77,400 ರೂಪಾಯಿಗೆ ಟಿವಿಎಸ್ ಜುಪಿಟರ್ 110, ಹೊಸ ತಂತ್ರಜ್ಞಾನದ ಪ್ರಿಮಿಯಂ ಸ್ಕೂಟರ್!

By Chethan Kumar  |  First Published Aug 29, 2024, 2:00 PM IST

ಟಿವಿಎಸ್ ಹೊಚ್ಚ ಹೊಸ ಜುಪಿಟರ್ 110 ಸ್ಕೂಟರ್ ಬಿಡುಗಡೆ ಮಾಡಿದೆ. 77,400 ರೂಪಾಯಿ ದರದಲ್ಲಿ ಈ ಸ್ಕೂಟರ್ ಲಭ್ಯವಿದೆ. ಹಲವು ವಿಶೇಷತೆ ಹೊಂದಿರುವ ಈ ಸ್ಕೂಟರ್ ಹೆಚ್ಚಿನ ಮಾಹಿತಿ ಇಲ್ಲಿದೆ.


ಬೆಂಗಳೂರು(ಆ.29) ಟಿವಿಎಸ್ ಜುಪಿಟರ್ ಇದೀಗ ಮತ್ತಷ್ಟು ಹೊಸತನದಲ್ಲಿ ಬಿಡುಗಡೆಯಾಗಿದೆ. ಹೊಸ ಸ್ಕೂಟರ್ ಹಲವು ವಿಶೇಷತೆ ಹೊಂದಿದೆ. ಸದ್ಯ ಯಾವುದೇ ಸ್ಕೂಟರ್ ಖರೀದಿಗೆ ಕನಿಷ್ಠ 1 ಲಕ್ಷ ರೂಪಾಯಿ ಅತ್ಯಗತ್ಯ. ಇದರ ನಡುವೆ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ 77,400 ರೂಪಾಯಿಗೆ(ಎಕ್ಸ್ ಶೋ ರೂ) ಲಭ್ಯವಿದೆ. ಇನ್ಫಿನಿಟಿ ಲೈಟ್ ಬಾರ್, ಪ್ರೀಮಿಯಂ ಗುಣಮಟ್ಟದ ಪಿಯಾನೋ ಬ್ಲ್ಯಾಕ್ ಕಾಂಟ್ರಾಸ್ಟ್ ಪ್ಯಾನೆಲ್‌ ಮತ್ತು ಆಧುನಿಕ ಆಕರ್ಷಕ ವಿನ್ಯಾಸದ ಟಿವಿಎಸ್ ಜುಪಿಟರ್ 110 ಬಿಡುಗಡೆಯಾಗಿದೆ. 

ಟಿವಿಎಸ್ ಜುಪಿಟರ್ 110 ವಿಶೇಷತೆ
ಹೊಚ್ಚ ಹೊಸ ನೆಕ್ಷ್ಟ್ ಜೆನ್ 113.3 ಸಿಸಿ ಎಂಜಿನ್
ನೆಕ್ಸ್ಟ್ ಜೆನ್ ಲೈಟ್ ವೇಯ್ಟ್ ಕಾಂಪ್ಯಾಕ್ಟ್ ಫ್ಯೂಚರಿಸ್ಟಿಕ್ ಹೈ-ಪರ್ಫಾರ್ಮೆನ್ಸ್ ಎಂಜಿನ್ 
ಐಜಿಓ ಅಸಿಸ್ಟ್
ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ 
ಐಎಸ್‌ಜಿ ಕಂಟ್ರೋಲರ್
ಹೆಚ್ಚು ಕಾರ್ಯಕ್ಷಮತೆಯ ಬ್ಯಾಟರಿ

Latest Videos

undefined

ಕೈಗೆಟುಕವ ಬೆಲೆ, ಸ್ಮಾರ್ಟ್ ಕೆನೆಕ್ಟ್; ಹೊಸ ಟಿವಿಎಸ್ ಜುಪಿಟರ್ ZX ಡ್ರಮ್ ಸ್ಕೂಟರ್ ಬಿಡುಗಡೆ!

ಫೀಚರ್ 
ಬಾಡಿ ಬ್ಯಾಲೆನ್ಸ್ ಟೆಕ್ 2.0
ಎರಡು ಹೆಲ್ಮೆಟ್ ಇಡಲು ಸ್ಥಳಾವಕಾಶ
ಮುಂಭಾಗದಲ್ಲಿ ಇಂಧನ ತುಂಬುವ ಸ್ಥಳ
ಇನ್ಫಿನಿಟಿ ಲೈಟ್‌ಬಾರ್
ಎಲ್ಇಡಿ ಹೆಡ್ ಲ್ಯಾಂಪ್
ಫಾಲೋ ಮೀ ಲ್ಯಾಂಪ್
ಸಂಪೂರ್ಣ ಡಿಜಿಟಲ್ ಕಲರ್ ಎಲ್‌ಸಿಡಿ 
ಆಡ್ ಆನ್ ಫೀಚರ್ ಗಳ ಜೊತೆಗೆ TVS SmartXonnect
ಫೈಂಡ್ ಮೀ ಫೀಚರ್
ಡಿಸ್ಟಾನ್ಸ್ ಟು ಎಂಪ್ಟಿ ಸೂಚನೆ
ಆವರೇಜ್ ಆಂಡ್ ರಿಯಲ್ ಟೈಮ್ ಇಂಧನ ದಕ್ಷತೆ
ಟರ್ನ್ ಸಿಗ್ನಲ್ ಲ್ಯಾಂಪ್ ರೀಸೆಟ್
ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್
ರೋಟೊಪೆಟಲ್ ಡಿಸ್ಕ್ ಬ್ರೇಕ್ ಗಳು
ಪಿಯಾನೋ ಬ್ಲ್ಯಾಕ್ ಫಿನಿಶ್
ಹಜಾರ್ಡ್ ಲ್ಯಾಂಪ್ ಗಳು 

ಐಜಿಓ ಅಸಿಸ್ಟ್‌ ಹೊಂದಿರುವ ನೆಕ್ಸ್ಟ್- ಜನರೇಷನ್ ಲೈಟ್ ವೇಟ್, ಕಾಂಪ್ಯಾಕ್ಟ್, ಫ್ಯೂಚರಿಸ್ಟಿಕ್ ಎಂಜಿನ್ ಹೊಂದಿದ್ದು, ಅತ್ಯುತ್ತಮ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಮತ್ತು ಅತ್ಯುತ್ತಮ ಇಂಧನ ದಕ್ಷತೆ ಒದಗಿಸುತ್ತದೆ. ಸೀಟ್ ಕೆಳಗಿನ ಸ್ಟೋರೇಜ್ ಜಾಗದಲ್ಲಿ ಎರಡು ಫುಲ್ ಹೆಲ್ಮೆಟ್ ಗಳನ್ನು ಇಡಬಹುದಾಗಿದೆ. ಇಂಧನ ತುಂಬಲು ಮುಂದೆ ಹ್ಯಾಂಡಲ್ ಬಳಿ ಜಾಗ ಇದೆ. ವಿಶಾಲವಾದ ಫ್ಲೋರ್‌ಬೋರ್ಡ್ ಹೊಂದಿದೆ.

ರೋಟೊಪೆಟಲ್ ಡಿಸ್ಕ್ ಬ್ರೇಕ್‌ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಬ್ರೇಕಿಂಗ್ ವ್ಯವಸ್ಥೆ ಇದೆ. ಟರ್ನ್ ಸಿಗ್ನಲ್ ಲ್ಯಾಂಪ್ ರೆಸ್ಟ್, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್, ಹಜಾರ್ಡ್ ಲ್ಯಾಂಪ್‌ ಮತ್ತು ಹೆಚ್ಚು ಸುರಕ್ಷತೆ ಒದಗಿಸುವ ಮೆಟಲ್‌ಮ್ಯಾಕ್ಸ್ ಬಾಡಿ ಹೊಂದಿದೆ. ಉದ್ದ ಸೀಟ್ ಜೊತೆಗೆ ಬಾಡಿ ಬ್ಯಾಲೆನ್ಸ್ 2.20 ಸೌಕರ್ಯ ಇರುವುದರಿಂದ ರೈಡಿಂಗ್ ನಿರ್ವಹಣೆ ಮತ್ತು ಆರಾಮದಾಯಕತೆ ಅದ್ಭುತವಾಗಿದೆ.

ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಬಿಡುಗಡೆ, ಇದು ಮಾರ್ವೆಲ್ ಸೂಪರ್ ಹೀರೋಗಳಿಂದ ಪ್ರೇರಿತ ಬೈಕ್!
 

click me!