ಬಜಾಜ್ ಈಗಾಗಲೇ ಫ್ರೀಡಂ ಸಿಎನ್‌ಜಿ ಬೈಕ್ ಬಿಡುಗಡೆ ಮಾಡಿದೆ. ದುಬಾರಿ ಪೆಟ್ರೋಲ್ ಸಮಸ್ಯೆಗೆ ಉತ್ತರವಾಗಿ ಈ ಬೈಕ್ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಫ್ರೀಡಂ ಬೈಕ್‌ಗಿಂತ ಕಡಿಮೆ ಬೆಲೆಯಲ್ಲಿ ಮತ್ತೊಂದು ಸಿಎನ್‌ಜಿ ಬೈಕ್ ಬಿಡುಗಡೆಗೆ ಸಜ್ಜಾಗಿದೆ.
ನವದೆಹಲಿ(ಆ.30) ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿಯಾಗಿರುವ ಕಾರಣ ಇದೀಗ ಜನರು ಎಲೆಕ್ಟ್ರಿಕ್, ಸಿಎನ್‌ಜಿ ಹೈಬ್ರಿಡ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಈ ಪೈಕಿ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಬಿಡುಗಡೆ ಮಾಡಿ ಉತ್ತರ ನೀಡಿದೆ. ಫ್ರೀಡಂ ಬೈಕ್ 1,10,000 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದೀಗ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಬಜಾಜ್ ಮತ್ತೊಂದು ಸಿಎನ್‌ಜಿ ಬೈಕ್ ಬಿಡುಗಡೆಗೆ ಸಜ್ಜಾಗಿದೆ. Bajaj ಕಂಪನಿಯ ಮುಖ್ಯಸ್ಥ ರಾಜೀವ್ ಬಜಾಜ್ ಅವರು ಶೀಘ್ರದಲ್ಲೇ ಹೊಸ CNG ಬೈಕ್ ಅನ್ನು ಬಿಡುಗಡೆಯಾಗಲಿದೆ ಎಂದಿದ್ದಾರೆ.
95,000 ರೂಪಾಯಿಗೆ ಹೊಸ ಸಿಎನ್‌ಜಿ ಬೈಕ್
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ Bajaj ಕಂಪನಿಯ ಮುಖ್ಯಸ್ಥ ರಾಜೀವ್ ಬಜಾಜ್ ಅವರು ಶೀಘ್ರದಲ್ಲೇ ಹೊಸ CNG ಬೈಕ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಘೋಷಿಸಿದ್ದಾರೆ. ಈ ಹೊಸ ಬೈಕ್ Freedom 125 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. 100cc ಎಂಜಿನ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಿದ್ದಾರೆ. ಉದ್ದನೆಯ ಸೀಟು, LED ಹೆಡ್‌ಲ್ಯಾಂಪ್‌ಗಳು, ಡಿಜಿಟಲ್ ಸ್ಪೀಡೋಮೀಟರ್‌ಗಳು, ಬ್ಲೂಟೂತ್ ಸಂಪರ್ಕದಂತಹ ಹೆಚ್ಚುವರಿ ವೈಶಿಷ್ಟ್ಯಗಳು ಇದರಲ್ಲಿವೆ. Bajaj Freedom 125 ಬೈಕ್‌ನ ಆರಂಭಿಕ ಬೆಲೆ ರೂ.95,000 (ಎಕ್ಸ್-ಶೋರೂಮ್). ಗರಿಷ್ಠ ಬೆಲೆ ರೂ.1.10 ಲಕ್ಷ (ಎಕ್ಸ್-ಶೋರೂಮ್) ಇರಲಿದೆ ಎಂದು ಅವರು ಘೋಷಿಸಿದ್ದಾರೆ.
undefined
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್, ಇಲ್ಲಿದೆ ಟಾಪ್ 10 CNG ಕಾರು!
ಕೈಗೆಟುಕುವ ದರದಲ್ಲಿ ಮತ್ತೊಂದು ಸಿಎನ್‌ಜಿ ಭಾರತದ ರಸ್ತೆಗೆ ಇಳಿಯಲಿದೆ. ಇದು ಪ್ರತಿ ದಿನ ಬೈಕ್ ಬಳಸುತ್ತಿರುವ ಸಂತಸಕ್ಕೆ ಕಾರಣವಾಗಿದೆ. ದುಬಾರಿ ದುನಿಯಾದಲ್ಲಿ ಖರ್ಚು ವೆಚ್ಚ ಕಡಿತಗೊಳಿಸಲು ಸಿಎನ್‌ಜಿ ಬೈಕ್ ಪ್ರಮುಖ ಪಾತ್ರ ನಿರ್ವಹಿಸಲಿದೆ ಅನ್ನೋದು ಹಲವರ ಅಭಿಪ್ರಾಯ .
ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಪೆಟ್ರೋಲ್ ಬೆಲೆಯಿಂದ ಜನರನ್ನು ಪಾರು ಮಾಡಲು Bajaj ಕಂಪನಿಯು ಮುಂದೆ ಬಂದಿದೆ. CNG ಬೈಕ್‌ಗಳ ತಯಾರಿಕೆಯಲ್ಲಿ ವಿಶ್ವದ ಇತರ ಕಂಪನಿಗಳಿಗಿಂತ ಮುಂದಿದ್ದಾರೆ. ಈಗಾಗಲೇ ಮೊಟ್ಟಮೊದಲ CNG ಬೈಕ್ ತಯಾರಿಸಿ ದಾಖಲೆ ನಿರ್ಮಿಸಿದ್ದಾರೆ.
ಎಲೆಕ್ಟ್ರಿಕ್ ಬೈಕ್‌ಗಳೊಂದಿಗೆ ಪೈಪೋಟಿ..
ಪ್ರಪಂಚದಾದ್ಯಂತ ಬರಲಿರುವ ಪೆಟ್ರೋಲ್ ಕೊರತೆಯನ್ನು ನೀಗಿಸಲು ಈಗಾಗಲೇ ಎಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಬಂದಿವೆ. ಓಲಾ ರೋಡ್‌ಸ್ಟರ್, ಅಲ್ಟ್ರಾ ವೈಲೆಟ್ ಎಫ್77 ಮ್ಯಾಚ್2, ರಿವೋಲ್ಟ್ ಆರ್ವೀ 400, ಫೆರ್ರಾಟೊ ಡಿಸ್ರಪ್ಟರ್ ಮುಂತಾದ ಎಲೆಕ್ಟ್ರಿಕ್ ಬೈಕ್‌ಗಳನ್ನು ಜನರು ಬಳಸುತ್ತಿದ್ದಾರೆ. ಆದರೆ ಚಾರ್ಜಿಂಗ್ ಸಮಸ್ಯೆಯಿಂದಾಗಿ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿಲ್ಲ. ಹೀಗಾಗಿ ಮತ್ತೆ ಪೆಟ್ರೋಲ್ ಬೈಕ್‌ಗಳತ್ತಲೇ ಜನರು ಮುಖ ಮಾಡಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಗಳನ್ನು ನಿವಾರಿಸಿ ಜನರು CNG ಬೈಕ್‌ಗಳನ್ನು ಬಳಸುವಂತೆ ಮಾಡಲು Bajaj ಮುಂದಾಗಿದೆ.
Freedom 125ಕ್ಕೆ ಭಾರೀ ಬೇಡಿಕೆ..
ಇತ್ತೀಚೆಗೆ Freedom 125 ಹೆಸರಿನಲ್ಲಿ ವಿಶ್ವದ ಮೊಟ್ಟಮೊದಲ CNG ಬೈಕ್ ಅನ್ನು Bajaj ಕಂಪನಿಯು ಬಿಡುಗಡೆ ಮಾಡಿದೆ. ಈ ಹೊಸ CNG ಬೈಕ್‌ಗಾಗಿ ಈಗಾಗಲೇ ಬುಕಿಂಗ್‌ಗಳು ಆರಂಭವಾಗಿವೆ. ಮುಂದಿನ ತಿಂಗಳಿನಿಂದ ಡೆಲಿವರಿಗಳು ಆರಂಭವಾಗಲಿವೆ ಎಂದು Bajaj ಕಂಪನಿಯು ತಿಳಿಸಿದೆ. ಸುಮಾರು 20,000 ಬೈಕ್‌ಗಳು ಮಾರಾಟವಾಗುತ್ತವೆ ಎಂದು ಕಂಪನಿಯು ಅಂದಾಜಿಸಿದೆ. 2025ರ ಜನವರಿ ವೇಳೆಗೆ ಈ ಸಂಖ್ಯೆ 40,000 ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬೈಕ್‌ಗೆ ದೊರೆಯುತ್ತಿರುವ ಅಭೂತಪೂರ್ವ ಬೆಂಬಲದ ಹಿನ್ನೆಲೆಯಲ್ಲಿ Bajaj ಕಂಪನಿಯು ತನ್ನ ಮುಂದಿನ CNG ಬೈಕ್ ಅನ್ನು ಸಿದ್ಧಪಡಿಸುತ್ತಿದೆ.
ಭರ್ಜರಿ ಮೈಲೇಜ್; ದುಬಾರಿ ಪೆಟ್ರೋಲ್‌ಗೆ ಗುಡ್‌ಬೈ ಹೇಳಿ ಬಜಾಜ್ CNG ಖರೀದಿಸಲು ಇಲ್ಲಿವೆ ಕಾರಣ!
ಕಡಿಮೆ ಬೆಲೆ.. ಹೆಚ್ಚಿನ ಮೈಲೇಜ್..
ದಿನನಿತ್ಯದ ಇಂಧನ ವೆಚ್ಚವನ್ನು ಕಡಿಮೆ ಮಾಡಲು Bajaj Freedom 125 ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಸಾಮಾನ್ಯ ಪೆಟ್ರೋಲ್ ಬೈಕ್‌ಗಳಿಗೆ ಹೋಲಿಸಿದರೆ ಶೇ.50ರಷ್ಟು ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. 2 ಲೀಟರ್‌ಗಳ ಪೆಟ್ರೋಲ್ ಟ್ಯಾಂಕ್, 2 ಕೆಜಿ CNG ಟ್ಯಾಂಕ್‌ಗಳು ಫ್ರೀಡಂ 125ರಲ್ಲಿವೆ. ಈ ಬೈಕ್‌ನಲ್ಲಿ ಸುಮಾರು 330 ಕಿ.ಮೀ. ಪ್ರಯಾಣಿಸಬಹುದು.
ಕಡಿಮೆಯಾಗಲಿರುವ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳು..
ಇನ್ನು ಮುಂದೆ Bajaj ಕಂಪನಿಯು ತನ್ನ Chetak ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಡಿಮೆ ಬೆಲೆಯ ರೂಪಾಂತರವನ್ನು ಪರಿಚಯಿಸಲಿದೆ ಎನ್ನಲಾಗಿದೆ. ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ Bajaj ಕಂಪನಿಯು ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.