ್ಟ್ರಿಕ್ ಬೈಸಿಕಲ್ ಮಾಡುವ ಹಾಗೂ ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಲವು ಕಂಪನಿಗಳು ಮುಂದೆ ಬಂದಿದೆ.
ಗುರಸೌರಬ್ ಸಿಂಗ್ ಜೊತೆಗೂಡಿ ಹೊಸ ಕಿಟ್ ಅಭಿವೃದ್ಧಿಗೆ ಕೆಲ ಸ್ಟಾರ್ಟ್ಅಪ್ ಕಂಪನಿಗಳು ಆಸಕ್ತಿ ತೋರಿದೆ. ಹಲವು ಕಂಪನಿಗಳು ಗುರಸೌರಬ್ ಸಿಂಗ್‌ಗೆ ತಮ್ಮ ಕಂಪನಿಗೆ ಸೇರಿಕೊಳ್ಳುವಂತೆ ಆಹ್ವಾನ ನೀಡಿದೆ. ದೇಶದಲ್ಲಿ ಯಾರೂ ಊಹಿಸಿರದ ರೀತಿಯಲ್ಲಿ ಎಲೆಕ್ಟ್ರಿಕ್ ಕಿಟ್ ಅಭಿವೃದ್ಧಿಪಡಿಸಿದ ಗುರುಸೌರಬ್ ಸಿಂಗ್ ಇದೀಗ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ವಾಹನದ ಅಧ್ಯಾಯ ಆರಂಭಿಸಿದ್ದಾರೆ.