ಬೆಂಗಳೂರು(ಫೆ.18): ಎಲೆಕ್ಟ್ರಿಕ್ ಸ್ಕೂಟರ್(Electric Scooter) ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಇದೀಗ ಬಜಾಜ್ ಆಟೋ(Bajaj Auto) ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನೆಟ್‌ವರ್ಕ್ ವಿಸ್ತರಿಸಿದೆ. 2022ರ ಮೊದಲ 6 ವಾರಗಳಲ್ಲಿ ಚೇತಕ್ ನೆಟ್‌ವರ್ಕ್(Sales Network) ದ್ವಿಗುಣಗೊಳಿಸಿದೆ. ಇದೀಗ ಲಭ್ಯವಿರುವ ಸ್ಥಳಗಳ ಪಟ್ಟಿಗೆ ನವದೆಹಲಿ, ಮುಂಬೈ ಮತ್ತು ಗೋವಾ ಸೇರಿಕೊಂಡಿದೆ.ಈ ವಿಶಿಷ್ಟವಾದ, ಸಂಪೂರ್ಣ ಲೋಹದ ಬಾಡಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 4 ರಿಂದ 8 ವಾರಗಳ ವೈಟಿಂಗ್ ಪಿರಿಯಡ್‌ನೊಂದಿಗೆ 20 ನಗರಗಳಲ್ಲಿ ಕಾಯ್ದಿರಿಸಬಹುದು. ಗ್ರಾಹಕರು ಸುಲಭ ಮತ್ತು ತಡೆರಹಿತ ಆನ್ ಲೈನ್ ಬುಕಿಂಗ್‌ಗಳನ್ನು(Online Booking) ಮಾಡಬಹುದು.
ಬಜಾಜ್ ಆಟೋ ಈ ಹಿಂದೆ 2021 ರಲ್ಲಿ 8 ನಗರಗಳಲ್ಲಿ ಚೇತಕ್‌ಗಾಗಿ(Bajaj Chetak) ಬುಕಿಂಗ್‌ಗಳನ್ನು ತೆರೆದಿತ್ತು. 2022ರ ಮೊದಲ ಆರು ವಾರಗಳಲ್ಲಿ, ಕೊಯಮತ್ತೂರು, ಮಧುರೈ, ಕೊಚ್ಚಿ, ಕೋಝಿಕೋಡ್, ಹುಬ್ಬಳ್ಳಿ, ವಿಶಾಖಪಟ್ಟಣಂ, ನಾಸಿಕ್, ವಸಾಯಿ, ಸೂರತ್, ದೆಹಲಿ, ಮುಂಬೈ ಮತ್ತು ಮಾಪುಸಾಗಳಾದ ಹೆಚ್ಚುವರಿ 12 ನಗರಗಳಲ್ಲಿ ಚೇತಕ್‌ಗಾಗಿ ಬುಕಿಂಗ್ ಅನ್ನು ತೆರೆಯಲಾಗಿದೆ. ದೆಹಲಿ ಮತ್ತು ಮುಂಬೈಗಳ ಸೇರ್ಪಡೆಯೊಂದಿಗೆ, ಚೇತಕ್ ಈಗ ಎಲೆಕ್ಟ್ರಿಕ್ ವಾಹನಗಳಿಗಾಗಿರುವ ಭಾರತದ ಎರಡು ಅತಿದೊಡ್ಡ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಬಜಾಜ್ ಆಟೋ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ₹300 ಕೋಟಿಗಳ ಹೂಡಿಕೆಯನ್ನು ಘೋಷಿಸಿದೆ.
undefined
Electric Scooter ಹುಬ್ಬಳ್ಳಿಯಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭ, ಕೇವಲ 2,000 ರೂ!
ಚೇತಕ್‌ನ ಯಶಸ್ಸನ್ನು ಸಂಪೂರ್ಣವಾಗಿ ಪರೀಕ್ಷಿಸಿದ, ಅವಲಂಬಿಸಬಹುದಾದ ಉತ್ಪನ್ನದ ಗುಣಮಟ್ಟದ ಮೇಲೆ ನಿಂತಿದೆ. ಮಾರಾಟ ಮತ್ತು ಸಿದ್ಧ ಸೇವಾ ಜಾಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಂತಹ ಅಜ್ಞಾತ ವರ್ಗಕ್ಕೆ ಹೋಗುತ್ತಿರುವ ಗ್ರಾಹಕರ ಆತಂಕವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಬೇಡಿಕೆಯನ್ನು ಪುರೈಸಲು ಮುಂಬರುವ ಕೆಲವು ವಾರಗಳಲ್ಲಿ ಚೇತಕ್ ನೆಟ್‌ವರ್ಕ್ ಅನ್ನು ದ್ವಿಗುಣಗೊಳಿಸುವುದು ನಮ್ಮ ಯೋಜನೆಯಾಗಿದೆ ಎಂದು ಬಜಾಜ್ ಆಟೋದ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.
ಚೇತಕ್ ಎಲೆಕ್ಟ್ರಿಕ್ ಸ್ಕೂಟರ್:
ಹಸಿರು ಮತ್ತು ಸ್ವಚ್ಛವಾದ ನಾಳೆಗಾಗಿ ನಿರ್ಮಿಸಲಾದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಕನಿಷ್ಠ ನಿರ್ವಹಣೆ ಸಾಕಾಗಿದ್ದು, 12,000 ಕಿಲೋಮೀಟರ್‌ಗಳ ಅಥವಾ ಒಂದು ವರ್ಷದ (ಯಾವುದು ಮೊದಲೋ ಅದು) ಮತ್ತು 3 ವರ್ಷ ಅಥವಾ 50,000 ಕಿಲೋಮೀಟರ್ ಗಳ ಬ್ಯಾಟರಿ ವಾರಂಟಿಯ (ಯಾವುದು ಮೊದಲೋ ಅದು) ಸರ್ವೀಸ್ ಇಂಟರ್ವಲ್ ಅನ್ನು ಹೊಂದಿದೆ.
ಚೇತಕ್ ನಾಲ್ಕು ಕಣ್ಸೆಳೆಯುವ ಬಣ್ಣಗಳಲ್ಲಿ ಲಭ್ಯವಿದೆ - ಇಂಡಿಗೊ ಮೆಟಾಲಿಕ್, ವೆಲುಟ್ಟೊ ರೊಸೊ, ಬ್ರೂಕ್ಲಿನ್ ಬ್ಲ್ಯಾಕ್ ಮತ್ತು ಹೇಜಲ್ನಟ್.
ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯತೆ:
· 5 ಗಂಟೆಗಳಲ್ಲಿ ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದಾದ (100%) ಬ್ಯಾಟರಿ, 60 ನಿಮಿಷಗಳಲ್ಲಿ 25% ತ್ವರಿತ ಚಾರ್ಜ್ ಸಾಮರ್ಥ್ಯದೊಂದಿಗೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆದ ನಂತರ, ಇದು ಇಕೋ ಮೋಡ್ ನಲ್ಲಿ 90 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ (ಎಐಎಸ್ 040 ಪ್ರಕಾರ).
· ಸೊಗಸಾದ ಸುವ್ಯವಸ್ಥಿತ ವಿನ್ಯಾಸ, ನಿಖರ ಎಂಜಿನಿಯರಿಂಗ್ ಅನ್ನು ದೋಷರಹಿತ ಉತ್ಪಾದನಾ ಪ್ರಕ್ರಿಯೆಗಳ ಮೂಲಕ ಸಾಧಿಸಲಾಗಿದ್ದು, ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಜಾಗತಿಕ ಮಾನದಂಡವಾಗಿದೆ.
· ಸ್ಟೀಲ್‌ನಿಂದ ತಯಾರಿಸಿದ ಏಕೈಕ ಅಧಿಕ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾದ ಇದು, ಆಕರ್ಷಕ ದೃಶ್ಯ ನೋಟಕ್ಕಾಗಿ ಫ್ಲಶ್-ಫಿಟ್ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಐಪಿ67 ಜಲ ನಿರೋಧಕ ರೇಟಿಂಗ್ ಮತ್ತು ಬೆಲ್ಟ್ ಲೆಸ್ ಸಾಲಿಡ್ ಗೇರ್ ಡ್ರೈವ್‌ಗಳು ಸೇರಿವೆ.
· ಮೂರು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ (ರಿವರ್ಸ್ ಮೋಡ್ ಸೇರಿದಂತೆ), ಇದರಿಂದ ಸವಾರರು ಟ್ರಾಫಿಕ್‌ನಲ್ಲಿ ಸುಲಭವಾಗಿ ಹೋಗಲು ಸಾಧ್ಯವಾಗುತ್ತದೆ.
· ವಿಶಿಷ್ಟ 'ಹಾರ್ಸ್ ಶೂ' ಡಿಆರ್‌ಎಲ್ ಗಳು ಮತ್ತು ಅನುಕ್ರಮವಾದ ಎಲ್‌ಇಡಿ ಬ್ಲಿಂಕರ್‌ಗಳೊಂದಿಗೆ ಸಂಯೋಜಿತ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಯಾವುದೇ ಪರಿಸ್ಥಿತಿಗಳಲ್ಲೂ ಗೋಚರತೆಯನ್ನು ಸುಧಾರಿಸುತ್ತವೆ.
· ಮೈಚೇತಕ್ ಆಪ್ (ಡೇಟಾದೊಂದಿಗೆ ಸಕ್ರಿಯಗೊಳಿಸಿದರೆ), ಅನಧಿಕೃತ ಪ್ರವೇಶ ಅಥವಾ ಅಪಘಾತದ ಸಂದರ್ಭದಲ್ಲಿ ಮಾಲೀಕರು ಅಧಿಸೂಚನೆಗಳನ್ನು ಸ್ವೀಕರಿಸುವುದನ್ನು ಸಾಧ್ಯವಾಗಿಸುತ್ತದೆ.