Upcoming Bike ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಮಾರ್ಚ್‌ನಲ್ಲಿ ಬಿಡುಗಡೆ

By Contributor AsianetFirst Published Feb 18, 2022, 8:34 PM IST
Highlights

*ಹಿಮಾಲಯನ್‌ನ ಮುಂದುವರಿದ ಭಾಗವಾಗಲಿದೆ ಸ್ಕ್ರಾಮ್‌ 411

*650 ಸಿಸಿಯ ಮೂರು ಬೈಕ್‌ಗಳ ಬಿಡುಗಡೆ

* ಹೊಸ ಫೀಚರ್‌ಗಳೊಂದಿಗೆ ಲಭ್ಯ

ನವದೆಹಲಿ(ಫೆ.18): 2021ರಲ್ಲಿ ಹಲವು ಹೊಸ ಮೋಟಾರ್‌ಸೈಕಲ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದ ರಾಯಲ್ ಎನ್ಫೀಲ್ಡ್ (Royal Enfield), 2022ರಲ್ಲಿ ಕೂಡ ಹೊಸ ಮೋಟಾರ್ಸೈಕಲ್ (Motor Cycle) ಅನಾವರಣಗೊಳಿಸಲು ಸಜ್ಜಾಗಿದೆ. ರಾಯಲ್ ಎನ್ಫೀಲ್ಡ್ ತನ್ನ ಮುಂಬರುವ ಸ್ಕ್ರಾಮ್ 411 (Scram 411 )ಮೋಟಾರ್ಸೈಕಲ್ ಅನ್ನು ಮಾರ್ಚ್ ಎರಡನೇ ವಾರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಆದರೆ,  ಹೊಸ ಮಾದರಿಯ ನಿರ್ದಿಷ್ಟ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಆದರೆ ಇದು ಮಾರ್ಚ್ 11 ರಿಂದ 15 ರ ನಡುವೆ ಈ ಮೋಟಾರ್ಸೈಕಲ್ ಬಿಡುಗಡೆಯಾಗಲಿದೆ ಎಂಬ ಮಾಹಿತಿಯಿದೆ. ರಾಯಲ್ ಎನ್ಫೀಲ್ಡ್ನಿಂದ ಮುಂಬರುವ ಈ ಮೋಟಾರ್ಸೈಕಲ್ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಬಿಡುಗಡೆಗೆ ಇನ್ನೂ ಕೆಲ ವಾರಗಳು ಬಾಕಿಯಿರುವಾಗಲೇ ಅದರ ವಿವರಗಳು ಹೊರಬಿದ್ದಿವೆ.  ಸ್ಕ್ರ್ಯಾಮ್ Scram 411,  ರಾಯಲ್ ಎನ್ಫೀಲ್ಡ್ ಹಿಮಾಲಯನ್ ADV ಮುಂದುವರಿದ ಭಾಗವಾಗಿ ಹೊರಬರಲಿದೆ. ಲಭ್ಯವಿರುವ ವಿವರಗಳು ಬೈಕು ಹಿಮಾಲಯದ ಫೀಚರ್ಗಳ ಜೊತೆಗೆ, ಉತ್ತಮ ರಸ್ತೆ-ಕ್ರೂಸಿಂಗ್ ಸಾಮರ್ಥ್ಯಗಳೊಂದಿಗೆ ಇರುತ್ತದೆ ಎಂದು ಸುಳಿವು ದೊರೆತಿದೆ.

Latest Videos

Royal Enfield record sales: 2 ನಿಮಿಷದಲ್ಲಿ 120 ಬೈಕ್ ಮಾರಾಟ, ರಾಯಲ್ ಎನ್‌ಫೀಲ್ಡ್ ಹೊಸ ದಾಖಲೆ

ಆದರೆ, 'ಸ್ಕ್ರಾಮ್' ಎಂಬ ಹೆಸರು ಇದು ಹಿಮಾಲಯದ ಸ್ಕ್ರ್ಯಾಂಬ್ಲರ್ನ ಭಾಗವಾಗಿರಬಹುದು ಎಂದು ಕೂಡ ಅಂದಾಜಿಸಬಹುದಾಗಿದೆ. ಸ್ಕ್ರಾಮ್ನ ಮೊದಲ ಟಿವಿಸಿ, ಕೆಸರನ್ನು ಹಾರಿಸಿಕೊಂಡು ಹೋಗುವ ಬೈಕ್ ಮತ್ತು ನಿಧಾನಗತಿಯಲ್ಲಿ ಸಾಗುವ ಬೈಕ್ ಎರಡನ್ನೂ ತೋರಿಸುತ್ತದೆ. ಈ ಹೊಸ ಬೈಕು  ಆಫ್-ರೋಡ್ ಟೈರ್ಗಳು, ಸಿಂಗಲ್-ಸೀಟ್ ಸೆಟಪ್, ಹೆಡ್ಲ್ಯಾಂಪ್ ಸೆಟಪ್ನೊಂದಿಗೆ ಹೊಸ ಮುಂಭಾಗದ ತುದಿಯಲ್ಲಿ ಸ್ಪೋಕ್ಸ್ ಶಾಡ್ ಹಾಗೂ ಸಣ್ಣ ಚಕ್ರಗಳನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ. ಇದು ಮೂಲತಃ  ಪ್ರಮುಖವಾಗಿ ಕಪ್ಪು ಮತ್ತು ಬಿಳಿ ಬಣ್ಣಗಳು ಸೇರಿ ಹಲವು ಹೊಸ ಬಣ್ಣಗಳಲ್ಲಿ ಬರುವ ಸಾಧ್ಯತೆಯಿದೆ.

ಮೋಟಾರ್ಸೈಕಲ್ನ ಹೃದಯಭಾಗದಲ್ಲಿ ಅದೇ 411cc, ಸಿಂಗಲ್-ಸಿಲಿಂಡರ್ ಘಟಕವು 24.3 ಬಿಎಚ್ಪಿ (bhp) ಗರಿಷ್ಠ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಆರಂಭಿಕ ಬೆಲೆ 1.75 ಲಕ್ಷ ರೂ.(ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಇದರೊಂದಿಗೆ, ರಾಯಲ್ ಎನ್ಫೀಲ್ಡ್ ವಿವಿಧ ಹೊಸ ಮುಂಬರುವ ಯೋಜನೆಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಪರೀಕ್ಷಾ ಹಂತದಲ್ಲಿವೆ. ಈಗ, ಐಕಾನಿಕ್ ಬ್ರ್ಯಾಂಡ್ ಕಡಿಮೆ-ಸ್ಲಂಗ್ ಕ್ರೂಸರ್ (slung-cruiser) ನಿಲುವು ಹೊಂದಿರುವ 650ಸಿಸಿ ಟ್ವಿನ್  (Twin) ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಚೆನ್ನೈ ಮೂಲದ ಬೈಕ್ ತಯಾರಕರು ಈ ವಲಯದಲ್ಲಿ 3 ಬೈಕ್ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. 

Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?

ಇವೆಲ್ಲವೂ 650 ಸಿಸಿಯ ವಾಹನಗಳಾಗಿರಲಿದ್ದು, ಸಂಪೂರ್ಣ ವಿವರಗಳು ಇನ್ನೂ ಹೊರಬೀಳಬೇಕಿದೆ. ಈ ಶ್ರೇಣಿಯಲ್ಲಿ ಮೊದಲನೆಯದು ಕ್ರೂಸರ್ ಆಗಿದ್ದು, ಇದನ್ನು ‘ಸೂಪರ್ ಮೀಟಿಯರ್ 65’0 ಎಂದು ಹೆಸರಿಸಬಹುದು ಏಕೆಂದರೆ ಎರಡನೆಯದು ಎಸ್ಜಿ650 (SG650) ಕಾನ್ಸೆಪ್ಟ್ ಅನ್ನು ಆಧರಿಸಿರಬಹುದಾದ ‘ಶಾಟ್ಗನ್ 650’ ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಹೊಂದಿರುವ ಸಿಂಗಲ್-ಸೀಟ್ ಮೋಟಾರ್ಸೈಕಲ್ ಆಗಿದೆ. ಕೊನೆಯ ವಾಹನ ಆಧುನಿಕ ಕ್ಲಾಸಿಕ್ ರೋಡ್ಸ್ಟರ್ ಆಗಿರಲಿದ್ದು, ಕ್ಲಾಸಿಕ್ 350 ಗೆ ಸಮಾನವಾಗಿರಬಹುದು. ಬಹುಶಃ, ಈ ಆವೃತ್ತಿಯನ್ನು ‘ಕ್ಲಾಸಿಕ್ 650 ‘ಎಂದು ಹೆಸರಿಸಬಹುದು. 

ಮುಂಬರುವ ಎಲ್ಲಾ 650cc ಮೋಟಾರ್ಸೈಕಲ್ಗಳು ಸಾಮಾನ್ಯವಾಗಿ ಬ್ರ್ಯಾಂಡ್ಗೆ ಸಂಬಂಧಿಸಿದ ರೆಟ್ರೊ ವಿನ್ಯಾಸ ಟೆಂಪ್ಲೇಟ್ ಅನ್ನು ಪ್ರದರ್ಶಿಸುತ್ತವೆ. ಇದು ಸುತ್ತಿನ ಹೆಡ್ಲೈಟ್ ಮತ್ತು ಟೈಲ್ಲೈಟ್, ಟಿಯರ್ಡ್ರಾಪ್-ಆಕಾರದ ಇಂಧನ ಟ್ಯಾಂಕ್, ವಿಶಾಲವಾದ ಮುಂಭಾಗ ಮತ್ತು ಹಿಂಭಾಗದ ಫೆಂಡರ್ಗಳು, ಡ್ಯುಯಲ್ ಎಕ್ಸಾಸ್ಟ್ ಪೈಪ್ಗಳು ಮತ್ತು ಮಫ್ಲರ್ಗಳು ಮತ್ತು ಕಡಿಮೆ-ಸ್ಲಂಗ್ ಕ್ರೂಸರ್ ಗಳನ್ನು ಒಳಗೊಂಡಿರಲಿವೆ. 

click me!