ಹುಡುಗರಿಗೆ ಬೈಕೆಂದರೆ ಗರ್ಲ್‌ಫ್ರೆಂಡ್‌ಗಿಂತ ಹೆಚ್ಚಂತೆ ಹೌದಾ? ಬೈಕ್ ಬರ್ತ್‌ಡೇ ಆಚರಿಸಿದ ಯುವಕ

By Suvarna News  |  First Published Sep 12, 2024, 3:38 PM IST

ಹುಡುಗರಿಗೂ ಅವರು ಹೊಂದಿರುವ ವಾಹನಗಳಿಗೂ ಬಹಳ ಅವಿನಾಭಾವ ಸಂಬಂಧವಿರುತ್ತದೆ. ಅದು ಸೈಕಲ್ಲೇ ಆಗಿರಲಿ ಅಥವಾ ಬೈಕ್ ಕಾರೇ ಆಗಿರಲಿ ಅದು ಒಂದು ಜೀವ ಇರುವ ವಸ್ತು ಎಂಬಂತೆ ಕೆಲ ಹುಡುಗರು ಭಾವಿಸುತ್ತಾರೆ ಅದರ ಜೊತೆ ಮಾತನಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ಬೈಕ್‌ನ ಹುಟ್ಟುಹಬ್ಬ ಆಚರಿಸಿದ್ದು, ಇದರ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.


ಹುಡುಗರಿಗೂ ಅವರು ಹೊಂದಿರುವ ವಾಹನಗಳಿಗೂ ಬಹಳ ಅವಿನಾಭಾವ ಸಂಬಂಧವಿರುತ್ತದೆ. ಅದು ಸೈಕಲ್ಲೇ ಆಗಿರಲಿ ಅಥವಾ ಬೈಕ್ ಕಾರೇ ಆಗಿರಲಿ ಅದು ಒಂದು ಜೀವ ಇರುವ ವಸ್ತು ಎಂಬಂತೆ ಕೆಲ ಹುಡುಗರು ಭಾವಿಸುತ್ತಾರೆ ಅದರ ಜೊತೆ ಮಾತನಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ಬೈಕ್‌ನ ಹುಟ್ಟುಹಬ್ಬ ಆಚರಿಸಿದ್ದು, ಇದರ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಕನ್ನಡಿಗರೇ ಯಾರು ಇದನ್ನು ವೀಡಿಯೋ ಮಾಡಿದ್ದಾರೆ. ಆದರೆ ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು @Shahrcasm ಎಂಬ ಪೇಜ್‌ನಿಂದ ಪೋಸ್ಟ್‌ ಮಾಡಲಾಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಯುವಕ ತನ್ನ ಬೈಕನ್ನು ಚೆನ್ನಾಗಿ ತೊಳೆದು ಹೂವುಗಳಿಂದ ಅಲಂಕರಿಸಿದ್ದು, ಬೈಕಿನ ಮುಂಭಾಗದ ಚಕ್ರಕ್ಕೆ ಕೇಕ್ ಕತ್ತರಿಸುವ ಪ್ಲಾಸ್ಟಿಕ್ ಚೂರಿಯನ್ನು ಕಟ್ಟಿದ್ದಾನೆ. ಯುವಕನ ಜೊತೆಯೇ ಇರುವ ಯಾರು ಬೈಕ್‌ನ ಮುಂದಿನ ಚಕ್ರದ ಮುಂದೆ ಕೇಕನ್ನು ಹಿಡಿದುಕೊಂಡಿದ್ದು, ಬೈಕನ್ನು ಹ್ಯಾಂಡಲಲ್ಲಿ ಹಿಡಿದು ಮುಂದೆ ಚಲಿಸುವ ಮೂಲಕ ಬೈಕೇ ಕೇಕ್ ಕತ್ತರಿಸುವ ಹಾಗೆ ಮಾಡುತ್ತಾರೆ. ಈ ವೇಳೆ ಅಲ್ಲಿ ಅಕ್ಕ ಪಕ್ಕದ ಮನೆಯ ಮಕ್ಕಳು ಮನೆಯವರು ಚಪ್ಪಾಳೆ ತಟ್ಟುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

Tap to resize

Latest Videos

ಡರ್ಟಿ ಪಿಕ್ಚರ್ ಹಾಡಿಗೆ ಡ್ಯಾನ್ಸ್: ಡೆನ್ಮಾರ್ಕ್ ಜನರ ಹೃದಯ ಕದ್ದ ಸುಂದರಿ!

ಕನ್ನಡದ ಮೆರುನಟ ಶಂಖರ್‌ನಗ್ ಅವರು ನಟಿಸಿರುವ ಕನ್ನಡದ 'ಮಾನವ ದಾನವ' ಸಿನಿಮಾದ ಈ ಸುದಿನ ನಿನ್ನ ನಿನ್ನಜನುಮದಿನ ಎಂಬ ಹಾಡನ್ನು ಈ ವೀಡಿಯೋಗೆ ಸಂಯೋಜಿಸಲಾಗಿದ್ದು, ಈ ವೀಡಿಯೋವನ್ನು ಒಂದು ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ವೀಡಿಯೋವನ್ನು ಪೋಸ್ಟ್ ಮಾಡಿದವರು ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಫೀಲಿಂಗ್ ಇದ್ಯಾ ಅಂತ ಕೇಳ್ತಾರೆ. ಆದರೆ ಇಲ್ಲಿ ಗಂಡು ಮಕ್ಕಳು ಅವರ ಬೈಕ್‌ಗೂ ಬರ್ತ್‌ಡೇ ಮಾಡ್ತಿದ್ದಾರೆ ಎಂದು ಅವರು ಬರೆದಿದ್ದಾರೆ. 

ತುಂಬಾ ಕ್ಷಮಿಸಿ, ಏನೇ ಅನ್ನಿ ಈ ಜರ್ಮನ್ ಸುಂದರಿ ಕನ್ನಡ ಕಿವಿಗೆ ಮುದ ನೀಡೋದು ಸುಳ್ಳಲ್ಲ!

ವೀಡಿಯೋ ನೋಡಿದ ಅನೇಕರು ವೀಡಿಯೋ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ, ಬೈಕ್‌ ಗಂಡು ಮಕ್ಕಳ ಮೊದಲ ಲವ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಖಂಡಿತ ನಿಜ ಯುವಕರಿಗೆ ಅವರ ಬೈಕ್ ಹಾಗೂ ಕಾರುಗಳ ಮೇಲಿರುವ ಪ್ರೇಮ ಅಷ್ಟಿಷ್ಟಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಯುವಕ ಭಾವುಕವಾಗಿ ಬೈಕ್‌ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹುಡುಗರು ಅವರ ಲವರ್‌ಗಿಂತ ಬೈಕ್ ಅನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಇದು ನಿಜವಾಗಿಯೂ ಸಿಹಿಯ ವಿಚಾರ ಇದೊಂದು ಖುಷಿ ನೀಡುವ ವಿಚಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಬಹುತೇಕ ಹುಡುಗರ ಮನೆ ಗೆದ್ದಿದೆ. 

ಜಮ್ಮು ಕಾಶ್ಮೀರ ಚುನಾವಣೆ: ಬಿಜ್ಬೆಹರದಿಂದ ಸ್ಪರ್ಧಿಸುತ್ತಿರುವ ಮೆಹಬೂಬಾ ಪುತ್ರಿ ಇಲ್ತಿಜಾ ಸುಂದರ ಫೋಟೋಗಳು

 

Girls : Do Men Even Have Feelings ??

Meanwhile Men, Celebrating Birthday Of Their Bike... pic.twitter.com/rHhFUwFlwW

— Babu Bhaiya (@Shahrcasm)

 

click me!